ಬರೆದು ಸ್ವತಃ ಪ್ರಕಟಿಸಿ ಮಾರಾಟ ಮಾಡಿ

ProfileImg
14 May '24
3 min read


image

ಸ್ವತಃ ಪುಸ್ತಕ ಬರೆದು ಪ್ರಕಟಿಸುವ  ಲೇಖಕರಿಗೆ ಒಂದು ಸಣ್ಣ ಸಲಹೆ..
ಪುಸ್ತಕ ಬರೆಯುವವಫ್ಟೇ ಹೆಮ್ಮೆ ಪ್ರಚಾರ ಮಾಡುವಾಗಲೂ ಇರಲಿ ‌ಸ್ವತ ಮಾರಾಟವನ್ನು ಮಾಡಿ..
ಪುಸ್ತಕಗಳಿಗೆ ಬೇಡಿಕೆ ಇದ್ದರೆ ಲೇಖಕರೇ ಸ್ವತಃ ಮಾರಾಟ ಮಾಡಿದರೆ ಪುಸ್ತಕ ಮಳಿಗೆಗಳಿಗೆ ಕೊಡುವ 30-40%ಕಮಿಷನ್  ಉಳಿಯುತ್ತದೆ.

ಉದಾಹರಣೆಗೆ ಹೇಳುವುದಾದರೆ 400₹ನ ಪುಸ್ತಕದಲ್ಲಿ 120-160₹ಕಮಿಷನ್ ಲೇಖಕರಿಗೆ ಉಳಿಯುತ್ತದೆ.ಅದರಲ್ಲಿ ಪೋಸ್ಟಲ್ ಚಾರ್ಜ್ ಮತ್ತು ಒಂದಿನಿತು ಡಿಸ್ಕೌಂಟ್ ಖರೀದಿಸುವ ಓದುಗರಿಗೆ ಕೊಡಬಹುದು.

ರಿಜಿಸ್ಟರ್ಡ್ ಪ್ರಿಂಟೆಡ್ ಬುಕ್ ಪೋಸ್ಟ್ ಮಾಡಿದರೆ ಹೆಚ್ಚು ಪೋಸ್ಟಲ್ ಚಾರ್ಜ್ ಬೀಳುವುದಿಲ್ಲ.ಒಂದು ಕಡೆ ತೆರೆದಿಟ್ಟು ಪ್ಯಾಕ್ ಮಾಡಿದರಾಯಿತು.ಇದು ರಿಜಿಸ್ಟರ್ ಪೋಸ್ಟ್ ಆಗಿರುವುದರಿಂದ ತಲುಪುವ ಬಗ್ಗೆ ನಮಗೆ ಖಾತರಿ  ಸಿಗುತ್ತದೆ.

500 ಪುಟಗಳ ಪುಸ್ತಕ ರಿಜಿಸ್ಟರ್ಡ್ ಪ್ರಿಂಟೆಡ್ ಬುಕ್ ಪೋಸ್ಟ್ ಮಾಡಲು ಹೆಚ್ಚೆಂದರೆ 25₹ ಚಾರ್ಜ್ ಆಗಬಹುದು

