ಕಾಲ ಎಲ್ಲರ ಕಾಲನ್ನೂ ಎಳೆಯುತ್ತದೆ..
ಭೂತಾರಾಧನೆ ಯಲ್ಲಿ ಜಾತಿ ಯತ ಧರ್ಮಗಳ ಸಾಮರಸ್ಯ ಇದೆ ಆದರೆ ಇತ್ತೀಚೆಗೆ ಬ್ರಾಹ್ಮಣರ ವಿರುದ್ಧ ತುಳುವರನ್ನು ಎತ್ತಿಕಟ್ಟು ಸಾಮರ ್ಯ ಹಾಳು ಮಾಡುವ ಕೆಲಸವ ್ನು ಕೆಲವರು ಮಾಡುತ್ತಿದ್ದಾರೆ . ಇದಕ್ಕೆ ಮೂಲ ಕಾರಣ ಮತ್ಸರವೇ ಆಗಿದೆ ಜೊತೆಗೆ ಕೀಳರಿಮೆಯೂ ಕಾರಣವಾಗಿರಬಹುದು
Face book ನಲ್ಲಿ ತೌಳವ ( Taulava) ಎಂಬ ಫೇಕ್ ಹೆಸರಿನಲ್ಲಿ ಆಧಾರ ರಹಿತವಾಗಿ ಪೋಸ್ಟ್ ಹಾಕಿ ಸಾಮಾಜಿಕ ಶಾಂತಿ ಕದಡುವ ಕೆಲಸ ಮಾಡುತ್ತಿದ್ದರಾರೆ ಅವರು ಯಾರರೆಂದು ನನಗೆ ಗೊತ್ತಿಲ್ಲ.ಆದರೆ ಅಂತಹದೇ ಕಟ್ಟುಕಥೆ ಹೇಳಿದ ವ್ಯಕ್ತಿಯೊಬ್ಬಲ ನೆನಪಾಯಿತು
ನನ್ನನ್ನು ಸೇರಿದಂತೆ ತುಳು ಸಂಶೋಧಕರ ಬಗ್ಗೆ ,ಲೇಖಕರ ಬಗ್ಗೆ ಆಧಾರ ರಹಿತವಾಗಿ ಅವಹೇಳನಕಾರಿಯಾಗಿ ಟಿವಿಯಲ್ಲಿ ಮಾತನಾಡಿದ ವ್ಯಕ್ತಿಗೆ ಅವರ ದೋಷಗಳನ್ನು ಆಧಾರ ಸಹಿತವಾಗಿ ಎತ್ತಿ ತೋರಿಸಿದರೆ ಬಹಳ ತಾಗುತ್ತದೆ ..ಆಗ ಜಾತಿ ನೆನಪಾಗುತ್ತದೆ,ನನ್ನಂತಹ ಶೋಷಿತ ಸಮುದಾಯವರು ಅಧ್ಯಕ್ಷ ಸ್ಥಾನ ಪಡೆಯಬಾರದೇ? ಇತ್ಯಾದಿ ಆತ್ಮ ಗ್ಲಾನಿಯ ಅನುಕಂಪ ಪಡೆಯುವ ಮಾತು ಬರುತ್ತದೆ..
