Do you have a passion for writing?Join Ayra as a Writertoday and start earning.

ಯಾರು ಈ ದುನಿಯಾ ವಿಜಯ್?

ಕನ್ನಡದ ಬಹು ಬೇಡಿಕೆಯ ನಟನಾಗಿ ಬೆಳೆದಿದ್ದು ಹೇಗೆ?

ProfileImg
18 Jan '24
4 min read


image

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಸ್ವತಃ ನಟಿಸಿ ನಿರ್ದೇಶಿಸುತ್ತಿರುವ ಹಾಗೂ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿರುವ ಚಿತ್ರ ಭೀಮ. ದುನಿಯಾ ವಿಜಯ್ ಅವರ ಅಭಿಮಾನಿಗಳು ಭೀಮ ಚಿತ್ರದ ಅಪ್ಡೇಟ್ ಗೋಸ್ಕರ ಕಾದು ಕುಳಿತಿದ್ದಾರೆ. ಇದೇ ಸಂಧರ್ಭದಲ್ಲಿ ಭೀಮ ಚಿತ್ರ ತಂಡದಿಂದ ಹೊಸ ಸುದ್ದಿಯೊಂದು ಹೊರ ಬಿದ್ದಿದೆ ಇದನ್ನು ಕೇಳಿದ ದುನಿಯಾ ವಿಜಯ್ ಫ್ಯಾನ್ಸ್ ಹಬ್ಬ ಮಾಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಭೀಮ ಚಿತ್ರದ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣ ಪೂರ್ಣಗೊಳಿಸಿದ್ದ ಚಿತ್ರತಂಡ ಇದೇ ಜನವರಿ 19 ರಂದು ಸಂಜೆ 6 ಗಂಟೆಗೆ ಭೀಮ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಜನವರಿ 20 ರಂದು ದುನಿಯಾ ವಿಜಯ್ ಅವರ ಹುಟ್ಟುಹಬ್ಬದ ಹಬ್ಬದ ಪ್ರಯುಕ್ತ ಚಿತ್ರತಂಡ ಟೀಸರ್ ಬಿಡುಗಡೆ ಮಾಡಲಿದ್ದಾರೆ. ದುನಿಯಾ ವಿಜಯ್ ಅವರು ಸ್ವತಃ ನಟಿಸಿ ಸಲಗ ಚಿತ್ರದ ಮೂಲಕ ಡೈರೆಕ್ಷನ್ ಸಹ ಮಾಡಿ ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ನಲ್ಲಿ ಮಿಂಚಿದ್ದರು. ಸಲಗ ಸಿನಿಮಾ ನೋಡಿದ ಪ್ರತಿಯೊಬ್ಬರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಈಗ ಮತ್ತೆ ಭೀಮ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ನಲ್ಲಿ ಧೂಳೆಬ್ಬಿಸಲು ರೆಡಿಯಾಗಿದ್ದಾರೆ. ಇನ್ನು ಭೀಮ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳೋದಾದ್ರೆ ಕೃಷ್ಣ ಫಿಲ್ಮ್ಸ್ ಮತ್ತು ಜಗದೀಶ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿದ್ದವಾಗಿರುವ ಭೀಮ ಸಿನಿಮಾಗೆ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ಬಂಡವಾಳ ಹೂಡಿದ್ದಾರೆ. ಸಂಗೀತ ಲೋಕದಲ್ಲಿ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಚರಣ್ ರಾಜ್ ಭೀಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಮೂರು ಹಾಡುಗಳನ್ನು ಭೀಮ ಚಿತ್ರತಂಡ ಆನಂದ್ ಆಡಿಯೋದಲ್ಲಿ ಬಿಡುಗಡೆ ಮಾಡಿದ್ದು ಚಿತ್ರದ ಮೂರು ಹಾಡುಗಳು ಉತ್ತಮ ವೀಕ್ಷಣೆ ಪಡೆದು ಮುನ್ನುಗ್ಗುತ್ತಿವೆ. ಹಾಗೂ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಅವರಿಗೆ ಜೊತೆಯಾಗಿ ಅಶ್ವಿನಿ ಅವರು ನಟಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಕಲ್ಯಾಣಿ ಮತ್ತಿತರ ಸಹ ಕಲಾವಿದರು ಅಭಿನಯಿಸಿದ್ದಾರೆ.