500 ಪುಟಗಳ  ಬಣ್ಣದ ಚಿತ್ರಗಳು ಇಲ್ಲದಿರುವ ಸಾಮಾನ್ಯ ಗಾತ್ರದ ಪುಸ್ತಕ ಪ್ರಿಂಟಿಗೆ ಈಗ  ಅಂದಾಜು 75,000₹- 85,000₹ ಖರ್ಚು ಬೀಳಬಹುದು.ಪುಸ್ತಕದ ಬೆಲೆ 350- 400₹ ಇರಿಸಬಹುದು .
ಲೇಖಕರೇ  ಸ್ವತಃ ಮಾರಾಟ ಮಾಡಿದರೆ ಒಂದು ಪುಸ್ತಕವನ್ನು 400₹ ನಂತೆ  ಒಂದು ಸಾವಿರ ಪ್ರತಿ ಮಾರಾಟ ಮಾಡಿದರೂ ಖರ್ಚು ಕಳೆದು  ಸುಮಾರು ಮೂರು ಲಕ್ಷ ಲಾಭ ಗಳಿಸಬಹುದು.ಲಾಭಾಂಶದಲ್ಲಿ ಕಡಿಮೆ ಮಾಡಿಕೊಂಡು 
ಡಿಸ್ಕೌಂಟ್ ನೀಡಲೂ ಬಹುದು 
ಪುಸ್ತಕ ಮಳಿಗೆಗಳಲ್ಲಿ ಮಾರಾಟ ಮಾಡಿದರೆ ಅವರಿಗೆ 120-160₹ ಕೊಡಬೇಕಾಗುತ್ತದೆ. ಒಂದು ಪುಸ್ತಕಕ್ಕೆ ಲೇಖಕರಿಗೆ ಸಿಗುವ ದುಡ್ಡು 240-260₹ . ಇದರಲ್ಲಿ ಪ್ರಿಂಟಿಂಗ್  ಮತ್ತು ತಲುಪಿಸುವ ಖರ್ಚು ಕಳೆದರೆ ಒಂದು ಪುಸ್ತಕದಲ್ಲಿ  140-160₹ ರಂತೆ ಸಾವಿರ ಪುಸ್ತಕಗಳಿಗೆ 1,40,000-1,60,000 ಲಾಭ ಬರಬಹುದು.

ಆದರೆ ಒಂದು ಸಾವಿರ ಪ್ರತಿ ಮಾರಾಟ ಆಗುವಷ್ಟು ಬೇಡಿಕೆ ಇರಬೇಕು.ಬೇಡಿಕೆ ಇದ್ದರೆ ಈಗ ಗೂಗಲ್, ಫೋನ್ ಪೇ ಮೂಲಕ ದುಡ್ಡು ಪಡೆದು ಬರಹಗಾರರೇ ನೇರವಾಗಿ ಮಾರಾಟ ಮಾಡಬಹುದು .

ಯಾರಿಗೂ ಉಚಿತವಾಗಿ ಕೊಡುವ ಅಗತ್ಯವಿಲ್ಲ.ಉಚಿತವಾಗಿ ಹಂಚಲು ಅದು ಪೋಂಪ್ಲೆಟ್ ಅಲ್ಲ..ಈ ತಪ್ಪನ್ನು ನಾನು ಈ ಹಿಂದೆ  ಮಾಡಿದ್ದೆ.ಈಗ ಯಾರಿಗೂ ಉಚಿತವಾಗಿ ಕೊಡುವುದಿಲ್ಲ.ಅದರಲ್ಲೂ ಕೆಲವು ದೊಡ್ಡ ದೊಡ್ಡವರು ಕೊಟ್ಟರೂ  ಪುಸ್ತಕ ತೆರೆದೂ ನೋಡುವುದಿಲ್ಲ.ದೊಡ್ಡವರು ಬೇಕಿದ್ದರೆ ದುಡ್ಡು ಕೊಟ್ಟು ಖರೀದಿಸಲಿ.ಆಸಕ್ತ ಓದುಗರಿಗೆ ರಿಯಾಯಿತಿ ದರದಲ್ಲಿ ನೀಡಬಹುದು

ಪುಸ್ತಕ ಮಳಿಗೆಗಳಿಗೆ ನೀಡುವಾಗ  ಜಾಗ್ರತೆ ಇರಲಿ..ಕೂಡಲೇ ಅಥವಾ ಒಂದೆರಡು ದಿನಗಳಲ್ಲಿ ಪುಸ್ತಕದ ದುಡ್ಡು ಪಾವತಿಸುವ  ನವ ಕರ್ನಾಟಕ,ಅಂಕಿತಗಳಂತಹ ಪುಸ್ತಕ ಮಳಿಗೆಗಳಿಗೆ ಕೊಡಬೇಕು.. ಕೆಲವು ಪುಸ್ತಕ ಮಳಿಗೆಯವರು ಪುಸ್ತಕದ ದುಡ್ಡನ್ನು ಲೇಖಕರಿಗೆ ಕೊಡದೆ ವಂಚನೆ ಮಾಡಿರುವ ಬಗ್ಗೆ , ಸಕಾಲದಲ್ಲಿ ಕೊಡದೆ ಸತಾಯಿಸುವ ಬಗ್ಗೆ ಕೇಳಿರುವೆ.

