ಇವತ್ತು ಕೆಲವು ಕಾರಣಗಳನ್ನು ಕೊಟ್ಟು, ಸಂಸ್ಕೃತವನ್ನು ಅಭ್ಯಾಸ ಮಾಡುವುದರಿಂದ
ಹಿಂದೆ ಸರಿಯುತ್ತಿದಾರೆ
1) ಆಯ್ಕೆಯ ವಿಷಯ ಹೆಚ್ಚಿನ ಜನ ಅವರ ಮಾತೃಭಾಷೆ ಮತ್ತು ಇಂಗ್ಲಿಷ್ ಹಿಂದಿಯ ನಂತರವೆ ಸಂಸ್ಕೃತದ ಕೆಲವು ವಿಷಯಗಳನ್ನು
ಆಯ್ಕೆ ಮಾಡಿಕೊಳ್ಳುತ್ತಾರೆ ಸಂಸ್ಕೃತವನ್ನು ಹೆಚ್ಚು ಜನ ಕಲಿಯುವುದಿಲ್ಲ ಹಾಗಾಗಿ ನಾವು ಕಲಿಯುವುದಿಲ್ಲ ಎಂಬ ಮನಸ್ಥಿತಿ.
2) ತಂದೆ ತಾಯಿಯರು ನಮಗೆ ಸಂಸ್ಕೃತ ಬರುವುದಿಲ್ಲ ಎಂಬ ಕಾರಣಕ್ಕೆ ತಮ್ಮ ಮಕ್ಕಳಿಗೆ ಆ ವಿಷಯವನ್ನು ಅಯ್ದುಕೊಳ್ಳದೆ ಇರುವಂತೆ ಹೇಳುವುದು
3) ಸಂಸ್ಕೃತ ಒಂದು ಆಡುಭಾಷೆಯಾಗಿ ಉಳಿದಿಲ್ಲ! ಎಲ್ಲಾ ಭಾಷೆಗಳಲ್ಲಿ ಸಂಸ್ಕೃತ ಪದಗಳನ್ನು ಬಳಸಿದರು, ನಾವು ಆ ಪದಗಳಿಗೆ ಅಯಾ ಭಾಷೆಯ ಪ್ರತ್ಯಯ ಸೇರಿಸಿ,ಕೆಲವೊಮ್ಮೆ ಅಪಭ್ರಂಶವಾಗಿಸಿ ಅವುಗಳನ್ನು ಅದೆ ಭಾಷೆಯ ಪದಗಳಾಗಿಸಿಕೊಂಡಿದ್ದೇವೆ,
4)ಸಂಸ್ಕೃತ ವ್ಯವಹಾರದಲ್ಲಿ ಉಪಯೋಗಕ್ಕೆ ಬರುವುದಿಲ್ಲ ಎಂದು
5)ಸಂಸ್ಕೃತವನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಒಂದು ಆಯ್ಕೆಯ ವಿಷಯವಾಗಿ ದೊರೆಯದೆ ಇರುವುದು
ಹೀಗೆ ಒಂದಷ್ಟು ಕಾರಣಗಳನ್ನು ಇಟ್ಟುಕೊಂಡು
ಸಂಸ್ಕೃತವನ್ನು ಕಲಿಯಲು ಮುಂದಾಗುತ್ತಿಲ್ಲ
ಅದರೆ ಸಂಸ್ಕೃತ ಕಲಿಯುವುದರಿಂದ ಏನೆಲ್ಲಾ ಉಪಯೋಗ ಇದೆ ಎಂದು ತಿಳಿದರೆ ಪ್ರತಿಯೊಬ್ಬರೂ ಸಂಸ್ಕೃತವನ್ನು ಕಲಿಯುವುದಕ್ಕೆ ಮುಂದಾಗುತ್ತಾರೆ
1) ಸಂಸ್ಕೃತವನ್ನು ಭಾಷ ವಿಜ್ಞಾನದ, ಮಿದುಳಿನ ಬೆಳವಣಿಗೆಯ ದೃಷ್ಟಿಯಿಂದ ನೋಡಿದಾಗ ಸಂಸ್ಕೃತವನ್ನು ಕಲಿಯುವುದರ ಉಪಯುಕ್ತತೆ ಸ್ಪಷ್ಟವಾಗುತ್ತದೆ National Brain Research Centre- ರಾಷ್ಟ್ರೀಯ ಮಿದುಳು ಸಂಶೋಧನಾ ಸಂಸ್ಥೆ ಸಂಸ್ಕೃತದ ಲಿಪಿಯಾ್ ದೇವನಾಗರಿ ಲಿಪಿಯನ್ನು
