ಆಧ್ಯಾತ್ಮ ಎಂದರೇನು ?

ProfileImg
28 Feb '24
11 min read


image

ಆಧ್ಯಾತ್ಮ ಎಂದರೆ..      
ಆಧ್ಯಾತ್ಮವು ಕಲ್ಪನೆಯಲ್ಲ, ಹಗಲುಗನಸಿನಂತೆ ರೂಪಿಸಿಕೊಂಡ ತತ್ವ ಸಿದ್ದಾಂತವಲ್ಲ, ಮೂಢನಂಬಿಕೆಯಲ್ಲ, ಭ್ರಮೆಯಲ್ಲ, ಮಾನಸಿಕ ರೋಗವಲ್ಲ. ಅಂತೆಯೇ ಆಧ್ಯಾತ್ಮ ಎಂದರೆ ಪುರಾಣದೇವತೆಗಳ ಪುಣ್ಯಕತೆ, ಕಟ್ಟು ಕತೆಗಳಲ್ಲ. ಕಲ್ಪನೆಯ ದೇವರುಗಳನ್ನು,  ಪ್ರತಿಮೆಗಳನ್ನು ಪೂಜಿಸುವುದರಿಂದ ಆಧ್ಯಾತ್ಮ ಬರುವುದಿಲ್ಲ. ಗುಡಿ, ಮಸೀದಿ, ಮಂದಿರ, ದರ್ಗಾ, ಚರ್ಚುಗಳಲ್ಲಿ ಹುಡುಕಾಡಿದರೆ ಆಧ್ಯಾತ್ಮ ಸಿಗುವುದಿಲ್ಲ. ಪವಾಡ ಪುರುಷರು, ಸಂನ್ಯಾಸಿಗಳು, ಯೋಗಿಗಳು ಯಾಗಿಗಳು, ಗುರುಗಳು ಮುಂತಾದವರ ಸತ್ಸಂಗದಿAದ ಬರುವ ಸಹವಾಸದೋಷವಲ್ಲ. ಇದು ನಾರು, ಬೇರು, ಯಂತ್ರ, ಮಂತ್ರ, ತಂತ್ರ, ಜೋತಿಷ್ಯ, ಸಾಮುದ್ರಿಕೆ, ಶಾಸ್ತç ಕಣಿ ಮುಂತಾದವುಗಳಿಗೆ ಸಂಬAಧಿಸಿಲ್ಲ. ಇದು ಆಚಾರ, ವಿಚಾರ, ಕಂದಾಚಾರ, ವ್ರತ, ಕಟ್ಟು- ಕಟ್ಟಳೆ, ಪದ್ದತಿಗಳ ಅಭ್ಯಾಸವಲ್ಲ. ವೇದ, ಆಗಮ , ನಿಗಮ, ಪುರಾಣ , ಶಾಸ್ತçಗಳನ್ನು, ತತ್ವ ಸಿದ್ದಾಂತಗಳನ್ನು ಓದುವುದರಿಂದ, ಗೀತೆ, ಸಾಹಿತ್ಯ, ಸಂಗೀತ, ನೃತ್ಯ ಮುಂತಾದ ಕಲಾ ಪ್ರಕಾರಗಳನ್ನು ಕಲಿಯುವುದರಿಂದ ಆಧ್ಯಾತ್ಮ ತಿಳಿಯಲಾಗುವುದಿಲ್ಲ. ವಿವಿಧ ಪದ್ದತಿಗಳಿಂದ, ಕಟ್ಟು ಕಟ್ಟಳೆಗಳ ಆಚರಣೆಯಿಂದ ಇದನ್ನು ಕಲಿಯಲಾಗುವುದಿಲ್ಲ. 
ಆಧ್ಯಾತ್ಮವು ಸೋಮಾರಿಗಳ ತತ್ವ ಸಿದ್ದಾಂತವಲ್ಲ. ಸಮಾಜದಲ್ಲಿ ಒಂದು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲಾಗದ ಕೈಲಾಗದವರು ಹೇಳುವ ಕರ್ಮ ಸಿದ್ದಾಂತವಲ್ಲ. ಕೊರಗುವ ಅಸಹಾಯಕರ ಜೀವನಪರ್ಯಂತ ಕೆಟ್ಟ ಕೆಲಸಗಳನ್ನು ಮಾಡಿ ನಂತರ ವೃದ್ದಾಪ್ಯದಲ್ಲಿ ಆ ಎಲ್ಲಾ ತಪ್ಪುಗಳಿಗೆ ಪಡುವ ಪಶ್ಚಾತ್ತಾಪ ಆಧ್ಯಾತ್ಮವಲ್ಲ. ಸೋತವರ, ದುಃಖಿಗಳ, ಕೊರಗುವ ಅಸಹಾಯಕರ ಸುಳ್ಳು ಸಮಾಧಾನಗಳಿಗೆ ಇದು ಉತ್ತರವಲ್ಲ. 


