ಮೊದಲು ನಿಮಗೆ ನಮನವನ್ನ ತಿಳಿಸುವೆ ಕಾರಣ ವಿಷಯಕ್ಕೆ ತಕ್ಕ ಸಂಬಂದಿಕರು ನಾವು.
ಕಾರಣ.
ಕೊನೆಯಲ್ಲಿ ತಿಳಿಸುವೆ. ..🤝
ಯಾರ ಸಹವಾಸ ಮಾಡಿ ಯಾರು ಕೆಟ್ಟವರಾಗಲ್ಲ ನಾವ್ ತೆಗೆದು ಕೊಳ್ಳುವ ನಿರ್ಧಾರ ವೇ ನಮಗೆ ಒಳ್ಳೆಯವರು ಕೆಟ್ಟವರು ಅನ್ನೋಪಟ್ಟ ಸಿಗೋಕೆ ಸಾಧ್ಯ
ಕೆಲವಂದು ಸಮಯದಲ್ಲಿ ಮಾಡದೇ ಇರುವ ತಪ್ಪಿಗೆ ಶಿಕ್ಷೆ ಪಟ್ಟಿರ್ತಿವಿ ಅಲ್ವಾ? ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಮುಂದಿನ ಜೀವನದದಾರಿಯಲ್ಲಿ ತಲೆ ಎತ್ತಿ ನಡೆಯೋಣ.. ಏನ್ ಅಂತೀರಾ?
ಬೋರ್ ಆಗ್ತಿದೆಯಾ ಖುಷಿ ಪಡಿಸೋಕೆ ನನ್ನಲ್ಲಿ ಒಳ್ಳೆ ವಿಷಯ ಇದೆ ಅದೇನಂದರೆ ನಿನ್ನಂತೆ ನಾನು😍
ಅಪ್ಪ ಅಮ್ಮ ನಿಂದ ಮೊದಲ ಪಾಠ ಕಲಿತು,ಶಾಲೆಯಲ್ಲಿ ಶಿಕ್ಷಕರಿಂದ ಒಂದಿಷ್ಟು ಶಿಕ್ಷೆಯೊಂದಿಗೆ ಒಂದಿಷ್ಟು ವಿಷಯ ತಿಳಿದು.. ನಮ್ಮಊರಿನ ಜನ ಸಮುದಾಯದಿಂದ ಸಿಕ್ಕಾಪಟೆ ವಿಷಯತಿಳಿದು ಬುದ್ದಿವಂತರಾಗಿದ್ದೀವಿ ಅಲ್ವಾ? ??
ಹೋಗ್ಲಿ ಬಿಡಿ ನೀವು ಏನ್ ಕೆಲಸ ಮಾಡ್ತಿರೋದು,ನಿಮ್ಮಲ್ಲಿ ಏನ್ ಏನ್ ಚಟ ಇದೆ ಅಂತ ಸ್ವಲ್ಪ ಸ್ವಲ್ಪ ಸಾಕು ಯೋಚನೆ ಮಾಡಿ.
ಹಾಗೆ ನಿಮ್ಮ ಆತ್ಮೀಯ ಗೆಳೆಯ ಅಂದ್ಕೊಂಡಿದಿರಲ್ಲ ಅವರು ಕೂಡ ನಿಮ್ಮಂತೆ ನೀವ ಮಾಡಿರೋ ಚಟ ಮಾಡ್ತಾ ಇದಾನಾ ಅಂತ ಯೋಚನೆ ಮಾಡಿ. ಆ ಚಟ ನಿಮ್ಮಿಂದ ಅವರು ಸುರು ಮಾಡಿದ್ದ ಅಥವಾ ಅವರಿಂದ ನೀವು ಸುರು ಮಾಡಿದ್ದ ಅಂತ ನಿಮ್ಮಲ್ಲೇನೀವು ತಿಳ್ಕೊಳ್ಳೋಕೆ ಪ್ರಯತ್ನ ಪಡಿ. ನಂತರ
ನಮ್ಮ ಮನಸ್ಥಿತಿಯಿಂದ ಬದಲಾಗಿದ್ದು ಯಾರಿಂದ ನಾವ್ ಬದಲಾಗಿಲ್ಲ ಅಂತ ಅಂದುಕೊಳ್ಳಿ
ಬಲವಂತಕ್ಕೆ ಒಂದೂ ಸಲ ಮನಸ್ಸು ತಪ್ಪು ಮಾಡಬಹುದು ಆದ್ರೆ ಬಲವಂತಕ್ಕೆ ಪದೇ ಪದೇ ತಪ್ಪು ಮಾಡಲ್ಲ ಮನಸ್ಸು ಅಲ್ವಾ..?
ನಮ್ಮ ಮನಸ್ಥಿತಿಗೆ ತಕ್ಕ ಹಾಗೆ ಆತ್ಮೀಯ ಗೆಳೆಯರನ್ನಾಗಿಸಿ ಕೊಳ್ಳುವದು ಸಹಜ ಗುಣ
ಸಂಗೀತಗಾರನಿಗೆ ಸಂಗೀತಗಾರ ಇಷ್ಟ ಆಗ್ತಾನೆ.
Sports man ಗೆ ಅಂತ ಸಹ ಪಾಟಿಗಳೇ ಇಷ್ಟ ಆಗೋದು
ಎಣ್ಣೆ ಸಿಗರೇಟು ಚಟ ಇರುವವರಿಗೆ ಅಂತ ಸ್ನೇಹಿತರೆ ಆತ್ಮೀಯರಾಗಿರ್ತಾರೇ
ಕೊನೆಯಲ್ಲಿ ನೀವು -ನಾವು ಒಂದ್ ತರ ಸಂಬಂದಿಕರು ಅಂತ ಯಾಕೆ ಅಂತ ಹೇಳ್ತಿನಿ ಅಂದಿದ್ದೆ ಅಲ್ವಾ…
ಕಾರಣ- ಇಷ್ಟೇ-ನಿಮಗೆ ಓದುವ ಚಟ ಇದೆ ನನ್ನಂತೆ. ಬರೆಯುವ ಚಟ ಕೂಡ ಇರಬಹುದು ನನ್ನಂತೆ,ಅದ್ಕೆ ನಮ್ಮ ಮನಸ್ಥಿತಿಗೆ ತಕ್ಕಹಾಗೆ ಗೊತ್ತಿಲ್ಲದೇ ನಾವು ಸಂಬಂದಿಕರು ಆಗಿದ್ದೇವೆ ಅಲ್ವಾ
ಮನಸ್ಥಿತಿಗೆ ತಕ್ಕಂತೆ ಗೆಳೆತನ ಅನ್ನೋದೇ ನನ್ನ ವಿಷಯ.
ಅಳಿದರು ಉಳಿಯುವ ಮನೋಭಾವನೆಯೊಂದಿಗೆ ಹುಟ್ಟಿದ ನಶೆಯ ಆಸೆಯ ಕಲಾವಿದ ಅಂತ ನನಗೆ ನನ್ನ ಪರಿಚಯ. ...✍️ಶಿರಸಿ ka31
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