ನನ್ನ ಪ್ರಕಾರ ದೈವ ಕಟ್ಟುವವರು ಮಾತ್ರವಲ್ಲ ಯಾರೂ ಕೂಡ ಯಾವುದೇ ವೃತ್ತಿಯನ್ನು ಮಾಡಬಹುದು,ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರೂ ಆಗಬಹುದು
ಅಂತೆಯೇ ನನ್ನ ಪ್ರಕಾರ
ದೈವಾರಾಧನೆ ಬಗ್ಗೆ ಅಧ್ಯಯನ ಮಾಡುವುದು ಬರೆಯುವುದು ಸಿನಿಮಾ ನಾಟಕಗಳಲ್ಲಿ ಯಕ್ಷಗಾನ ಬಯಲಾಟಗಳಲ್ಲಿ ಗೌರವಯುತವಾಗಿ ತೋರಿಸುವುದು ನನ್ನ ಪ್ರಕಾರ ತಪ್ಪಲ್ಲ.. ಒಂದೊಮ್ಮೆ ಇದನ್ನು ತಪ್ಪು ಎಂದು ದೈವ ಕಟ್ಟುವವರು ಹೇಳುವುದಾದರೆ ದೈವ ಕಟ್ಟುವವರು ಕೂಡ ಪ್ರಾಚೀನ ಸಂಪ್ರದಾಯವನ್ನು ಮೀರಬಾರದು ,ಬೇರೆ ವೃತ್ತಿ ಮಾಡುವಂತಿಲ್ಲ,ವೃತ್ತಿಯ ನೇಮ ನಿಷ್ಠೆ ಗಳಂತೆ ಇರಬೇಕು ಇತರರಿಂದ ಬೈಗುಳ ತಿನ್ನುವಂತಿಲ್ಲ.ಇತರ ವೃತ್ತಿ ಮಾಡಿದರೆ ಮೇಲಧಿಕಾರಿಗಳ ಬೈಗುಳ ಕೇಳಬೇಕು ,ಆದೇಶ ಪಾಲನೆ ಮಾಡಬೇಕು.ಹಾಗಾಗಿ ಹಿಂದಿನ ಕಾಲದಲ್ಲಿ ಇರುವಂತೆ ಇತರರು ನಡೆದುಕೊಳ್ಳಬೇಕು ಎನ್ನುವುದಾದರೆ ದೈವ ಕಟ್ಟುವವರು ಕೂಡ ಹಾಗೆಯೇ ಇರಬೇಕು.ಸಂಘ ಕಟ್ಟಿ ಅನ್ಯರ ಮೇಲೆ ದಬ್ಬಾಳಿಕೆ ಮಾಡುವುದು,ಸಂಘ ಸಂಸ್ಥೆ ಅಕಾಡೆಮಿಗಳ ಅಧ್ಯಕ್ಷರಾಗಿ ಅಧಿಕಾರ ಪಡೆಯುವುದು ಕೂಡ ತಪ್ಪು ಎಂಬುದು ನನ್ನ ವಾದ..
ಇಲ್ಲ..ಎಲ್ಲ ಹಿಂದಿನ ಕಾಲದಲ್ಲಿ ಇರುವಂತೆ ಇರಲು ಸಾಧ್ಯವಿಲ್ಲ ಬದಲಾವಣೆ ತಡೆಯಲು ಅಸಾಧ್ಯ ಎಂದಾದರೆ ದೈವಾರಾಧನೆ ಕುರಿತಾದ ಅಧ್ಯಯನವನ್ನು ಬರವಣಿಗೆಯನ್ನೂ ವಿರೋಧಿಸಬಾರದು.. ತನಗೆ ಬೇಕಾದಲ್ಲಿ ಆಧುನಿಕ ವಿಚಾರಧಾರೆ ಅನ್ವಯ..ಸಂಪ್ರದಾಯ ಮೀರಬಹುದು ಇತರರು ಮೀರಬಾರದು ಎಂಬ ಇಬ್ಬಗೆಯ ನಿಲುವನ್ನು ನಾನು ವಿರೋಧಿಸುತ್ತೇನೆ
ಇದು ಪ್ರಜಾಪ್ರಭುತ್ವದ ದೇಶ.. ಇಲ್ಲಿ ಯಾರೂ ಯಾವುದೇ ಸಂಘ ಸಂಸ್ಥೆ ಅಕಾಡೆಮಿ ಗಳ ಅಧ್ಯಕ್ಷರಾಗಿ ಬಹುದು ಅರ್ಹತೆ ಇದ್ದರೆ.. ಆದರೆ ನನ್ನನ್ನು ಸೇರಿದಂತೆ ಯಾರನ್ನೂ ಕೂಡಾ ಅವಹೇಳನ ಮಾಡುವ ಹಕ್ಕು ಯಾರಿಗೂ ಇಲ್ಲ.. ಅಕಾಡೆಮಿ ಅಧ್ಯಕ್ಷರಿಗೂ ಇಲ್ಲ..ದೈವ ಕಟ್ಟುವವರಿಗೂ ಇಲ್ಲ.ಶೋಷಿತ ಸಮುದಾಯದವರಿಗೂ ಇಲ್ಲ..