ಆಧ್ಯಾತ್ಮ ಎಂದರೆ ದೇವರಲ್ಲ, ಇದು ದೈವತ್ವ. ಇದು ಪ್ರತಿಯೊಂದು ಜೀವಿಗಳ ಜೊತೆಯಲ್ಲಿಯೇ ಬರುವ ಹುದುಗಿರುವ ಒಂದು ಅಪರೂಪದ ಆಯಾಮ, ಅದ್ವಿತೀಯ ವಿದ್ಯೆ. ಪಶು ಸಮಾನನಾಗಿ ಹುಟ್ಟಿದ ಹುಲು ಮಾನವ ತನ್ನೊಳಗೆ ಅಡಗಿರುವ ಆತ್ಮವನ್ನು ಕಂಡುಕೊAಡು ಆ ಆತ್ಮಶಕ್ತಿಯ ಸಹಾಯದಿಂದ ಈ ಸೃಷ್ಡಿಯ ಅಪರಿಮಿತ ಶಕ್ತಿಯಾದ ಪರವi-ಆತ್ಮನನ್ನು ಅರಿತುಕೊಳ್ಳುವ ಒಂದು ಅಧ್ಬುತ ವಿದೈ. ನಮ್ಮ ಮನೋಶಕ್ತಿಯನ್ನು, ಬುದ್ದಿಶಕ್ತಿಯನ್ನು, ಭಾವನಾಶಕ್ತಿಯನ್ನು ಪಂಚೇAದ್ರಿಯಗಳ ಶಕ್ತಿಗಳನ್ನು  ಮೂರ್ತದಿಂದ ಅಮೂರ್ತತೆಗೆ, ಆರ್ಥಿಕತೆಯಿಂದ- ಪಾರಮಾರ್ಥಿಕತೆಗೆ, ಅವಿದ್ಯೆಯಿಂದ ವಿದ್ಯೆಗೆ, ಭೌತಿಕತೆಯಿಂದ-ಆಧಿಭೌತಿಕತೆಗೆ, ಕರೆದೊಯ್ಯುವ ಒಂದು ಮಾರ್ಗ. ರಾಗ, ದ್ವೇಷ, ಲೋಭ, ಮೋಹ, ಮದ, ಮತ್ಸರ ಮೊದಲಾದ ವಿಕಾರಗಳಿಂದ ಬಳಲುವ, ಸಂತೋಷ/ ದುಃಖ, ಜನನ /ಮರಣ, ಆದಿ /ಅಂತ್ಯ, ಭೂತ/ಭವಿಷ್ಯ ಹೀಗೆ ಅನೇಕ ದ್ವಂದ್ವಗಳನ್ನು ಹೊಂದುವ ನಮ್ಮ ಮನಸ್ಸು ನಿರ್ವಿಕಾರಿಯಾಗಿ ಸರ್ವಜ್ಞತೆಯನ್ನು , ಸರ್ವಶಕ್ತತೆಯನ್ನು, ಸರ್ವ ಸಂಚರಣತೆಯನ್ನು ಪಡೆದು ಅಂತಿಮವಾಗಿ ಈ ಪರಮ ಸೃಷ್ಟಿಯಲ್ಲಿಯ ದೈವೀಕತೆಯೇ ತಾನಾಗಿ ಅನಂತವಾಗಿ, ಅಚಿಂತ್ಯವಾಗಿ ಆನಂದದಿದ ಮೆರೆವ ಅಮೋಘವಾದ ರಹಸ್ಯ. 


ಆಧ್ಯಾತ್ಮವು ಈ ಸೃಷ್ಟಿಯ ಪರಮ ಸತ್ಯವನ್ನು ಕಂಡುಕೊಳ್ಳಲು ನಡೆಸುವ ಆತ್ಮದ ಅವಿಚ್ಚಿನ್ನ ಹೋರಾಟಕ್ಕೆ ಪೂರಕವಾಗಿ ಸಿಗುವ ಅತೀತ ಶಕ್ತಿಗಳನ್ನು, ಪರಿಪೂರ್ಣತೆಯನ್ನು ಸಾಧಿಸುವ ಸಾಧನಾ ಪ್ರಕ್ರಿಯೆ. (ಆಧಿ- ಆತ್ಮ)- ಆಧ್ಯಾತ್ಮ: ನಮ್ಮ ಆತ್ಮಕ್ಕೆ ಸಂಬAಧಿಸಿದ್ದು. ನಾವು ನಮ್ಮ ಆತ್ಮ ಬಲವನ್ನು ಹೆಚ್ಚಿಸಿಕೊಳ್ಳಲು ಮಾಡುವ ಪ್ರಕ್ರಿಯೆಯೇ ಆಧ್ಯಾತ್ಮ. ಪ್ರತ್ಯಕ್ಷವಾಗಿ ಪರೋಕ್ಷವಾಗಿ ನಮ್ಮ ಆತ್ಮಬಲವನ್ನು ಹೆಚ್ಚಿಸುವ, ನಮ್ಮ ದೇಹಶಕ್ತಿ ಹಾಗು ಬುದ್ದಿ, ಭಾವನೆ, ವಿಚಾರ, ಕಲ್ಪನೆ, ಮುಂತಾದ ಮನೋಶಕ್ತಿಗಳನ್ನು  ಆತ್ಮಶಕ್ತಿಯನ್ನಾಗಿ ಬದಲಾಯಿಸುವ ಎಲ್ಲಾ ವಿದ್ಯೆಗಳು ಆಧ್ಯಾತ್ಮ ವಿದ್ಯೆಗಳೇ. ಹೀಗೆ ನಿರಂತರ ಆತ್ಮಶಕ್ತಿಯನ್ನು ಪಡೆದುಕೊಳ್ಳುತ್ತಾ ಹೆಚ್ಚಿಸಿಕೊಳ್ಳತ್ತಾ ಜೀವಿಸುವುದೇ ಆಧ್ಯಾತ್ಮ ಜೀವನ, ಹಾಗೆ ಜೀವಿಸುವವನೇ ಆಧ್ಯಾತ್ಮ ಜೀವಿ. 


ನಮ್ಮ ಮನಸ್ಸು ನಿನ್ನೆಗಿಂತ ಇಂದು , ಇಂದಿಗಿAತ ನಾಳೆ ತನ್ನ ದುಗುಡ, ದುಃಖ ದುಮ್ಮಾನಗಳನ್ನು ಕಳೆದುಕೊಳ್ಳುತ್ತಾ ಆನಂದವನ್ನು ಅನುಭವಿಸುತ್ತಾ ಕ್ಷರದಿಂದ ಅಕ್ಷರದೆಡೆಗೆ, ಅವಿದ್ಯೆಯಿಂದ ವಿದ್ಯೆಯ ಕಡೆಗೆ, ಅಸತ್ಯದಿಂದ ಸತ್ಯದೆಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ಆತ್ಮನಿಂದ ಪರಮಾತ್ಮನ ಕಡೆಗೆ ಸಾಗಿದರೆ ಆ ಸಾಧನೆಯೇ ಆಧ್ಯಾತ್ಮ ಸಾಧನೆ. 


