ಸಾಧಕನೆಂದರೆ ಆತ ಪ್ರತಿಭಾವಂತನೆ ಆಗಿರುತ್ತಾನೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪ್ರತಿಭಾವಂತರೆಲ್ಲರೂ ಸಾಧಕರಾಗುತ್ತಾರೆಯೇ ಎಂದು ನೋಡಿದರೆ ಖಂಡಿತವಾಗಿಯೂ ಇಲ್ಲ. ಕೇವಲ ಪ್ರತಿಭೆಯಿದ್ದ ಮಾತ್ರವಷ್ಟಕ್ಕೆ ಸಾಧಕರಾಗುವುದಿಲ್ಲ. ಪ್ರತಿಭೆಯನ್ನು ಶ್ರದ್ಧೆಯಿಂದ ದುಡಿಸಿಕೊಂಡವರು ಮಾತ್ರ ಸಾಧಕರಾಗುತ್ತಾರೆ ಎಂಬುದನ್ನು ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಉದಾಹರಣೆಯಾದರೆ, ಪ್ರತಿಭೆಯಿದ್ದರೂ ಅಶಿಸ್ತು, ಉದಾಸೀನತೆ ವಹಿಸಿದರೆ ಎಂತಹ ಪ್ರತಿಭೆಗೂ ಮಂಕು ಬಡಿಯುತ್ತದೆ ಎಂಬುದಕ್ಕೆ ವಿನೋದ್ ಕಾಂಬ್ಳಿ ಉದಾಹರಿಸಬಹುದಾಗಿದೆ.
ಬಾಲ್ಯದಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ವಿನೋದ್ ಕಾಂಬ್ಳಿ ಅವರು ಉತ್ತಮ ಆಟಗಾರರೆಂದು ಹೆಸರು ಪಡೆದವರು. ಇವರಿಬ್ಬರ ಜೊತೆಯಾಟದಲ್ಲಿಯೇ ಎದುರಾಳಿ ತಂಡದ ಬೌಲರ್‌ಗಳನ್ನು ದಂಡಿಸಿ ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಪ್ರಾರಂಭದ ಪಂದ್ಯಗಳಿAದಲೂ ಇವರಿಬ್ಬರು ಆಟಗಾರರು ತಮ್ಮದೇ ವಿಭಿನ್ನವಾದ ಶೈಲಿಯ ಮೂಲಕ ರಾಷ್ಟಿçÃಯ ಹಾಗೂ ಅಂತಾರಾಷ್ಟಿçÃಯ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು.
ಇವರಿಬ್ಬರು ದಿಗ್ಗಜರು ಕ್ರಿಕೆಟ್ ಆಟದಲ್ಲಿ ಪ್ರತಿಭಾವಂತರಾಗಿದ್ದರು. ಆದರೆ, ವಿನೋದ್ ಕಾಂಬ್ಳಿ ಅವರು ತಮ್ಮ ಖಾಸಗಿ ಬದುಕನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳದ ಪರಿಣಾಮ ಅವರ ಕ್ರಿಕೆಟ್ ಪ್ರತಿಭೆ ದಿನಕಳೆದಂತೆ ಕಳೆಕುಂದುತ್ತಾ ಬಂತು. ತಮ್ಮ ಪ್ರತಿಭೆಯನ್ನು ತಮ್ಮ ಕೈಯ್ಯಾರಿ ಹಾಳು ಮಾಡಿಕೊಂಡರು. ಒಂದು ಹಂತದಲ್ಲಿ ಸಚಿನ್ ತೆಂಡೂಲ್ಕರನ್ನು ಮೀರಿ ಬೆಳೆಯುತ್ತಾರೆಂದು ಅಂದಾಜಿಸಿದ್ದ ಕ್ರೀಡಾ ತಜ್ಞರ ಅಂದಾಜನ್ನು ತಲೆಕೆಳಗಾಗುವಂತೆ ವಿನೋದ್ ಕಾಂಬ್ಳಿ ಅವರು ತಮ್ಮ ಕ್ರಿಕೆಟ್ ಲೋಕದಿಂದ ಬಹುಬೇಗನೆ ನಿರ್ಗಮಿಸಿದರು.
ಹಾಗಾದ್ರೆ ಸಾಧಕರ ಲಕ್ಷಣಗಳೇನು?