ನಾವು ಕರಾವಳಿಯ ಸಾವಿರದೊಂದು ದೈವಗಳು ಗ್ರಂಥವನ್ನು ಹೆಚ್ಚು ನೇರವಾಗಿ ಮಾರಾಟ ಮಾಡಿದ್ದೇವೆ

ಪುಸ್ತಕ ತಲುಪಿದ ಕೂಡಲೇ ದುಡ್ಡು ಕೊಡುವ ನವ ಕರ್ನಾಟಕ,ಸಪ್ನಾ,ಸೀತ ಬುಕ್ ಹೌಸ್, ಡಯಾನ ಗಳಿಗೆ ಮಾತ್ರ ನೀಡಿದ್ದೇವೆ. (ಅದೂ ಒಮ್ಮೆಗೆ ಕನಿಷ್ಠ 30 ಪುಸ್ತಕಗಳನ್ನು ಖರೀದಿಸಬೇಕು ಎಂಬ ನಿರ್ಬಂಧ ಹೇರಿ , ಸಾಮಾನ್ಯವಾಗಿ ಹತ್ತು  ಪುಸ್ತಕಗಳನ್ನು ತಗೊಳ್ತಾರೆ, ನಾವು ಪ್ರೊಫೆಷನಲ್ ಪುಸ್ತಕ ಮಾರಾಟಗಾರರಲ್ಲ. ನನ್ನ ಮಗನೇ ಮಾರಾಟದ ಜವಾ ್ದಾರಿ  ವಹಿ ಸಿ  ಆ ್ಡರ್  ಪಡೆದು   ಪುಸ್ತಕ ತಲುಪಿಸುದು. ಆಗಾಗ ಹತ್ತು ಹತ್ತು ಪುಸ್ತಕಗಳನ್ನು ತಂದು ಕೊಡಲಾಗದು ಎಂದು ಒಮ್ಮೆಗೆ 30ಪುಸ್ತಕಗಳನ್ನು  ತಲುಪಿಸುತ್ತೇವೆ)

ಇನ್ನು ಪುಸ್ತಕದ ದುಡ್ಡು ಬಂದ ನಂತರ ನಮಗೆ ಆರ್ಡರ್ ನೀಡುವ ಆನ್ಲೈನ್ ಪುಸ್ತಕ ಮಾರಾಟಗಾರರಿಗೆ ನಾನು 15- 20% ಕಮಿಷನ್ ನೀಡುವುದು ಯಾಕೆಂದರೆ ಅವರಿಗೆ ಒಮ್ಮೆಗೆ 30ಪುಸ್ತಕಗಳನ್ನು ಖರೀದಿಸಿ ಮಳಿಗೆಗಳಲ್ಲಿ ಇರಿಸುವ ಮಾರಾಟ ಮಾಡುವ ಬಂಡವಾಳ  ಹಾಕುವ ಹಾಗೂ ಇತರ ಖರ್ಚು ಇರುವುದಿಲ್ಲ.

ಲೇಖಕರೇ  ನೇರವಾಗಿ ಮಾರಾಟ ಮಾಡಿದರೆ ಓದುಗರಿಗೆ ಡಿಸ್ಕೌಂಟ್ ಕೊಡಲೂ ಸಾಧ್ಯವಾಗುತ್ತದೆ ಜೊತೆಗೆ ಸ್ವಲ್ಪ ಲಾಭವೂ ಬರುತ್ತದೆ .
ಈಗ ಡಿಜಿಟಲ್ ಮನಿ ಟ್ರಾನ್ಸ್ಫರ್ ಮಾಡಲು ಆಗುವುದರಿಂದ ಲೇಖಕರಿಗೆ ಅಥವಾ ಅವರ ಮನೆ ಮಂದಿ ಜವಾಬ್ದಾರಿ ವಹಿಸಿ ಮಾರಾಟ ಮಾಡಿ ಪುಸ್ತಕ ತಲುಪಿಸುವ ವ್ಯವಸ್ಥೆ ಮಾಡಬಹುದು
ನನ್ನ ಪುಸ್ತಕಗಳ ಪ್ರಿಂಟ್, ಮಾರಾಟ, ಹಾಗೂ ಪುಸ್ತಕ ಪ್ಯಾಕ್ ಮಾಡಿ ಪೋಸ್ಟ್ ಮಾಡಿ ಸಕಾಲದಲ್ಲಿ ತಲುಪಿಸುವ ಜವಾಬ್ದಾರಿ ನನ್ನ ಮಗ ಅರವಿಂದನದು

