ಯುನಿವರ್ಸಲ್ ಹೆಲ್ತ್ ಕವರೇಜ್ ಡೇ.

ProfileImg
12 Dec '24
3 ನಿಮಿಷದ ಓದು


image

ಮನುಷ್ಯನಿಗೆ ಆರೋಗ್ಯವೆನ್ನುವುದು ಬಹಳ ಪ್ರಮುಖವಾದ ವಿಷಯ, ಉತ್ತಮ ಆರೋಗ್ಯವಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಹಾಗಾಗಿಯೇ ನಮ್ಮ ಹಿರಿಯರು "ಆರೋಗ್ಯವೇ ಭಾಗ್ಯ" ಎಂದು ಹೇಳಿರುವುದು.ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ಸಂಬಂದ ಪಟ್ಟಂತೆ ಜನ ಜಾಗೃತಿ ಮೂಡಿಸಲು ಜಾಗತಿಕ ಮಟ್ಟದಲ್ಲಿ ಹಲವಾರು ಯೋಜನೆಗಳನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ, ಇದರಲ್ಲಿ ಒಂದು ಇಂದು ಆಚರಿಸುತ್ತಿರುವ ಯುನಿವರ್ಸಲ್ ಹೆಲ್ತ್ ಕವರೇಜ್ ಡೇ. ಈ ದಿನ ಪ್ರತಿಯೊಬ್ಬರಿಗೂ ಆರೋಗ್ಯದ ಸೌಲಭ್ಯಗಳನ್ನು ರಕ್ಷಣಾ ವ್ಯವಸ್ಥೆಯ ಅಗತ್ಯವನ್ನು ತಿಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ, ಆರ್ಥಿಕ ಸಮಸ್ಯೆಗಳನ್ನು ಎದುರಿಸದೆ ಅಗತ್ಯವಿರುವಾಗ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಪಡೆಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಅದಕ್ಕಾಗಿಯೇ ಡಿಸೆಂಬರ್ 12 ರಂದು ಯುನಿವರ್ಸಲ್ ಹೆಲ್ತ್ ಕವರೇಜ್ ದಿನವನ್ನು ಆಚರಿಸಲಾಗುತ್ತದೆ.ಈ ಆಚರಣೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಸಾಧಿಸುವಲ್ಲಿ ಬಲವಾದ ಮತ್ತು ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳ ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಲ್ಲರಿಗೂ ಆರೋಗ್ಯದ ಕಡೆಗೆ ಪ್ರಗತಿಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಪ್ರಮುಖ ಅಂಶಗಳನ್ನು ಈ ಆಚರಣೆ ಹೊಂದಿದೆ,

ಕೈಗೆಟಕುವ ದರದಲ್ಲಿ ಔಷಧಿ ಮತ್ತು ಚಿಕಿತ್ಸೆ ಲಭ್ಯವಾಗುವುದು ಪ್ರತಿಯೊಬ್ಬರ ಮೂಲಭೂತ ಮಾನವ ಹಕ್ಕು. ಎಲ್ಲಾ ಮಾನವರು ಆರೋಗ್ಯ ರಕ್ಷಣೆಯ ಹಕ್ಕನ್ನು ಹೊಂದಿದ್ದಾರೆ ಎಂಬ ಕಲ್ಪನೆಯನ್ನು ಮುಂದಿಡಲು ಈ ದಿನ ಮೀಸಲಾಗಿದೆ. ಎಲ್ಲಾ ರಾಷ್ಟ್ರಗಳು ತಮ್ಮ ನಾಗರಿಕರನ್ನು ಸಮಾನವಾಗಿ ಬೆಂಬಲಿಸಲು ಮತ್ತು ಆರೋಗ್ಯ ರಕ್ಷಣೆ ಮೂಲಭೂತ ಮಾನವ ಹಕ್ಕಾಗಿರುವುದರಿಂದ ಪ್ರತಿಯೊಬ್ಬರಿಗೂ ಜಾಗರೂಕರಾಗಬೇಕು