ಕ್ರೀಡೆ ಮಾತ್ರವಲ್ಲ; ಎಲ್ಲ ಕಲಾ ಪ್ರಕಾರಗಳನ್ನು ಒಳಗೊಂಡAತೆ ಯಾವುದೇ ಕ್ಷೇತ್ರಗಳ ಸಾಧಕರ ಜೀವನಗಾಥೆಯನ್ನು ನೋಡುತ್ತಾ ಹೋದರೆ ಒಂದಷ್ಟು ಸಾಮಾನ ಅಂಶಗಳನ್ನು ನಾವು ಗಮನಿಸಬಹುದು. ಸಾಧಕರ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ತಮ್ಮದೇ ಆದ ರೀತಿ-ನೀತಿಗಳನ್ನು ಅಳವಡಿಸಿಕೊಂಡಿರುತ್ತಾರೆ. ಆ ರೀತಿ-ನೀತಿಗಳನ್ನು ಅನುಸರಿಸುತ್ತಾ ಹೋದರೆ ತಾವು ಅಂದುಕೊAಡ ಕ್ಷೇತ್ರದಲ್ಲಿ ಹಂತ ಹಂತವಾಗಿ ಸಾಧನೆಯ ಹಾದಿಯಲ್ಲಿ ಸಾಗಬಹುದು. ಹಾಗಾದರೆ ಸಾಧಕರ ಲಕ್ಷಣಗಳು ಯಾವುದು ಅಂತ ನೋಡೋಣ ಬನ್ನಿ..
೧.ಸಾಧನೆಗೆ ದೈನಂದಿನ ಶಿಸ್ತು ಬಹಳ ಅಗತ್ಯ
-ಸಾಧನೆಯ ಹಾದಿ ಸುಗಮವಾಗಿದ್ದರೆ ಪ್ರತಿಯೊಬ್ಬರು ಆ ಹಾದಿಯಲ್ಲಿ ಸಾಗಿ ಬಿಡುತ್ತಿದ್ದರು. ಅಂತಹ ಸಾಧನೆ ಎಂಬ ಪದಕ್ಕೆ ಯಾವುದೇ ಮೌಲ್ಯ ಇರುತ್ತಿರಲಿಲ್ಲ. ಆದರೆ, ಸಾಧನೆ ಎನ್ನುವುದು ಆಗಲ್ಲ. ಕಲ್ಲು-ಮುಳ್ಳು, ಬೆಟ್ಟ-ಗುಡ್ಡಗಳನ್ನು ನಾವೇ ಕಡಿದು, ಪುಡಿ ಮಾಡಿ ನಮ್ಮ ದಾರಿಯನ್ನು ನಾವೇ ನಿರ್ಮಿಸಿಕೊಳ್ಳಬೇಕಾಗುತ್ತದೆ. ಪ್ರತಿ ಹಂತದಲ್ಲೂ ಶ್ರಮ, ತ್ಯಾಗವನ್ನು ಬೇಡುವಂತಹದ್ದಾಗಿರುತ್ತದೆ.
ಶ್ರಮ-ತ್ಯಾಗದ ಗುಣವನ್ನು ಮೈಗೂಡಿಸಿಕೊಳ್ಳಬೇಕಾದರೆ ಸಾಧನೆಯ ಹಾದಿಯಲ್ಲಿ ಹೋಗುವವನಿಗೆ ಶಿಸ್ತು ಅತ್ಯಗತ್ಯವಾಗಿರುತ್ತದೆ. ತಾನು ಕಳಿಯುವ, ವಿನಿಯೋಗಿಸುವ ಪ್ರತಿ ಗಂಟೆಯನ್ನು ಲೆಕ್ಕಚಾರದಿಂದ ಕಳೆಯಬೇಕಾಗುತ್ತದೆ. ಬೆಳಗ್ಗೆ ಎಷ್ಟು ಗಂಟೆ ಎದ್ದೇಳುತ್ತೇನೆ. ಎದ್ದು ಏನು ಮಾಡುತ್ತೇನೆ ಎಂಬುದು ಕೂಡ ಬಹಳ ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ. ಏಕೆಂದರೆ ಇವತ್ತಿನ ಆಧುನಿಕ ಯುಗದಲ್ಲಿ ಮೊಬೈಲ್ ಎಂಬುದು ಮಾಯಾ ಜಾಲದಂತೆ ಮನುಷ್ಯನ ಸಮಯವನ್ನು ಕೊಂದುಬಿಡುವAತಹ ರಕ್ಷಸನಾಗಿದ್ದಾನೆ. ಹೀಗಾಗಿ ಇವತ್ತಿನ ಕಾಲಕ್ಕೆ ಬೆಳಗ್ಗೆ ೫ಗಂಟೆಗೆ ಏಳುವುದು ಮುಖ್ಯವಲ್ಲ. ಎದ್ದು ಏನು ಮಾಡುತ್ತೇನೆ. ತಾನು ಅಂದುಕೊAಡಿದ್ದನ್ನು ಮಾಡುವಂತಹ ಸಂಕಲ್ಪ ಮಾಡುವುದೇ ಮುಖ್ಯವಾಗಿರುತ್ತದೆ.
೨.ದೈಹಿಕ ಹಾಗೂ ಮಾನಸಿಕ ಆರೋಗ್ಯದೆಡೆಗೆ ಗಮನವಹಿಸುವುದು
-ಯಾವುದೇ ವ್ಯಕ್ತಿಯ ಯಶಸ್ವಿನ ಹಾದಿಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯ ಬಹಳ ಅಗತ್ಯವಿರುತ್ತದೆ. ವ್ಯಕ್ತಿಯೊಬ್ಬನಲ್ಲಿ ಉತ್ತಮವಾದ ಪ್ರತಿಭೆ ಇದ್ದರೂ ದೈಹಿಕ ಆರೋಗ್ಯ ಇಲ್ಲದಿದ್ದರೆ ಆ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಧ್ಯವಾಗುವುದಿಲ್ಲ. ಹಾಗೆಯೇ ಮಾನಸಿಕ ಆರೋಗ್ಯ ಕೆಲಸದಲ್ಲಿ ತಲ್ಲೀನತೆಯನ್ನು ಉಂಟು ಮಾಡಿ ಸಾಧನೆಯ ಹಾದಿಯನ್ನು ಸುಗಮಗೊಳಿಸುತ್ತದೆ.
೩.ಉತ್ತಮ ಸಂಗಡಿಗರ ಒಡನಾಟ?
-ನಾವು ಯಾರೊಂದಿಗೆ ಇರುತ್ತೇವೆಯೋ ಅದೇ ರೀತಿ ಆಗುತ್ತೇವೆ ಎನ್ನುವುದು ನಾಣ್ಣುಡಿ. ಆದರೂ ಇದು ವಾಸ್ತವದಲ್ಲಿ ಸತ್ಯವಾದ ಮಾತು. ಸಾಧನೆಯ ಹಾದಿಯಲ್ಲಿ ಸಾಗುವಾಗ ಆಗಾಗ ಬೇಸರ, ಕಿರಿಕಿರಿ, ಉದಾಸೀನತೆ ಮನಸ್ಥಿತಿ ಕಾಣಿಸಿಕೊಳ್ಳುತ್ತದೆ. ಆಗ ನಮಗೆ ಪ್ರೇರಣೆ ಅಗತ್ಯವಿರುತ್ತದೆ. ಅದಕ್ಕಾಗಿಯೇ ನಮಗೆ ಉತ್ತಮ ಸ್ನೇಹಿತರ ಒಡನಾಟ, ಸಂಪರ್ಕ ಇದ್ದರೆ ಎಲ್ಲ ನಕರಾತ್ಮಕ ಚಿಂತನೆಯನ್ನು ಕಿತ್ತಿಬಿಸಾಕಲು ಸಹಾಯ ಮಾಡುತ್ತಾರೆ.
೪.ಪುಸ್ತಕ ಓದುವ ಹವ್ಯಾಸ
-ಸಾಧಕನಾದವನಿಗೆ ತನ್ನ ಹಾದಿಯನ್ನು ವಿಮರ್ಶಿಸಿಕೊಳ್ಳಬೇಕಾಗುತ್ತದೆ. ನಾನು ಸಾಗುತ್ತಿರುವ ಹಾದಿ ಸರಿಯಿದಿಯಾ, ತಪ್ಪಿದಿಯಾ, ಇನ್ನು ಏನೇನು ಬದಲಾವಣೆ ಮಾಡಿಕೊಳ್ಳಬೇಕು ಎಂಬುದರ ಜ್ಞಾನ ಇರಬೇಕಾಗುತ್ತದೆ. ಇದಕ್ಕಾಗಿ ಬೇರೆ, ಬೇರೆ ಓದಿನ ಜ್ಞಾನಶಿಸ್ತು ಅಗತ್ಯವಿರುತ್ತದೆ. ದಿನದಲ್ಲಿ ಒಂದು ಗಂಟೆ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವ ಅಗತ್ಯವಿದೆ.
