ದೇಶದ ಅಭಿವೃದ್ಧಿಯ ಭದ್ರ ಬುನಾದಿಯ ಸೂತ್ರದಾರರು, ಕಾರ್ಮಿಕರು.

ProfileImg
01 May '24
2 min read


image

ಇಂದು ವಿಶ್ವ ಕಾರ್ಮಿಕರ ದಿನಾಚರಣೆ.ಭಾರತ ಸೇರಿ ಜಗತ್ತಿನಾದ್ಯಂತ 80ಕ್ಕೊ ಹೆಚ್ಚು ರಾಷ್ಟ್ರಗಳಲ್ಲಿ ಈ ಕಾರ್ಮಿಕರ ದಿನವನ್ನು ಆಚರಿಸಲಾಗುತ್ತದೆ.!
ಈ ದಿನಾಚರಣೆಯ ಮೂಲ ಉದ್ದೇಶ ಶ್ರಮ ಜೀವಿಗಳಾದ ಕಾರ್ಮಿಕರ ಸೇವೆ ಮತ್ತು ಸಮರ್ಪಣೆಯನ್ನು ಗುರುತಿಸಿ ಗೌರವಿಸುವುದು ಮತ್ತು ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ ಶೋಷಣೆಯಿಂದ ರಕ್ಷಿಸುವುದು.
1886 ರಲ್ಲಿ ಅಮೆರಿಕದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಿಸಲಾಯಿತು ಎಂದು ಹೇಳಲಾದರೂ ವಾಸ್ತವವಾಗಿ 1889ಕ್ಕಿಂತ ಮುಂಚೆ ಕಾರ್ಮಿಕರ ದಿನಾಚರಣೆ ಮಾಡಿದ್ದಕ್ಕೆ ಯಾವ ಆಧಾರಗಳು ದೊರಕುವುದಿಲ್ಲ. 1889ರಲ್ಲಿ ಪ್ಯಾರಿಸಿನಲ್ಲಿ ಸಮಾವೇಶ ಗೊಂಡಿದ್ದ ಸಮಾಜವಾದಿ ಅಂತರರಾಷ್ಟ್ರೀಯ ಪ್ರಥಮ ಅಧಿವೇಶನದಲ್ಲಿ ಮೇ1ನೇ ದಿನಾಂಕವನ್ನು ಅಂತರಾಷ್ಟ್ರೀಯ ಕಾರ್ಮಿಕರ ದಿನವಾಗಿ ಆಚರಿಸಬೇಕೆಂದು ನಿರ್ಧರಿಸಲಾಯಿತು ಹಾಗಾಗಿ 1889 ಎಂದು ಹೇಳಲಾಗುತ್ತದೆ. ಆದರೆ ಭಾರತದಲ್ಲಿ 1923 ರಲ್ಲಿ ಮದ್ರಾಸಿನಲ್ಲಿ ಕಾಮ್ರೇಡ್ ಸಿಂಗರವೇಲರ್ ನೇತೃತ್ವದ ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಆರಂಭಿಸಿತು, ಆ ಸಂದರ್ಭದಲ್ಲಿ ಇದನ್ನು ಮದ್ರಾಸ್ ಡೇ ಎಂದು ಆಚರಿಸಲಾಯಿತು. ತದನಂತರ ಭಾರತದಾದ್ಯಂತ ಮೇ ಒಂದರಂದು ಕಾರ್ಮಿಕರ ದಿನವೆಂದು ಇಂದಿನವರೆಗೂ ಆಚರಿಸಲಾಗುತ್ತಿದೆ.!
ಕಾರ್ಮಿಕ ದಿನದ ಹಿನ್ನೆಲೆ : ಕಾರ್ಮಿಕ ಸಂಘಟನೆಯೊಂದು ಸಶಕ್ತವಾಗಿ ರೂಪುಗೊಳ್ಳುವ ಮುಂಚಿತವಾಗಿ ಕಾರ್ಮಿಕರಗೆ  ಯಾವುದೇ ಸೌಲಭ್ಯಗಳಿಲ್ಲದೆ ಕಡಿಮೆ ವೇತನಕ್ಕೆ ಹೆಚ್ಚು ಸಮಯ ಅನಿರ್ದಿಷ್ಠ ಅವಧಿಯವರೆಗೂ ವಿಪರೀತವಾಗಿ ದುಡಿಸಿಕೊಳ್ಳಲಾಗುತ್ತಿತ್ತು ಮತ್ತು  ಕಠೋರ ನಿಯಮಗಳೂ ಇದ್ದೂ ದಿನದಲ್ಲಿ ಸತತ 10 ರಿಂದ16 ಗಂಟೆಗಳ ಕಾಲ ಒತ್ತಾಯವಾಗಿ ದುಡಿಸಿಕೊಳ್ಳುಲಾಗುತ್ತಿತ್ತು.