ಆಧ್ಯಾತ್ಮ ಸುಲಭವಾದ ಸಾಧನೆಯಲ್ಲ, ಸಾಧನೆಗೆ ಪ್ರಥಮ ಸೋಪಾನಗಳಾದ ದೇಹ ಹಾಗು ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು, ಅದಕ್ಕೂ ಮೊದಲು ಬದುಕಿನಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. 
ಸಾಧಕನು ತನ್ನ ದೇಹದ ಇಷ್ಟ- ಕಷ್ಟ , ಶುಚಿ- ರುಚಿಗಳನ್ನು ಅರಿತುಕೊಳ್ಳುವ ಜಾಣನಾಗಬೇಕು. ಆ ಜಾಣತನಕ್ಕೆ ಅನೇಕ ಮಗ್ಗುಲುಗಳು, ಸೂಕ್ಷö್ಮತೆಗಳು ಇವೆ ಇವುಗಳನ್ನು ಅರಿಯುವುದೇ ಒಂದು ದೊಡ್ಡ ಪ್ರಯಾಸ, ಪ್ರವಾಸ.  
ಒಂದು ಕಡೆ ಸುಮ್ಮನೆ ಕೂರಲಾಗದವನು, ನಿಂತ ನೆಲದಲ್ಲಿ ನೆಲೆ ಕಂಡುಕೊಳ್ಳಲರಿಯದವನು,  ಏಕಾಂತವನ್ನು ಬಯಸದವನು, ಗುಂಪಿನಲ್ಲಿರಲಿ ಅಥವಾ ಒಂಟಿಯಾಗರಲಿ ಸಂತೋಷವಾಗಿರದವನು, ತಾನು ಕ್ಯೆಗೊಂಡ ಕೆಲಸವನ್ನು ತಾನೇ ನಿಭಾಯಿಸಲಾಗದೆ ಅರ್ಧದಲ್ಲಿಯೇ ಕೈಬಿಡುವವನಿಗೆ ಆಧ್ಯಾತ್ಮ ನಿಲುಕದ ದಾರಿ.  ತನ್ನ ದೇಹಭಾರದ ಅರ್ಧದಷ್ಟಾದರೂ ಭಾರದ ಮೂಟಿಗಳನ್ನು ಹೊರಲಾಗದವನು. ಮಧುರ ನೋಟ, ಉತ್ತಮ ದನಿ, ಸ್ಪರ್ಷ ಹಾಗು ಸೂಕ್ಷ ಸಂವೇದನೆಗಳ ಅರಿವಿಲ್ಲದವನು. ಪಂಚೇದ್ರಿಯಗಳನ್ನು  ಶುದ್ದವಾಗಿಟ್ಟುಕೊಳ್ಳಲಾಗದೆ ಮೈಕಾಂತಿ ಕಳೆದುಕೊಂಡವನು. ಅತಿಯಾಗಿ ಮಲಗುವವನು, ನಿದ್ರೆಯೇ ಬಾರದೆ ರಾತ್ರಿಯಿಡೀ ಹೊರಳಾಡುವವನು. ಹೊತ್ತಲ್ಲದ ಹೊತ್ತಿನಲ್ಲಿ ಮಲಗುವವನು. ತನ್ನ ನಾಲಗೆಯ ಚಪಲವೇ ಮುಖ್ಯವೆಂದು ಅತಿಯಾದ ಉಪ್ಪು, ಹುಳಿ, ಖಾರ ಚಪ್ಪರಿಸುವವನು. ಸಿಕ್ಕಿದ್ದನ್ನೆಲ್ಲಾ ತಿಂದು ಅಗತ್ಯಕ್ಕಿಂತ ಹೆಚ್ಚಿನ ದೇಹ ಭಾರ ಹೊಂದಿ ಭೂಮಿಗೇ ಭಾರವಾಗಿ ತಿರುಗಾಡುವವನು. ಅನೇಕ ದಿನಗಳಿಂದ ಒಳ್ಳೆಯ ಊಟವೇ ಸಿಗದೇ ಒದ್ದಾಡಿ ಒಣಕಲಾದವನು, ಬಳಲಿ ಬೆಂಡಾದವನು. ನೀರಿನ ರುಚಿ. ವಸ್ತುಗಳ ಬಣ್ಣ, ಗಾಳಿ, ಬೆಳಕು, ಬಿಸಿ ತಂಪುಗಳಲ್ಲಿ ಅಡಗಿರುವ ಸೂಕ್ಷö್ಮ ವ್ಯತ್ಯಾಸಗಳನು ತಿಳಿಯದವನು. ಬಿಸಿಲಿಗೆ ಹೆದರುವವನು, ತಂಗಾಳಿಗೆ ನಡುಗುವವನು, ಸುರಿವ ಮಳೆ ನೋಡಿ ಆನಂದಿಸದವನು. ಸೂರ್ಯೋದಯವನ್ನೇ ಕಾಣದವನು, ಸೂರ್ಯಾಸ್ತವನ್ನು ನೋಡುವ ವ್ಯವಧಾನವಿಲ್ಲದವನು. ತನ್ನ ದೇಹವಾಸನೆ ತನಗೇ ಅರ್ಥವಾಗದೆ ಅನೇಕ ದಿನಗಳಾದರೂ ಸ್ನಾನ ಮಾಡದವನು. ಕೊಳಕಾದವನು, ತನ್ನ ಹಾಗು ತನ್ನ ಸುತ್ತಮುತ್ತಲಿನ ಸ್ವಚ್ಚತೆಯ ಅರಿವಾಗದವನು. ತನ್ನ ದೇಹಕ್ಕೆ ನೀರು, ನೆರಳು, ಬಟ್ಟೆ, ಊಟ . ವಸತಿ ಒದಗಿಸಲಾಗದವನು ಆಧ್ಯಾತ್ಮಕ್ಕೆ ಒಗ್ಗುವುದಿಲ್ಲ.
ಕುಡಿತ, ಅಮಲು, ತೆವಲುಗಳಿಗೆ ತಲೆಕೆಡಿಸಿಕೊಂಡವನು. ಮಾಸಿದ ತಲೆಯವನು, ಯಾವುದಕ್ಕೂ ಯಾವ ಕೆಲಸಗಳಿಗೂ ಉಪಯೋಗಕ್ಕೆ ಬರದವನು, ತನ್ನ ಚಟಗಳಿಗಾಗಿ ರೋಗ ತಂದುಕೊAಡವನು ಆಧ್ಯಾತ್ಮಕ್ಕೆ ಅತಿ ದೂರವೇ ಉಳಿಯುತ್ತಾನೆ.ದೇಹಭಾವ ಅಳಿಯದೆ ಜೀವಭಾವವೆಂದಿಗೂ ಸಿಗುವುದಿಲ್ಲ. ಆದುದರಿಂದಲೇ ನಮ್ಮ ಪೂರ್ವಜರು ದೇಹವನ್ನು ಹಿಡಿತಕ್ಕೆ ಸಾಧಿಸುವ ಅನೇಕ ಪ್ರಕ್ರಿಯೆಗಳನ್ನು ಸಂಶೋಧಿಸಿ ಅವುಗಳನ್ನು ನಿಯಮಗಳನ್ನಾಗಿ ಮಾಡಿ “ಯೋಗಶಾಸ್ತç”ವೆಂದು ರೂಪಿಸಿದರು. 