೫.ವಿವಿಧ ಸ್ಥಳಗಳ ಸುತ್ತಾಟ
-ನಮ್ಮ ಜ್ಞಾನದ ವೃದ್ಧಿಗೆ ಪುಸ್ತಕ ಓದು ಎಷ್ಟು ಅಗತ್ಯವೋ ವಿವಿಧ ಸ್ಥಳಗಳ ಭೇಟಿ ಮಾಡುವುದು ನಮ್ಮ ಅನುಭವಗಳ ವಿಸ್ತರಣೆಗೆ ಸಹಾಯ ಮಾಡುತ್ತದೆ. ನಮ್ಮ ಸುತ್ತಾಡುವ ರಸ್ತೆ, ಅಲ್ಲಿನ ಪರಿಸರ, ಅಲ್ಲಿನ ಜನರ ಒಡನಾಟ ನಮಗೆ ಅಲ್ಲಿಯವರೆಗಿರುವ ತಿಳುವಳಿಕೆಯನ್ನು ಕ್ರಾಸ್‌ಚೆಕ್ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೂ ಹೊಸ ವಿಚಾರಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.
೬.ಮೋಜು ಮಸ್ತಿಗಿರಲಿ ಕಡಿವಾಣ
-ಮೋಜು ಮಸ್ತಿ ಎನ್ನುವುದು ಊಟದಲ್ಲಿ ಉಪ್ಪಿನಕಾಯಿ ತರ ಇರಬೇಕೆ ವಿನಃ ಅದೇ ಎಲ್ಲವೂ ಆಗಬಾರದು. ಸ್ನೇಹಿತರೊಂದಿಗೆ ಕುಡಿತ, ಹರಟೆಗಳು ನಮ್ಮ ಶ್ರದ್ಧೆಯನ್ನು ಸದಾ ಕೆಣಕುತ್ತಿರುತ್ತವೆ. ಹೀಗಾಗಿ ಈ ಚಟಗಳನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿರಬೇಕು. ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ಪ್ರಜ್ಞೆ ನಮ್ಮಲ್ಲಿ ಸದಾ ಜಾಗೃತಿಗೊಂಡಿರಬೇಕು.
೭.ಸಕಾರಾತ್ಮಕ ಅಂಶಗಳನ್ನು ಸತತವಾಗಿ ರೂಢಿಯಾಗಬೇಕು
-ಯಾವುದೇ ಒಂದು ವಿಷಯ, ಕಲಿಕೆ, ಮೌಲ್ಯ, ಚಿಂತನೆಗಳು ಒಮ್ಮೆಲೆ ಮೈಗತ್ತುವುದಿಲ್ಲ. ಅದನ್ನು ನಿರಂತವಾಗಿ, ಸತತವಾಗಿ ಅಭ್ಯಾಸ ಮಾಡಿದಾಗ, ಅಂದರೆ ಅದು ಅಭ್ಯಾಸಗಳು ರೂಢಿಯಾಗಿ ಪರಿವರ್ತನೆಯಾಗಬೇಕು. ಅದರಲ್ಲೂ ಸಕಾರಾತ್ಮಕ ಅಂಶಗಳನ್ನು ರೂಢಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಒಂದು ರೀತಿಯಲ್ಲಿ ಪ್ರವಾಹದೆದುರು ಈಜಿದಂತೆ. ಆದರೆ, ಒಮ್ಮೆ ಕರಗತವಾದರೆ ಅದನ್ನು ಸೊಬಗನ್ನು ಆನಂದಿಸಿದವನೆ ಬಲ್ಲ.
