ಛಿದ್ರವಾಯಿತು ಭೂಮಿ
ಭೂಮಿಯೇ ಛಿದ್ರ ಛಿದ್ರ
ಅತ್ತೇ ಬಿಟ್ಟಿತು ನೀರು..!
ಭೂಮಿಗೆ ಬಿದ್ದೇ ಬಿಟ್ಟಿತು ಆಕಾಶ..!
ಜಗವ ನೋಡವ ಕಣ್ಣು ಅದು..
ಜನ್ಮ ಪಡೆದು ಭೂಮಿಗೆ ಬಂದು
ಆಗಿತ್ತಷ್ಟೇ
ಬರೀ ಆರೇ ತಿಂಗಳು..
ತಾಯಿಯ ಎದೆಹಾಲು ಕುಡಿದು
ಬೆಚ್ಚಗೆ ಮಲಗಿತ್ತು ಆ ಮಗು
ಹೆತ್ತ ತಾಯಿಗೆ ಮಗು ಭಾರವಲ್ಲ
ಆದರೆ
ಆ ಅಪ್ಪನಿಗೆ ಮಗುವೇ ಭಾರವಾಯಿತೇ..!
ಆತ ಹೆಸರಿಗೆ ಅಪ್ಪನಾಗಿದ್ದ..!
ಆದರೆ
ಆತ ಅಪ್ಪ ಅಂತೂ ಅಲ್ಲವೇ ಅಲ್ಲ..
ಅಪ್ಪನೆಂಬ ಮುಖವಾಡ ಧರಿಸಿದ್ದ ಕ್ರೂರಿ ಆತ...
ಆತ ಕ್ರೂರಿ, ರಾಕ್ಷಸ ಅನ್ನೋದೇ ನಿಜ
ಜನ್ಮ ಕೊಟ್ಟ ತಾಯಿಯನ್ನೇ ಮರೆತ...
ಕೈ ಹಿಡಿದ ಪತ್ನಿಯನ್ನೇ ಮರೆತವ
ಹೆಣ್ಣು ಹೆಣ್ಣೆಂದು
ತಾಯಿ, ಪತ್ನಿಯನ್ನೇ ತಾತ್ಸಾರದಿಂದ
ನೋಡಿದ ಆತ
ಕೊಂದೇ ಬಿಟ್ಟ
ತನ್ನ ಶಿಶುವನ್ನ..!
ಈಗ ನೀವೇ ಹೇಳಿ,
ಈತ ನಿಜಕ್ಕೂ ಅಪ್ಪನೇ..?
ತನ್ನ ಶಿಶುವನ್ನೇ
ಕೊಂದವನ ಕೃತ್ಯ ನೋಡಿ
ಆ
ಭಗವಂತನೇ ಕಣ್ಣೀರಿಟ್ಟ
ಹಗಲೇ ಕತ್ತಲಾಯಿತು..!
ಹರಿಯುವ ನದಿ ನೀರೇ ಸ್ತಬ್ಧವಾಯ್ತು..!
ಬಂದದ್ದು ಗೊತ್ತಿಲ್ಲದೇ
ಹೋದದ್ದು ಗೊತ್ತಿಲ್ಲದೇ
ಖಬರಸ್ಥಾನದಲ್ಲಿ
ಕಣ್ಣೀರು ಹಾಕಿ
ಆ
ಮಗು ಕೇಳುತ್ತಿತ್ತು
ಯಾಕೆ
ನನ್ನನ್ನು ಕೊಂದೇ ಅಪ್ಪ..?
Author, Journalist, Poet, Anchor, PhD Scholar
0 Followers
0 Following