ರೋಮನ್ ಲಿಪಿಗೆ (ಇಂಗ್ಲಿಷ್ ಅನ್ನು ಬರೆಯುವ ಲಿಪಿ) ಹೋಲಿಸಿ ನೋಡಿ, ದೇವನಾಗರಿ ಲಿಪಿಯನ್ನು ಬರೆಯುವಾಗ ಮಿದುಳಿನ ಬಲ ಮತ್ತು ಎಡ ಅರೆಗೋಳಗಳೆರಡರಲ್ಲೂ ಕೇಂದ್ರಗಳು ಪ್ರಚೋದನೆಗೊಳ್ಳುತ್ತವೆ ಎಂಬುದನ್ನು ಸಂಶೋಧನೆಗಳ ಮೂಲಕ ನಿರೂಪಿಸಿದೆ
2) ಈಗ ಕಂಪ್ಯೂಟರ್ ಯುಗವಷ್ಟೆ,ಏನನ್ನೇ ಕಲಿಯಬೇಕಾದರು ಇದು ಕಂಪ್ಯೂಟರ್ ಗೇನಾದರೂ ಉಪಯೋಗವಾದೀತೆ ಎಂದು ನೋಡುವುದು ಸಹಜ.ಆಶ್ಚರ್ಯಕರ ವಿಷಯ ಏನು ಎಂದರೆ ಸಂಸ್ಕೃತದಷ್ಟು ಪುರಾತನ ಭಾಷೆಯನ್ನು ಕಂಪ್ಯೂಟರ್ ಪ್ರೋಗ್ರಾಮಿಂಗ್ ಒಂದು ಆದರ್ಶ ಭಾಷೆಯಾಗಿ ಗುರುತಿಸಲ್ಪಟ್ಟಿದೆ
1985ರಷ್ಟು ಹಿಂದೆಯೇ ನಾಸದ ವಿಜ್ಞಾನಿ ರಿಕ್ ಬ್ರಿಗ್ಸ್ ' Sanskrit and artificial intelligence ಎಂಬ ಪ್ರಬಂಧದಲ್ಲಿ ಸಂಸ್ಕೃತ ಹೇಗೆ ಕಂಪ್ಯೂಟರ್ ಗೆ ಹೇಳಿ ಮಾಡಿಸಿದಂಥ ಭಾಷೆ ಎಂಬುದನ್ನು ವಿವರಿಸುತ್ತಾರೆ,
3)ಸಂಸ್ಕೃತವನ್ನು ಕಲಿಯುವುದು ಭಾರತದ ಪುರಾತನ ಸಾಹಿತ್ಯದ ಜ್ಞಾನದ ವಿವಿಧ ಶಾಖೆಗಳ ದೊಡ್ಡ ಬಾಗಿಲನ್ನು ನಮಗೆ ತೆರೆಯುತ್ತದೆ ಅನುವಾದಗಳು ಆಂಗ್ಲಭಾಷೆಯಲ್ಲಿ ಲಭ್ಯವಿರಬಹುದು ಆದರೆ ಮೂಲದಲ್ಲಿ ಅದನ್ನು ಓದುವುದು ವಿಶೇಷ ಆನುಭವ ನೀಡುತ್ತದೆ,
4)ಸಂಸ್ಕೃತವನ್ನು ಕಲಿಯುವುದು ಬೇರೆಲ್ಲಾ ಭಾಷೆಗಳ ಉಚ್ಛಾರವನ್ನೂ ಸ್ಪಷ್ಟವಾಗಿಸುತ್ತದೆ.ಸಂಸ್ಕೃತವನ್ನು ಕಲಿತವರ ಸಾಮಾನ್ಯ ಅನುಭವವಿದು.
5)ಅಲ್ಪಪ್ರಾಣ,ಮಹಾಪ್ರಾಣಗಳು ಮಾಯವಾಗುತ್ತಿರುವ ಆದರೆ ಕನ್ನಡದಲ್ಲಿ ಸಂಸ್ಕೃತದ ಪದಗಳು ಇನ್ನೂ ತುಂಬಿ ತುಳುಕುತ್ತಿರುವ ಸಂಧರ್ಭದಲ್ಲಿ ನೀವು ಸ್ಪಷ್ಟವಾಗಿ ಸ್ವಚ್ಛವಾಗಿ ಹಿಂದಿ ಕನ್ನಡವನ್ನು ಮಾತನಾಡಲು ಸಂಸ್ಕೃತ ಕಲಿಯುವುದು ಸುಲಭ ಮಾರ್ಗ.