ಯಾರು ಈ ದುನಿಯಾ ವಿಜಯ್??

ದುನಿಯಾ ವಿಜಯ್ ಕನ್ನಡ ಚಲನಚಿತ್ರ ನಟ ಹಾಗೂ ನಿರ್ದೇಶಕರು. ಜನವರಿ 20 ರಂದು 1974 ರಲ್ಲಿ  ಬೆಂಗಳೂರಿನ ಆನೇಕಲ್ ತಾಲೂಕು ಬಳಿ ಇರುವ ಕುಂಬಾರನ ಹಳ್ಳಿಯಲ್ಲಿ ಜನಿಸಿದರು. ವಿಜಯ್ ಅವರು ಸುದೀಪ್ ಅವರ ಜೊತೆ ಯೋಗರಾಜ್ ಭಟ್ ಅವರ ನಿರ್ದೇಶನದ ರಂಗ SSLC ಚಿತ್ರದಲ್ಲಿ ಒಂದು ಸಣ್ಣ ಪಾತ್ರದಲ್ಲಿ ಸಹ ಕಲಾವಿದನಾಗಿ ಕಾಣಿಸಿಕೊಂಡಿದ್ದರು ಹೀಗೆ ಕನ್ನಡ ಚಿತ್ರ ರಂಗದಲ್ಲಿ ಸಣ್ಣ ಪಾತ್ರಗಳ ಮೂಲಕ ತಮ್ಮನ್ನು ತಾವು ಗುರುತಿಸಿಕೊಂಡರು. ವಿಜಯ್ ಅವರ ವೃತ್ತಿ ಜೀವನದಲ್ಲಿ ಅವರಿಗೆ ಮಹತ್ವದ ತಿರುವು ಸಿಕ್ಕಿದ್ದು ಸೂರಿ ಅವರ ನಿರ್ದೇಶನದ ದುನಿಯಾ ಚಿತ್ರದಿಂದ ಇನ್ನು ಈ ಚಿತ್ರದಿಂದ ವಿಜಯ್ ಅವರಿಗೆ ಭಾರಿ ಯಶಸ್ಸು ಸಿಕ್ಕಿತು. ಅಭಿಮಾನಿಗಳ ಮನೆ ಮನದಲ್ಲಿ ದುನಿಯಾ ವಿಜಯ್ ಎಂದೇ ಪ್ರಖ್ಯಾತಿ ಪಡೆದರು. ದುನಿಯಾದಲ್ಲಿ ವಿಜಯ್ ಅವರ ನಟನೆ ಪ್ರೇಕ್ಷಕರ ಮನ ಗೆದ್ದಿತು. ಹಳ್ಳಿ ಹುಡುಗನಾಗಿ ಮುಗ್ದ ಮನಸ್ಸಿನ   ನಟನೆಗೆ ಕರ್ನಾಟಕದ ಜನರು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ದುನಿಯಾ ಚಿತ್ರದ ಹಾಡುಗಳು ಎಲ್ಲರ ಮನ ಗೆದ್ದಿದ್ದವು, ರಂಗಾಯಣ ರಘು ಅವರ ನಟನೆ ಕೂಡ ಅದ್ಭುತವಾಗಿ ಮೂಡಿ ಬಂದಿತ್ತು. ಇನ್ನು ದುನಿಯಾ ವಿಜಯ್ ಅವರು ನಟಿಸಿದ್ದ ಚಿತ್ರಗಳ ಬಗ್ಗೆ ಹೇಳುವುದಾದರೆ 2004 ರಲ್ಲಿ ರಂಗ SSLC, ಮೊನಾಲಿಸಾ ಚಿತ್ರದಲ್ಲಿ ನಟಿಸಿದ್ದರು. 2005 ರಲ್ಲಿ ರಿಷಿ, ರಾಕ್ಷಸ, ಗಿರಿ, ಜೋಗಿ, ಡೆಡ್ಲಿ ಮಂಜ, ಡೆಡ್ಲಿ ಸೋಮ ಮತ್ತು 2006 ರಲ್ಲಿ ಶ್ರೀ, ಅಂಬಿ, ಕಲ್ಲರಳಿ ಹೂವಾಗಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 2007 ರಲ್ಲಿ ಈ ರಾಜೀವ್ ಗಾಂಧಿ ಅಲ್ಲಾ, ದುನಿಯಾ, ಯುಗ, ಗೆಳೆಯ ಚಿತ್ರಗಳಲ್ಲಿ ಅಲ್ಲದೆ  2008 ರಲ್ಲಿ ಅವ್ವ, ಸ್ಲಂ ಬಾಲ, ತಾಕತ್, ದೇವ್ರು, ಶಂಕರ್ ಐಪಿಎಸ್, ಕರಿ ಚಿರತೆ, ಕಂಠೀರವ, ಐತಲಕಡಿ, ವೀರಬಾಹು, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್, ಜರಾಸಂಧ, ಭೀಮಾ ತೀರದಲ್ಲಿ, ರಜನಿಕಾಂತ, ಜಯಮ್ಮನ ಮಗ, ಶಿವಾಜಿನಗರ,ಸಿಂಹಾದ್ರಿ, ಜಾಕ್ಸನ್, ದಕ್ಷ, RX ಸೂರಿ, ರಿಂಗ್ ರೋಡ್, ದನಕಾಯೋನು, ಮಾಸ್ತಿ ಗುಡಿ, ಕನಕ, ಸಲಗ, ಭೀಮ ಹೀಗೆ 2004 ರಲ್ಲಿ ಆರಂಭ ಆದಂತಹ ದುನಿಯಾ ವಿಜಯ್ ಅವರ ವೃತ್ತಿ ಜೀವನ ಒಳ್ಳೆಯ ಕನ್ನಡ ಸಿನಿಮಾಗಳ ಮೂಲಕ ಕನ್ನಡ ಚಿತ್ರ ರಂಗದಲ್ಲಿ ಸಾಗುತ್ತಲೇ ಇದೇ.

