ದೈವವನ್ನು ಗುರುತಿಸುದು ಹೇಗೆ? - ಡಾ.ಲಕ್ಷ್ಮೀ ಜಿ ಪ್ರಸಾದ

ಕರಾವಳಿಯ ಸಾವಿರದೊಂದು

ProfileImg
03 Sep '24
2 ನಿಮಿಷದ ಓದು


image

ಒಂದೇ ದೈವದ ಬೇರೆ ಬೇರೆ ಹೆಸರೇ ಅಥವಾ ಬೇರೆ ಬೇರೆ ದೈವಗಳೇ ಎಂಬುದನ್ನು ಗುರುತಿಸುವ ವಿಧಾನ
ನಿನ್ನೆ ರಾತ್ರಿ ಎಂಟು ಒಂಬತ್ತು ಗಂಟೆ ಹೊತ್ತಿಗೆ ಸುಮ್ಮನೇ ಕ್ಲಬ್ ಹೌಸ್ ಗೆ ಹೋದೆ.ಹಲವಾರು ಗ್ರೂಪುಗಳಲ್ಕಿ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಾ ಇತ್ತು‌‌.ಒಂದು ಕಾಸರಗೋಡು ಎಂಬ ಹೆಸರಿದ್ದ  ಗ್ರೂಪಿನ ಒಳ ಪ್ರವೇಶ ಮಾಡಿದೆ.ಅಲ್ಲಿದ್ದ ನವೀನ್ ನಿತಿನ್ ಮೊದಲಾದವರಿಗೆ ನನ್ನ ಅಧ್ಯಯನದ ವಿಚಾರ ಗೊತ್ತಿತ್ತು( ಕ್ಲಬ್ ಹೌಸಿಗೆ ಇಣುಕಿದರೆ ಹೆಚ್ಚಾಗಿ ನನ್ನನ್ನು ಮಾತನಾಡಲು ಮೇಲೆ ಆಹ್ವಾನಿಸುತ್ತಾರೆ‌ಫ್ರೀ ಇದ್ದರೆ ನಾನೂ ಮಾತನಾಡಿ ಬರ್ತೇನೆ ಕೂಡ).ಕರಾವಳಿಯ ದೈವಗಳ ಬಗ್ಗೆ ಮಾತನಾಡಲು ಕೋರಿದರು.ಸ್ವಲ್ಪ ಹೊತ್ತು ಮಾತನಾಡಿದೆ .ನಂತರ ಒಬ್ಬರು ( ಶೈಲೇಂದ್ರ ಎಂಬವರಿರಬೇಕು)ಅಣ್ಣಪ್ಪ ಪಂಜುರ್ಲಿ ತೆಲ್ಲಾರ ಪಂಜುರ್ಲಿ ಮೊದಲಾದ ದೈವಗಳು ಪಂಜುರ್ಲಿಯದೇ ಬೇರೆ ಬೇರೆ ರೂಪ? ಹೆಸರು ಎಂದು ಹೇಳುತ್ತಾರಲ್ಲ.ಬೇರೆ ಬೇರೆ ಎಂದು ಹೇಗೆ ಗುರುತಿಸುದು ಎಂದು ಕೇಳಿದರು
ಇದು ಅನೇಕರು ನನ್ನಲ್ಲಿ ಕೇಳುವ ಸಾಮಾನ್ಯ ಪ್ರಶ್ನೆ
ಒಂದು ದೈವ ಮತ್ತು ಇನ್ನೊಂದು ದೈವಗಳು ಬೇರೆ ಬೇರೆಯೋ ಒಂದೇ ದೈವದ ಬೇರೆ ಬೇರೆ ಹೆಸರುಗಳೇ? ಎಂದು ಗುರುತಿಸಲು ಹಲವು ಮಾನದಂಡಗಳಿವೆ.ಉದಾಹರಣೆಗೆ ಕೊರಗ ತನಿಯ ಮತ್ತು ಕೋಟೆದ ಬಬ್ಬು ದೈವ ಬೇರೆ ಬೇರೆ ಎಂದು ಗುರುತಿಸುತ್ತೇವೆ‌‌.ಪಾಡ್ದನದ ಕಥೆ,ಮಾನವ ಮೂಲದಲ್ಲಿದ್ದಾಗಿನ ಜಾತಿ,ಮೂಲತಃ ಆರಾಧನೆ ಮಾಡುವವರು ,ವೇಷ ಭೂಷಣ,ಅಭಿವ್ಯಕ್ತಿ ಪರಂಪರಾಗತ ನಂಬಿಕೆ ಗಳ ಮೇಲೆ ಇವರು  ಬೇರೆ ಬೇರೆ ದೈವಗಳೆಂದು ಗುರುತಿಸುತ್ತೇವೆ‌‌ಹಾಗೆಯೇ ಹೆಸರು ಒಂದೇ ಇದ್ದರೂ ಪಾಡ್ದನ ,ವೇಷ ಭೂಷಣ,ಐತಿಹ್ಯ,,ಅಭಿವ್ಯಕ್ತಿಮೂಲ ಆರಾಧಕರರನ್ನು ಆಧರಿಸಿ ಬೇರೆ ಬೇರೆ ದೈವಗಳೆಂದು ಗುರುತಿಸುತ್ತೇವೆ
