ಭಾರತದ ಸ್ವಾತಂತ್ರ್ಯ ದಿನಾಚರಣೆ 2024 - ಬರವಣಿಗೆ ಸ್ಪರ್ಧೆ

ProfileImg
22 Jul '24
2 min read


image

ಸ್ಪರ್ಧೆಯ ನೋಂದಣಿ
Android : ಗೂಗಲ್ ಪ್ಲೇ ಸ್ಟೋರ್ Android App ಅನ್ನು ಡೌನ್ ಲೋಡ್ ಮಾಡಿ

iPhone/iPad : App ಸ್ಟೋರ್ iOS App ಅನ್ನು ಡೌನ್ ಲೋಡ್ ಮಾಡಿ

ಆಯ್ರಾ 'ಭಾರತದ ಸ್ವಾತಂತ್ರ್ಯ ದಿನಾಚರಣೆ 2024' ಬರವಣಿಗೆ ಸ್ಪರ್ಧೆಗೆ ಉದಯೋನ್ಮುಖ ಬರಹಗಾರರು, ಪತ್ರಕರ್ತರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಲೇಖಕರನ್ನು ಆಹ್ವಾನಿಸುತ್ತೇವೆ.

ಸ್ಪರ್ಧೆಗೆ ನೋಂದಣಿ ಉಚಿತ!

ವಯಸ್ಸು: 13+
ಭಾಷೆಗಳು: ಕನ್ನಡ, ಹಿಂದಿ ಮತ್ತು ಇಂಗ್ಲಿಷ್
ವರ್ಗಗಳು : ಲೇಖನ, ಕಥೆ, ಕವನ, ಕವಿತೆ
ಥೀಮ್: ಭಾರತ
ಪದದ ಮಿತಿ :

  • ಲೇಖನ, ಕಥೆ :ಕನಿಷ್ಠ 300 ಪದಗಳು ಮತ್ತು ಗರಿಷ್ಠ 2000 ಪದಗಳು
  • ಕವನ, ಕವಿತೆ: ಕನಿಷ್ಠ 40 ಪದಗಳು

ಸ್ಪರ್ಧೆಯ ಪ್ರಾರಂಭ ದಿನಾಂಕ: 22 ಜುಲೈ 2024
ಲೇಖನವನ್ನು ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2024
ಪ್ರೇಕ್ಷಕರ ಮತದಾನಕ್ಕೆ ಕೊನೆಯ ದಿನಾಂಕ: 18 ಆಗಸ್ಟ್ 2024
ಫಲಿತಾಂಶಗಳ ಪ್ರಕಟಣೆ ದಿನಾಂಕ: 20 ಆಗಸ್ಟ್ 2024 

ಪ್ರಶಸ್ತಿ ಹಣ:

  • ಮೊದಲನೇ ಬಹುಮಾನ   : 4,000 ರೂ
  • ಎರಡನೇ ಬಹುಮಾನ            : 2,000 ರೂ
  • ಮೂರನೇ ಬಹುಮಾನ          : 1,000 ರೂ 
  • ಅತ್ಯುತ್ತಮ ಕವನ / ಕವಿತೆ    : 1,000 ರೂ 
  • ಅತ್ಯುತ್ತಮ ಕಾಲ್ಪನಿಕ ಕಥೆ   : 1,000 ರೂ  
  • ಭಾರತೀಯ ಇತಿಹಾಸದ ಮೇಲೆ ಅತ್ಯುತ್ತಮ ಲೇಖನ : 1,000 ರೂ

ವಿಷಯದ ಆಯ್ಕೆಗಳು: ಭಾರತ, ಭಾರತೀಯ ಇತಿಹಾಸ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆ, ಶ್ರೇಷ್ಠ ಭಾರತೀಯ ವ್ಯಕ್ತಿಗಳು, ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ನನ್ನ ದೃಷ್ಟಿ

ಸ್ಪರ್ಧೆಯಲ್ಲಿ ಭಾಗವಹಿಸಲು ಈ ಕೆಳಗಿನ ಷರತ್ತುಗಳನ್ನು ಕಡ್ಡಾಯವಾಗಿ ಅನುಸರಿಸಬೇಕು:

