ಚಿನ್ನ ಖರೀದಿಸುವುದರಲ್ಲಿ ತಪ್ಪೇನಿದೆ?
ಈವತ್ತು ಅಕ್ಷಯ ತದಿಗೆ.ಈವತ್ತು ತಗೊಂಡ ಬಂಗಾರ ಅಕ್ಷಯ ಆಗುತ್ತದೆ ಎಂಬ ನಂಬಿಕೆ ಹರಡಿದೆ.ಅನೇಕರು ಹೇಳುವಂತೆ ಇದು ಬಂಗಾರದ ಆಭರಣ ಮಳಿಗೆಗಳು ಹರಡಿದ ಮೂಢನಂಬಿಕೆ
ಮೂಢನಂಬಿಕೆಯೋ ಚಿನ್ನದ ಒಡವೆಗಳ ಮೇಲೆ ಆಸೆಯೋ ,ಬಂಗಾರದ ಒಡವೆಗಳನ್ನು ಖರೀದಿಸುವುದರಲ್ಲಿ ತಪ್ಪೇನಿದೆ?
ಇತರ ಹೂಡಿಕೆಗಳಿಗೆ ಹೋಲಿಸಿದರೆ ಚಿನ್ನ ಖರೀದಿ ಸುರಕ್ಷಿತ ಮತ್ತು ಲಾಭದಾಯಕ ಕೂಡ.
ಆಭರಣಗಳನ್ನು ಖರೀದಿಸುವಾಗ ವೇಸ್ಟೇಜ್ ಮತ್ತು ತಯಾರಿಕಾ ವೆಚ್ಚ 10-20%ಇರುತ್ತದೆ .ಇದು ನಷ್ಟ ಎಂದು ಅನೇಕರ ಆಕ್ಷೇಪ.
ಇದು ಒಪ್ಪಿಕೊಳ್ಳುವದ್ದೆ.
ಆದರೆ ಇದರಂತಹ ಸುರಕ್ಷಿತ ವಾದ ಉಳಿತಾಯದ ದಾರಿ ಬೇರೆ ಯಾವುದು ಇದೆ? ಮತ್ತು ಅಗತ್ಯ ಬಿದ್ದಾಗ ತಕ್ಷಣವೇ ಒದಗುವ ಆಕರ ಬೇರೆ ಯಾವುದಿದೆ ?
ಈ ಸಮಸ್ಯೆಗೆ ಪರಿಹಾರವಾಗಿ
ಆಭರಣಗಳ ಬದಲು ಚಿನ್ನದ ನಾಣ್ಯಗಳನ್ನು ಖರೀದಿಸಬಹುದು
ಮ್ಯೂಚುವಲ್ ಫಂಡ್ ಇನ್ನಿತರೆಡೆಗಳಲ್ಲಿ ಬಂಡವಾಳ ಹಾಕುದು ಲಾಭಕರ ಇರಬಹುದು ಆದರೆ ಇದರ ಬಗ್ಗೆ ನನ್ನನ್ನು ಸೇರಿಸಿದಂತೆ ಹೆಚ್ಚಿನವರಿಗೆ ತಿಳುವಳಿಕೆ ಇರುವುದಿಲ್ಲ
ಇನ್ನು ಸೈಟ್ ತೆಗೆಯಬೇಕಾದರೆ ತುಂಬಾ ದುಡ್ಡು ಬೇಕು
ಬಂಗಾರದ ಒಡವೆಗಳನ್ನು ಅವರವರಲ್ಲಿ ಇರುವ ದುಡ್ಡಿಗೆ ಅನುಗುಣವಾಗಿ ಸಣ್ಣ ದೊಡ್ಡ ಒಡವೆಗಳನ್ನು ಖರೀದಿಸಬಹುದು.