(ಸೂಚನೆ :ಇದು ಪ್ರಿಂಟಿಂಗ್ ಖರ್ಚು ಮಾತ್ರ ಇರುವ ಕಥೆ ಕಾದಂಬರಿ ಲೇಖನಗಳ ಪುಸ್ತಕಗಳಿಗೆ ಅನ್ವಯ.
ಬಣ್ಣದ ಚಿತ್ರಗಳಿರುವ ಆರ್ಟ್ ಪೇಪರ್ ಬಳಸಿರುವ , ಕ್ಯಾಲಿಕೊ ಬೈಂಡಿಂಗ್ ಇರುವ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥದಂತಹ ಪುಸ್ತಕಗಳಿಗೆ ಪ್ರಿಂಟಿಂಗ್ ಖರ್ಚು ಪೋಸ್ಟಲ್ ಚಾರ್ಜ್ ಇನ್ನಿತರ ಖರ್ಚು ತುಂಬಾ ಹೆಚ್ಚು ಬೀಳುತ್ತದೆ )
ಕರಾವಳಿಯ ಸಾವಿರದೊಂದು ದೈವಗಳು ಪ್ರಿಂಟಿಂಗ್ ಮತ್ತು ಮಾರಾಟ ಸಾಕಷ್ಟು ಅನುಭವ ನೀಡಿದೆ.ಸಾಕಷ್ಟು ಖ್ಯಾತಿ ಯನ್ನೂ ತಂದು ಕೊಟ್ಟಿದೆ
ನಾವು  ಆರಂಭದಲ್ಲಿ 40-50% ಡಿಸ್ಕೌಂಟ್ ನೀಡಿದ ಕಾರಣ ಹೇಳುವಂತ  ಲಾಭ ಬಂದಿಲ್ಲ  ನಷ್ಟವೂ  ಆಗಿಲ್ಲ.ಆದರೆ ಕೊಂಡು ಓದಿದ ಸಹೃದಯಿಗಳ ಮೆಚ್ಚುಗೆ ಅಪಾರ ಆತ್ಮ ವಿಶ್ವಾಸವನ್ನು ನೀಡಿತು.ನನ್ನ ಎರಡು ದಶಕಗಳ ಅಧ್ಯಯನ ಸಾರ್ಥಕ ಎನಿಸಿತು .ನನ್ನಲ್ಲಿದ್ದ ಕೀಳರಿಮೆ ದೂರವಾಗಿದೆ 

ಈ ಪುಸ್ತಕ ಪರಿಷ್ಕೃತ ಗೊಂಡು ಮರು ಮುದ್ರಣ ಆಗಿದ್ದು ಪ್ರತಿಗಳು ಮುಗಿಯುತ್ತಾ ಬಂದಿವೆ 
ಈ ಗ್ರಂಥಕ್ಕೆ ಈಗಲೂ  ಬೇಡಿಕೆ ಇದೆ ,ಇದರ ಕೆಲವು ಪ್ರತಿಗಳು ಮಾತ್ರ ಲಭ್ಯವಿದೆ 

ಆಸಕ್ತರು ಹೆಚ್ಚಿನ ವಿವರಗಳಿಗಾಗಿ 9480516684 ಗೆ ವಾಟ್ಸಪ್ ಮಾಡಬಹುದು

ಡಾ. ಲಕ್ಷ್ಮೀ ಪ್ರಸಾದ್ ಅವರ “ಕರಾವಳಿಯ ಸಾವಿರದೊಂದು ದೈವಗಳು”

 

Category:Books



ProfileImg

Written by Dr Lakshmi G Prasad

Verified