ಶ್ವೇತ ದ್ವೀಪ

ಅಧ್ಯಾಯ 1

ProfileImg
02 Jan '24
4 min read


image

ಬೆಚ್ಚಿ ಬಿದ್ದು ಎದ್ದು ಕುಳಿತ ಶಶಿಗೆ ತನ್ನ ಕಣ್ಣನ್ನೇ ನಂಬಲಾಗಲಿಲ್ಲ. ಹೇಕೆಂದರೆ ಮುಂದೆ ಬರ್ಮುಡದಂತಾ ಹಸಿರು ದೊಗಳೆ ಪ್ಯಾಂಟ್, ಬಿಗಿಯಾದ ಹಸಿರು ಟೀ ಶರ್ಟ್ ಹಾಕಿಕೊಂಡು ನಿಂತಿದ್ದಳು ತಾರ." ಹೇಳು ಬೇಗ ಹೇಳು " ಅವಳ ಮುಖದಲ್ಲಿ ಗಾಬರಿ ಎದ್ದು ಕಾಣುತಿತ್ತು." ಏನು ಏನಾಯಿತು... " ಆಶ್ಚರ್ಯದ ಜೊತೆಗೆ ಕಳವಳವೂ ಇತ್ತು ಶಶಿಯ ದ್ವನಿಯಲ್ಲಿ.

         " ಎಲ್ಲಾ ಹೇಳ್ತೇನೆ ಬೇಗ ಈ ಬಟ್ಟೆ ತೊಟ್ಟು, ಕಾಫಿ ಕುಡಿದು ರೆಡಿಯಾಗು ನಾನು ಎಲ್ಲ ಹೇಳ್ತೇನೆ " ತಾರಾಳ ದ್ವನಿಯಲ್ಲಿ ಅಧಿಕಾರದ ಜೊತೆ ಗೋಗರೆತವೂ ಇತ್ತು.

    ಶಶಿಗೆ ಏಕೋ ತಾರಾಳ ಮಾತು ಕೇಳಬೇಕು ಎನಿಸಿತು, ಆದರೆ ಅವಳ ಬಗ್ಗೆ ಅತೀವ ನಿರ್ಲಕ್ಷವೂ ಇತ್ತು, ತಾರ ಕೇವಲ ಬೆಲೆವೆಣ್ಣು ಎಂದು ಮಾತ್ರ ಶಶಿಗೆ ಗೊತ್ತಿದ್ದು.

        " ಮತ್ತೆ ಏನು ಕಂತ್ರಿ ಕೆಲಸ ಮಾಡ್ತಾ ಇದ್ದೀಯ? ನನ್ನ ಹತ್ತಿರ ನಿನ್ನ ಆಟ ನಡೆಯಲ್ಲ! ಗೊತ್ತಲ್ಲ!? " ಸಿಡುಕಿನಿಂದ ಹೇಳಿದ ಶಶಿ.

         "ಶಶ್...... ಜೋರಾಗಿ ಕಿರುಚಬೇಡ, ಕಾಫಿ ರೆಡಿಯಾಗುವಷ್ಟರಲ್ಲಿ ಬೇಗ ಬಟ್ಟೆ ಹಾಕಿಕೊಂಡು ರೆಡಿಯಾಗು ತಿಳಿತಾ ಆಮೇಲೆ ನಾನು ಎಲ್ಲ ಹೇಳ್ತೇನೆ ನಾವು ಮೊದಲು ಈ ಜಾಗ ಬಿಡಬೇಕು, ಪ್ಲೀಸ್..." ತಾರಾಳ ದ್ವನಿಯಲ್ಲಿ ಧೈನ್ಯತೆ ಇತ್ತು.

