'ಅಗ್ನಿಯ ರೆಕ್ಕೆಗಳು' : ಭಾರತ ರತ್ನ Dr. A. P. J. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆ -
'ಅಗ್ನಿಯ ರೆಕ್ಕೆಗಳು' (Wings of Fire) ಎಂಬುದು ಭಾರತದ ಮಾಜಿ ರಾಷ್ಟ್ರಪತಿಗಳು ಮತ್ತು ಜಗದ್ವಿಖ್ಯಾತ ವಿಜ್ಞಾನಿ Dr. A. P. J. ಅಬ್ದುಲ್ ಕಲಾಂ ಅವರ ಆತ್ಮಚರಿತ್ರೆಯ ಹೆಸರು. ಈ ಕೃತಿಯು ಭಾರತ ರತ್ನ ಅಬ್ದುಲ್ ಕಲಾಂ ಅವರ ವೈಜ್ಞಾನಿಕ ಸಾಧನೆಗಳು, ದೇಶಪ್ರೇಮ, ಬಡತನದಲ್ಲಿಯೂ ಕನಸುಗಳನ್ನು ಅರಳಿಸುವತ್ತ ಹೇಗೆ ಅವರು ಮುಂದಡಿಯಿಟ್ಟರು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ಚಿತ್ರಿಸುತ್ತದೆ. ಇದು ಅವರ ಬಾಲ್ಯದಿಂದ ರಾಷ್ಟ್ರಪತಿಯಾಗುವವರೆಗಿನ ಜೀವನ ಪಯಣವನ್ನು ವಿವರಿಸುತ್ತದೆ.
ಪುಸ್ತಕವು ಅಬ್ದುಲ್ ಕಲಾಂ ಅವರ ಬಾಲ್ಯದ ಜೀವನ, ತಮಿಳುನಾಡಿನ ರಾಮೇಶ್ವರಂ ಎಂಬ ಹಳ್ಳಿಯಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಅವರು, ಹೇಗೆ ವಿದ್ಯಾಭ್ಯಾಸಕ್ಕೆ ಆಸಕ್ತಿ ತೋರಿದರು, ನಂತರ DRDO ಮತ್ತು ISROದಲ್ಲಿ ಮಾಡಿದ ಕಾರ್ಯಗಳು, ಕ್ಷಿಪಣಿಗಳ ಅಭಿವೃದ್ಧಿ ಯೋಜನೆಗಳು,
ಭಾರತಕ್ಕೆ ಶಸ್ತ್ರಾಸ್ತ್ರ ತಂತ್ರಜ್ಞಾನದಲ್ಲಿ ತಂದುಕೊಟ್ಟ ನವೀನತೆ ಜೊತೆಗೆ ಅವರ ಆತ್ಮಾವಲೋಕನ, ಜೀವನದ ಮೌಲ್ಯಗಳು ಹಾಗೂ ತತ್ವಗಳ ಕುರಿತು ಬೆಳಕು ಚೆಲ್ಲುತ್ತದೆ.
ಬಾಲ್ಯದಲ್ಲಿ ದಿನಪತ್ರಿಕೆಯನ್ನು ಹಂಚುತ್ತಿದ್ದ ಒಬ್ಬ ಕಡು ಬಡತನದ ಸಾಮಾನ್ಯ ವ್ಯಕ್ತಿಯೊಬ್ಬ (ಅಬ್ದುಲ್ ಕಲಾಂ) ನಂತರ ಹರಸಾಹಸದಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ ಯಶಸ್ಸಿನ ಉತ್ತುಂಗ ಶಿಖರಕ್ಕೆ ಏರಿದ
ಮನೋಜ್ಞ ವರ್ಣನೆಯು ಮೈ ನವಿರೇಳಿಸುತ್ತದೆ.
ಜೊತೆಗೆ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಪಾರವಾದ ಶಕ್ತಿಯನ್ನು ಜಗತ್ತಿನ ಮುಂದಿಡುವ ಪ್ರಾಮಾಣಿಕ ಪ್ರಯತ್ನಮಾಡಿದ್ದಾರೆ ಭಾರತ ರತ್ನ ಅಬ್ದುಲ್ ಕಲಾಂ ಅವರು.
ಅಲ್ಲದೆ ಶ್ರದ್ಧೆ, ಪರಿಶ್ರಮ ಮತ್ತು ಆತ್ಮವಿಶ್ವಾಸದ ಶಕ್ತಿಯ ಕುರಿತು ಮಾರ್ಮಿಕವಾಗಿ ಬೋಧಿಸುತ್ತಾರೆ.
ಈ ಪುಸ್ತಕದ ಹೆಗ್ಗಳಿಕೆ ಎಂದರೆ, ಅತ್ಯಂತ ಸರಳ ಭಾಷೆಯಲ್ಲಿ ಬರೆದಿರುವ ಕಾರಣ ಓದುಗರಿಗೆ ಸುಲಭವಾಗಿ ತಲುಪುತ್ತದೆ.
ಹಲವಾರು ಪ್ರೇರಣಾದಾಯಕ ದೃಷ್ಟಾಂತಗಳು ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಮಾರ್ಗದರ್ಶಕವಾಗಿ ನಿಲ್ಲುತ್ತವೆ.
ಅಬ್ದುಲ್ ಕಲಾಂ ಅವರ ಮಾನವೀಯ ಮೌಲ್ಯಗಳು ಮತ್ತು ಜೀವನದ ತಾತ್ವಿಕತೆಯ ಕುರಿತು ಈ ಕೃತಿಯು ತಿಳಿಸುತ್ತದೆ.
ನಮ್ಮಲ್ಲಿರುವ ಕನಸುಗಳನ್ನು ಸಾಕಾರಗೊಳಿಸಲು,
ಬಡತನ ಅಥವಾ ಅನಾನುಕೂಲಗಳ ನಡುವೆಯೂ ಹೇಗೆ ಸಾಧನೆ ಮಾಡಬಹುದು ಎಂಬುದನ್ನು ತಿಳಿಯಲು, ದೇಶ ಸೇವೆಯ ಅದಮ್ಯವಾದ ಪ್ರೇರಣೆಯನ್ನು ಪಡೆಯಲು ಈ ಪುಸ್ತಕ ಅತ್ಯಂತ ಸಹಾಯಕ.
'ಅಗ್ನಿಯ ರೆಕ್ಕೆಗಳು' ಎಂಬ ಕೃತಿಯು ಕೇವಲ ಒಬ್ಬ ವ್ಯಕ್ತಿಯ ಜೀವನಚರಿತ್ರೆ ಅಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ಕನಸುಗಳಿಗೆ ಪ್ರೇರಣೆ ನೀಡಿ, ಅವುಗಳನ್ನು ಸಾಧಿಸಲು ಸ್ಫೂರ್ತಿ ನೀಡುವ ಒಂದು ಮಹದ್ಗ್ರಂಥ.
Amrut C Rao, Barige, B Dodderi Post, Sorab Tq, Shimoga District 577434, ಫೋನ್ ನಂಬರ್ - 9481985721
0 ಹಿಂಬಾಲಕರು
0 ಹಿಂಬಾಲಿಸುತ್ತಿದ್ದೀರಿ