  1. ಲೇಖನವು ನಿಮ್ಮ ಸ್ವಂತ ಲೇಖನವಾಗಿರಬೇಕು. ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಅಥವಾ ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಪೋಸ್ಟ್ ಸೇರಿದಂತೆ ಬೇರೆಲ್ಲಿಯೂ ಹಿಂದೆ ಪ್ರಕಟವಾಗಿರಬಾರದು.
  2. ಒಮ್ಮೆ ನಿಮ್ಮ ಲೇಖನವನ್ನು ಸ್ಪರ್ಧೆಗೆ ಆಯ್ರಾದಲ್ಲಿ ಸಲ್ಲಿಸಿದ ನಂತರ ನೀವು ಯಾವುದೇ ಸಾಮಾಜಿಕ ಮಾಧ್ಯಮ, ಪತ್ರಿಕೋದ್ಯಮ ಅಥವಾ ನಿಮ್ಮ ಸ್ವಂತ ವೆಬ್‌ಸೈಟ್ ಅಥವಾ ಬ್ಲಾಗ್ ಪೋಸ್ಟ್ ಸೇರಿದಂತೆ ಬೇರೆಲ್ಲಿಯೂ ಪ್ರಕಟಿಸಬಾರದು.
  3. ಸ್ಪರ್ಧೆಗೆ ಗರಿಷ್ಠ 4 ಲೇಖನಗಳನ್ನು ಸಲ್ಲಿಸಬಹುದು. ನೀವು ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲೇಖನವನ್ನು ಸಲ್ಲಿಸಬಹುದು.
  4. ನ್ಯೂಸ್, ರಾಜಕೀಯ, ಧರ್ಮ, ವಿಕೃತ ಲೈಂಗಿಕ ವಿಷಯ, ದ್ವೇಷ ಅಥವಾ ತಾರತಮ್ಯವನ್ನು ಉತ್ತೇಜಿಸುವ ವಿಷಯಗಳನ್ನು ಒಳಗೊಂಡಂತೆ, ವಿವಾದಕ್ಕೆ ಕಾರಣವಾಗಬಹುದಾದ ಯಾವುದೇ ವಿಷಯಗಳನ್ನು ಬರೆಯಬಾರದು. 
  5. ಸ್ಪರ್ಧೆಗೆ ನೀವು Ayra App ಅಥವಾ Ayra ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ಲೇಖನವನ್ನು ಆಯ್ರಾದಲ್ಲಿ ಪ್ರಕಟಿಸಲು, ಈ ಲಿಂಕ್‌ನಲ್ಲಿರುವ ಸೂಚನೆಗಳನ್ನು ನೋಡಿ. ಸ್ಪರ್ಧೆಗಾಗಿ ಆಯ್ರಾದಲ್ಲಿ ಪ್ರಕಟಿಸಲು ನೀವು ಗೂಗಲ್ ಪ್ಲೇ ಸ್ಟೋರ್‌ನಿಂದ Ayra App ಅನ್ನು ಡೌನ್‌ಲೋಡ್ ಮಾಡಬಹುದು. ನೀವು ಇಲ್ಲಿ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು ಅಥವಾ ಗೂಗಲ್ ಪ್ಲೇ ಸ್ಟೋರ್‌ನಲ್ಲಿ "Ayra" ಎಂದು ಹುಡುಕಬಹುದು.
  6. ಜೂನ್ 2024 ರ ಬರವಣಿಗೆ ಸ್ಪರ್ಧೆಯ ವಿಜೇತರು ಈ ಬರವಣಿಗೆ ಸ್ಪರ್ಧೆಗೆ ಅರ್ಹರಾಗಿರುವುದಿಲ್ಲ.
  7. ನಿಮ್ಮ ಲೇಖನ, ಕಥೆ ಅಥವಾ ಕವನದ ವಿಷಯವು ಒದಗಿಸಿದ ವಿಷಯಗಳ ಪಟ್ಟಿಯಿಂದ ಇರಬೇಕು ಮತ್ತು ಸಂಪೂರ್ಣವಾಗಿ ಭಾರತ ಮತ್ತು ಅದರ ವೈಭವದ ಬಗ್ಗೆ ಇರಬೇಕು.
  8. ನಿಮ್ಮ ಪೋಸ್ಟ್‌ನ ಕೊನೆಯಲ್ಲಿ #AyraWritingContest ಮತ್ತು #IndiaIndependenceDay2024 ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ತಪ್ಪದೆ ಸೇರಿಸಿ.

ಸ್ಪರ್ಧೆಯ ನಿರ್ಣಯದ ಮಾನದಂಡಗಳು: ಓದುಗರು ಮತ್ತು ನಮ್ಮ ತೀರ್ಪುಗಾರರು ಯಾವ ಲೇಖನವನ್ನು ಹೆಚ್ಚು ಓದುತ್ತಾರೆ ಮತ್ತು ಇಷ್ಟಪಡುತ್ತಾರೆ, ಆ ಲೇಖನವನ್ನು ವಿಜೇತ ಎಂದು ಗುರುತಿಸಲಾಗುತ್ತದೆ. ಓದುಗರ ಸ್ಕೋರ್ 40% ಮತ್ತು ತೀರ್ಪುಗಾರರ ಸ್ಕೋರ್ 60% ಎಣಿಕೆಯಾಗುತ್ತದೆು. ಭಾಷೆಯಾದ್ಯಂತ ಲೇಖನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುತ್ತದೆ. ಪ್ರತಿ ಭಾಷೆಗೆ ಪ್ರತ್ಯೇಕ ಬಹುಮಾನವಿಲ್ಲ

ಸ್ಪರ್ಧೆಯ ಕುರಿತು ನಿಮಗೆ ಯಾವುದೇ ಪ್ರಶ್ನೆ ಇದ್ದರೆ ನಮ್ಮನ್ನು [email protected] ನಲ್ಲಿ ಇಮೇಲ್ ಮೂಲಕ ಅಥವಾ +919740878425 ನಲ್ಲಿ ವಾಟ್ಸಪ್ಪ್ ಮೂಲಕ ನಮ್ಮನ್ನು ಸಂಪರ್ಕಿಸಿ.

ಸ್ಪರ್ಧೆಯ ನೋಂದಣಿ
Android : ಗೂಗಲ್ ಪ್ಲೇ ಸ್ಟೋರ್ Android Ayra App ಅನ್ನು ಡೌನ್ ಲೋಡ್ ಮಾಡಿ

iPhone/iPad : App ಸ್ಟೋರ್ iOS Ayra App ಅನ್ನು ಡೌನ್ ಲೋಡ್ ಮಾಡಿ

Category:

Contest




ProfileImg

Written by Ayra Admin

Verified

0 Followers

0 Following