ಅವಳೇನು ದಿನ ರಾತ್ರಿ ಆಗಸದಿ ಕಾಣೋ ತಾರೆಯಲ್ಲ, ಅಪರೂಪಕ್ಕೆ ಕಾಣು ಕಾಮನಬಿಲ್ಲಿನಂತವಳು,
ಅವಳೇನು ದಿನ ಮುಂಜಾನೆ ಸುತ್ತುವ ತುಳಸಿ ಗಿಡವಲ್ಲ, ಹಬ್ಬದ ದಿನ ಕಟ್ಟುವ ಮಾವಿನ ತೋರಣವು,
ಅವಳೇನು ದಿನವಿಡಿ ಓದುವ ಸುದ್ದಿ ಪತ್ರಿಕೆಯಲ್ಲ, ನನಗಾಗಿ ಕೆತ್ತಿಟ್ಟ ಹಲ್ಮಿಡಿ ಶಾಸನವು,
ಅವಳೇನು ಪ್ರತಿ ನಿಮಿಷ ನೋಡುವ ಜಂಗಮ ವಾಣಿಯಲ್ಲ, ಜಗತ್ತೇ ಮರೆಸುವ ಮೋಹಿನಿಯು,
ಅವಳೇನು ಪ್ರತಿ ನಿತ್ಯ ಅರಳುವ ಹೂವಲ್ಲ 12 ವರ್ಷಕ್ಕೊಮ್ಮೆ ಅರಳುವ ನೀಲ ಕೊರಂಜಿ ಹೂವಿನಂತವಳು..…
@ದಿಲೀಪ
ಅವಳೆಂದರೆ!
ಮಾತುಗಳು ಮುಗಿದರು ತೀರದ ದಾಹದಂತಿರಬೇಕು,
ಎಷ್ಟೇ ಗೀಚಿದರು ಮುಗಿಯದ ಕವನದಂತಿರಬೇಕು,
ತೀರ ಕಂಡರೂ ಮುಗಿಯದ ಕಡಲಿನಂತಿರಬೇಕು,
ಅತ್ತರು ತೀರದ
ದುಃಖದಂತಿರಬೇಕು,
ಕಗ್ಗತ್ತಲ ಜೀವನದಲ್ಲಿ
ಬೆಳಕು ಚೆಲ್ಲುವ ಚೆಲುವೆಯಾಗಿರಬೇಕು.....
ಅವಳ ಪ್ರೀತಿ ಮನಸ್ಸಿನ ಕಡಲಲ್ಲಿ ಹುಟ್ಟಿ ಸಾಯುವ ಮೀನು ಎನ್ನಲಾರೆ,
ಕಡಲ ತಳದಲ್ಲಿ ಮುಳುಗಿದ ಮುತ್ತಿನ
ಚಿಪ್ಪೆಂದು ಅರಿವಾಗಲು,
ಬೆಳಕಿನ ದೀಪ ಹಿಡಿದು ಮನಬಂದಂತೆ
ಅಲೆದಾಡುವೆ......
ಕಣ್ಣಿನಲ್ಲಿಯೇ ಬೀಳು ಕೊಟ್ಟು,
ಮನಸಿನಲ್ಲಿಯೇ ಮುತ್ತುಕೊಟ್ಟು,
ಮನೆಯ ಅಂಗಳದಿ ಬಿಟ್ಟು
ಮನಸಿಲ್ಲದ ಮನಸಿನಿಂದ
ಒಬ್ಬನೇ ಹಿಂತಿರುಗಿ ಬಂದೆ
ಮರುಭೂಮಿಯಲ್ಲಿ ನಡೆದು
ಬಾಯಾರಿದ ವ್ಯಕ್ತಿಯಂತೆ
ನಿನ್ನ ಚಿಂತೆ ದಾರಿಯುದ್ಧಕ್ಕೂ
ಕಾಡುತಿತ್ತು ... 🩵
ಬಂಗಾರದ ಬಟ್ಟೆಯ ತೊಟ್ಟರು,
ಹತ್ತಿಯ ಬಟ್ಟೆಯ ತೊಟ್ಟರು,
ಕಾರಣ ಒಂದೇ ಮಾನ ಮುಚ್ಚಲು,
ಪರಮನ್ನಾ ತಿಂದರು
ಬರಿಗಂಜಿ ಕುಡಿದರು
ಕಾರಣ ಒಂದೇ ಹಸಿವ ನೀಗಿಸಲು,
ಉಪ್ಪರಿಗೆಯಲ್ಲಿ ಮಲಗಿದರು
ನೆಲದಲ್ಲಿ ಮಲಗಿದರು
ಕಾರಣ ಒಂದೇ ನಿದ್ದೆ ಮಾಡಲು,
ನಿನ್ನ ಬಳಿ ಏನಿದೆ ಯಾಕಿದೆ
ಎಂದು ಚಿಂತಿಸದಿರು
ವಸ್ತು - ವಿಷಯಗಳು ಹಾಗೆ
ದಿನಕೊಮ್ಮೆ ಬದಲಾಗುತ್ತವೆ
ಕಾರಣ ಬದಲಾಗಲ್ಲ.
ಮನೋಭಾವ ನಂಬಿ ಜೀವಿಸು
ಜೀವನ ಜೀವವಿರುವರೆಗಷ್ಟೇ!!!!
๔īใєєр
ಸಾಧುಗೆ ಸಾಧು ಮಾಧುರಿಯನ್ಗೆ ಮಾಧುರಿಯನ್
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