ಇದು ಮಾನವಹಕ್ಕುಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿರುವ ವಿಶ್ವಸಂಸ್ಥೆಯ ಯೋಜನೆಗಳಲ್ಲಿ ಒಂದಾಗಿದೆ. ಹಸಿವು ಮುಕ್ತತೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮ, ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಶುದ್ಧ ನೀರು ಮತ್ತು ನೈರ್ಮಲ್ಯ, ಯೋಗ್ಯ ಕೆಲಸ ಮತ್ತು ಆರ್ಥಿಕ ಬೆಳವಣಿಗೆ, ಕೈಗಾರಿಕೆ,ನಾವೀನ್ಯತೆ ಮತ್ತು ಮೂಲಸೌಕರ್ಯ ಗಳನ್ನು ಪ್ರತಿ ಯೊಬ್ಬರಿಗೂ ತಲುಪಿಸುವ ಪ್ರಮುಖ ಉದ್ದೇಶಗಳನ್ನು ಹೊಂದಲಾಗಿದೆ ಯುನಿವರ್ಸಲ್ ಹೆಲ್ತ್ ಕವರೇಜ್ ಎನ್ನುವುದು ಆರ್ಥಿಕ ಸಂಕಷ್ಟಗಳಿಲ್ಲದೆ ಪ್ರತಿಯೊಬ್ಬ ವ್ಯಕ್ತಿಗೆ ವೈದ್ಯಕೀಯ ಸೇವೆಗಳನ್ನು ಪ್ರವೇಶಿಸುವಲ್ಲಿ ಸಮಾನತೆಯನ್ನು ಖಾತ್ರಿಪಡಿಸುವ ಅಡಿಪಾಯದ ಮೇಲೆ ನಿರ್ಮಿಸಲಾದ ಪರಿಕಲ್ಪನೆಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯು, ಅವರ ಆರ್ಥಿಕ ಸ್ಥಿತಿಯನ್ನು ಲೆಕ್ಕಿಸದೆ, ಯಾವಾಗ ಮತ್ತು ಎಲ್ಲಿ ಬೇಕಾದರೂ ವೈದ್ಯಕೀಯ ಸಹಾಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಇದು ಸೂಚಿಸುತ್ತದೆ. ಇಂದು ಜಗತ್ತಿನಾದ್ಯಂತ ಉತ್ತಮ ಆರೋಗ್ಯ ಮತ್ತು ಚಿಕಿತ್ಸೆಯ ಕೊರತೆ ಇರುವ ಲಕ್ಷಾಂತರ ಜನರಿದ್ದಾರೆ.ಈ ಬಗ್ಗೆ"ಆರೋಗ್ಯ ಮಾನವ ಹಕ್ಕು" ಈ ದಿನವನ್ನು ಆರ್ಥಿಕ ಸಂಕಷ್ಟವನ್ನು ಎದುರಿಸದೆ ಜನರಿಗೆ ಅಗತ್ಯವಿರುವ ಮತ್ತು ಅರ್ಹವಾದ ಗುಣಮಟ್ಟದ ಆರೋಗ್ಯವನ್ನು ನಮಗೆ ನೆನಪಿಸುತ್ತದೆ. ಈ ಯುನಿವರ್ಸಲ್ ಹೆಲ್ತ್ ಕವರೇಜ್ ದಿನದ ಮಹತ್ವಗಳೆಂದರೆ, ಸಾರ್ವತ್ರಿಕ ಆರೋಗ್ಯ ರಕ್ಷಣೆಯು ಹಣಕಾಸಿನ ನಿರ್ಬಂಧಗಳನ್ನು ಲೆಕ್ಕಿಸದೆ ಎಲ್ಲಾ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳ ಪೂರ್ಣ ಶ್ರೇಣಿಯನ್ನು ಪ್ರವೇಶಿಸಲು ಅನುವು ಮಾಡಿಕೊಡುವುದು ಹಾಗೂ ಪ್ರಮುಖ ಆರೋಗ್ಯ ಸೇವೆಗಳು,ಚಿಕಿತ್ಸೆ, ಪುನರ್ವಸತಿ ಮತ್ತು ಉಪಶಮನದ ಆರೈಕೆಯನ್ನು ಒಳಗೊಂಡಿದೆ, ಅಲ್ಲದೆ,ಆರೋಗ್ಯ ಪ್ರಚಾರ ರೋಗದ ಉಲ್ಬಣದ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಸೇರಿದಂತೆ ಅಗತ್ಯ ಆರೋಗ್ಯ ಸೇವೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ ಸಾರ್ವತ್ರಿಕಆರೋಗ್ಯ ರಕ್ಷಣೆಯು ಮೂರು ಆಯಾಮಗಳನ್ನು.ಹೊಂದಿದೆ. ಜನಸಂಖ್ಯೆಯ ವ್ಯಾಪ್ತಿಗನುಗುಣವಾಗಿ ಅಂದರೆ ಇಕ್ವಿಟಿಗೆ ಲಿಂಕ್ ಮಾಡಲಾದ ಸೇವೆಗಳನ್ನು ಸ್ವೀಕರಿಸುವವರು (ಇಕ್ವೆಟಿ ಎಂದರೆ ಖಾಸಗಿ ಕಂಪನಿಗಳಿಗೆ ಹೂಡಿಕೆ) ಹಾಗೂ ಸೇವಾ ವ್ಯಾಪ್ತಿ ಅಂದರೆ ಯಾವ ಆರೋಗ್ಯ ಸೇವೆಗಳು ಲಭ್ಯವಿದೆ ಎಂಬುದರ ಜೊತೆಗೆ ಆರ್ಥಿಕ ಭದ್ರತೆಯ ಭರವಸೆ ಒದಗಿಸುವುದು ಅಂದರೆ ಆರೋಗ್ಯ ಸೇವೆಗಳು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗದಂತೆ ನೋಡಿಕೊಳ್ಳುವುದು ಸಾರ್ವತ್ರಿಕ ಆರೋಗ್ಯ ರಕ್ಷಣೆಯು ಸಮಾನತೆ, ತಾರತಮ್ಯ ಮತ್ತು ಆರೋಗ್ಯದ ಹಕ್ಕುಗಳ ತತ್ವಗಳನ್ನು ಆಧರಿಸಿದೆ. ಅಲ್ಲದೆ UHC ಅಡಿಯಲ್ಲಿ ಸಮಾಜದ ಅತ್ಯಂತ ದುರ್ಬಲ ಜನರಿಗೆ ಎಲ್ಲಾ ಮೂಲಭೂತ ಆರೋಗ್ಯ ಸೌಲಭ್ಯಗಳನ್ನು ಇದರಲ್ಲಿ ಒದಗಿಸಲಾಗಿದೆ ಎಂಬುದನ್ನು ಇದು ಖಾತ್ರಿಪಡಿಸುತ್ತದೆ ಅಂಕಿ ಅಂಶಗಳ ಪ್ರಕಾರ ಕಳೆದ 20 ವರ್ಷಗಳಲ್ಲಿ ಆರ್ಥಿಕ ರಕ್ಷಣೆ ಹದಗೆಟ್ಟಿದೆ, ಸರಿ ಸುಮಾರು 2 ಶತಕೋಟಿ ಜನರು ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿ ದ್ದಾರೆ ಮತ್ತು 1.3 ಶತಕೋಟಿ ಜನರು ಆರೋಗ್ಯ ವೆಚ್ಚಗಳಿಂದ ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಹಾಗಾಗಿ ಇದು ಅಗತ್ಯವಾಗಿ ಬದಲಾಗಬೇಕು ಈ ನಿಟ್ಟಿನಲ್ಲಿ UHC ಅಂತಾರಾಷ್ಟ್ರೀಯ ಯುನಿವರ್ಸಲ್ ಹೆಲ್ತ್ ಕವರೇಜ್ ಡೇ ಅನ್ನು ಮೊದಲ ಬಾರಿಗೆ ಡಿಸೆಂಬರ್ 12, 2012 ರಂದು ಆಚರಿಸಿತು, ವಿಶ್ವಸಂಸ್ಥೆಯು ಸಾರ್ವತ್ರಿಕ ಆರೋಗ್ಯ ರಕ್ಷಣೆಯನ್ನು ಕೈಗೊಳ್ಳಲು ಪ್ರತಿ ದೇಶವನ್ನು ಪ್ರೋತ್ಸಾಹಿಸು ವ ನಿರ್ಣಯವನ್ನು ಅಂಗೀಕರಿಸಿತು.ಯಾವುದೇ ರೀತಿಯ ಆರ್ಥಿಕ ತಾರತಮ್ಯವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯು ಸಮಾನ ಮತ್ತು ಕೈಗೆಟುಕುವ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬೇಕು ಎಂಬ ನಂಬಿಕೆಯನ್ನು ಉತ್ತೇಜಿಸಲು ಈ ದಿನವನ್ನು ಆಚರಿಸಲಾಗುತ್ತದೆ.ಈ ದಿನದಂದು ನಾವು ಎಲ್ಲರಿಗೂ ಆರೋಗ್ಯದಲ್ಲಿ ಹೂಡಿಕೆ ಮಾಡಲು ಮತ್ತು ಜನರನ್ನು ರಕ್ಷಿಸಲು ಸರ್ಕಾರಗಳಿಗೆ ಕರೆನೀಡುವುದ _ರೊಂದಿಗೆ ಅತ್ಯಂತ ದುರ್ಬಲರು ತಮ್ಮ ಬಡತನದ ಸಲುವಾಗಿ ಆರೋಗ್ಯ ವೆಚ್ಚದಿಂದ ಮುಕ್ತರಾಗಬೇಕು ಯುನಿವರ್ಸಲ್ ಹೆಲ್ತ್ ಕವರೇಜ್ ನ ಗುರಿಯು ಜಗತ್ತು ಶ್ರೀಮಂತವಾಗಿರು ವುದರಿಂದ ಹೆಚ್ಚು ಸಾಧಿಸ ಬಹುದಾಗಿದೆ ಇದರಿಂದ ಆರೋಗ್ಯ ಸೇವೆಗಳು ಮತ್ತು ತಂತ್ರಜ್ಞಾನಗಳಿಗೆ ಹೆಚ್ಚಿನ ಪ್ರವೇಶಕ್ಕೆ ದಾರಿಯಾಗುತ್ತದೆ, ಪ್ರತಿಯೊಬ್ಬ ವ್ಯಕ್ತಿಯು 'ಆರೋಗ್ಯದ ಮಾನವ ಹಕ್ಕಿನಿಂದ'ಪ್ರಯೋಜನ ಹಾಗೂ ಸೌಲಭ್ಯಗಳನ್ನು ಪಡೆಯುವುದನ್ನು ಹಾಗೂ ಸಿಗುವ ಸೌಲಭ್ಯಗಳ ಮಾಹಿತಿಯನ್ನು ತಿಳಿದುಕೊಂಡು ಎಲ್ಲಾ ಸೌಲಭ್ಯಗಳನ್ನು ಒದಗಿಸುವ ಮಹತ್ತರ ಜವಾಬ್ದಾರಿಯನ್ನು ನಮ್ಮ ಸರ್ಕಾರಗಳು ಹಾಗೂ ಜನನಾಯಕರು ಮಾಡಬೇಕು. ಇದಕ್ಕಾಗಿ ನಾವು ನಮ್ಮ ರಾಜಕೀಯ ನಾಯಕರನ್ನು ಸರಿಯಾಗಿ ಆಯ್ಕೆ ಮಾಡಬೇಕು, ಆರೋಗ್ಯವೇ ನಿಜವಾದ ಸಂಪತ್ತು ಇದನ್ನು ಅರಿತು ಎಲ್ಲರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಆರೋಗ್ಯದ ಮಾನವ ಹಕ್ಕಿನಿಂದ' ಸಿಗುವ ಪ್ರಯೋಜನ ಹಾಗೂ ಸೌಲಭ್ಯಗಳನ್ನು ಅರಿತು ಸರಿಯಾಗಿ ಬಳಸಿಕೊಳ್ಳೋಣ.!

