ಮೊದಮೊದಲು ಮಾತುಗಳು ಸಾಗರದಂತೆ ಆಳವಾಗಿ ಬಂದು ಮನವನ್ನು ತಂಪು ಮಾಡಿ ಮಳೆಹೋಯ್ದಂತೆ ಮುಗಿಲು ಕಟ್ಟಿತ್ತಿದ್ದವು...... ಈಗ್ಯಾಕೆ ಹೀಂಗೆ ಆದೆ ನೀನು
ಆಗೊಮ್ಮೆ ಈಗೊಮ್ಮೆ ಕಿತ್ತಾಟಗಳು ನೆಡೆದರೂ ಅರ್ಧ ಗಂಟೆಯಲ್ಲಿ ಮತ್ತದೇ ಹುಚ್ಚು ಕಪ್ಪೆಗಳಂತೆ ವಟವಟವೆಂದು ನಿದ್ರೆ ಹೋದರೇ ಅದೇ ನೆನಪುಗಳಲ್ಲಿ ಮಿಂದ ಭಾವನೆಯಂತಾಗಿ ಹಾಯಾದ ನಿದ್ರೆಗೆ ಜಾರಿಹೋಗುತ್ತಿದ್ದೇವು.....ಈಗ್ಯಾಕೆ ನೀ ಹೀಂಗೆ ಆದಿ…
ಕಂಬನಿಯ ಕೊಯಿಲಿಗೆ ಅಡ್ಡ ಸೇತುವೆ ಕಟ್ಟಿ...ನಿನಗೆ ನಾನು ನನಗೆ ನೀನು ಎಂಬ ಪ್ರೀತಿಯನು ಅಪ್ಪಿಕೊಂಡು ನನಗೂ ಒಬ್ಬ ಗೆಳೆಯ ಬೇಕು ಹಾಡು ಗುನುಗುವ ಸಮಯದ ಮುಗಿದ ಕ್ಷಣಕ್ಕೆ ಮಗುವನ್ನು ಹೆತ್ತಂತೆ ಸಂಭ್ರಮವನು ಸಡಗರದಲ್ಲಿ ಆಚರಿಸುವ ವೇಳೆಗೆ..…
ಒಂದೇ ಒಂದು ದಿನದ ಕ್ಷಣಮಾತ್ರದಲ್ಲಿ ನಿನಗೆ ನಾನು ಸಂಜೆಮಲ್ಲಿಗೆಯ ಘಮವಾದೆ, ನನಗೆ ನೀನು ಗಿರಾಕಿಯಾದೆ.....ಆ ಘಳಿಗೆ ನಿಂತಲ್ಲೆ ಸಾಯಬಾರದೇ ಅನಿಸುವಂತೆ ಮಾಡಿದ್ದಕ್ಕೆ ನನ್ನ ಸಂಯಮ ಸಡಿಲವಾಗಿದ್ದಕ್ಕೆ ನನಗೆ ನಾನು ಚಪ್ಪಲಿಯಲ್ಲಿ ಹೊಡೆದುಕೊಳ್ಳಬೇಕೋ...ಅಥವ ಸೆರಗು ಜಾರಿಸಿದ ಹೆಂಗಸು ಯಾವತ್ತು ಗಂಡಸಿನ ಮನದಲ್ಲಿ ಒಂದು ಸಂಶಯದ ಸುಳಿಯ ಬೀಜ ಬಿತ್ತಿಯೇ ಬಿಡುತ್ತಾಳೆ ಎಂಬ ಕಹಿಸತ್ಯದ ಎದುರು ತಲೆಬಾಗಬೇಕೋ ತಿಳಿಯದೇ.
ಮಾಡಿದ ತಪ್ಪಿಗೆ.....ಯಾವ ಶಿಕ್ಷೆಯಲಿ ಸಿಕ್ಕಿ ಬೀಳಲಿ ಎಂಬ ಆಲೊಚನೆ ಎಡೆಬಿಡದೇ ಕಾಡುತ್ತಿದ್ದರೇ......ಹೌದು ನಾನು ಯಾಕೆ ಹೀಗಾದೆ ?
