ಅರಿತು ಅರಿಯದಂತೆ ನಟಿಸುವ ನಮ್ಮ ಸುತ್ತ ಮುತ್ತಲಿನ ಸಮಾಜದ ಬಗ್ಗೆ ಏನೆಂದು ಬರೆಯಲಿ.
ನನ್ನ ಜಾಗದಲ್ಲಿದ್ದು ಯೋಚಿಸಿದಾಗ ಎಲ್ಲಾ ಸರಿ ಅನಿಸುವ ವಿಷಯಗಳು. ಹಾಗೆ ನಿಮ್ಮ ಜಾಗದಲ್ಲಿದ್ದು ಯೋಚಿಸಿದಾಗ ಎಲ್ಲಾ ತಪ್ಪೇನಿಸುವ ವಿಷಯಗಳು.
ತಪ್ಪು-ಸರಿ ಯ ಭೇದ-ಭಾವದಲ್ಲಿ ನಮ್ಮಲ್ಲಿ ನಾವು ಮರೆಯಾಗಿದ್ದೇವೆ ಅನ್ನುವ ವಿಷಯದ ಬಗ್ಗೆ ಅರಿವು ಮೂಡಿಸುವ ವಿಷಯವೇ ಇದು ಎಂದು ಹೇಳಲಾ…
ನೇರವಾಗಿ ಮಾತಾಡುವವನನ್ನು ಕೆಟ್ಟವನೆಂದು ಬಿಂಬಿಸುವ ಸಮಾಜ ಕನ್ನಡಿಯ ಮುಂದೆ ನಿಂತು ನಿಮ್ಮಂತೆ ನಾನು ಅಂತ ಮುಗುಳು ನಕ್ಕು ನಾಚಿತಂತೆ ಮನಸ್ಸಲ್ಲೇ.
ನಿಂತರು ತಪ್ಪು, ಕೂತರು ತಪ್ಪು ಎಂದು ನಿಂದನೆಗೆ ಒಳಪಟ್ಟು.ಕಷ್ಟ ಪಟ್ಟು ಜೀವನ ಸಾಗಿಸುತ್ತಿರುವ ಜನರ ಜೀವನ ಒಂದ್ ತರ ಎರಡು ದೋಣಿ ಮೇಲೆ ಕಾಲಿಟ್ಟ ಪರಿಸ್ಥಿತಿ ಆಗಿದೆ.
ಎಲ್ಲಾ ಅರಿತವರಿಗೆ ಅರಿಯದೆ ನುಡಿದ ನನ್ನ ನುಡಿಯ ಅರ್ಥ ಬೇಗ ಅರ್ಥ ಆಗುತ್ತೆ ಅಂತ ನನ್ನ ಅಭಿಪ್ರಾಯ….ನಾನು ಹೇಗಿರಬೇಕು ಅನ್ನೋ ಮೊದಲ ಪಾಠ ನಮಗೆ ನಮ್ಮಿಂದ ಆಗ್ಬೇಕು.
ಅಂದ್ರೆ….ಎಲ್ಲಿ, ಹೇಗೆ,ಎಷ್ಟು ಮಾತಾಡಬೇಕು ಅನ್ನೋ ಸಣ್ಣತಿಳುವಳಿಕೆ ಇದ್ರೆ ಸಾಕು. ನಡುವಳಿಕೆಯಲ್ಲಿ ಹೃದಯವಂತಿಕೆಯ ಮಹಾರಾಜಾ ಆಗಿದ್ರೆ ಸಾಕು ಅಂತ ನನ್ನ ಅಭಿಪ್ರಾಯ ಮಾತ್ರ.
“ಆಗೋದೆಲ್ಲ ಒಳ್ಳೇದಕ್ಕೆ”ಅಂತ ಅನುಭವಿಗಳು ಹೇಳಿದ್ದನ್ನ ನೆನಪಿಸುವ. ..
ಅವರಿವರ ಬಗ್ಗೆ ಅನವಶ್ಯಕ ಮಾತುಕಥೆ, ಚರ್ಚೆ ಇಂದ ದೂರ ಇರುವ. ಚುಚ್ಚು ಮಾತುಗಳನ್ನ ಆಡೋದನ್ನ ಬಿಟ್ಟು ಬಿಡೋಣ.
ಜೀವ ಇರುವ ತನಕ ಪರಮಾತ್ಮನ ಆತ್ಮದಂತಿರುವ ನಮ್ಮನ್ನು ಪರಿಶುದ್ಧವಾಗಿ ಕಾಪಾಡಿಕೊಂಡು ಜೀವನ ಕೊಂದು ಸಾರ್ಥಕತೆ ಕೊಡಿಸೋಣ..
ಏನ್ ಅಂತೀರಾ??
ಗೆಳೆಯ-ಗೆಳತಿಯರೆ…
ಅಳಿದರು ಉಳಿಯುವ ಮನೋಭಾವನೆಯೊಂದಿಗೆ ಹುಟ್ಟಿದ ನಶೆಯ ಆಸೆಯ ಕಲಾವಿದ ಅಂತ ನನಗೆ ನನ್ನ ಪರಿಚಯ. ...✍️ಶಿರಸಿ ka31
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