ಹೀಗೆ ವ್ಯಕ್ತಿಯೊಬ್ಬ ಯಾವುದಾದರು ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕು. ಯಶಸ್ವಿ ವ್ಯಕ್ತಿಯಾಗಿ ಮಾದರಿಯಾಗಬೇಕೆಂದರೆ ತನ್ನನ್ನು ತಾನು ಸಂಪೂರ್ಣವಾಗಿ ತಲ್ಲೀನರಾಗಿಸಿಕೊಳ್ಳಬೇಕಾಗುತ್ತದೆ. ಸಚಿನ್ ತೆಂಡೂಲ್ಕರ್ ತಮ್ಮ ಇಡೀ ಬದುಕನ್ನು ಕ್ರಿಕೆಟ್‌ಗೆ ಸಮರ್ಪಿಸಿಕೊಂಡುಬಿಟ್ಟಿದ್ದರು. ಹೀಗಾಗಿ ಕ್ರಿಕೆಟ್ ಜಗತ್ತಿನಲ್ಲಿ ದಂತಕತೆಯಾಗಲು ಸಾಧ್ಯವಾಯಿತು. ಆದರೆ, ಅದೇ ಹಾದಿಯಲ್ಲಿ ಸಾಗಬೇಕಾಗಿದ್ದ ವಿನೋದ್ ಕಾಂಬ್ಳಿ ಕ್ರೀಡಾ ಸಾಮರ್ಥ್ಯಕ್ಕೆ ಕುಂದು ಉಂಟುಮಾಡುವAತಹ ಮೋಜು ಮಸ್ತಿ ಹೆಚ್ಚಿನ ಸಮಯ ಕಳೆದರು. ಅದರ ಪರಿಣಾಮ ಬಹುಬೇಗನೆ ಕ್ರಿಕೆಟ್ ವೃತ್ತಿ ಜೀವನದಿಂದ ನಿರ್ಗಮಿಸಬೇಕಾಗಿ ಬಂತು.
ಇಂದಿನ ಯುವ ಜನತೆಗೆ ತಾವು ಯಾವ ದಾರಿಯಲ್ಲಿ ಹೋಗಬೇಕು. ಏನು ಮಾಡಿದರೆ ಏನಾಗುತ್ತದೆ ಎಂಬುದನ್ನು ಅರಿಯಲು ಈಗಾಗಲೇ ವಿವಿಧ ಹಾದಿಯಲ್ಲಿ ಸಾಗಿ ಹೋಗಿರುವ ಸಾಧಕರಾಗಿರುವ, ಸಾಧಕರಾಗುವ ದಾರಿಯಲ್ಲಿ ಮುಗ್ಗರಿಸಿರುವ ವ್ಯಕ್ತಿಗಳ ಜೀವನಗಾಥೆಯನ್ನು ಅರಿಯಬೇಕಾಗುತ್ತದೆ. ಇದು ನಮಗೆ ಸದಾ ಎಚ್ಚರಿಕೆಯ ಗಂಟೆಯಾಗಿ ನಮ್ಮ ಬೆನ್ನಿಗೆ ಇರುತ್ತದೆ.
ಮುಖ್ಯವಾಗಿ ಗ್ರಾಮೀಣ ಭಾಗದ, ಅನಕ್ಷರಸ್ತರ ಮನೆಯಲ್ಲಿ ಹುಟ್ಟಿರುವ ವಿದ್ಯಾರ್ಥಿಗಳಿಗೆ ತನ್ನ ಆಸೆ, ಆಕಾಂಕ್ಷೆಗಳು, ಭವಿಷ್ಯವನ್ನು ಕಂಡುಕೊಳ್ಳುವುದು ಅಷ್ಟು ಸುಲಭವಲ್ಲ. ಮನೆಯಲ್ಲಿ, ಊರಿನಲ್ಲಿ ಪ್ರೋತ್ಸಾಹದಾಯಕವಾದ ವಾತಾವರಣ ಇರುವುದಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳು ಶಿಕ್ಷಕರು, ದಿನಪತ್ರಿಕೆಗಳ ಓದು, ಪುಸ್ತಕಗಳ ಓದು, ಉತ್ತಮ ವಾಗ್ಮಿಗಳ ಮಾತುಗಳನ್ನು ಆಲಿಸುವಿಕೆಯನ್ನು ಸತತವಾಗಿ ಮನನ ಮಾಡಿಕೊಂಡು ಸ್ವ ಆಲೋಚನೆಯಿಂದ ತಮ್ಮ ಸಾಧನೆಯ ಪಥವನ್ನು ಕಂಡುಕೊAಡು ಸತತವಾಗಿ ಪ್ರಯತ್ನಶೀಲರಾಗಬೇಕಾಗಿದೆ. ಆಸಕ್ತಿ, ಶ್ರದ್ಧೆ ಹಾಗೂ ನಿರಂತರವಾದ ಪ್ರಯತ್ನಶೀಲತೆಯು ಯಾವುದೇ ವ್ಯಕ್ತಿಯನ್ನು ತನ್ನ ಕ್ಷೇತ್ರದಲ್ಲಿ ಪ್ರತಿಭಾವಂತನನ್ನಾಗಿ ರೂಪಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.
ಪತ್ರಕರ್ತ, ಲೇಖಕ