ಕೊನೆಗೂ ಸುರಿದೆಯಾ ತಂಪಾಗಿಸಲು ಇಳೆ
ನೀನಲ್ಲವೆ ಭೂಒಡಲಲಿ ನೀರಾಗಿಸುವ ಮಳೆ!
ಸುಡುಗಾಡ ತೆರದಿ ಸುಡುವ ಬೆಂಕಿಯ ಬೇಗೆ
ಮಳೆ ನೀಬರದೆ ಜೀವಸಂಕುಲ ಇರುವುದು ಹೇಗೆ?
ಮನೆ-ಮನಗಳಲ್ಲಿ ಹರ್ಷದಾಧಾರೆ
ಏಕೆಂದರೆ ಭುವಿಗೆ ಇಂದು ವರ್ಷಧಾರೆ!
ಅಮೃತ ಸಿಂಚನ ಬೆಂದಕಾಳೂರಿಗೆ
ಹರಕೆ ಪೂಜೆ ದೇವರ ಮೂರ್ತಿಗೆ!
ದೇವರು ನಗುತ ಹೇಳಿದ್ದ !ಓ ಮೂರ್ಖ
ಇನ್ನಾದರು ಬಿಡು ನಿನ್ನ ಮೌಢ್ಯದ ಸ್ವಾರ್ಥ!
ಇನ್ನಾದರು ಭಿತ್ತಿ ಬಹುದೆ ಬೀಜವನು ಇಳೆಗೆ
ಗಿಡಮರಗಳು ಬೇಕೇ ಬೇಕು ಈ ಗಾಳಿಮಳೆಗೆ!
ಪರಿಸರ ಇದ್ದರೆ ನಾವು ನೀವೆಲ್ಲ
ಗಿಡಮರ ಕಡಿದರೆ ನಾವೇ ಇರಲ್ಲ!
ಮಳೆಯಾಗಲಿ ಕಾಲಕ್ಕೆ , ಇನ್ಯಾವ ಭಯ ಜೀವಕ್ಕೆ!
ಹರ್ಷವೋ ಹರ್ಷ,ಇಳೆಗೆ ಸುರಿದಾಗ ವರ್ಷ.
-ಧನ್ಯವಾದಗಳು.
ಮಮತಾ ಶೆಟ್ಟಿ.ಬೆಂಗಳೂರು
ಅಪರಿಚಿತರ ನಡುವೆ ಪರಿಚಿತರ ಇರುವಿಕೆಯ ಹುಡುಕಾಟ
0 Followers
0 Following