ಅವಿತು ಕೂತವನು ದಂಡನೆಗೆ ಅರ್ಹ

ಶಿಕ್ಷೆ

ProfileImg
04 Mar '25
1 ನಿಮಿಷದ ಓದು


image

ದೇವರು ಜಾತಿ ಬೇದ ಮಾಡಲ್ಲ ಆದ್ರೆ ಪೂಜಾರಿ  ಖಂಡಿತ  ಜಾತಿಬೇದ ಮಾಡದೇ ಇರಲಾರ.     ಬಳಸಿ ಬಿಸಾಡಿದ ಬಾಳೆ ಕೂಡ  ಇನ್ನೊಂದು ಜೀವಿಯ ಹಸಿವನ್ನು ನಿಗಿಸಬಹುದು ಅನ್ನೋ  ತರ ಕೆಟ್ಟಮನಸಿಂದ ಹಂಚಿಕೊಂಡುತಿಂದು ಕರುಣೇನೇ ಇಲ್ಲದೆ ಯಮನ ದಾರಿಗೆಅಟ್ಟಿದವರು. ನಾನು ಶ್ರೇಷ್ಠ,ನಾನು ದೇವರಿಗೆ ಪ್ರಿಯವಾದವನು ಅನ್ನುವ ಭ್ರಮೆಯಲ್ಲಿ ಪೂಜಾರಿಯ ಜೀವನ ಸಾಗುತ್ತಿರುತ್ತೆ ಅನ್ನೋದು ಅರಿತಿರಲ್ಲ.  ಕರ್ಮಫಲದಾಯಕನ ದಂಡನೆ ಪ್ರತಿಯೊಬ್ಬರಿಗೂ ಅವರವರ ಕರ್ಮಕ್ಕೆ ಅನುಗುಣವಾಗಿ ದೊರೆಯುವದು.  ಹುಟ್ಟಿದ ಮನುಷ್ಯ ಸುಖದ ಉಪ್ಪರಿಕೆಯಲ್ಲೇ ಬೆಳೆದರೂ ಸಾಯುವ ಮೊದಲು ಅವ ಮಾಡಿದ ಕರ್ಮದ ಫಲವನ್ನು ಅನುಭವಿಸಿ ಸಾಯಬೇಕು ಅನ್ನೋದು  ದೇವರ ನಿಲುವು. 

ಸಾಕ್ಷಿಯೇ ಇಲ್ಲ ನನ್ನ ವಿರುದ್ದವಾಗಿ ಅಂದುಕೊಂಡವನ ಭ್ರಮೆಯನ್ನು ತಲೆಕೇಳಗಾಗಿ ಮಾಡುವ ಸಂದರ್ಭ ಕೂಡ ಉದ್ಭವಿಸುತ್ತದೆ ಅನ್ನುವದು ಅರಿವಿಲ್ಲ. 

ಕಾಲಚಕ್ರದ  ತೀರ್ಪು  ಎಷ್ಟು ಕಠಿಣ ಅಲ್ವಾ   ಸಾವಿರ ಜನಕ್ಕೆ ನೋವು ಕೊಟ್ಟು,ಅಪರಾಧಿಯನ್ನು ಮುಚ್ಚಿಟ್ಟು ಅಪರಾದಿಗೆ  ನೆಮ್ಮದಿಯ ನಿಟ್ಟುಸಿರು ನೀಡುತ್ತಿದೆ. ಪಾಪದ ಕೊಡ ತುಂಬಿದ ನಂತರ  ಅಪರಾದಿಗೆ ಶಿಕ್ಷೆಕೊಟ್ಟು  ಸಾವಿರ ಜನರ ಜನರ ಖುಷಿಗೆ ಕಾರಣ ಕಾಲಚಕ್ರದ ದೇವಾ ಛಾಯಾಪುತ್ರ ಕಾರಣ ಆಗುವರು ಅನ್ನುವ ನಂಬಿಕೆ ದೃಢವಾಗಿದೆ.

ಸ್ವರ್ಗಾವಾದರೇನು, ನರಕವಾದರೇನು,ಪಾತಾಳವಾದರೇನು, ಬುಲೋಕವಾದರೇನು ತಪ್ಪಿಗೆ ಶಿಕ್ಷೆ ಪ್ರತಿ ಕಕ್ಷೆಯಲ್ಲಿ ಇರುವವರಿಗೂ ಇರುತ್ತೆ ಅನ್ನೋ ನಂಬಿಕೆ ನನ್ನ ಧರ್ಮದ ಮೇಲಿದೆ ನನಗೆ. 

ಕಾದುನೋಡಬೇಕು ಅಷ್ಟೇ. ..

 

ಧರ್ಮದ ನೆರಳಲ್ಲಿ ಅವಿತು ಕರ್ಮದ ಸುಲಭ ಮಾರ್ಗ ಹಿಡಿದು ಕೊಂಡಿರುವ ಪ್ರತಿಯೊಬ್ಬರಿಗೂ ನರಕ ಯಾತನೆ ಯಾಗಬೇಕು…ಅನ್ನುವದು ಮಾನವೀಯತೆ ಇರುವ ಪ್ರತಿಯೊಬ್ಬರ ಅಭಿಪ್ರಾಯ ಆಗಬೇಕು. 

ಕರ್ಮದಿಂದ ಕುಡಿದ  ಚೆಂಚಲ ಮನಸ್ಸಿನ ಮನುಷ್ಯನಾ  ಜನ್ಮ ವಾಗದೆ ಇದ್ದದೆ  ಒಳ್ಳೆದಿತ್ತು ಅನಿಸಿದರೂ.  ಪರಮೇಶ್ವರನ  ಆಟ ಎಲ್ಲಾನು ಅಂತ ಅಂದುಕೊಳ್ಳುವ ಹಾಗೆ ಆಗಿದೆ  ಎಲ್ಲಾ ವಿಷಯದಲ್ಲೂ. 

 

ಕೆಟೆಗರೀ / ವರ್ಗ:ಶಿಕ್ಷಣ



ProfileImg

ಇದರ ಲೇಖಕರು MAHADEV MANJU

ಅಳಿದರು ಉಳಿಯುವ ಮನೋಭಾವನೆಯೊಂದಿಗೆ ಹುಟ್ಟಿದ ನಶೆಯ ಆಸೆಯ ಕಲಾವಿದ ಅಂತ ನನಗೆ ನನ್ನ ಪರಿಚಯ. ...✍️

0 ಹಿಂಬಾಲಕರು

0 ಹಿಂಬಾಲಿಸುತ್ತಿದ್ದೀರಿ