ಅವುಗಳೇ,        ಯಮ- 
       ನಿಯಮ- 
        ಆಸನ- 
        ಪ್ರಾಣಾಯಾಮ- 
        ಪ್ರತ್ಯಾಹಾರ_ 
        ಧಾರಣ- 
        ಧ್ಯಾನ- 
        ಸಮಾಧಿ- 
        
    ಹೀಗೆ ರೂಪಗೊಂಡ ಯೋಗಶಾಸ್ತçದ ಅಷ್ಟಾಂಗ ಮಾರ್ಗವನ್ನು ನಿಷ್ಟೆಯಿಂದ ಆಸ್ತೆಯಿಂದ ಪಾಲಿಸಿದಲ್ಲಿ ದೇಹದ ಜೊತೆ ಜೊತೆಯಾಗಿ ನಮ್ಮ ಮನಸ್ಸು ಪರಿಪಕ್ವವಾಗುತ್ತದೆ. ಈ ರೀತಿಯಾಗಿ ಪಕ್ವಗೊಂಡ ಸಿದ್ದಗೊಳಿಸಿದ ದೇಹ ಮನಸ್ಸುಗಳು ಆಧ್ಯಾತ್ಮವನ್ನು ಸಹಜವಾಗಿ ಅರಿಯಲು ಪ್ರಾರಂಭಿಸುತ್ತವೆ. ಇದುವೇ ಆಧ್ಯಾತ್ಮದ ಹಾದಿಗೆ ಪ್ರಥಮ ಹೆಜ್ಜೆ ಎನ್ನಬಹುದು.     


ದೇಹ ಸಿದ್ದಗೊಂಡ ಪ್ರಥಮ ಲಕ್ಷಣವೆಂದರೆ, ಕಾಯಸಿದ್ದಿ . ಸಾಧಕನು ತನ್ನ ದೇಹದ ಯಾವುದೇ ಅಂಗಗಳನ್ನು ಮಾಂಸ ಖಂಡಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಹೃದಯದ ಮಿಡಿತ ಚಲಿಸೆಂದಾಗ ಚಲಿಸಬೇಕು ನಿಲ್ಲಬೇಕು ಎನಿಸಿದರೆ ನಿಲ್ಲಬೇಕು. ಬೇಕೆಂದಾಗ ನೆಮ್ಮದಿಯಾದ ಕನಸಿಲ್ಲದ ನಿದ್ದೆ ಬರಬೇಕು, ನಿದ್ದೆ ಬೇಡವೆಂದರೆ ನಿಚ್ಚಳ ಎಚ್ಚರವಿರಬೇಕು. ಹಸಿವು ಬಾಯಾರಿಕೆಗಳು ನಮ್ಮ ಹಿಡಿತಕ್ಕೊಳಗಾಗಬೇಕು. ಚುರುಕಾದ ನಡಿಗೆ, ತೀವ್ರ ಬುದ್ದಿ ಹಾಗು ನೆನಪಿನ ಶಕ್ತಿ ಅನಾಯಾಸವಾಗಬೇಕು. ಇನ್ನಿತರ ಲಕ್ಷಣಗಳೆಂದರೆ ಉಸಿರಿನ ಮೇಲೆ ನಿಯಂತ್ರಣ.ಸಮಸ್ತ ನಾಡಿಗಳ ಶುದ್ದಿ, ಸುಂದರವಾದ ಮೈಕಟ್ಟು. ಕಾಂತಿಯುಕ್ತ ತ್ವಚೆ, ಹಾಗು ಕಣ್ಣುಗಳು. ಸುಮಧುರ ಆಕರ್ಷಕ ದನಿ. ಅವನ ದೇಹ ವಜ್ರದಂತೆ ಸದೃಢ ಗಾಳಿಗಿಂತಲೂ ಹಗುರು. ಆಗ ನುಡಿದಂತೆ ನಡೆ , ನಡೆದಂತೆ ನುಡಿ ಕಷ್ಟಸಾಧ್ಯವಲ್ಲ. 


    ಯೋಗ ಪದದ ಅರ್ಥ ಕೂಡುವುದು, ಸೇರುವುದು ಆದುದರಿಂದಲೇ ದೇಹ ಹಾಗು ಮನಸ್ಸುಗಳ ಸಂಯೋಗದ ಸಂಕೇತವಾಗಿ ಈ ಪ್ರಕ್ರಿಯೆಯನ್ನು ಜ್ಞಾನಿಗಳು “ಯೋಗ” ವೆಂದು ಕರೆದರು. ನಮ್ಮ ಮನಸ್ಸಿಗೆ ಹೋಲಿಸಿಕೊಂಡರೆ ದೇಹವನ್ನು ಸಿದ್ದಗೊಳಿಸುವುದು ತಕ್ಕಮಟ್ಟಿಗೆ ಸುಲಭದ ಸಂಗತಿಯೇ ಸರಿ, ಒಂದಿಷ್ಟು ಕಸರತ್ತು ಅಭ್ಯಾಸಗಳಿದ್ದುಬಿಟ್ಟರೆ ನಾವು ನಮ್ಮ ದೇಹವನ್ನು ಅನಾಯಾಸವಾಗಿ ಗೆದ್ದು ಬಿಡಬಹುದು. ಆದರೆ ಮನಸ್ಸು , ಉಹೂ ಃ ಸುಲಭ ಸಾಧ್ಯವಲ್ಲ, ಕೆಲವೊಮ್ಮೆ ನಿಲುಕದ ಸಂಗತಿಯೇನೋ ಎನ್ನಿಸಿಬಿಡುತ್ತದೆ.  ನಮ್ಮ ಚಂಚಲ ಚಿತ್ತ ಮನಸ್ಸನ್ನು ನಾವು ನಿಯಂತ್ರಿಸುವುದು ಸರಳ ಸಂಗತಿಯಲ್ಲ. ತನ್ನ ಮನಸ್ಸನ್ನೇ ತಾನೇ ನಿಭಾಯಿಸಲಾರದವನು ಆಧ್ಯಾತ್ಮದ ಗೊಡವೆಗೆ ಹೋಗದಿರುವುದೇ ಲೇಸು. ಯೋಗ ಅವನು ತುಳಿಯಲಾಗದ ಹಾದಿ. ಆಧ್ಯಾತ್ಮ ನುಂಗಲಾರದ ತುತ್ತು.