ಪ್ರಶಸ್ತಿಗಳು ಮತ್ತು ಸಾಧನೆಗಳು

2007 ರಲ್ಲಿ ದುನಿಯಾ ಚಿತ್ರಕ್ಕಾಗಿ ಅತ್ಯುತ್ತಮ್ಮ ನಟ ಫಿಲ್ಮ್ ಫೇರ್ ಪ್ರಶಸ್ತಿ ಲಭಿಸಿದೆ.

2007 ರಲ್ಲಿ ದುನಿಯಾ ಚಿತ್ರಕ್ಕಾಗಿ ಅತ್ಯುತ್ತಮ ನಟ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ.

ದುನಿಯಾ ವಿಜಯ್ ಅವರು ಕನ್ನಡ ಚಿತ್ರ ರಂಗಕ್ಕೆ ಕೊಟ್ಟಿರೋ ಕೊಡುಗೆ ಅಪಾರವಾದದ್ದು. ದುನಿಯಾ ವಿಜಯ್ ಅವರು ಜೀವನದಲ್ಲಿ ತುಂಬಾ ಕಷ್ಟದ ಜೀವನವನ್ನು ಎದುರಿಸಿದ್ದಾರೆ.

ದುನಿಯಾ ವಿಜಯ್ ಅವರು 1999 ರಲ್ಲಿ ನಾಗರತ್ನ ಅವರನ್ನು ವಿವಾಹ ವಾದರು. 2013 ರಲ್ಲಿ ತಮ್ಮ ದಾಂಪತ್ಯ ಜೀವನದಲ್ಲಿ ಕೆಲವು ಭಿನ್ನಾಭಿಪ್ರಾಯ ಗಳಿಂದ ಅವರ ಪತ್ನಿ ನಾಗರತ್ನ ಅವರಿಂದ ವಿಚ್ಚೇದನ ಪಡೆದರು. ದುನಿಯಾ ವಿಜಯ್ ಹಾಗೂ ನಾಗರತ್ನ ಅವರಿಗೆ ಮೋನಿಕಾ, ಮೋನಿಷಾ ಹಾಗೂ ಸಾಮ್ರಾಟ್ ಎಂಬ ಮೂವರು ಮಕ್ಕಳಿದ್ದಾರೆ. ನಾಗರತ್ನ ಅವರೊಂದಿಗೆ ವಿಚ್ಚೇದನ ಬಳಿಕ 2016 ರಲ್ಲಿ ಕೀರ್ತಿ ಪಟ್ಟಾಡಿ ಅವರನ್ನು ವಿವಾಹವಾದರು.

