ವೃದ್ಧಾಶ್ರಮಗಳ ಅಗತ್ಯವೇನಿದೆ......?

ಮಗುವಿನ ಜೀವದ ಕರುಳಿನ ಬಳ್ಳಿ ತಾಯೀ ಅಲ್ವ..

ProfileImg
18 Mar '24
4 min read


image

ಈ ಸೃಷ್ಟಿಗೆ ತಂದೆ ತಾಯಿ ಬೇಕು ಮುಖ್ಯವಾಗಿ ತಾಯಿ. ತಾಯಿ ಇಲ್ಲದ ಇರೋ ಯಾವ ಜೀವಿಗಳು ಇಲ್ಲ ಅದರಲ್ಲಿ ಮುಖ್ಯವಾಗಿ ಬರುವಂತಹದ್ದು ಮನುಷ್ಯ ಜೀವಿಯಲ್ಲಿ ಭಗವಂತ ಸೃಷ್ಟಿಸಿರುವಂತಹ ಈ ಜೀವ 2000 ಅವಧಿಯಲ್ಲಿ ಬಂದಂತಹ ಮಕ್ಕಳು ಯಾಕೆ ತಂದೆ ತಾಯಿಯನ್ನ ಹೊರಗಟ್ಟಬೇಕು ನಿಜವಾದ ಹೇಳಿಕೆ ಏನು ಅಂದ್ರೆ ತಾಯಿ ಇಲ್ಲದೆ ಏನೂ ಇಲ್ಲ ಅನ್ನೋದು ಮನುಷ್ಯನಿಗೆ ಗೊತ್ತು ಆದ್ರೂ ತನ್ನ ಅಹಂ ಭಾವನೆಯಿಂದ ತನ್ನ ಪತ್ನಿಯ ಉಪಾಯದ ಮಾತುಗಳಿಂದ ಹಾಗೂ ಅವನ ಅಭಿವೃದ್ಧಿ ವ್ಯವಹಾರಿಕ ಚಿಂತನೆಗಳಿಂದ ಅವನು ನಿಲ್ಲೋದಕ್ಕೆ ಕಾರಣವಾದವರು ತಂದೆ ತಾಯಿಯನ್ನೇ ವೃದ್ಧಾಶ್ರಮಕ್ಕೆ ಸೇರಿಸುವಂತಹ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ ಹಿಂದೆ ತನ್ನ ತಾಯಿಯೂ ಸಹ ತನ್ನ ಮಗನನ್ನ ಬೇಡ ಎಂದು  ಹೊರಗಡೆ ಹಾಕೋಣ ಎಂದಿದ್ದರೆ ಇಂದು ಮಗ ಎತ್ತರಕ್ಕೆ ಬೆಳೆಯಲಿಕ್ಕೆ ಸಾಧ್ಯ ಆಗ್ತಿತ್ತ. ಯಾಕಂದ್ರೆ ತಾನು ಮಾಡೋದು ಕರ್ಮ ಆಗ್ತಾನೆ ಇದೆ ಯಾಕಂದ್ರೆ ಮನುಷ್ಯ ತಾನು ಮಾಡಿದ ಕರ್ಮ ವ್ಯಕ್ತಿಗಳು ಮರೆತಿದ್ದರು, ಕರ್ಮ ಅದರ ಕೆಲಸವನ್ನು ಮರೆಯೋಲ್ಲ ಮುಂದೊಂದು ದಿನ ಅದೇ ಕರ್ಮಕ್ಕೆ ನಾವು