ಪದ್ಮಪತ್ರದ ಮೇಲಿರುವ ಜಲ ಬಿಂದುವಿನತೆ ಚಿತ್ತ ಚಂಚಲವಾಗುವುದನ್ನು ಅಂತೆಯೇ ಯೋಗ- ಚಿತ್ತವೃತ್ತಿ ನಿರೋಧಃ ಎಂಬ ತಿಳುವಳಿಕೆಯನ್ನು ನಮ್ಮ ಅನೇಕ ಹಿರಿಯರು ಒಪ್ಪಿಕೊಂಡದ್ದು ಸುಳ್ಳಲ್ಲ. ಚಿತ್ತವೃತ್ತಿಗಳು ನಿರೋಧಿಸಲು ಮೊದಲು ಮಾಡಬೇಕಾದ ಕೆಲಸವೆಂದರೆ ನಾವು ನಮ್ಮ ಅನಗತ್ಯ ಕುತೂಹಲಗಳನ್ನು ಸುಮ್ಮನಾಗಿಸಬೇಕು, ನಾವು ಸುಮ್ಮನಿದ್ದಾಗ ನಮ್ಮ ತಿಳುವಳಿಕೆ ತೀವ್ರವಾಗುವುದನ್ನು ಅನುಭವಿಸಬೇಕು. “ಸುಮ್ಮನಿರುವುದೆಂದರೆ” ಆಲಸ್ಯವಲ್ಲ, ನಿಷ್ಕಿçಯತೆಯಲ್ಲ, ಒಂದು ವೈಕ್ತಿ / ವಸ್ತು ವಿಷಯ ಅಥವಾ ಸಂಗತಿಗಳನ್ನು ಯಾವುದೇ ಪೂರ್ವಾಗ್ರಹಗಳಿಲ್ಲದೆ ಭಾವೋದ್ವೇಗಗಳಿಲ್ಲದೆ ಯಥಾವತ್ತಾಗಿ ಗಮನಿಸವುದನ್ನು  ಕಲಿಯುವ ಮನೋ ಪ್ರಕ್ರಿಯೆ. ನಾವು ಸುಮ್ಮನಿದ್ದಾಗ ನಮಗೆ ವರ್ತಮಾನವೊಂದೇ ಬದುಕು, ನಮ್ಮ ಭೂತದ ಪರಿಣಾಮ ಭವಿಷ್ಯದ ಬಯಕೆಗಳು ಅಷ್ಟಾಗಿ ಕಾಡುವುದಿಲ್ಲ. ಯಾರಿಗೆ ವರ್ತಮಾನವೊಂದೇ ಬದುಕಾಗಿರುತ್ತದೆಯೋ ಅವರಿಗೆ ಆತ್ಮದ ತಿಳಿವು ವಿಸ್ತಾರವಾಗುತ್ತದೆ. ಹೀಗಿದ್ದಾಗ ನಮ್ಮ ಚಿಂತೆಗಳು ದೂರ ಸರಿದು ಚಿಂತನೆಯ ಚೈತನ್ಯ ಶಕ್ತಿ ಎಚ್ಚರಾಗುತ್ತದೆ. ನಮ್ಮ ಚಿಂತನೆಗಳು ನಮ್ಮನ್ನು ಎಚ್ಚರಿಸಲು ತೊಡಗಿದರೆ ನಾವು ಮನಸ್ಸಿನ ಅನೇಕ ಆಯಾಮಗಳನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಈ ಹಂತದಲ್ಲಿಯೇ ಮನಸ್ಸಿನ ಉಪ ಶಕ್ತಿಗಳಾದ ಭಾವನೆ, ಬುದ್ದಿ, ಅಲೋಚನಾಶಕ್ತಿ, ಗಮನ ಹಾಗು ಗ್ರಹಿಕಾಶಕಕ್ತಿ, ಏಕಾಗ್ರತಾ ಶಕ್ತಿ, ಮನನಾ ಮತ್ತು ಕಲ್ಪನಾ ಶಕ್ತಿ ಮುಂತಾದವುಗಳ ಅರಿವು ಹಾಗೆಯೇ ನಿತ್ಯ ಜೀವನದಲ್ಲಿ ಆ ಮನೋ ಶಕ್ತಿಗಳ ಬಳಕೆ ಸುಲಭ ಸಾಧ್ಯವಾಗುತ್ತದೆ.

ಚಿಂತನಾ ಶಕ್ತಿಯಿಂದ ನಮಗೆ ವಸ್ತು / ವಿಷಯಗಳನ್ನು ವಿಷ್ಲೇಷಿಸಲು ತಿಳಿಯುತ್ತದೆ. ಒಳಿತು  ಕೆಡುಕುಗಳ ವಿಭಜನೆ ಸಾಧ್ಯವಾಗುತ್ತದೆ. ತಾನಿರುವ ಪ್ರಪಂಚದಲ್ಲಿ ಇನ್ನೊಬ್ಬರಿಗೆ ಕೆಡುಕನ್ನು ಬಯಸದೇ ಕೆಡುಕು ಮಾಡದಿರುವುದೇ ಒಳ್ಳೆಯ ದಾರಿ, ಈ ದಾರಿ ತುಳಿದವನು ಸ್ವಾತಿಕನೆನಿಸಿಕೊಳ್ಳುತ್ತಾನೆ ಪುಣ್ಯವಂತನೆನಿಸಿಕೊಳ್ಳುತ್ತಾನೆ. ತನ್ನುಳಿದು ಇನ್ನೊಂದಕ್ಕೆ ಕೆಡುಕು ಮಾಡುತ್ತಾ ಸಾಗಿದವನು ಪಾಪಿಯಾಗುತ್ತಾನೆ. ನಮ್ಮ ಬದುಕನ್ನು ಯಾವುದು ಹಾಳು ಮಾಡುತ್ತದೆಯೋ ಅದು ಸಾತ್ವಿಕವಲ್ಲ. ಸ್ವಾತಿಕ ಗುಣ ಆಧ್ಯಾತ್ಮದಲ್ಲಿ ಅಗತ್ಯವಾದ ಅಂಶ. ಸಾತ್ವಿಕವಲ್ಲದ್ದನ್ನು ಬದಿಗೆ ಸರಿಸಿ ಮುಂದುವರೆಯುವುದೇ ಆಧ್ಯಾತ್ಮ ಜೀವಿ ಪ್ರಥಮ ಕರ್ತವ್ಯ.

ನಮ್ಮ ಮನೋಭೂಮಿಕೆಯಲ್ಲಿ ಸಾತ್ವಿಕಗುಣವು ಒಮ್ಮೆ ನೆಲೆಗೊಂಡರೆ ಮತ್ತೆಂದೂ ನಾಶವಾಗುವುದಿಲ್ಲ. ಸಾತ್ವಿಕ ಗುಣದ ಪರಮ ಶಕ್ತಿಯೆಂದರೆ ನಮ್ಮ ತಪ್ಪನ್ನು ನಮಗೆ ತಿಳಿಸುವುದು. ತನ್ನ ತಪ್ಪು ತನಗೆ ತಿಳಿಯಲಾಗದವನಿಗೆ ಎಂದಿಗೂ ಉದ್ದಾರ ಸಾಧ್ಯವಿಲ್ಲ ಅವನ ಆತ್ಮೋಧ್ದಾರ ದೂರದ ಮಾತು. ಸಾತ್ವಿಕ ಗುಣ ಆತ್ಮ ಉನ್ನತಿಯ ಪರಮ ಲಕ್ಷಣ, ಈ ಗುಣದಿಂದ ಮನುಷ್ಯನಿಗೆ ಸಾತ್ವಿಕ ಭಾವನೆಗಳಾದ ಪ್ರೇಮ, ಉದಾರತೆ, ತಾಳ್ಮೆ, ಸಹಿಷ್ಣುತೆ, ಕರುಣೆ, ಹರ್ಷ ಶ್ರಧ್ಧೆ, ಉತ್ಸಾಹ, ಮುಂತಾದ ಆತ್ಮ ಜಾಗೃತಿ ಲಕ್ಷಣಗಳು ಸ್ಥಿರವಾಗುತ್ತವೆ. ಇಲ್ಲಿ ಆತ್ಮ ವಂಚನೆ ನಿಷಿದ್ಧ.

ಪ್ರೇಮ ಆತ್ಮ ವಿಕಾಸದ ಮೊದಲ ಹೆಜ್ಜೆ, ಜ್ಞಾನದ ಪ್ರಥಮ ಕಿರಣ. ಪ್ರೇಮ ಹಳೆಯದನ್ನು ಹೊಸತಾಗಿ ನೋಡುವ ಕಣ್ಣನ್ನು ನೀಡುತ್ತದೆ. ಪ್ರೇಮಿಸುವವನು ದಣಿಯುವುದಿಲ್ಲ , ದಣಿಯುವವನ ಶಕ್ತಿಯು ಮಿತವಾಗಿರುತ್ತದೆ. ದಣಿಯುವವ ಯಾವಾಗಲೂ ಸುಖವನ್ನು ಅರೆಗುಟುಕಾಗಿ ಅನುಭವಿಸುತ್ತಾನೆ. ಅವನು ದುಃಖವನ್ನೂ ಅನುಭವಿಸುತ್ತಾನೆ, ದುಃಖ ಅಲ್ಪತೆಯ ಗುರುತು. ಪ್ರೇಮ ನಮ್ಮ ದುಃಖವನ್ನು ನೀಗುತ್ತದೆ , ನಮ್ಮ ಬದುಕನ್ನು ಬೆಳೆಸುತ್ತದೆ.

ಕಾಮದ ಕೆಸರಿನಿಂದಲೇ ಹುಟ್ಟುವ ವಿಮಲ ಪ್ರೇಮ , ಕಾಮ ಕಾಮನೆಗಳ ಪ್ರತೀಕವಲ್ಲ. ದಿನದ ಇಪ್ಪತ್ತನಾಲ್ಕು ಗಂಟೆಯೂ ಕಾಮವನ್ನು ಕುರಿತು ಯೋಚಿಸುವವನು ಎಂದಿಗೂ ಪ್ರೇಮವನ್ನು ಅನುಭವಿಸಲು ಸಾಧ್ಯವಿಲ್ಲ. ಈ ಪ್ರಪಂಚದ ಎಲ್ಲಾ ವಸ್ತುಗಳು ತನ್ನ ಸೇವೆಗಾಗಿ, ತನಗಾಗಿ ತನ್ನೊಬ್ಬನಿಗಾಗಿ ಅನುಭವಿಸಲಿಕ್ಕಾಗಿ ಇವೆ ಎಂದು ಬಾವಿಸಿವುದು ಕಾಮದ ಲಕ್ಷಣವಾದರೆ, ಈ ಪ್ರಪಂಚದ ಒಳಿತಿಗಾಗಿ ತನ್ನೆಲ್ಲವನ್ನೂ ಸಮರ್ಪಿಸಲು ಸಿದ್ದನಾಗುವ ಕರ್ತವ್ಯನಿಷ್ಠೆ ಪ್ರೇಮ ಬಾವನೆಯಾಗುತ್ತದೆ.