ನಾನು ಯಾರ ಸುದ್ದಿಗೂ ಹೋಗುವುದಿಲ್ಲ.. ಅದನ್ನು ದೌರ್ಬಲ್ಯ ಎಂದು ಭಾವಿಸಿ ಕಿರುಕುಳ ಕೊಟ್ಟರೆ ಸುಮ್ಮನಿರುವುದೂ ಇಲ್ಲ..ಈ ವ್ಯಕ್ತಿ ಒಮ್ಮೆ ವಾಟ್ಸಪ್ ಗ್ರೂಪಿನ ಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಬರೆದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದೆ.ನಂತರ ಸುಮಾರು ಸಮಯ ನನ್ನ ಸುದ್ದಿಗೆ ಆತ ಬಂದಿರಲಿಲ್ಲ..
ನಂತರ ಒಮ್ಮೆ ಫೋನ್ ಮಾಡಿ ತುಳು ಭಾಷೆಗೆ ಸ್ವಂತ ಲಿಪಿ ಇದೆ ಎಂದು ಸುಳ್ಳು ಹೇಳಬೇಕು ಎಂದಾಗ ಒಪ್ಪಿರಲಿಲ್ಲ..ಸುಳ್ಳೆ ಹೇಳಬೇಕೆಂದು ಅಕಾಡೆಮಿ ಅಧ್ಯಕ್ಷ ಬಿಡಿ ರಾಷ್ಟ್ರಾಧ್ಯಕ್ಷರೇ ಹೇಳಿದರೂ ಒಪ್ಪಲಾಗದು ಎಂದಿದ್ದೆ..
ಇದಾಗಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಬಿಡುಗಡೆಯಾಗಿ ಸಾಕಷ್ಟು ಪ್ರಸಿದ್ಧಿ ಪಡೆದಾಗ ಮತ್ತೆ ಅನೇಕರಿಗೆ ನಂಜು ಕೆದರಲು ಆರಂಭ ಆಯಿತು.. ತಮಗೆ ಅಸಾಧ್ಯವಾದದ್ದನ್ನು ಅಥವಾ ತಾವು ಮಾಡಿದ್ದನ್ನು ಇತರರು ಮಾಡಿದರೆ ಅನೇಕರಿಗೆ ಸಹಿಸಲು ಆಗುವುದಿಲ್ಲ..
ಗ್ರಂಥದಲ್ಲಿ ಬಳಸಿದ ಪದ ಒಂದರ ಬಗ್ಗೆ ಫೋನ್ ಮಾಡಿ ದಬ್ಬಾಳಿಕೆ ಮಾಡಲು ಹೊರಟಾಗ "ಭೂತ ಕಟ್ಟುವ ಪರಂಪರೆಯ ವಿದ್ವಾಂಸರು" ಎಂಬ ಪದ ಬಳಕೆ ಅವಮಾನ ಎನಿಸಿದರೆ ಕೋರ್ಟ್ ಗೆ ಹೋಗಿ ಪುಸ್ತಕ ಬ್ಯಾನ್ ಮಾಡ್ಸಿ ಎಂದಿದ್ದೆ ..
ಇದಾಗಿ ಇತ್ತೀಚೆಗೆ ಕಂಬಳ ಕುರಿತಾದ ಬಿಟಿವಿ ಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಚರ್ಚೆಯ ವಿಷಯ ಬಿಟ್ಟು ತುಳು ಸಂಶೋಧಕರ ಬಗ್ಗೆ ಬರಹಗಾರರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.ವಿಷಯಕ್ಕೆ ಸಂಬಂಧ ಪಡದಿದ್ದರೂ ಮೇಲ್ವರ್ಗದವರು ( ಬ್ರಾಹ್ಮಣರು?)