ಮುಗುಮ್ಮಾಗಿ ಕೂತು ಎದ್ದು ಹೋಗುವವಳಿಗೆ ಏನು ಬಂದಿತ್ತು ರೋಗ...ತಿಳಿಯದೇ ಮಾಡಿದ ತಪ್ಪೊಪ್ಪಿಗೆಗೆ ಕ್ಷಮೆ ಇದೆ, ಅದೇ ತಿಳಿದು ಮಾಡಿದರೇ.... ಊಹೂಂ.... ಅದಕ್ಕೆ ಕ್ಷಮೆ ಎಂಬುದು ಇಲ್ಲವೇ ಇಲ್ಲ…
ದೈಹಿಕ ವಾಂಛೆಗಳಿಗೆ ಪ್ರೀತಿಯೆಂಬ ಹೆಸರು ಇಡುವುದೇ ಹೇಸಿಗೆ....! ನಿನ್ನ ದೇಹ ಬೇಕು ಅಂದರೇ ಕೇಳಲು ಅಸಹ್ಯ ಆದರೇ ಅದೇ ನೈಜವಾದ ಇಚ್ಛೆಯಾಗಿರುತ್ತದೆ....ಆ ಇಚ್ಛೆ ಈಡೇರಿಸಲು ಪ್ರೀತಿ ಪ್ರೇಮದ ಬಳಕೆ ಮಾಡುವುದು ಅಸಹನೀಯ......ಅದಕ್ಕಿಂತ ವೇಶ್ಯೆಯರ ಬದುಕು ಎಷ್ಟೋ ಮೇಲೂ.....ಹೀಂಗಂದುಕೊಂಡ ದಿನವೇ.…
ನಾನು ಎಲ್ಲವುಗಳಿಂದ ಮುಕ್ತನಾದೆ.....ಈಗ ನನಗೆ ಏನೂ ಬೇಕಾಗಿಲ್ಲ....ಬದುಕುವ ಬಣ್ಣಕ್ಕೆ ಅಪಹಾಸ್ಯವೂ ನೆಡೆಯುತ್ತದೆ....ವ್ಯಂಗ್ಯ ಆಕ್ರೋಶ, ನಿರ್ಲಕ್ಷ್ಯ ಅಸಹನೆ, ಆಗಾಗ ಕಾಡುವ ಶಬ್ಧಗಳ ನೆನಪುಗಳು..... ಊಹೂಂ ಯಾವುದಕ್ಕೂ ಮನ ಜಗ್ಗದು...ಬಗ್ಗದು...…
ಸತ್ತು ಹೋದ ದೇಹಕ್ಕೆ ಚಟ್ಟವೇರುವ ಆಸೆಯಷ್ಟೆ ಉಳಿದು ಆ ನಾಲ್ಕು ಜನ ಯಾರು ? ಎಂಬ ಪ್ರಶ್ನೆ ಕಾಡಿದಾಗ..…
ಮನದಲ್ಲೇ ನಗು ಬರುತ್ತದೆ...…
ಸತ್ತ ನಂತರ ನನ್ನ ಹೊರತ್ತಾರೆಯೇ ?
ಅದೆಲ್ಲ ನನಗೆ ತಿಹಿಯುತ್ತಿದೆಯೇ ?
ಅಳುತ್ತಾರೆಯೇ.....ಅದು ಏನಕ್ಕೆ ? ನನಗೇ ಆಗ ಏನು ತಿಳಿಯುತ್ತದೆ...? ಹೆಣಕ್ಕೆ ಶೃಂಗಾರ ಮಾಡುತ್ತಾರೆಯೇ....ಜೋರಾದ ನಗು ಬರುತ್ತಿದೆ.....ಬದುಕಿದ್ದಾಗ ಒಂದು ಮೊಳ ಮಲ್ಲಿಗೆಗೆ ಹಾತೊರೆದ ಜೀವಕ್ಕೆ ಸತ್ತ ನಂತರ ಸೌಗಂಧಿಕಾ ಪುಷ್ಪದ ಹಾರ.....ಮೆರೆವಣಿಗೆ.... ತಿಥಿ, ಮಾಸಿಕ, ಸೂತಕ, ವೈಕುಂಠ, ನಂತರ ವರ್ಷಾಂತಿಕ.....ಅವರವರ ಆಸೆಗೆ ತಕ್ಕಂತೆ ಮಾಡುವ ಅಡಿಗೆಗೂ ನನಗೂ ಸಂಬಂಧವೇ ಇಲ್ಲ...…
ಕೀರ್ತಿ.........ಎಂಬ ಸಂಜೆ ಮಲ್ಲಿಗೆ
ಶಾರದ ಭಟ್ಟ