ಬೀಳ್ತಿವಿ. ತಾಯಿಯನ್ನ ದೇವರು ಅಂತ ಕರೀತಿವಿ ದೇವರಿಗೆ ದೇವರು ಅಂತಾನು ಸಹ ಕರೀತೀವಿ ನಿಜವಾದ ಸತ್ಯ ಏನು ಅಂದ್ರೆ ಸಹನೆ ತಾಳ್ಮೆ ಪರಿತ್ಯಾಗಕ್ಕೆ ಒಂದು ಸಾಕ್ಷಿ ಅಂದ್ರೆ ಅದು ನಿಜವಾದ ತಾಯಿ ಅವಳ ಎಷ್ಟೇ ಕಷ್ಟಗಳನ್ನ ಗೆದ್ದು ಬರ್ತಾಳೆ ನೋವು ಎಷ್ಟೇ ಇದ್ರೂ ತನ್ನ ಮಕ್ಕಳಿಗೆ ಹೇಳದೆ ಇರ್ತಾಳೆ ತಂದೆನೂ ಸಹ ಅಷ್ಟೇ ಪ್ರಪಂಚಕ್ಕ ತಂದುಬಿಟ್ಟೆದೆ ತಂದೆ, ಆ ಪುಣ್ಯಾತ್ಮನನ್ನ ಇಂದು ಸ್ಮರಿಸದೆ ಬಿಟ್ಟುಬಿಡೋದು ಎಷ್ಟು ಸರಿ ಮದುವೆ ಆದ ನಂತರ ಶತ್ರುಗಳಾಗ್ಬಿಡ್ತಾರ ನಿಜವಾದ ತಪ್ಪು ತನ್ನ ತಾಯಿಯಲ್ಲಿದ್ಯೋ ತನ್ನ ಹೆಂಡತಿಯಲ್ಲಿದ್ಯೋ ಅವನು ಅರ್ಥ ಮಾಡಿಕೊಳ್ಳದೇ ಯಾವುದೇ ತಪ್ಪುಗಳನ್ನ ಅರ್ಥ ಮಾಡಿಕೊಳ್ಳದೆ ವೃದ್ಧಾಶ್ರಮಕ್ಕೆ ಸೇರಿಸುವಂತಹ ಮಕ್ಕಳಿದ್ದಾರೆ, ಇನ್ನೂ ಕೆಲವು ಮಕ್ಕಳು ವ್ಯವಹಾರಿಕವಾಗಿ ಮುಂದುವರುದು ತುಂಬಾ ಎತ್ತರಕ್ಕೆ ಬೆಳೆದು ತನ್ನ ತಂದೆ ತಾಯಿಗಳನ್ನ ಸಾಕಲಾಗದಷ್ಟು ಎತ್ತರಕ್ಕೆ ಬೆಳೆದು ವೃದ್ಧಾಶ್ರಮಕ್ಕೆ ಸೇರಿಸುವಂಥವರು ಇದ್ದಾರೆ ಇನ್ನೂ ಕೆಲವರು ಮೂರು ನಾಲ್ಕು ಜನ ಗಂಡು ಮಕ್ಕಳಿದ್ದರೂ ತಂದೆ ತಾಯಿಯನ್ನು ನೋಡಿಕೊಳ್ಳದೆ ಇದ್ದು ಆಸ್ತಿ ಅಂತಸ್ತಿಗಾಗಿ ನೋಡಿಕೊಳ್ಳುವವರು ಇದ್ದಾರೆ ಅದೆಲ್ಲ ಅವರ ಕರ್ಮ ಎಂತಹ ಮಕ್ಕಳಾದರೂ ಸರಿ ಮುಂದೊಂದು ದಿನ ಅದರ ಕರ್ಮದ ಅನುಭವ ಅವರಿಗೂ ಸಹ ಆಗಲೇಬೇಕಆಗಲೇಬೇಕು.

