*ನಿಮ್ಮಾಶ್ರಯದಲಿ ನಾವೆಂದಿಗೂ ಗಟ್ಟಿ*
ಅನುಭವದೊಳ್ ಸಾಗರ
ಸಹಾನುಭೂತಿಯೋಳ್ ಪ್ರೀತಿ ಅಪಾರ...
ಬಳಿ ನಿವಿರ್ದೊಡೆ ನಿರ್ಭಯ..
ಮಮತೆಯ ಆಸರೆಯದು ಮುಗಿಯದ ಸಂಚಯ... (೧)
ಕಾಯಕ ನಿಷ್ಠೆಯೊಳಿಲ್ಲ ಬೇಸರಿಕೆ
ಸದಾ ದಾನ ಧರ್ಮದ್ದೇ ಕನವರಿಕೆ...!
ಸಂಗೀತದಲಿ ಅಪಾರ ಆಸಕ್ತಿ
ದತ್ತ ಗುರುವಿನ ಪೂಜೆಯೇ ಶಕ್ತಿ...! (೨)
ಸಮಾನ ಮನಸ್ಕರೆಲ್ಲ ಒಗ್ಗೂಡಿಸಿ
ನಲಿಯುತ ಜೀವ ರಸಾಯನ ಕುಡಿಸಿ..
ನೋವನುಂಡರೂ ಹರಿಸಿದಿರಿ ಹಾಸ್ಯ ಯಾವತ್ತೂ..
ಸನ್ಮಾರ್ಗವದು ನಿಮ್ಮಯ ನುಡಿಮುತ್ತು..!! (೩)
ಕಷ್ಟದೊಳ್ ದಣಿವಿಲ್ಲದಾ ದುಡಿತ
ಪರರಿಗೆಲ್ಲ ಹಿತದ ಮೊರೆತ
ಸಂಸಾರವನು ಸಮದಿಂ ತೂಗುತ
ಸಂತೈಸುವಿರೆಮ್ಮನು ಪರಮಾತ್ಮನ ಧ್ಯಾನಿಸುತ..(೪)
ನಿಮ್ಮ ದಾರಿಯೊಳೆಮ್ಮ ನಡೆಯು..
ತಪ್ಪದೇ ನಡೆಸುವೆವು ತಮ್ಮ ನುಡಿಯು..
ನಿಮ್ಮಾಶ್ರಯದಲ್ಲಿ ನಾವೆಂದಿಗೂ ಗಟ್ಟಿ
ಮತ್ತೆ ಮಗನಾಗಿ ಬರುವೆ ಹುಟ್ಟಿ....(೫)
ಶ್ರೀವಲ್ಲಭ ಕುಲಕರ್ಣಿ
ಹುಬ್ಬಳ್ಳಿ
ಅಪ್ಪಂದಿರ ದಿನದ ಶುಭಾಶಯಗಳು
ನಾನೊಬ್ಬ ಕವಿ, ಹಾಸ್ಯ ಬರಹಗಾರ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಉಳ್ಳವನು.