6)ಇಂಗ್ಲಿಷ್ ಕಲಿಯುವುದಕ್ಕೆ ಕೂಡ ಸಂಸ್ಕೃತ
ಸಹಾಯಕ ನ್ಯೂಜಿಲೆಂಡ್ ನ ಫಿಸಿನೋ ಸ್ಕೂಲ್ ಎಂಬ ವಿಶ್ವವಿದ್ಯಾಲಯ ಒಂದು ಸಂಶೋಧನೆ ನಡೆಸಿದೆ.ಅದರ ಪ್ರಕಾರ ಸಂಸ್ಕೃತ ಕಲಿಕೆಯಿಂದ ಇಂಗ್ಲಿಷ್ ಕಲಿಕೆ ಸುಲಭವಾಗುತ್ತದೆ, ಮಾತಿನ ಪ್ರಕ್ರಿಯೆ,ಪದಗಳ ಉಚ್ಛಾರ ಮತ್ತು ಅರ್ಥಮಾಡುಕೊಳ್ಳುವಿಕೆಯ ಬಗ್ಗೆ ಸಂಸ್ಕೃತ ಮೂಡಿಸುವ ಎಚ್ವರವೆ ಇದಕ್ಕೆ ಕಾರಣ ಎಂಬುದನ್ನು ಈ ಸಂಶೋಧನೆ
ತಿಳಿಸಿದೆ ಇಂಥದೇ ಸಂಶೋದನೆಗಳನ್ನು ಅಧಾರವಾಗಿಟ್ಟುಕೊಂಡು ಲಂಡನಿನ ಸೇಂಟ್ ಜೇಮ್ಸ್ ಶಾಲೆ ಸಂಸ್ಕೃತ ಕಲಿಕೆಯನ್ನು 11ರ ವಯಸ್ಸಿನಲ್ಲಿ ಕಡ್ಡಾಯವಾಗಿ ಅಳವಡಿಸಿದೆ
7) ಅಮರ ಸಿಂಹ ರಚಿಸಿರುವ ಅಮರಕೋಶ ಒಂದು ಅದ್ಬುತ, ಬಾಯಿಪಾಠ ಮಾಡಲು ಸಾಧ್ಯವಿರುವ ಮೌಖಿಕ ನಿಘಂಟು ಇದರ ಅಭ್ಯಾಸ ಸಹಜವಾಗಿ ನಮ್ಮ ಶಬ್ದಕೋಶವನ್ನು ಹೆಚ್ಚಿಸುತ್ತದೆ, ಬೇರೆ ಬೇರೆ ರೀತಿಯಲ್ಲಿ ಯೋಚಿಸುವ ಸೃಜನಶೀಲತೆಯನ್ನು ಪ್ರಚೋದಿಸುತ್ತದೆ
8)ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಅಗತ್ಯವಾಗಿ ಬೇಕಿರುವ ನೆನಪಿನ ಶಕ್ತಿ, ಕಂಪ್ಯೂಟರ್ ಜ್ಞಾನ,ಪುಸ್ತಕವಿಲ್ಲದೆ ಹುಡುಕುವ ಪ್ರವೃತ್ತಿ ಇವುಗಳಿಗೆ ಸಂಸ್ಕೃತ ಕಲಿಕೆ ಬೇಕೆ ಬೇಕು, ಸಂಸ್ಕೃತ ಕಲಿತರೆ ಸಂಸ್ಕೃತಿಯನ್ನು ಉಳಿಸುತ್ತದೆ ಎನ್ನುವುದಕ್ಕಿಂತ ನಮ್ಮ ವ್ಯಕ್ತಿತ್ವವನ್ನು ಸ್ವಸ್ಥವಾಗಿಸುತ್ತದೆ ಬೆಳೆಸುತ್ತದೆ, ಜೀವನದ ಗುಣಮಟ್ಟವನ್ನು ಏರಿಸುತ್ತದೆ,
ನಿಮಗೆ ಸಂಸ್ಕೃತ ಕಲಿಯುವುದಕ್ಕೆ ಇಷ್ಟ ಇಲ್ಲ ಎಂದರೆ ಪರವಾಗಿಲ್ಲ.ಅದರೆ ಕಲಿಯುವುದಕ್ಕೆ ಇಷ್ಟ ಇದ್ದು ಅದರಿಂದ ಏನು ಪ್ರಯೋಜ ಇಲ್ಲ ಎಂದು ಹಿಂದೆ ಸರಿಯಾಬೇಡಿ ಬೇರೆಯವರು ಸಂಸ್ಕೃತವನ್ನು ಕಲಿಯುವ ಆಸಕ್ತಿ ತೋರಿಸಿದರು, ನೀವು ಆದನ್ನು ಕಲಿತು ಏನು ಮಾಡುತ್ತಿಯ? ಅದರಿಂದಾಗಿ ಏನು ಪ್ರಯೋಜನವಿಲ್ಲ ಎಂಬ ಮಾತುಗಳನ್ನು ಆಡಿ ಅವರ ದಾರಿ ತಪ್ಪಿಸುವ ಪ್ರಯತ್ನ ಮಾಡಬೇಡಿ
ಅದರಿಂದ ನೀವು ಕಳೆದುಕೊಳ್ಳುವುದಿಲ್ಲಏನು ಇಲ್ಲ ಪಡೆಯುವವರೆ ಕಳೆದುಕೊಳ್ಳುತ್ತಾರೆ
ಅನ್ಯರ ಮಾತಿಗೆ ಕಿವಿ ಕೊಡಬೇಡಿ ಸಂಸ್ಕೃತ ಕಲಿಯುವ ಆಸಕ್ತಿ ನಿಮಗೆ ಇದ್ದಾರೆ ಕಲಿಯಿರಿ,ನಿಮ್ಮ ಬೌದ್ಧಿಕ ಸಂಪತ್ತನ್ನು ವೃದಿಸಿಕೊಳ್ಳಿ
0 Followers
0 Following