ಕರ್ಮ ಅವರಿಗೆ ಮಾತ್ರನಾ ನಿಜವಾದ ಕರ್ಮ ಇನ್ನೂ ಇದೆ ಕರ್ಮ ಇಂದು ಅವರಿಗೆ ನೀಡುತ್ತಿರುವಂತಹ ನೋವು ಒಂದು ಭಾಗ ಅದರ 10 ಭಾಗ ಮುಂದೊಮ್ಮೆ ನಾವು ತಿನ್ನಬೇಕು ಯಾಕಂದ್ರೆ ಕರ್ಮ ಒಮ್ಮೆಯ ಒಬ್ಬರ ನೋವಿನ ಅನಭವ ನೋವನ್ನು ಇಟ್ಟವನಿಗೆ ಅದರ 10 ಪಟ್ಟು ನೋವನ್ನು ಕೊಡುವುದೇ ಅದರ ಉದ್ದೇಶ ಅದಕ್ಕಾಗಿ ಮನುಷ್ಯ ತಾನು ಮಾಡಿದ ಕರ್ಮ ಅನುಭವಿಸಲೇಬೇಕು. ಇದರದಲ್ಲೇ ಒಂದು ಮುಖ್ಯವಾದ ಅಂತಹ ಕಥೆ ಏನಿದೆ ಅಂದ್ರೆ ಉದಾಹರಣೆಗೆ ಇದು ನಿಜವಾದಂತಹ ಕಥೆ ಹೀಗೆ ಒಬ್ಬ ಮಗ ತುಂಬಾ ಎತ್ತರಕ್ಕೆ ಬೆಳೆದು ಗಂಡನನ್ನು ಕಳೆದುಕೊಂಡಿರತಕ್ಕಂತಹ ತಾಯಿ ಆ ತಾಯಿಯನ್ನು ತನ್ನ ಹೆಂಡತಿಯ ಮಾತನ್ನ ಕೇಳಿ ಅವನ ತಾಯಿಯನ್ನ ವೃದ್ಧಾಶ್ರಮಕ್ಕೆ ಸೇರಿಸ್ತಾನೆ. ವೃದ್ಧಾಶ್ರಮಕ್ಕೆ ಸೇರಿ ಹಲವು ದಿನಗಳು ಕಳೆದ ನಂತರ ಆ ತಾಯಿ ವೃದ್ಧಾಶ್ರಮದ ಕಡೆಯಿಂದ ತನ್ನ ಮಗನಿಗೆ ಕರೆ ಮಾಡಿಸ್ತಾರೆ ಮಾಡಿಸಿ ಕೂಡಲೇ ನೀನು ವೃದ್ಧಾಶ್ರಮಕ್ಕೆ ಬರಲೇಬೇಕು ಅಂತ ವೃದ್ದಾಶ್ರಮದ ಸಿಬ್ಬಂದಿ ಕಡೆಯಿಂದ ಕರೆ ಮಾಡಿಸಿ ಹೇಳಿಸಿ ಕರೆಸಿಕೊಳ್ಳುತ್ತಾರೆ. ಮಗ ಬರುತ್ತಾನೆ ಆ ತಾಯಿಗೆ ಮಗ ಕೇಳ್ತಾನೆ, ಯಾಕಮ್ಮ ನನ್ನನ್ನು ಬರುವುದಕ್ಕೆ ಹೇಳಿದೆ ಅಂತ ಕೇಳ್ತಾನೆ ಆ ತಾಯಿ ಕಣ್ಣಿಂದ ನೀರು ಬರುತ್ತೆ ಅವರು ವೃದ್ಧಾಶ್ರಮದಲ್ಲಿ ಇದ್ದಾರೆ ಅಂತ ಅಲ್ಲ , ಮಗ ಕೇಳುತ್ತಾನೆ ಯಾಕಮ್ಮ ಕಣ್ಣಲ್ಲಿ ನೀರು ನಿನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತ ಕೇಳುತ್ತಾನೆ ಅದಕ್ಕೆ ತಾಯಿ ಹೇಳ್ತಾರೆ ನನಗೇನು ಸಮಸ್ಯೆ ಆಗ್ತಿಲ್ಲ ಒಂದಷ್ಟು ಜನಕ್ಕೆ ಆರೋಗ್ಯದ ಸಮಸ್ಯೆ ಆಗ್ತಾಯಿದೆ ಆ ಸಮಸ್ಯೆಗಳು ಏನು ಅಂದ್ರೆ ಇಲ್ಲಿ ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ,ಇಲ್ಲಿ ಹಣ್ಣು ತರಕಾರಿಗಳನ್ನ ಇಡುವುದಕ್ಕೆ ಒಂದು ರೆಫ್ರಿಜರೇಟರ್ ಬೇಕಾಗಿದೆ, ಹಾಗೂ ಮಲಗಲು ಬೆಡ್ ಬೇಕಾಗಿದೆ , ತಂಪಾದ ಗಾಳಿಗಾಗಿ ಫ್ಯಾನ್ ಗಳ ಅಗತ್ಯ ಇದೆ ಇಷ್ಟೆಲ್ಲ ಯಾಕ್ ಹೇಳ್ದೆ ಅಂದ್ರೆ ಮುಂದೆ ನನ್ನ ಹಾಗೆ ನೀನು ವೃದ್ದಾಶ್ರಮಕ್ಕೆ ಬಂದಾಗ ನಿನಗೆ ಇದೆಲ್ಲ ಇಲ್ಲದೆ ನಿನಗೆ ಸಮಸ್ಯೆ ಆಗುತ್ತೆ ನನಗೆ ತುಂಬಾ ನೋವಾಗುತ್ತೆ ಅದಕ್ಕಾಗಿ ನಾನು ಇದರ ಎಲ್ಲಾ ವ್ಯವಸ್ಥೆಯನ್ನು ನೀನೆ ಮಾಡಿಸು ಅಂತ ಕೇಳಿಕೊಳ್ಳುತ್ತೇನೆ ಅಂತ ತಾಯಿ ಹೇಳ್ತಾರೆ……. ಮಗನಿಗೆ ತುಂಬಾ ದುಃಖ ಆಗುತ್ತೆ .ಇದೆ ನಿಜವಾದ ಕರ್ಮ