ವರ್ಷ ವರ್ಷ ಒಂದೊಂದೇ ಒಡವೆಗಳನ್ನು ಖರೀದಿಸುವುದರಲ್ಲಿ ನಷ್ಟ ವಿಲ್ಲ ಯಾಕೆಂದರೆ ವರ್ಷ ವರ್ಷ ಚಿನ್ನದ ಬೆಲೆ ರಾಕೆಟ್ ಯಾನದಲ್ಲಿ ಏರುತ್ತಿದೆ.
ನನ್ನ ಮದುವೆ ಸಮಯದಲ್ಲಿ ಎಂದರೆ 1993ರಲ್ಲಿ ಚಿನ್ನದ ಬೆಲೆ ಗ್ರಾಂ ಗೆ 365₹ಇತ್ತು.ಈಗ ಇದರ ಹದಿನೆಂಟು -ಇಪ್ಪತ್ತು ಪಟ್ಟು ಹೆಚ್ಚು ಆಗಿದೆ
ನಾನು ಕಳೆದ ಜುಲೈ ತಿಂಗಳಲ್ಲಿ ಎರಡು ಬಳೆಗಳನ್ನು ಗ್ರಾಂ ಗೆ 5500₹ ರಂತೆ ತಗೊಂಡಿದ್ದೆ
ಇತ್ತೀಚೆಗೆ ಮಾರ್ಚ್ ತಿಂಗಳಲ್ಲಿ ಒಂದು ಜ್ಯುವೆಲ್ಲರ್ಸ್ ನ ಪ್ರತಿನಿಧಿಗಳು ಬಂದು ಈಗ 25%ಅಡ್ವಾನ್ಸ್ ಪೇ ಮಾಡಿದರೆ ಎಪ್ರಿಲ್ 27ರಿಂದ ಮೇ ಐದರ ಒಳಗೆ ಇಂದಿನ ಬೆಲೆಗೆ ಒಡವೆ ಖರೀದಿ ಮಾಡಲು ಅವಕಾಶ ಇದೆ ಜೊತೆಗೆ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜರ್ಸ್ ನಲ್ಲಿ 25%ರಿಯಾಯತಿ ಇದೆ ಎಂದರು
ಆ ದಿನದ ಚಿನ್ನದ ಬೆಲೆ ಗ್ರಾಮಿಗೆ 6125₹ ಇತ್ತು.
ಅದಕ್ಕೆ ಆರೇಳು ತಿಂಗಳ ಮೊದಲು ನಾನು ಜುಲೈ ಲ್ಲಿ ತಗೊಂಡಿದ್ದಾಗ 5500₹ ಇತ್ತು.
ಆರೇಳು. ತಿಂಗಳಲ್ಲಿ ಗ್ರಾಮಿಗೆ 625 ₹ ಹೆಚ್ಚಾಗಿತ್ತು
ಅಬ್ಬಾ ಅನ್ನಿಸಿತು..ಇನ್ನೂ ಹೆಚ್ಚಾದರೆ ಮುಂದೆ ಚಿನ್ನ ತಗೊಳ್ಳುದೇ ಕಷ್ಟ ಆಗಬಹುದು ಎಂದೆನಿಸಿತು
ಮನೆಗೆ ಬಂದು ಪ್ರಸಾದರಲ್ಲಿ ಮಾತನಾಡಿ ಹೇಗೋ ಹೊಂದಾಣಿಕೆ ಮಾಡಿಕೊಂಡು ಮೂರು ಲಕ್ಷದ 25% ಎಂದರೆ 75000₹ಅಡ್ವಾನ್ಸ್ ಪೇ ಮಾಡಿದೆ
ಒಂದೊಮ್ಮೆ ನಾವು ತಗೊಳ್ಳುವ ದಿನ ಚಿನ್ನದ ಬೆಲೆ ಇಳಿದಿದ್ದರೆ ಆ ದಿನದ ಬೆಲೆ ಎಂದಿದ್ದರು
ನಾನು ಅಡ್ವಾನ್ಸ್ ಬುಕಿಂಗ್ ಮಾಡಿದ ದಿನ ಚಿನ್ನದ ಬೆಲೆ ಗ್ರಾಮಿಗೆ 6135₹ಇತ್ತು
ಈಗ ಚಿನ್ನದ ಬೆಲೆ ಜಾಸ್ತಿ ಇದೆ ಕಡಿಮೆ ಇರುವಾಗ ನೋಡಿ ತಗೊಳ್ಳಬಹುದಲ್ವ ಎಂದು ನನ್ನ ಆತ್ಮೀಯರು ಹೇಳಿದಾಗ ನನ್ನ ಪಾಲಿಗೆ ಬರಬೇಕಾದುದನ್ನು ದೇವರು ನನಗಾಗಿ ತೆಗೆದಿರಿಸುತ್ತಾನೆ ಎಂದಿದ್ದೆ.
