ವೈದ್ಯ ವೃತ್ತಿಯೇ ಹಾಗೆ ತುಂಬಾ ಗೌರವಯುತವಾದದ್ದು! ಕಾರಣ ದೇವರು ಜೀವ ಕೊಟ್ಟರೆ ವ್ಯೆದ್ಯರು ಜೀವವನ್ನು ಉಳಿಸುತ್ತಾರೆ ಹಾಗಾಗಿ ಪ್ರತಿಯೊಬ್ಬರ ಜೀವನದಲ್ಲಿ ಒಬ್ಬೊಬ್ಬ ವ್ಯೆದ್ಯರೂ ಬಹಳ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ. ಸಮಾಜದಲ್ಲಿ ಬೇರೆಲ್ಲಾ ವೃತ್ತಿಗಿಂತ ಈ ವ್ಯೆದ್ಯ ವೃತ್ತಿಗೆ ಒಂದಿನಿತು ಬೆಲೆ ಹೆಚ್ಚೆಂದು ಹೇಳಿದರೆ ಒಪ್ಪಿಕೊಳ್ಳಲೇಬೇಕು ಕಾರಣ ರೋಗಿಗಳು ಜೀವನ್ಮರಣ ಮದ್ಯ ಹೊರಾಡುವಾಗ ಆ ಅಪತ್ಕಾಲಕ್ಕೆ ಅಪತ್ಪಾಂದವರಾಗಿ ಆ ರೋಗಿಗಳ ಪಾಲಿಗೆ ಕಣ್ಣಿಗೆ ಕಾಣುವ ಸಾಕ್ಷಾತ್ ದೇವರಾಗಿ ಆರೋಗ್ಯ ಹಾಗೂ ಜೀವವನ್ನು ಕಾಪಾಡುತ್ತಾರೆ ಹಾಗಾಗಿಯೇ ವ್ಯೆದ್ಯರನ್ನು 'ವ್ಯೆದ್ಯೋ ನಾರಾಯಣೋ ಹರಿ" ಎಂದು ಕರೆಯುವುದು. ವ್ಯೆದ್ಯರ ಅಮೂಲ್ಯ ಸೇವೆ ಮತ್ತು ದಣಿವರಿಯದ ಅವರ ಕಾಯಕ ಮತ್ತು ಸಮರ್ಪಣೆಯನ್ನು ಗುರುತಿಸಲು ಅವರಿಗಾಗಿ ಒಂದು ದಿನವನ್ನು ಮೀಸಲಿಟ್ಟು ಆಚರಿಸಲಾಗುತ್ತದೆ ಅದನ್ನೇ ವ್ಯೆದ್ಯರ ದಿನವೆಂದು ಕರೆಯಲಾಗುತ್ತದೆ,ಈ ವ್ಯೆದ್ಯರ ದಿನವನ್ನು ಜಗತ್ತಿನಾದ್ಯಂತ ಬೇರೆ ಬೇರೆ ತಿಂಗಳು ದಿನಾಂಕದಂದು ಆಚರಿಸಲಾಗುತ್ತದೆ ಹಾಗೆಯೇ ನಮ್ಮ ಭಾರತದಲ್ಲಿ ಜುಲೈ 1 ರಂದು ನಮ್ಮ ದೇಶದಾದ್ಯಂತ ರಾಷ್ಟ್ರೀಯ ವ್ಯೆದ್ಯರ ದಿನಾಚರಣೆಯನ್ನಾಗಿ ಆಚರಣೆ ಮಾಡಕಾಗುತ್ತದೆ. ಈ ಆಚರಣೆಯ ಮೂಲ ಉದ್ದೇಶ ರೋಗಿಗಳ ಬಗೆಗಿನ ವೈದ್ಯರ ಬದ್ಧತೆಗಳನ್ನು ಶ್ಲಾಘಿಸಲು ಮತ್ತು ಪ್ರಶಂಸಿಸಲು ಅವರ ಸೇವೆಯನ್ನು ಗುರುತಿಸಲು ಹಾಗು ವೈದ್ಯರ ಬಗ್ಗೆ ಮೌಲ್ಯಯುತ ಭಾವನೆ ಮೂಡಿಸಲು ಈ ದಿನವನ್ನುಆಚರಿಸಲಾಗುತ್ತದೆ ಭಾರತದಲ್ಲಿ ವ್ಯೆದ್ಯರ ದಿನ ಬೆಳೆದು ಬಂದ ಇತಿಹಾಸ ನೋಡುವುದಾದರೆ 1948 ರಿಂದ 1962ರವರೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಯಾಗಿದ್ದ ಭಾರತರತ್ನ ಪುರಸ್ಕೃತರಾದ ಡಾ. ಬಿಧಾನ್ ಚಂದ್ರ ರಾಯ್ ರವರು ಒಬ್ಬ ಪ್ರಸಿದ್ಧ ವೈದ್ಯರು, ಶಿಕ್ಷಣತಜ್ಞರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಸಮಾಜ ಸೇವಕರಾಗಿದ್ದರು ಇವರು ತಮ್ಮ ಅಧಿಕಾರದ ಅವದಿಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ನೀಡಿದ ಅಪಾರವಾದ ಕೊಡುಗೆ ಹಾಗೂ ಅವರ ಸಮರ್ಪಣೆಯನ್ನು ಗುರುತಿಸಿ ಭಾರತ ಸರ್ಕಾರವು 1991ರಲ್ಲಿ ಡಾ ಬಿದನ್ ಚಂದ್ರರಾಯ್ ಅವರ ಜನ್ಮದಿನದ ನೆನಪಿಗಾಗಿ ಜುಲೈ 1ನ್ನು ರಾಷ್ಟ್ರೀಯ ವೈದ್ಯರ ದಿನವೆಂದು ಘೋಷಿಸಿತು.!
ವ್ಯೆದ್ಯವೃತ್ತಿ ನಿಜಕ್ಕೂ ಪವಿತ್ರ ಹಾಗೂ ಅದ್ಭುತವಾದದ್ದು ಗುಣಪಡಿಸುವ ಪ್ರತೀ ಕೈಗಳು ಕಾಳಜಿಯುಳ್ಳ ಸಹೃದಯ ಗಳಾಗಿರುತ್ತವೆ ಹಾಗಾಗಿಯೇ ವ್ಯೆದ್ಯರುಗಳು ಸಮಯ, ಹಸಿವು ಸಂತೋಷ ನಿದ್ರೆಗಳಾಚೆ ತಮ್ಮ ಕರ್ತವ್ಯಕ್ಕೆ ಹೆಚ್ಚು ಬದ್ಧರಾಗಿರುತ್ತಾರೆ, ಕೆಲವೊಮ್ಮೆ ತಮ್ಮ ವಯುಕ್ತಿಕ ಜೀವನವನ್ನು ಲೆಕ್ಕಿಸದೆ ನಿಸ್ವಾರ್ಥವಾಗಿ ಸೇವೆಸಲ್ಲಿಸುತ್ತಾರೆ ಸಾವು ಬದುಕಿನ ನಡುವೆ ಹೋರಾಡುವ ರೋಗಿಗಳಿಗೆ ಭರವಸೆ ತುಂಬಿ ಪುನರ್ಜನ್ಮ ಕೊಡುವ ಪ್ರತಿ ವೈದ್ಯರು ನಿಜವಾಗಿಯೂ ದೇವರಿಗೆ ಸಮನಾಗಿರುತ್ತಾರೆ ತಮ್ಮ ಬುದ್ದಿ ಜ್ಞಾನ ಮತ್ತು ಕೌಶಲ್ಯದಿಂದ ಸಮಾಜದಲ್ಲಿ ಗೌರವಿಸಲ್ಪಡುವ ವೈದ್ಯ ವೃತ್ತಿ ಎಷ್ಟು ಶ್ರೇಷ್ಟವೂ ಅಷ್ಟೇ ಕಷ್ಟಕರವೂ ಹೌದು ಎನ್ನಬಹುದು.ಎಷ್ಟೋ ಸಲ ವೈದ್ಯರು ತಮ್ಮ ಸುಖ ಸಂತೋಷಗಳನ್ನು ತ್ಯಾಗಮಾಡಿ ತಮ್ಮ ವೃತ್ತಿಗೇ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಕಾಗುತ್ತದೆ. ಅದರಲ್ಲೂ ಕೆಲವೊಂದು ತುರ್ತುಸೇವೆ,ಅಪಘಾತಗಳ ಸಂದರ್ಭ ಬಂದಾಗಲಂತು ತಮ್ಮ ಕುಟುಂಬ ಮನೆ ಮಕ್ಕಳು,ಹಸಿವು ನಿದ್ರೆ ಎಲ್ಲವನ್ನು ಮರೆತು ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ಕೊಡುವ ಮೂಲಕ ರೋಗಿಗಳ ಜೀವವನ್ನು ರಕ್ಷಿಸುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕೋವಿಡ್ ಸಂಕಷ್ಟದ ಸಮಯದಲ್ಲಿ ವ್ಯೆದ್ಯರುಗಳು ತಮ್ಮ ಜೀವವನ್ನೂ ಲೆಕ್ಕಿಸದೇ ನಿಸ್ವಾರ್ಥತೆಯಿಂದ ಸೇವೆ ಸಲ್ಲಿಸುವುದರ ಜೊತೆಗೆ ಹಲವು ವ್ಯೆದ್ಯರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಇಷ್ಟೆಲ್ಲಾ ತ್ಯಾಗ ಸೇವೆಯನ್ನು ಮಾಡುವ ವ್ಯೆದ್ಯರನ್ನು ಪ್ರತಿಯೊಬ್ಬರೂ ಗೌರವಿಸಲೇಬೇಕೇ ಹೊರತು ಚಿಕ್ಕ ಪುಟ್ಟ ವಿಷಯಗಳಿಗೆ ಅಸಹಕಾರ ಮಾಡುತ್ತಾ ಅಗೌರವ ತೋರುತ್ತಾ ಕಿರಿಕಿರಿಯನ್ನುಂಟು ಮಾಡಬಾರದು. ವೈದ್ಯರುಗಳು ಸಮಾಜದ ರಕ್ಷಕರು ಹಗಲಿರುಳು ಕೆಲಸ ಮಾಡುತ್ತಾರೆ ಮತ್ತು ದಿನದ 24 ಗಂಟೆಗಳೂ ರೋಗಿಗಳ ಸೇವೆಗಾಗಿ ಆಸ್ಪತ್ರೆಗಳಲ್ಲಿ ಲಭ್ಯವಿರುತ್ತಾರೆ.ಅಲ್ಲದೆ ವೈದ್ಯಕೀಯ ವಿಜ್ಞಾನ ತಂತ್ರಜ್ಞಾನಗಳೊಂದಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾ ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಪರಿಹಾರ ಮಾರ್ಗಗಳನ್ನು ಕೊಂಡುಕೊಂಡು ಚಿಕಿತ್ಸಾ ವಿಧಾನವನ್ನು ದಿನದಿಂದ ದಿನಕ್ಕೆ ನವೀಕರಿಸಿಕೊಳ್ಳುತ್ತಾರೆ ಜೊತೆಗೆ ಹೊಸ ಹೊಸ ಚಿಕಿತ್ಸೆಗಳನ್ನು ಕಂಡುಹಿಡಿದು ಎಲ್ಲಾ ತರಹದ ರೋಗಗಳಿಗೆ ಚಿಕೆತ್ಸೆ ಕೊಡುವ ಮೂಲಕ ರೋಗಿಗಳ ಆರೋಗ್ಯವನ್ನು ಕಾಪಾಡುವಲ್ಲಿ ಅವಿರತ ಪರಿಶ್ರಮವನ್ನು ವಹಿಸುತ್ತಾರೆ. ಇಂತಹ ಅದ್ಭುತ ಸೇವೆ ಸಲ್ಲಿಸುವ ವೈದ್ಯರಿಗೆ ನಾವು ನಮ್ಮ ಕೃತಜ್ಞತೆಯನ್ನು ಸಲ್ಲಿಸುವುದರ ಜೊತೆಗೆ ಸದಾ ಅವರ ಸೇವೆಗೆ ಋಣಿಯಾಗಿರಬೇಕು, ಮನುಷ್ಯನಿಗೆ ಎಷ್ಟೇ ಹಣ ಆಸ್ತಿಯ ಸಂಪತ್ತು ಇದ್ದರು ಆರೋಗ್ಯವೆಂಬ ಅತ್ಯಮೂಲ್ಯ ಸಂಪತ್ತು ಇಲ್ಲವಾದರೆ ಎಲ್ಲವೂ ವ್ಯರ್ಥ ಹಾಗಾಗಿ ಆರೋಗ್ಯವೇ ನಿಜವಾದ ಸಂಪತ್ತು, ಅನಾರೋಗ್ಯದ ಸಂಧರ್ಭದಲ್ಲಿ ನಮ್ಮ ಆರೋಗ್ಯವೆಂಬ ಬೆಲೆ ಕಟ್ಟಲಾಗದ ಅಮೂಲ್ಯ ಸಂಪತ್ತನ್ನು ಕಾಪಾಡಿ ಪುನರ್ಜನ್ಮವನ್ನು ಕೊಡುವ ವ್ಯೆದ್ಯರು ನಿಜಕ್ಕೂ ಪ್ರಾಣದಾತರು. ಒಬ್ಬ ಒಳ್ಳೆಯ ವೈದ್ಯ ರೋಗಕ್ಕೆ ಚಿಕಿತ್ಸೆ ನೀಡುತ್ತಾನೆ ಆದರೆ ಒಬ್ಬ ಶ್ರೇಷ್ಠ ವೈದ್ಯ ರೋಗದ ಜೊತೆಗೆ ರೋಗಿಗೂ ಚಿಕಿತ್ಸೆ ನೀಡುತ್ತಾನೆ ಎಂಬ ಮಾತು ಎಷ್ಟು ಅಥಗರ್ಭಿತವಾಗಿದೆ ಅಲ್ಲವೇ, ಒಟ್ಟಿನಲ್ಲಿ ಹೇಳುವುದಾದರೆ ವೈದ್ಯರ ದಿನವು ಕೇವಲ ಒಬ್ಬ ವ್ಯಕ್ತಿಯ ಆಚರಣೆಯಲ್ಲ, ಬದಲಾಗಿ ಪ್ರತೀ ರೋಗಿಗಳನ್ನು ಪ್ರೀತಿ, ಸಹಾನುಭೂತಿ, ಜವಾಬ್ದಾರಿ ಮತ್ತು ಮಾನವೀಯತೆಯಿಂದ ಉಪಚರಿಸುತ್ತ ರೋಗಗಳನ್ನು ಗುಣಪಡಿಸುವ ಎಲ್ಲಾ ವೈದ್ಯರಿಗೂ ಸಲಿಸುವ ಗೌರವ,ವ್ಯೆದ್ಯರಿಗೆ ಎಲ್ಲರೂ ಯಾವಾಗಲೂ ಕೃತಜ್ಞರಾಗಿರಬೇಕು ವ್ಯೆದ್ಯರಿಲ್ಲದೆ ಯಾರೂ ತಮ್ಮ ಮುರಿದ ಮೂಳೆಗಳನ್ನು ಜೋಡಿಸಿಕೊಳ್ಳಲು ಸಾಧ್ಯವಿಲ್ಲ ಆಲ್ಲವೇ? ರಕ್ತದೊತ್ತಡ, ಮೆದುಳು,ಹೃದಯದ ಆರೋಗ್ಯ ಹೀಗೆ ಶರೀರದಲ್ಲಿ ನಿತ್ಯವೂ ಒಂದಿಲ್ಲೊಂದು ಕಾಣಿಸಿಕೊಳ್ಳುವ ಪ್ರತೀ ರೋಗಗಳಿಂದ ವ್ಯೆದ್ಯರ ಹೊರತು ಬೇರಾರು ರಕ್ಷಿಸಲು ಸಾಧ್ಯವಿಲ್ಲ ಅಲ್ಲವೇ? ಅದಕ್ಕೇ ವೈದ್ಯರುಗಳು ಅದ್ಭುತ ಮತ್ತು ನಿಜವಾದ ಸೂಪರ್ ಹೀರೋಗಳು ನಮಗೆ ಕಾಯಿಲೆ ಬಂದಾಗ ತಕ್ಷಣ ಹೋಗುವುದು ವ್ಯೆದ್ಯರ ಬಳಿಗೆ ಹೊರತು ಬೇರೆಲ್ಲೂ ಅಲ್ಲ ಹಾಗಾಗಿ ಅವರನ್ನು ಗೌರವಿಸುವುದು ಎಲ್ಲರ ಆದ್ಯ ಕರ್ತವ್ಯದ ಜೊತೆಗೆ ಅವರಿಗೆ ಸಲ್ಲಿಸುವ ಕೃತಜ್ಞತೆಯೂ ಕೂಡ ಹೌದು, ಈ ನಿಟ್ಟಿನಲ್ಲಿ ನಾವು ಈ ದಿನವನ್ನು ಎಲ್ಲಾ ವ್ಯೆದ್ಯರುಗಳಿಗೆ ಸಮರ್ಪಿಸುತ್ತ ಶುಭಾಶಯಗಳನ್ನು ಸಲ್ಲಿಸೋಣ.
ಗೀತಾಂಜಲಿ ಎನ್,ಎಮ್
Author ✍️
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