          ಏಕೋ ತಾರಳ ಮಾತನ್ನು ಕೇಳಲು ಶಶಿಯ ಮನಸ್ಸು ಒಪ್ಪಿತ್ತು.' ಏನು ಈ ಮಾಯಾಂಗನೆಯ ಉದ್ದೇಶ, ನನಗೆ ಹಾಕಿಕೊಳ್ಳಲು ಒಂದು ಜೊತೆ ಹಸಿರು ಬಣ್ಣದ ಪ್ಯಾಂಟು ಶರ್ಟ್ ತಂದಿದ್ದಾಳೆ, ಅವಸರದಲ್ಲಿ ಕಾಫಿ ಮಾಡುತ್ತಿದ್ದಾಳೆ,ಮೊದಲೇ ಎಲ್ಲಾ ತಯಾರಿ ಮಾಡಿದ್ದಾಳೆ, ನನಗೆ ಯಾವ ಸೂಚನೆಯನ್ನೂ ಕೊಡದೆ ತಾನೆಯೇ ಸ್ವಯಂ ನಿರ್ದಾರ ತೆಗೆದುಕೊಂಡಿದ್ದಾಳೆ. ಅಥವಾ ಯಾರಾದರೂ ಇವಳಿಗೆ ಹೀಗೆ ಮಾಡಲು ನಿರ್ದೇಶನ ಕೊಟ್ಟಿದ್ದಾರೆಯೇ, ಅವಳು ಯಾವಾಗಲೂ ಸೀರೆಯನ್ನು ಮಾತ್ರ ಉಡುತ್ತಿದ್ದವಳು  ಈಗ ಪ್ಯಾಂಟ್ ಶರ್ಟ್ ಧರಿಸಿದ್ದಾಳೆ, ಆ ದೊಗಳೇ ಪ್ಯಾಂಟ್ ಧರಿಸಿದ್ದರೂ ಅವಳ ನಿತಂಬಗಳು ಹಿಂದೆ ಚಾಚಿದಂತೆ ಅಸಹ್ಯವಾಗಿ ಕಾಣುತ್ತಿವೆ, ಅವಳ ಮೈಗೆ ಸರಿಹೊಂದದ ಟೀ ಶರ್ಟ್ ಮೈಗೆ ಅಂಟಿಕೊಂಡು ಅವಳ ಎದೆ ಮುಂದೆ ಚಾಚಿಕೊಂಡು ನಿಂತಿವೆ, ಏನಿದು ಏನು ನಡಿತಾ ಇದೆ.' ಶಶಿ ಯೋಚಿಸುತ್ತಲೆ ಅವಸರವಾಗಿ ಅವಳು ತಂದಿದ್ದ ಹಸಿರು ಬಣ್ಣದ ಶರ್ಟ್ ಪ್ಯಾಂಟ್ ಧರಿಸಿ ನಿಲ್ಲುವಷ್ಟರಲ್ಲಿ, ಅವಳು ಅವನ ಕೈಗೆ ಹೊಗೆಯಾಡುವ ಕಾಫೀ ಕಪ್ ನ್ನು ಕೊಟ್ಟು ತಾನೂ ಒಂದು ಕಪ್ ನಲ್ಲಿ ಕಾಫೀ ಕುಡಿಯುತ್ತಾ ಹೇಳಿದಳು,"ನಾವೀಗ ತಪ್ಪಿಸಿಕೊಂಡು ಈಗಿಂದೀಗಲೇ ಓಡಿ ಹೋಗಬೇಕು, ಇಲ್ಲೇ ಇದ್ದರೆ ನಿನ್ನ ಜೀವಕ್ಕೆ ಸಂಚಾಕಾರವಿದೆ..... "  ಅವಳ ಮಾತು ಮುಗಿಯುವಷ್ಟರಲ್ಲಿ ಬೆಚ್ಚಿ ಬಿದ್ದ ಶಶಿ ಕೇಳಿದ "ಏನು.... ಏನು ಹೇಳ್ತಾ ಇದ್ದೀಯ ನೀನು... ನನ್ನ ಜೀವಕ್ಕೆ.. " ಅವನ ಗಂಟಲಿನಿಂದ ಒಳ ಹೋಗಲು ಕಾಫಿ ಸ್ವಲ್ಪ ತಡ ಮಾಡಿತು.

        " ನಾನು ಎಲ್ಲಾ ಹೇಳ್ತೇನೆ.... ಕಾಫೀ ಕುಡಿದು ಬೇಗ ಆ ಬ್ಯಾಗ್ ತೆಗೊ, ನನ್ನಿಂದೆ ಬಾ.. " ಅವಳು ಎಷ್ಟು ಬೇಗ ಕಾಫೀ ಕುಡಿದಳೋ ಗೊತ್ತಿಲ್ಲ, ಆಗಲೇ ಬ್ಯಾಗ್ ನೇತಾಕಿಕೊಂಡು ನಿಂತಿದ್ದಳು.