ಮೊನ್ನೆ ಮೇ ನಾಲ್ಕರಂದು ಹೋಗಿ ಮೂರು ಲಕ್ಷ ರುಪಾಯಿಗೆ ಗ್ರಾಮಿಗೆ 6135₹ನಂತೆ ಒಡವೆ ತಗೊಂಡೆ.ಅದಕ್ಕೆ 25% ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜರ್ಸ್ ನಲ್ಲಿ ರಿಯಾಯಿತಿ ದೊರೆಯಿತು
ಆ ದಿನದ ಚಿನ್ನದ ಬೆಲೆ 6585₹ ಇತ್ತು.ಜೊತೆಗೆ ವೇಸ್ಟೇಜ್ ಮತ್ತು ಮೇಕಿಂಗ್ ಚಾರ್ಜರ್ಸ್ ನಲ್ಲಿ 25ಶೇಕಡ ರಿಯಾಯಿತಿ ಇತ್ತು
ಹಾಗಾಗಿ ಪ್ರಸಾದರು ಇನ್ನೂ ಸ್ವಲ್ಪ ಬೇಕಿದ್ದರೆ ತಗೋ.. ಕಾರ್ಡ್ ನಲ್ಲಿ ಪೇ ಮಾಡಲು ಆಗುತ್ತದೆ . ಮತ್ತೆ ಹೇಗೋ ಕಾರ್ಡಿಗೆ ದುಡ್ಡು ಹೊಂದಿಸುವ ಎಂದರು.
ಅಲ್ಲೊಂದು ಸರ 56gm ದು ಬಹಳ ಇಷ್ಟ ಆಗಿತ್ತು ಆದರೆ ಅದರ ಬೆ ಲೆ ಮೂರು ಲಕ್ಷ ದಾಟುತ್ತದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟು ಬೇರೆ ತಗೊಂಡಿದ್ದೆ.
ಪ್ರಸಾದರು ಹೇಳಿದ್ದೇ ತಡ . ಅದನ್ನು ಖ ರೀದಿಸಿ ತಂದೆ.ಅದೇ ದಿನ ಬ್ಯಾಂಕ್ ಲಾಕರ್ ನಲ್ಲಿ ಇತರ ಒಡವೆಗಳ ಜೊತೆಗೆ ಸೇಫ್ ಆಗಿ ಇರಿಸಿ ಬಂದೆ
ನಾನು ಒಡವೆಗಳನ್ನು ಧರಿಸುವುದು ತೀರ ಕಡಿಮೆ.ಸೀರೆ ಚಿನ್ನದಲ್ಲಿ ದೊಡ್ಡ ಆಸಕ್ತಿ ಯೂ ಇಲ್ಲ ನನಗೆ.
ಆದರೆ ಚಿನ್ನದ ಒಂದು ಆಪದ್ಧನ ಎಂದು ಅರಿವಾದದ್ದು ನನಗೆ ಐದು ವರ್ಷಗಳ ಮೊದಲು ಮನೆ ಕಟ್ಟಲು ಶುರು ಮಾಡಿದಾಗ..
ನನ್ನ ಸಹೋದ್ಯೋಗಿಗಳು ಕೆಜಿ ಐಡಿ ಲೋನ್ ಗೆ ಅರ್ಜಿ ಹಾಕಿದಾಗ ನಾನು ಸುಮ್ಮನೆ ಹಾಕಿದ್ದೆ.ಅದು ಸ್ವಲ್ಪ ದುಡ್ಡು ಬಂದಿತ್ತು ಜೊತೆಗೆ ಎಲ್ ಐಸಿ ಪಾಲಿಸಿ ಮೆಚೂರ್ ಆದ ದುಡ್ಡು ಸ್ವಲ್ಪ ಬಂದಿತ್ತು.ಮನೆ ಸಾಲಕ್ಕೆ ಅರ್ಜಿ ಸಲ್ಲಿಸಿ
ಮನೆ ಕಟ್ಟಲು ಶುರು ಮಾಡಿದ್ದೆವು.
ಪಿಲ್ಲರ್ ಹಾಕುವಷ್ಟರಲ್ಲಿ ಒಂದು ಸಣ್ಣ ತಾಂತ್ರಿಕ ಕಾರಣದಿಂದಾಗಿ ನ್ಯಾಶನಲೈಸ್ಡ್ ಬ್ಯಾಂಕ್ ನಲ್ಲಿ ಮನೆ ಸಾಲ ಸಿಗಲಿಲ್ಲ.ಖಾಸಗಿ ಬ್ಯಾಂಕ್ ಫೈನಾನ್ಸ್ ಗಳ ಸಾಲ ಬೇಡ ಎಂದೆನಿಸಿತ್ತು
ಇಂತಹ ಸಂದರ್ಭದಲ್ಲಿ ನಮಗೆ ಸಹಾಯಕ್ಕೆ ಬಂದದ್ದು ನನಗೆ ಮದುವೆ ಸಮಯದಲ್ಲಿ ತಂದೆ ಕೊಟ್ಟ, ಚಿನ್ನ,ನಂತರ ಅಣ್ಣ ಮತ್ತು ಪ್ರಸಾದರು ತೆಗೆದು ಕೊಟ್ಟ ಚಿನ್ನದೊಡವೆಗಳು
ಲಾಕರಿಂದ ತೆಗೆದು ಬ್ಯಾಂಕ್ ಗೆ ನೀಡಿ ಅದರ ಆಧಾರದಲ್ಲಿ ಸಾಲ ತಗೊಂಡೆ.ಜೊತೆಗೆ ಎಲ್ ಐ ಸಿ ಪಾಲಿಸಿಗಳ ಮೇಲೂ ಸಾಲ ತೆಗೆದುಕೊಂಡು ಒಂದಷ್ಟು ಪರ್ಸನಲ್ ಲೋನ್ ತಗೊಂಡು ಮನೆ ಕಟ್ಟಿದೆವು
ಒಂದೆರಡು ವರ್ಷಗಳ ಒಳಗೆ ಸಕಾಲದಲ್ಲಿ ಕಂತು ಕಟ್ಟಿ ಚಿನ್ನವನ್ನು ಬಿಡಿಸಿಕೊಂಡು ಮತ್ತೆ ಬ್ಯಾಂಕ್ ಲಾಕರಿನಲ್ಲಿ ಇರಿಸಿದೆ .ಎಲ್ ಐಸಿ ಪಾಲಿಸಿ ಮೇಲಿನ ಲೋನನ್ನು ಕಟ್ಟಿದೆವು.ಪರ್ಸನಲ್ ಲೋನ್ ನ ಕಂತುಗಳೂ ಮುಗಿದಿವೆ
ವಾಸ್ತವದಲ್ಲಿ ವರ್ಷಕ್ಕೆ 59-69 gm ಗ್ರಾಂ ಚಿನ್ನ ತೆಗೆಯಲಾಗದ ಪರಿಸ್ಥಿತಿ ನಮಗೆ ಎಂದೂ ಇರಲಿಲ್ಲ
.ನನಗೆ ಚಿನ್ನದ ಒಡವೆಗಳ ಮೇಲೆ ಆಸಕ್ತಿ ಇರದ ಕಾರಣ ನಿಯಮಿತವಾಗಿ ತೆರೆದಿರಲಿಲ್ಲ .