ನಿಜವಾದ ಕರ್ಮದ ಅನುಭವ ತುಂಬಾ ನೋವನ್ನು ನೀಡುತ್ತದೆ ತಂದೆ-ತಾಯಿ ನೋಡಿಕೊಳ್ಳುವುದು ನಮ್ಮ ಕರ್ತವ್ಯ ಅದು ಎಂದಿಗೂ ಹೊರೆಯಾಗುವುದಿಲ್ಲ ತಾವು ಇಷ್ಟೆಲ್ಲ ಜೀವನದ ಉದ್ದಾರಕ್ಕೆ ಕಾರಣ ಅವರು ಅವರನ್ನೇ ಮರೆತರೆ ದೇವರು ನಮ್ಮನ್ನು ಮರೆಯುತ್ತಾನೆ. ಅದಕ್ಕಾಗಿ ಎಲ್ಲಾ ತಂದೆ ತಾಯಿಯರನ್ನು ತುಂಬಾ ಉತ್ತಮವಾಗಿ ನೋಡಿಕೊಳ್ಳುವುದು ಅವರ ಸೇವೆ ಮಾಡುವುದು ಮನುಷ್ಯ ಜೀವನದಲ್ಲಿ ತುಂಬಾ ಪುಣ್ಯ ಸಂಪಾದನೆ ಮಾಡುವ ಕೆಲಸ ಜೀವನದಲ್ಲಿ ಕೆಲವು ಅಂತಹ ಸಮಸ್ಯೆಗಳು ಬರುವುದು ಸಹಜ ಸಂಸಾರದಲ್ಲಿ ಅತ್ತೆ ಸೊಸೆ ಜಗಳ ಇಂದಿಗೆ ಮಾತ್ರ ಅಲ್ಲ ಹಿಂದಿನಿಂದಲೂ ಬಂದಿದೆ ಅದನ್ನು ಸರಿಪಡಿಸಿಕೊಂಡುಸರಿಪಡಿಸಿಕೊಂಡು ಹೋಗುವುದೇ ಉತ್ತಮ ಜೀವನ ಅಂದುಕೊಂಡ ಹಾಗೆಯೇ ಬದುಕುವುದು ತುಂಬಾ ಕಷ್ಟ ಅನುಸರಿಸಿಕೊಂಡು ಹೋಗುವುದು ನಿಜವಾದ ಜೀವನ. ಮನುಷ್ಯ ತನ್ನ ಕರ್ಮಗಳಿಂದ ಮುಕ್ತಿ ಹೊಂದಬೇಕಾದರೆ ತನ್ನ ತಂದೆ ತಾಯಿಗಳನ್ನು ತುಂಬಾ ಸುಖವಾಗಿ ನೋಡಿಕೊಳ್ಳಬೇಕು ಹಾಗೆಯೇ ತನ್ನ ಜೀವನದ ಕೊನೆಯ ಕರ್ಮವೂ ಇದೆ ಆಗಿರುತ್ತದೆ ಮುಂದೆ ಬರುವ ಸಮಸ್ಯೆಯನ್ನು ಇಂದೆ ಪರಿಹರಿಸಿಕೊಳ್ಳುವುದು ತುಂಬಾ ಉತ್ತಮ………  ಆದಷ್ಟು ಬೇಗ ಸರ್ಕಾರವು ಸಹ ವೃದ್ಧಾಶ್ರಮಗಳ ಜೊತೆಯಲ್ಲಿ ನಿಂತು ತಮ್ಮ ಮಕ್ಕಳು ತನ್ನ ತಂದೆ-ತಾಯಿಗಳನ್ನು ನೋಡಿಕೊಳ್ಳದೆ ಹೋದರೆ ಅವರಿಗೆ ಕಾನೂನಿನ ರೀತಿಯಲ್ಲಿ ಶಿಕ್ಷಿಸಬೇಕು ಈ ಶಿಕ್ಷೆಯಿಂದ ಮಾನದಂಡಗಳು ವಿಧಿಸಬೇಕು ಹಾಗೂ ಯಾವುದೇ ಮೋಸದಿಂದ ಆಸ್ತಿ ಅಂತಸ್ತುಗಳನ್ನ ಹೆಸರಿಗೆ ಮಾಡಿಸಿಕೊಂಡಿದ್ದರೆ ಆ ಆಸ್ತಿಪಾಸ್ತಿಗಳನ್ನ ಮತ್ತೆ ತನ್ನ ತಂದೆ ತಾಯಿ ಹೆಸರಿಗೆ ಸರ್ಕಾರವೇ ಮಾಡಿಸುವಂತದ್ದು ಮುಂದೆ ಯಾರು ಅವರನ್ನು ನೋಡಿಕೊಳ್ಳುತ್ತಾರೋ ಅವರಿಗೆ ಅವರ ಎಲ್ಲಾ ಆಸ್ತಿಗಳನ್ನು ನೀಡುವಂತದ್ದು ವೃದ್ಧಾಶ್ರಮಗಳ ಕಡಿಮೆ ಆಗುವಂತೆ ಮಾಡಬೇಕು ಅದೆಲ್ಲವೂ ನಮ್ಮೆಲ್ಲರ ಹೊಣ.ನಾವು ಅತಿ ಪುಣ್ಯ ಸಂಪಾದನೆಗಾಗಿ ಇಲ್ಲಿ ಮನುಷ್ಯ ಜನ್ಮವನ್ನು ಪಡೆದುಕೊಂಡಿದ್ದೇವೆ ಇದರಿಂದ ನಾವು ಧನ್ಯರಾಗಬೇಕು ವಿನಹ ಪಾಪಿಗಳಲ್ಲ ಗರುಡ ಪುರಾಣದಲ್ಲಿ ತಂದೆ ತಾಯಿಗಳನ್ನು ನೋಡಿಕೊಳ್ಳದೆ ಹೋದರೆ ಅದರ ಪಾಪದ ಉಲ್ಲೇಖವು ಇದೆ ಈ ಅನುಭವ ಯಾರಿಗೂ ಬೇಡವಾದರೆ ಎಲ್ಲರೂ ಚೆನ್ನಾಗಿ ನೋಡಿಕೊಳ್ಳಬೇಕು ಅದು ನಮ್ಮ ಧರ್ಮ .

Category:Relationships



ProfileImg

Written by Chandan G A

ಕೃಷ್ಣನ್ ವಂದೇ ಜಗದ್ಗುರು