       " ಸರಿ ನಡಿ ಹೋಗೋಣ " ಕಾಫೀ ಕಪ್ ಕೆಳಗಿಟ್ಟು, ಬ್ಯಾಗ್ ನ್ನು ಬೆನ್ನಿಗೆ ನೇತಾಕಿಕೊಂಡು, ತಾರಳನ್ನು ಹಿಂಬಾಲಿಸಿದ ಶಶಿ ' ಇವಳು ನನಗೆ ಶತ್ರುವೋ, ಮಿತ್ರಳೋ ' ಅವನಿಗೆ ತಿಳಿಯಲಿಲ್ಲ.

        ಪಕ್ಕದ ರೂಮಿಗೆ ಹೋದ ತಾರ ಎರಡು ದೊಣ್ಣೆಗಳನ್ನು ಎತ್ತಿಕೊಂಡು ಒಂದನ್ನು ಶಶಿಯ ಕೈಗೆ ಕೊಟ್ಟು ಮತ್ತೊಂದನ್ನು ತಾನು ಹಿಡಿದು ಹೇಳಿದಳು, "ಇವು ನಮ್ಮ ಆತ್ಮರಕ್ಷಣೆಗೆ.. " ಎಂದಳು.

      ಶಶಿ ಕಿಸಕ್ ನೆ ನಕ್ಕು ಹೇಳಿದ, “ ಇವು ಹೊರಗಡೆ ಇರುವ ನಾಯಿಗಳನ್ನೂ ಹೊಡೆಯಲು ಆಗಲ್ಲ,ಹೊರಗಡೆ ಮನುಷ್ಯರನ್ನು ಹರಿದು ತಿನ್ನುವ ನಾಯಿಗಳು ಇವೆ ಎನ್ನುವುದನ್ನು ಮರೆತೆಯಾ ಹೇಗೆ ಅಂತಾ... ”

       ಅವಳು ವಿಜಯದ ನಗೆಯನ್ನು ತನ್ನ ತುಟಿ ಮೇಲೆ ತಂದುಕೊಂಡು ಹೇಳಿದಳು ಸಿಡುಕಿನಿಂದ "ಮೂರ್ಖ! ನಾನೇನು ನಿನ್ನ ಹಾಗೆ ಬಸವಯ್ಯನ ಮಾತಿಗೆ ಬೇಸ್ತು ಬಿದ್ದು, ಇಲ್ಲಿ ಬಂದಿಯಾಗಿ ಬಿದ್ದಿದ್ದೀಯಲ್ಲಾ ನೀನು, ನಿನ್ನ ತರ ಅಲ್ಲ ನಾನು. ನಾನು ಎಲ್ಲ ತಯ್ಯಾರಿ ಮಾಡಿಯೇ ಬಂದಿದ್ದೇನೆ, ಬಾ ನನ್ನ ಹಿಂದೆ, ನಾವು ಇಲ್ಲಿಂದ ಮೊದಲು ತಪ್ಪಿಸಿಕೊಂಡು ಹೋಗೋಣ " ಎಂದು ಹೇಳಿ ಶಶಿಯ ಕೈ ಹಿಡಿದು ಎಳೆದೆ ಕೊಂಡು ಕೊರಟಳು, ಶಶಿ ಕೀ ಕೊಟ್ಟ ಗೊಂಬೆಯಂತೆ ಅವಳ ಹಿಂದೆ ಹೊರಟ ಆ ಅಳೆಯ ಬಂಗಲೆಯ ಜೇಡರ ಬಲೆಗಳನ್ನೆಲ್ಲಾ ಹರಿಯುತ್ತಾ ಹೊರ ಬಂದ ಅವರಿಗೆ ಮುಂದೆ ಕಾರ್ಗತ್ತಲೆ ಸ್ವಾಗತಿಸಿತು.

      " ನಿಲ್ಲು.. " ತಾರಾಳ ಕೈಯನ್ನು ಜಗ್ಗಿ ಹಿಂದಕ್ಕೆ ಎಳೆದ ಶಶಿ ಕೇಳಿದ “ ಈ ಕತ್ತಲೆಯಲ್ಲಿ ಮುಂದೆ ಹೋಗುವುದಾದರೂ ಹೇಗೆ ಅಂತ ”

       ಕೋಪದಿಂದ ಶಶಿಯ ಕಡೆ ನೋಡಿದ ತಾರ, ಅವನ ಕೈಯನ್ನು ಜಗ್ಗಿಸಿ ಎಳೆದುಕೊಂಡು, ಆ ಕತ್ತಲೆಯನ್ನು ಸೀಳುತ್ತಾ ನಡೆದಳು, ಅವಳ ಹಿಂದೆ ಒಂದು ಬಗೆಯಲ್ಲಿ ಕುರುಡನಂತೆ  ಓಡುತ್ತಿದ್ದ ಶಶಿ.