ಮುಗೇರ್ಲು ಎಂಬ ಹೆಸರಿನಲ್ಲಿ ಎಣ್ಮೂರ ದೆಯ್ಯು,ಕೇಲತ್ತ ಪೆರ್ನೆ ,ಭದ್ರ ಕಡೆಂಜು ದೈವಗಳಿಗೆ ಆರಾಧನೆ ಇದೆ‌.ಅಂತೆಯೇ ಮುದ್ದ ಕಳಲ,ಪೊಸ ಕಳಲರನ್ನೂ ಮುಗೇರ್ಲು ಎಂದೇ ಕರೆಯುತ್ತಾರೆ.ಇಷ್ಟರ ತನಕ ಎಣ್ಮೂರ ದೆಯ್ಯು,ಕೇಲತ್ತ ಪೆರ್ನೆ,ಭದ್ರ ಕಡೆಂಜು ಮತ್ತು ಮುದ್ದ, ಕಳಲ,ಪೊಸ ಕಳಲ ರು ಒಂದೇ,ಭಿನ್ನ ಭಿನ್ನ ಹೆಸರುಗಳೆಂದು ಭಾವಿಸಿದ್ದೆ.ಡಾ.ಅಭಯ ಕುಮಾರ್ ಅವರ ಮುಗೇರರು- ಒಂದು ಜನಾಂಗ ಜಾನಪದಿಯ ಅಧ್ಯನ ಎಂಬ ಪಿಎಚ್ ಡಿ ಥೀಸಿಸ್ ನಲ್ಲಿ ಹೀಗೆ ಇದೆ.ಆದರೆ ಇವರ ಹುಟ್ಟು ಪುರಪ್ಪು ಅಂತ್ಯ,ವೇಷ ಭೂಷಣಗಳ ಕಾಲದ ನಡುವೆ ಅಂತರ ಇತ್ತು..ಆದರ ಇವರು ಬೇರೆ ಬೇರೆ ದೈವಗಳು ಎಂದು ಹೇಳಲು  ಆರಾದನೆ ಮಾಡುವವರ ಅಭಿಪ್ರಾಯ ಬೇಕಾಗಿತ್ತು‌‌.ಇವರು ಬೇರೆ ಬೇರೆ ದೈವಗಳು ಎಂಬ ಬಗ್ಗೆ ಮೊದಲಿಗೆ ನನಗೆ ಸುಧೀರ್ ಕುಕ್ಕಂದೂರು ತಿಳಿಸಿದರು.ವಿಶ್ವನಾಥ ಎಂಬವರೈ ಯು ಟ್ಯೂಬ್ ನಲ್ಲಿ ಕಮೆಂಟ್ ಮಾಡಿ ತಿಳಿಸಿದ್ದರು.ನಂತರ ಶೇಖರ ಕಡಂದಲೆಯವರೂ ಕೂಡ ಈ ಅಭಿಪ್ರಾಯವನ್ನು ಸಮರ್ಥಿಸಿದರು
ಮುಗೇರರಲ್ಲಿ ಹನಿ ಮುಗೇರ ಮತ್ತು ಗಡಿ ಮುಗೇರರಯ ಎಂಬ ಎರಡು ಒಳ ಪಂಗಡಗಳಿವೆ.ಹನಿ ಮುಗೇರರು ಆರಾಧಿಸುವ ಮುಗೇರ್ಲು ದೈವಗಳು- ಎಣ್ಮೂರ ದೆಯ್ಯು,ಕೇಲತ್ತ ಪೆರ್ನೆ,ತನ್ನಿ ಮಾಣಿಗ,ಭದ್ರ ಕಡೆಂಜು,ಇವರು ಕೋಟಿಚೆನ್ನಯರ ಸಮಕಾಲೀನರಾಗಿದ್ದ ವೀರರು.ಗಡಿ‌ಮುಗೇರರು ಆರಾಧಿಸುವ ಮುಗೇರ್ಲು ದೈವಗಳು ಮುದ್ದ ,ಕಳಲ,ಪೊಸ ಕಳಲರು.ಇವರ ಕಾಲ ಹದಿನೇಳನೆಯ ಶತಮಾನ.ಇವರ ಪಾಡ್ದನ ಕಥಾನಕ,ಹುಟ್ಟು ಪುರಪ್ಪು ಅಂತ್ಯ,ತಂದೆ ತಾಯಿ,ಮೂಲ ಸ್ಥಾನ,ಆಯುಧ,ಅಭಿವ್ಯಕ್ತಿ ಎಲ್ಲವೂ ಭಿನ್ನ ಬಿನ್ನವಾಗಿವೆ‌.ಇವರಲ್ಲದೆ ಮಿತ್ತ ಮುಗೇರ ಪಟ್ಟದ ಮುಗೇರ ಸಂಗಡಿ ದೈವಗಳೆಂಬ ಮುಗೇರ ದೈವಗಳಿದ್ದಾರೆ.ಇವರು ಕುಂಬಳೆ ವಂಶದ ಸ್ಥಾಪಕ ಜಯಸಿಂಹನ ಸಮಕಾಲೀನರಾದ ನಾಡವರ್ ಅರಸುಗಳು.ಈ ಬಗ್ಗೆ ಅನೇಕ ಐತಿಹ್ಯಗಳಿವೆ‌ಇತಿಹಾಸದಲ್ಲೂ ದಾಖಲೆಗಳಿವೆ.,ಇವರ ಬಗ್ಗೆ ಇನ್ನೊಂದು ದಿನ ಬರೆಯುವೆ

ಕೆಟೆಗರೀ / ವರ್ಗ:ಕತೆ



ProfileImg

ಇದರ ಲೇಖಕರು Dr Lakshmi G Prasad

Verified