ಸಮಾಜದಲ್ಲಿ ಒಳ್ಳೆಯ ವೈಕ್ತಿತ್ವ ಪಡೆಯಲಾಗದವನು, ಸಮಾಜ ಬಾಹಿರನಾದವನು, ಇನ್ನೊಬ್ಬರಿಂದ ಅವಹೇಳನವಾಗುವಂತೆ ಬದುಕುವವನು, ವಂಚಕನು, ದ್ರೋಹಿಯು, ಮೋಸಗಾರನು, ಪರರ ಸ್ವತ್ತನ್ನು ಲಪಟಾಯಿಸುವವನು, ಅನೀತಿಯ ಬದುಕನ್ನು ಬದುಕುವವನು  ಪ್ರೇಮದ ಮಹಾ ಅನುಭೂತಿಯನ್ನು ಎಂದಿಗೂ ಪಡೆಯಲಾರ.

ತಂದೆ ತಾಯಿಗೆ ಒಳ್ಳೆಯ ಮಗನಾಗದವನು, ಅಕ್ಕ ಅಣ್ಣಂದಿರಿಗೆ ಒಳ್ಳೆಯ ತಮ್ಮನಾಗದವನು, ತಮ್ಮ ತಂಗಿಯರಿಗೆ ಒಳ್ಳೆಯ ಅಣ್ಣನಾಗದವನು, ಬಂಧು ಬಾಂದವರಿಗೆ ಆತ್ಮೀಯನಾಗದವನು, ಪತ್ನಿಗೆ ಆದರ್ಶನಾಗದವನು, ಗೆಳೆಯ ಗೆಳತಿಯರಲ್ಲಿ ನಂಬಿಕೆ ಉಳಿಸಿಕೊಳ್ಳದವನು, ತಾನಿರುವ ದೇಶಕ್ಕೆ ಪ್ರಜೆಯಾಗದವನು, ದೇಶಾಭಿಮಾನವಿಲ್ಲದವನು, ತನಗೆ ಅನ್ನ ನೀಡಿದ ಹಣ್ಣು ಗಿಡ ಮರ ಬಳ್ಳಿಗಳನ್ನು ವಂದಿಸದ ಮನೋಭಾವದವನು, ತನ್ನ ಬದುಕಲ್ಲಿ ತಾನು ಬೆಳೆಯಲು ಪಡೆದ ಬೆಳಕು , ನೀರು, ಗಾಳಿ, ಭೂಮಿ , ಆಕಾಶ ಎಂಬ ಪಂಚಭೂತಗಳಿಗೆ ತಲೆಬಾಗದವನು, ಎಲ್ಲಾ ಚರಾಚರ ವಸ್ತುಗಳಿಗೆ ಋಣಿಯಾಗಿರದವನು ಪ್ರೇಮಶಕ್ತಿಯನ್ನು ಪಡೆಯಲಾರ, ಆಧ್ಯಾತ್ಮಜೀವಿಯಾಗಲಾರ.

ಆಧ್ಯಾತ್ಮಕ್ಕೆ ಅತ್ಯಗತ್ಯವಾದ ಸಮರ್ಪಣಾ ಮನೋಭಾವವನ್ನು ಪ್ರೇಮ ನಮಗೆ ದಯಪಾಲಿಸುತ್ತದೆ. ಅನೇಕ ಜನ್ಮ ಜನ್ಮಾಂತರಗಳಿAದ ಬಲವಾಗಿ ಬೆಳೆದು ಬೇರೂರಿದ ನಮ್ಮದೇ ಅಹಃಕಾರವನ್ನು  ಮಣಿಸಿ ಕಡೆಗಣಿಸಿ ವಿಶ್ವಚೇತನ ಶಕ್ತಿಯಲ್ಲಿ ನಮ್ಮನ್ನು ನಾವು ಸಮರ್ಪಸಿಕೊಳ್ಳಲು ನಮ್ಮನ್ನು ಅಣಿಗೊಳಿಸುವುದೇ ಈ ಪ್ರೇಮಶಕ್ತಿಯ ಮಹಾ ಕರ್ತವ್ಯ. ಅತ್ಯಾಂತಿಕ ಪ್ರೇಮವೇ ಕೊನೆಗೆ ಭಕ್ತಿಯ ಶಕ್ತಿಯಾಗಿ ಮೆರೆಯುತ್ತದೆ. ಪ್ರೇಮಶಕ್ತಿ ಭಾವನಾತ್ಮಕವಾಗಿ ಲಭಿಸಿದರೆ ಭಕ್ತಿಯಾಗುತ್ತದೆ, ಅದೇ ಪ್ರೇಮವು ವಿಚಾರಶಕ್ತಿಯ ನಿಯಂತ್ರಣದಲ್ಲಿದ್ದರೆ ಅದುವೇ ನಮ್ಮಲ್ಲಿ ಸಂಕಲ್ಪ ಶಕ್ತಿಯಾಗಿ ಬದಲಾಗುತ್ತದೆ.

 ಸಂಕಲ್ಪ ಶಕ್ತಿಯ ಮತ್ತೊಂದು ರೂಪವೇ ಇಚ್ಛಾ ಶಕ್ತಿ. ಒಮ್ಮೆ ನಮ್ಮ ಇಚ್ಛೆಗೆ ಶಕ್ತಿಯಿದೆ ಎಂದು ಅರಿತರೆ ಮನೋ ವೃತ್ತಿಗಳ ಮೂಲ ಸ್ವರೂಪಗಳೇ ಬದಲಾಗುತ್ತದೆ, ಬದಲಾಯಿಸಲು ಬರುತ್ತದೆ. ಇಚ್ಛಾಶಕ್ತಿಯು ಭಕ್ತಿಯೊಂದಿಗೆ ಸಾತ್ವಿಕತೆಯೊಂದಿಗೆ ಮಿಳಿತವಾದರೆ ಮಾನವನ ಜೀವನದಲ್ಲಿ ಆ ಪರಮ ಸೌಂದರ್ಯವೇ ಅವಿರ್ಭಾವಾವಾಗುತ್ತದೆ. ನಮ್ಮೊಳಗಿರುವ ದ್ವೇಷವನ್ನು ಪ್ರೀತಿಯನ್ನಾಗಿ, ಕಾಮವನ್ನು ಪ್ರೇಮವನ್ನಾಗಿ, ಹಿಂಸೆಯನ್ನು ಕರುಣಾಶಕ್ತಿಯನ್ನಾಗಿ, ಭಯವನ್ನು ನಿರ್ಭೀತಶಕ್ತಿಯಾಗಿ, ಕಠೋರವನ್ನು ದಯೆಯಾಗಿ , ಮೋಹವನ್ನು ವೈರಾಗ್ಯವಾಗಿ ಅದು ಬದಲಾಯಿಸುವಲ್ಲಿ ಸಫ¯ ವಾಗುತ್ತದೆ.