ಇದಕ್ಕೆ ಅಮೇರಿಕಾದಲ್ಲಿವಿವಿಧ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಅಲ್ಲದೆ ಇದನ್ನು ವಿರೋಧಿಸಲು 1886ರಲ್ಲಿ ಕಾರ್ಮಿಕರ ಒಕ್ಕೂಟವು ಒಂದು ದಿನಕ್ಕೆ 16 ಗಂಟೆಗಳ ಕೆಲಸದ ಬದಲಿಗೆ 8 ಗಂಟೆಗಳ ಕೆಲಸಕ್ಕಾಗಿ ಮುಷ್ಕರವನ್ನು ಘೋಷಿಸಿತು. ಮುಷ್ಕರದ ಜನಸಂದಣಿಯನ್ನು ನಿಯಂತ್ರಿಸಲು, ಪೊಲೀಸರು ನೆಡೆಸಿದ ಶೆಲ್ ದಾಳಿಯಲ್ಲಿ ಕೆಲವರು ಗಾಯಗೊಂಡರೆ ಅನೇಕ ಕಾರ್ಮಿಕರು ಸಾವನ್ನಪ್ಪಿದರು. ಈ ಘಟನೆಯ ನಂತರ ಕಾರ್ಮಿಕರ ಹಕ್ಕುಗಳಿಗಾಗಿ  ಚಳುವಳಿ ಪ್ರಾರಂಭವಾಯಿತು. ಕೊನೆಗೆ ಅಮೇರಿಕಾ ಸಂಯುಕ್ತ ಸಂಸ್ಥಾನವು 10 ರಿಂದ 16 ಗಂಟೆಗಳ ಕೆಲಸದ ಅವಧಿಯನ್ನು ಕಡಿತಗೊಳಿಸಿ 8 ಗಂಟೆಗಳ ಕೆಲಸದ ಅವಧಿಯನ್ನಾಗಿ ಘೋಷಿಸಿತು. ಕಾರ್ಮಿಕರ ಹಕ್ಕುಗಳ ಹೋರಾಟಕ್ಕೆ ಹಾಗೂ ಕಾರ್ಮಿಕರ ಪ್ರಭುತ್ವದ ನೆನಪಿಗೆ ಹಾಗೂ ಕಾರ್ಮಿಕ ಹೋರಾಟಕ್ಕೆ ಸಿಕ್ಕ ಯಶಸ್ಸಿನ ನೆನಪಿಗಾಗಿ ಮತ್ತು ಮೃತ ಕಾರ್ಮಿಕರ ಗೌರವಾರ್ಥವಾಗಿ ಕಾರ್ಮಿಕರ ದಿನಾಚರಣೆ ಆಚರಿಸಲಾಯಿತು . ಅಂದು ನೆಡೆದ ತ್ಯಾಗ ಬಲಿದಾನಗಳ ಫಲವಾಗಿ ಕಾರ್ಮಿಕರ ಕೆಲಸದ ಅವಧಿ ಇಂದು ವಿಶ್ವದ ಅನೇಕ ದೇಶಗಳಲ್ಲಿ 8 ಗಂಟೆಗಳಿಗೆ ಮಿತಿಗೊಂಡಿದೆ.! ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿರುತ್ತದೆ. ದಕ್ಷತೆಯಿಂದ ಕೂಡಿದ ಕಾರ್ಮಿಕರ ವರ್ಗದಿಂದ ಮಾತ್ರ ಆ ದೇಶ ಆರ್ಥಿಕ ಪ್ರಗತಿಯನ್ನು ಸಾಧಿಸಲು ಸಾಧ್ಯ. ಕಾರ್ಮಿಕ ಎಂದರೆ ಸಾಮಾನ್ಯ ಅರ್ಥದಲ್ಲಿ ದೈಹಿಕ ಇಲ್ಲವೇ ಬೌದ್ಧಿಕ ಶ್ರಮವನ್ನು ಮಾರಟ ಮಾಡಿ ಹಣ ಗಳಸುತ್ತಿರುವ ವ್ಯಕ್ತಿಗೆ ಕಾರ್ಮಿಕ ಎನ್ನುತ್ತೇವೆ.ಒಬ್ಬ ಕಾರ್ಮಿಕ ಪ್ರತಿ ರಾಷ್ಟ್ರಕ್ಕೂ ದೊಡ್ಡ ಆಸ್ತಿ ಮತ್ತು ಅದ್ಭುತಗಳ ನಿರ್ಮಾತೃ.ದುಡಿಮೆ ಮನುಷ್ಯನ ಘನತೆ ಮತ್ತು ಸೃಜನಶೀಲತೆಯನ್ನು ವ್ಯಕ್ತಪಡಿಸುವ ಏಣಿ ಯಾವುದೇ ಕೆಲಸವಾಗಲಿ ಅದಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರಮಿಸುತ್ತಿರುವ ಶ್ರಮಿಕ ವರ್ಗದಿಂದಲೇ ಸಾಮಾಜಿಕ ಜೀವನ ಇಷ್ಟುಸುಸೂತ್ರವಾಗಿ ನೆಡೆಯುತ್ತಿಯುವುದು,ಜೀವನದ ಕಠಿಣ ಸವಾಲುಗಳನ್ನು ಮೆಟ್ಟಿ ನಿಂತು ಶ್ರಮದಲ್ಲಿಯೂ ಜೀವನದಲ್ಲಿ ಬರುವ ಕಷ್ಟ ನಷ್ಟಗಳನ್ನು ನಿಭಾಯಿಸುತ್ತ ಖುಷಿ ಕಾಣುವ ಎಲ್ಲಾ ಶ್ರಮಿಕರಿಗೂ ವಂದಿಸುತ್ತಾ, ಎಲ್ಲಾ ಕ್ಷೇತ್ರದ ಪ್ರತಿ ಕಾರ್ಮಿಕರ ಶ್ರಮವನ್ನು ಸ್ಮರಿಸುತ್ತಾ ಎಲ್ಲಾ ವರ್ಗದ ಕಾರ್ಮಿಕರನ್ನು ಗೌರವಿಸೋಣ. ಪ್ರತಿ ಕಾರ್ಮಿಕರಿಗೂ "ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು".
ಗೀತಾಂಜಲಿ ಎನ್, ಎಮ್

Category:Education



ProfileImg

Written by Geethanjali NM

Author ✍️