ಆಗೊಮ್ಮೆ ಈಗೊಮ್ಮೆ ಒಂದೆರಡು ಸಣ್ಣ ನೆಕ್ಲೇಸ್ , ಚೈನು, ಕೆಲವು ಬಳೆಗಳನ್ನು ತೆಗೆದಿರುವೆ ಅಷ್ಟೇ
ನಾನು ಕೆಲಸಕ್ಕೆ ಸೇರಿದಲ್ಲಿಂದ ಇಂದಿನವರೆಗೆ ನಿಯಮಿತವಾಗಿ ವರ್ಷಕ್ಕೆ 50-60gm ತೆಗೆದಿರಿಸುತ್ತಿದ್ದರೆ ಈಗ ನನ್ನಲ್ಲಿ ಕನಿಷ್ಠ ಎರಡು ಕೆಜಿ ಚಿನ್ನದ ಒಡವೆಗಳು ಇರುತ್ತಿತ್ತು .
ಅದೃಷ್ಟವಶಾತ್ ಇದರ 25%ಆದರೂ ಇರುವದ್ದು ನನ್ನ ಪುಣ್ಯವೇ ಸರಿ ನಾನು
ನನ್ನ ಸ್ನೇಹಿತೆ ಒಬ್ಬರು ಆಗಾಗ ಗಂಡನಿಗೆ ಬೋನಸ್ ಬಂದಾಗ ಇನ್ನೇನೋ ದುಡ್ಡು ಬಂದಾಗೆಲ್ಲ ಚಿನ್ನ ತೆಗೆದಿರಿಸಿದ್ದು ನೋಡಿ ನಾನೂ ಹಾಗೆ ಮಾಡಬೇಕಿತ್ತು ಎಂದು ನನಗೆ ನಿಜಕ್ಕೂ ಅನಿಸಿತ್ತು
ಇರಲಿ..ನನಗೆ ಇನ್ನೂ ಎಂಟು ವರ್ಷ ಸರ್ವಿಸ್ ಇದೆ ಇನ್ನಾದರೂ ವರ್ಷ ಕ್ಕೆ ಕನಿಷ್ಠ 50 gm ಆದರೂ ಚಿನ್ನ ತಗೊಳ್ಳಬೇಕು ಎಂದು ನಿರ್ಧರಿಸಿರುವೆ
ಒಡವೆ ಹಾಕಿ ಮೆರೆಯುವುದಕ್ಕಾಗಿ ಅಲ್ಲ..ಒಂದು ಆಪದ್ಧನವಾಗಿ ಬ್ಯಾಂಕ್ ಲಾಕರಿನಲ್ಲಿ ಸುರಕ್ಷಿತ ವಾಗಿ ಇರಲಿ ಎಂದು ಅಷ್ಟೇ
ನೆನಪಿಡಿ.. ಚಿನ್ನವನ್ನು ಮನೆಯಲ್ಲಿ ಇರಿಸುವುದು ಬಹಳ ಅಪಾಯಕಾರಿ ಬ್ಯಾಂಕ್ ಲಾಕರಿನಲ್ಲಿ ಇರಿಸುವುದು ಸುರಕ್ಷಿತ
ನಾನು ಮನೆಯಲ್ಲಿ ಬೆಲೆ ಬಾಳುವ ಏನನ್ನೂ ಇರಿಸುವುದಿಲ್ಲ.ಒಡವೆಗಳನ್ನು ಬ್ಯಾಂಕ್ ಲಾಕರಿನಲ್ಲಿ ಇರಿಸಿರುವೆ