        ಒಂದು ಜಾಗದಲ್ಲಿ ನಿಂತಳು ಇಬ್ಬರೂ ಏದುಸಿರು ಬಿಡುತ್ತಿದರು. ಮೌನವನ್ನು ಮುರಿದು ಕೇಳಿದ ಶಶಿ "ಏನಿದು,ಎಲ್ಲಿಗೆ ಹೋಗೋದು ಏನು ನಿನ್ನ ಯೋಜನೆ ನನಗೆ ಒಂದೂ ಅರ್ಥ ಆಗ್ತಾ ಇಲ್ಲ".

         "ನಾನು ಮುಂದೆ ಎಲ್ಲಾ ಹೇಳ್ತೇನೆ,ಈಗ ನಾವು ಆದಷ್ಟು ದೂರ ಬಂದಿದ್ದೇವೆ ಅನ್ಸುತ್ತೆ, ಮುಂದೆ ಬೆಳಕಿಲ್ಲದೆ ಹೋಗೋಕೆ ಆಗಲ್ಲ" ತನ್ನ ಚಿಂತೆಯನ್ನು ಹೊರಹಾಕಿದಳು ತಾರ. ಇಲ್ಲಿಯವರೆಗೂ ಅವರು ಕತ್ತಲೆಯಲ್ಲೇ ಓಡಿಬಂದಿದ್ದರು.

         ಹಿಂದೆ ತಿರುಗಿ ನೋಡಿದ ಶಶಿ, ಅಲ್ಲಿ ದೂರದಲ್ಲಿ ಇವನು ಇದ್ದಂತ ಹಳೆಯ ಬಂಗಲೆ ಒಳಗಿನ ಮಂದ ಬೆಳಕಿನಲ್ಲಿ ಬಂಗಲೆ ತಾನು ಇರುವುದನ್ನು ಹೇಳುತಿತ್ತು. ಆ ಗಾಡಾಂಧಕಾರದಲ್ಲೂ ಆಕಾಶದಲ್ಲಿ ಹೊಳೆಯುವ ನಕ್ಷತ್ರಗಳ ಬೆಳಕಿನಲ್ಲಿ ಇವರ ಮುಂದೆ ಆಕಾಶದೆತ್ತರಕ್ಕೆ ನಿಂತ ಬೆಟ್ಟಗಳು ಬೃಹದಾಕಾರದ  ರಾಕ್ಷಸರಂತೆ ಕರ್ರಗೆ ಕಾಣುತಿದ್ದವು. ಬರಿ ಕಲ್ಲು ಬಂಡೆಗಳ ನಡುವೆ ಮುಂದೆ ಹೋಗುವ ದಾರಿಯ ಬಗ್ಗೆ ಯೋಚಿಸಲು ಪ್ರಾರಂಭಿಸಿದಳು ತಾರ, ಯಾವುದಾದರೂ ಕಾಡಿನ ಮೃಗಗಳು ಅಥವಾ ವಿಶಕಾರಿ ಹಾವುಗಳು ಅಲ್ಲಿ ಇಲ್ಲಾ ಎನ್ನುವಂತೆ ಇರಲಿಲ್ಲ.

           ಈಗ ಯಾಕೋ ಪರಿಸ್ಥಿತಿಯ ಗಂಭೀರತೆ ಶಶಿಗೆ ಅರ್ಥವಾಗುತ್ತಿದ್ದರು ತಾರಾಳನ್ನು ಅವನು ಪೂರ್ಣವಾಗಿ ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ತಾರಾ ಬ್ಯಾಗ್ ಒಳಗಿಂದ ಟಾರ್ಚ್ ಒಂದನ್ನು ಹೊರತೆಗೆದಳು.ಒಂದು ಸಲ ಟಾರ್ಚ್ ಒತ್ತಿಸಿದಳು, ಟಾರ್ಚ್ ಚೆಲ್ಲಿದ ಬೆಳಕಿನಲ್ಲಿ ಮುಂದೆ ದೊಡ್ಡ ದೊಡ್ಡ ಬಂಡೆಗಳು, ಮುಳ್ಳು ಪೊದೆಗಳು ಕಂಡವು, ತಕ್ಷಣ ಟಾರ್ಚ್ ಆರಿಸಿದಳು ಮತ್ತೆ ಕಾರ್ಗತ್ತಲು ಗಕ್ ನೆ ಮುಖಕ್ಕೆ ಬಡಿಯಿತು. ಆ ಕತ್ತಲೆಯಲ್ಲಿ ತಾರಾಳ ಮುಖವನ್ನು ನೋಡಲು ಪ್ರಯತ್ನಿಸುತ್ತಾ ಶಶಿ ಕೇಳಿದ "ವೈ....".