ಕೆಳ ವರ್ಗದವರ ಮಕ್ಕಳಿಗೆ ಕೂರ ,ಬೊಗ್ರ ,ಬೊಗ್ಗಿ ,ತುಕ್ರ ,ಇತ್ಯಾದಿ ನಾಯಿ ಹೆಣ್ಣು ನಾಯಿ ಇತ್ಯಾದಿ ಕೀಳಾದ ಹೆಸರು ಇಡುತ್ತಿದ್ದರು ಎಂದು ಆಧಾರ್ ರಹಿತವಾಗಿ ,ಸಮಾಜದ ಸ್ವಾಸ್ಥ್ಯ ಕದಡುವ ಹೇಳಿಕೆ ನೀಡಿದ್ದರು.ಅದರ ರೆಕಾರ್ಡ್ ಸೇವ್ ಮಾಡಿದ ನನ್ನ ಮಗ ಜಾತಿ ನಿಂದನೆ ಮತ್ತು ಸಾಮಾಜಿಕ ಸ್ವಾಸ್ಥ್ಯ ಕದಡುವ ಕೇಸ್ ದಾಖಲಿಸುವ ಎಂದಿದ್ದ ಆಗ ಈಗ ಬೇಡ ,ಎಲ್ಲ
ದಾಖಲೆಗಳನ್ನು ತೆಗೆದಿರಿಸೋಣ..ನೇರವಾಗಿ ನನ್ನ ಹೆಸರು ಹೇಳಿ ಅವಹೇಳ ಮಾಡಿದರೆ ಇವೆಲ್ಲವನ್ನೂ ಸೇರಿಸಿದೂರು ನೀಡಿ ಕೇಸ್ ಹಾಕಿ ಹೋರಾಡೋಣ ಎಂದು ಹೇಳಿ ಪೆಂಡಿಂಗ್ ಇರಿಸಿದ್ದೆ . ವಾಟ್ಸಪ್ ಗ್ರೂಪಿನಲ್ಲಿ ಬರೆದಿದ್ದುದರ ದಾಖಲೆ, ಫೋನ್ ಮಾಡಿದ್ದರ ಫೋನ್ ಕಾಲ್ ರೆಕಾರ್ಡ್ ಕೂಡ ಇದೆ.ತುಳು ರಾಜ್ಯಕ್ಕಾಗಿ ಅಲ್ಲಲ್ಲಿ ಬಾಂಬ್ ಬ್ಲಾಸ್ಟ್ ಮಾಡಬೇಕು, ಗಲಾಟೆ ಮಾಡಬೇಕು ಎಂದ ಆಡಿಯೋ ರೆಕಾರ್ಡ್ ಕೂಡ ಇದೆ , ಪತ್ರಿಕೆಯಲ್ಲಿ ಪ್ರಕಟವಾದ ವರದಿ ಕೂಡ ಇದೆ..
ದೈವ ದೇವರು ಯಾರೊಬ್ಬರ ಸೊತ್ತೂ ಅಲ್ಲ..ದೈವ ಕಟ್ಟುವವರ ಸೊತ್ತು ಕೂಡ ಅಲ್ಲ.ರಕ್ಷಣಾ ವೇದಿಕೆ ಇರಬಹುದು ಇನ್ಯಾವುದೋ ಸಂಘಟನೆ ಇರಬಹುದು, ಅವಹೇಳನಕಾರಿಯಾಗಿ ಬರೆದರೆ ಚಿತ್ರಿಸಿದರೆ ವಿರೋಧಿಸಬಹುದೇ ಹೊರತು ಅಪಚಾರವಾಗದಂತೆ ಬರೆದರೆ ಯಾರಿಗೂ ಕೇಳುವ ಹಕ್ಕು ಇಲ್ಲ
ಅದರ ಅಧ್ಯಯನ ಮಾಡಿ ಬರೆಯಲು ಯಾರ ಅನುಮತಿ ಬೇಕಾಗಿಲ್ಲ . ಮೂಲಕ್ಕೆ ಧಕ್ಕೆಯಾಗದಂತೆ ಸಿನಿಮಾ ನಾಟಕಗಳಲ್ಲಿ ಯಕ್ಷಗಾನ ಬಯಲಾಟಗಳಲ್ಲಿ ತರುವುದು ಕೂಡ ತಪ್ಪಲ್ಲ.. ಭಕ್ತಿ ಗೀತೆ ಬರೆಯುವುದೂ ತಪ್ಪಲ್ಲ.. ಇದನ್ನು ಮಾಡಬಾರದು ಎನ್ನುವ ಹಕ್ಕು ಯಾರಿಗೂ ಇಲ್ಲ.. ಅದು ಭಾರತದ ಸಂವಿಧಾನ ನಮಗೆ ಕೊಟ್ಟ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು..
ಮುಂದಿನದನ್ನು ದೈವ ದೇವರುಗಳು ನೋಡಿಕೊಳ್ಳುವರು ಎಂಬ ದೃಢವಾದ ನಂಬಿಕೆ ನನಗಿದೆ