ವಿವಾದಗಳು

2016 ರಲ್ಲಿ ದುನಿಯಾ ವಿಜಯ್ ಅವರು ನಾಯಕ ನಟನಾಗಿ ಅಭಿನಯಿಸಿದ್ದ ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ ಮಾಸ್ತಿಗುಡಿ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಚಿತ್ರೀಕರಣದ ಸಮಯದಲ್ಲಿ ಇಬ್ಬರೂ ಖಳನಟರಾದ ಉದಯ್ ಮತ್ತು ಅನಿಲ್ ವಿಜಯ್ ಅವರೊಂದಿಗೆ ಹೆಲಿಕಾಪ್ಟರ್ ನಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹಾರಿದ್ದರು. ಆ ದಿನ ಕನ್ನಡ ಚಿತ್ರರಂಗ ಇಬ್ಬರೂ ಖಳ ನಟರನ್ನು ಕಳೆದುಕೊಂಡಿತ್ತು ಇಡೀ ಕನ್ನಡ ಚಿತ್ರರಂಗ ಹಾಗೂ ಕನ್ನಡ ಜನತೆ ಅವರ ಸಾವಿಗೆ ಸಂತಾಪ ಸೂಚಿಸಿತ್ತು. ಈ ಘಟನೆಯ ನಂತರ ಕೆಎಫ್ ಸಿ ಸಿ ಯು ವಿಜಯ್, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿ ವರ್ಮಾ ಅವರ ಮೇಲೆ ಮುಂದಿನ ಸೂಚನೆ ಬರುವ ವರೆಗೂ ನಿಷೇಧ ಹೇರಿತ್ತು.

24 ಸೆಪ್ಟೆಂಬರ್ 2018 ರಂದು, ವಿಜಯ್ ತನ್ನ ಸ್ನೇಹಿತ ಜಿಮ್ ತರಬೇತುದಾರನ ಮೇಲೆ ಹಲ್ಲೆ ಮಾಡಿದ್ದರು ಎಂದು ಹಲ್ಲೆ ಆರೋಪದ ಮೇಲೆ ಬಂಧಿಸಲಾಗಿತ್ತು.

ಜೀವನದಲ್ಲಿ ಎಲ್ಲಾ ರೀತಿಯ ಕಷ್ಟ, ನೋವು ಅನುಭವಿಸಿದ ದುನಿಯಾ ವಿಜಯ್ ಅವರು ಎಲ್ಲೂ ಸಹ ಕುಗ್ಗಲಿಲ್ಲ. ಜೀವನದ ಪ್ರತಿಯೊಂದು ಹಂತದಲ್ಲೂ ಸೋಲನ್ನು ಸವಾಲಾಗಿ ಸ್ವೀಕರಿಸಿದರು. ದುನಿಯಾ ವಿಜಯ್ ಅವರ ಉತ್ಸಾಹ, ಸಿನಿಮಾ ಮೇಲಿನ ಪ್ರೀತಿ, ಕನ್ನಡದ ಬಗ್ಗೆ ಇರುವ ಅಭಿಮಾನ ಅಪಾರ. ದುನಿಯಾ ವಿಜಯ್ ಅವರು ಹೀಗೆ ಕನ್ನಡ ಸಿನಿಮಾ ರಂಗಕ್ಕೆ ಉತ್ತಮ ಸಿನಿಮಾಗಳನ್ನು ಕೊಡಲಿ, ಯಾವಾಗಲೂ ಯಶಸ್ಸಿನ ಹಾದಿಯಲ್ಲಿ ಸಾಗಲಿ.

 

Category : Movies and TV Shows


ProfileImg

Written by Siddesh M G

Screenplay writer, assistant director, books reader