           "ನಾವು ಟಾರ್ಚ್ ಬೆಳಕಿನಲ್ಲಿ ದೂರದಲ್ಲಿ ಯಾರಾದರೂ ನಮ್ಮನ್ನು ಸೆರ್ಚ್ ಮಾಡುತ್ತಿದ್ದರೆ ಸಿಕ್ಕಿ ಹಾಕಿಕೊಂಡು ಬಿಡುತ್ತೇವೆ, ಅದಕ್ಕಾಗಿ ಟಾರ್ಚ್ ಆನ್ ಮಾಡೋದು, ಆಫ್ ಮಾಡೋದು ಮಾಡಿಕೊಂಡು ದಾರಿ ಕಂಡುಹಿಡಿದುಕೊಂಡು ಹೋಗಬೇಕು". ಪಿಸುಗುಟ್ಟಿದಳು ತಾರಾ.

         ಶಶಿ "ಯಾರು ನಮ್ಮನ್ನು ಈ ಸರಿ ರಾತ್ರಿಯಲ್ಲಿ ಸೆರ್ಚ್ ಮಾಡುತ್ತಾರೆ..." ಇವಳದು ಅತಿಯಾಯಿತು ಎನ್ನುವಂತೆ, ಅಸಹನೆಯಿಂದ ಕೇಳಿದ.

       “ ನಾನು ಮೊದಲೇ ಹೇಳಿದ್ದೇನೆ ಆಮೇಲೆ ಎಲ್ಲಾ ಹೇಳುತ್ತೇನೆ ಅಂತ, ಈಗ ನನ್ನಿಂದೆ ಬಾ ಅಷ್ಟೆ. ”

ಎಂದು ಹೇಳಿ ಮುಂದೆ ಹೋಗಲು ಯತ್ನಿಸಿದ ತಾರಳನ್ನು ತಡೆದು "ಸ್ವಲ್ಪ ಸರಿಯಾಗಿ ಅದೇನು ಹೇಳು, ಈ ಕಾರ್ಗತ್ತಲೆಯಲ್ಲಿ ಈ ಸಾಹಸ  ಏಕೆ" ಎಂದ ಶಶಿ.

       ಈಗ ತಾರಾಳಿಗೆ ರೇಗಿ ಹೋಯಿತು. "ಸೋಮಾರಿ ನನ್ನ ಮಗನೆ, ಏಕೆ ಹೀಗೆ ಎದರಿ ಸಾಯುತ್ತೀಯಾ, ನನ್ನಿಂದೆ ಬಾ ಅಷ್ಟೆ. ಇದೆಲ್ಲ ಮಾಡುತ್ತಿರುವುದು ನಿನಗೋಸ್ಕರ ನೆನಪಿರಲಿ ". ಎಂದು ರೇಗಿದ ತಾರ ಮುಂದೆ ಹೋಗಲು, ಶಶಿಯ ಕೈಯನ್ನು ಹಿಡಿದೆಳೆದು, ಟಾರ್ಚ್ ಹೊತ್ತಿಸಿದಳು,"ಆಆಹಾ ಆನೆ...." ಶಶಿ ಮೆಲ್ಲನೆ ಹೇಳಿದ,ಒಂದು ವಿಧದಲ್ಲಿ ತಾರಾಳನ್ನು ಅಂಟಿಕೊಂಡು ನಿಂತಿದ್ದ.

ಟಾರ್ಚ್ ಬೆಳಕಿನಲ್ಲಿ ಆ ಆನೆಯಂತ ಪ್ರಾಣಿ ಇವರ ಕಡೆಯೇ ಬರುತಿತ್ತು, ಶಶಿ ತಾರಳ ಕೈ ಹಿಡಿದು ಹೋಡಲು ಹಿಂದಿರುಗಿದ, ಅಲ್ಲಿ ಅಲ್ಲಿಯೂ ಒಂದಿತ್ತು ಅಂತಾದ್ದೆ.

          ≈≈≈≈≈≈≈≈≈≈≈ ಮುಂದುವರೆಯುವುದು.

       

        

     

     

Category:Nature



ProfileImg

Written by Harish Kumar

Watsap