ಕವಿತೆಯೇಕೆ ಬೇಕು ?(ಆಯ್ರಾ ಬರವಣಿಗೆ ಸ್ಪರ್ಧೆ ಮೇ 2024)

ಭಾವಗಳೇಕೆ ಪದಳಾಗಬೇಕು ?

ProfileImg
20 May '24
1 min read


ಕವಿತೆಯೇಕೆ ಬೇಕು ?

ಭಾವಗಳೇಕೆ ಪದಳಾಗಬೇಕು ?

 

ಕವಿತೆ ಬೇಕು

ಮಾತು ಮೌನಗಳ

ಸರಹದ್ದನು ಮೀರಿ

ಹೇಳಬೇಕಿನಿಸುವ

ಭಾವಗಳನು

ಯಾವ ಹಂಗು ಇಲ್ಲದೆಯೇ

ವ್ಯಕ್ತಪಡಿಸಲು

 

ಕವಿತೆ ಬೇಕು

ಅವಿತಿರುವ ಭಾವಗಳ

ಬಿತ್ತರಿಸಿ

ಮನವ ಹಗುರವಾಗಿಸಲು

 

ಕವಿತೆ ಬೇಕು

ನೋವ-ನಲಿವ

ಪ್ರೀತಿ-ದ್ವೇಷಗಳಂತ

ವಿವಿಧ ಸಂವೇದನೆಗಳ 

ತೋರ್ಪಡಿಸಲು

 

ಕವಿತೆ ಬೇಕು

ಇತಿಹಾಸ ರಚಿಸಲು

ಕಾಯ ಅಳಿದ ಮೇಲೂ

ಭಾವ ಇತಿಹಾಸದಿ

ಜೀವಂತ ಇರಲು

Category:Poetry



ProfileImg

Written by Sulakshana

Writer in Hindi & Kannada Language. Working as Manager.

0 Followers

0 Following