ಗೀತಾಂಜಲಿ ಎನ್, ಎಮ್


 

ಹಕ್ಕು ನಿರಾಕರಣೆ: ಈ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಲೇಖಕರ ಅಭಿಪ್ರಾಯಗಳು ಮತ್ತು Ayra ಅಥವಾ Ayra ಟೆಕ್ನಾಲಜೀಸ್‌ನ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ. ಒದಗಿಸಿದ ಮಾಹಿತಿಯನ್ನು ಪರಿಶೀಲಿಸಲಾಗಿಲ್ಲ. ಇದು ವೈದ್ಯಕೀಯ ಸಲಹೆಯಾಗಿ ಉದ್ದೇಶಿಸಿಲ್ಲ. ಯಾವುದೇ ಆರೋಗ್ಯ ಅಥವಾ ಕ್ಷೇಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಓದುಗರು ಆರೋಗ್ಯ ವೃತ್ತಿಪರ ಅಥವಾ ವೈದ್ಯರನ್ನು ಸಂಪರ್ಕಿಸಬೇಕು.
ಕೆಟೆಗರೀ / ವರ್ಗ:ಆರೋಗ್ಯ ಮತ್ತು ಸ್ವಾಸ್ಥ್ಯ



ProfileImg

ಇದರ ಲೇಖಕರು Geethanjali NM

Author ✍️

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