ಅಳುತ್ತಿರುವ ಕಂದನ ಬಿಗಿದಪ್ಪಿ ಹಾಲುಣಿಸಿ ಅಮ್ಮನು ಹಣೆಗೆ ಸಿಹಿ ಮುತ್ತನಿಟ್ಟ ಹಾಗೆ
ಹಣ್ಣು ಬೇಕೆಂದು ಹಠ ಮಾಡಿದಾಗ ರಾಶಿ ಹಣ್ಣನು ಮುಂದೆ ಸುರಿದು ತಿನ್ನು ಎಂದು ಅಪ್ಪನು ಪ್ರೀತಿಯಿಂದ ಸನ್ನೆ ಮಾಡಿದ ಹಾಗೆ
ಏಕಾಂತದಲ್ಲಿ ಕುಳಿತಾಗ ಪ್ರೇಯಸಿಯು ಬಂದು ಕಿವಿಯಲ್ಲಿ ಪಿಸುಮಾತಿನು ಹೇಳಿದ ಹಾಗೆ
ನೊಂದು ಬೆಂದು ಬಳಲಿರುವ ಮನಕೆ ಭಗವಂತನು ಬಂದು ತಲೆಗೂದಲ ಸವರಿ ಸಾಂತ್ವನದ ಮಾತುಗಳನ್ನಾಡಿದ ಹಾಗೆ
ಯಾವುದು ಈ ಭಾವ
ಬಯಸುತಿದೆ ಜೀವ
0 Followers
0 Following