ನಮ್ಮ ಇಚ್ಛೆಗೆ ಶಕ್ತಿಯಿದೆ ಎಂದು ಅರಿಯುವುದು ಹೇಗೆ? ಹೇಗೆಂದರೆ ನಮ್ಮ ಜೀವನದಲ್ಲಿ ನಮ್ಮ ನಮ್ಮ ನಿರ್ಧಾರಗಳಿಗೆ ನಾವೇ ಕರ್ತವ್ಯಪರರಾಗಿ ದುಡಿಯುತ್ತಾ ಮಾಡಿಕೊಂಡ ಯೋಜನೆಗಳನ್ನು ಸಫಲವಾಗಿ ಪೂರೈಸುವುದು. ಆ ಇಚ್ಛೆ / ಸಂಕಲ್ಪಗಳು ಸಣ್ಣ ಮಟ್ಟದಿರಬಹುದು ಅಥವಾ ದೊಡ್ಡದಾಗಿರಬಹುದು ಆದರೆ ನಾವೇ ಮಾಡಿದ ಪ್ರತಿಜ್ಞೆಗಳು ಹಳತಾಗಿ ಕೊನೆಗೆ ನಾಶವಾಗುವ ಕ್ಷಣಗಳನ್ನು ನಾವೇ ಅನುಭವಿಸಬಾರದು. ನಮ್ಮ ಸಂಕಲ್ಪಗಳನ್ನು ಅರ್ಧ ದಾರಿಗೇ ಕೈ ಬಿಡದೆ ದಡ ಸೇರಿಸಿದಷ್ಟೂ ನಮ್ಮಲ್ಲಿ ಸಂಕಲ್ಪ ಮಾಡುವ ಹಾಗು ಸಂಕಲ್ಪ ಶಕ್ತಿಯನ್ನು ಅನುಭವಿಸುವ ಕಾರ್ಯ ಕ್ಷಮತೆ ಹೆಚ್ಚುತ್ತದೆ, ಆಗ ಇಚ್ಚಾ ಶಕ್ತಿ ಸದಾ ಜಾಗೃತವಾಗಿರುತ್ತದೆ.

ಆದ್ಯಾತ್ಮ ಮಾರ್ಗದಲ್ಲಿ ಹೆಜ್ಜೆಯಿರಿಸಲು ನಮ್ಮ ಇಚ್ಛೆಗೆ ಅಗಾಧವಾದ ಶಕ್ತಿಬೇಕಾಗುತ್ತದೆ, ಆ ಶಕ್ತಿಯ ತೀವ್ರತೆ ಅಗಾಧತೆಗೆ ಅನುಸಾರವಾಗಿ ಆದ್ಯಾತ್ಮವನ್ನು ತಿಳಿಯುವ ಮಾರ್ಗಗಳು ಬದಲಾಗುತ್ತವೆ, ಅಭ್ಯಾಸಗಳು, ಕ್ರಿಯೆಗಳು ಭಿನ್ನವಾಗುತ್ತವೆ. ಸಂಕಲ್ಪ ಶಕ್ತಿಯನ್ನು ಅಥವಾ ಇಚ್ಛಾಶಕ್ತಿಯನ್ನು ಜಾಗೃತಗೊಳಿಸುವ ಅನೇಕ ಉಪಾಯಗಳನ್ನೇ ನಮ್ಮ ಹಿರಿಯರು ಸಾಧನೆಗಳೆಂದು ಕರೆದರು.

ವಿಶ್ವದಾದ್ಯಂತ, ಎಲ್ಲೆಲ್ಲಿ ಆದ್ಯಾತ್ಮ ಶಕ್ತಿಯ ಅರಿವಿದೆಯೋ , ಆದ್ಯಾತ್ಮದ ಬಯಕೆಯಿದೆಯೋ ಅಲ್ಲೆಲ್ಲಾ ಅನೇಕ ಸಾಧನಾ ಮಾರ್ಗಗಳನ್ನು ಸಂಶೋಧಿಸಿದ್ದಾರೆ, ಬಳಸುತ್ತಿದ್ದಾರೆ ಹಾಗು ಅಭಿವೃದ್ದಿ ಪಡಿಸುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ

ಇಷ್ಟದೈವ ಉಪಾಸನಾ ಮಾರ್ಗ

ಮಂತ್ರ ಮಾರ್ಗ

ಜ್ಞಾನ ಮಾರ್ಗ

ತಂತ್ರ ಮಾರ್ಗ

ಕುಂಡಲಿನಿ ಯೋಗ ಮಾರ್ಗ

ಯಂತ್ರೋಪಾಸನಾ ಮಾರ್ಗ

ಇತ್ಯಾದಿಗಳು ಪೂರ್ವ ರಾಷ್ಟçಗಳ ಕೊಡುಗೆಗಳಾದರೆ ,

ಪ್ರಾಣಿಕ್ ಹೀಲಿಂಗ್

ರೇಖಿ

ಹಿಪ್ನಾಟಿಸಮ್

ಮುಂತಾದ ಸಾಧನೆಗಳನ್ನು ಪಾಶ್ಯಾತ್ಯವೆಂದು ಭಾವಿಸುವುದುಂಟು.

ಆದರೆ ಎಲ್ಲಾ ಮಾರ್ಗದ ಉದ್ದೇಶವಿಷ್ಟೆ ನಾವು ನಮ್ಮ ಇಚ್ಚಾ ಶಕ್ತಿಯನ್ನು ಸಾಧಿಸುವಲ್ಲಿ ಎಷ್ಟು ಸಫಲರಾಗಿದ್ದೇವೆ ಹಾಗು ಸಫಲರಾಗುತ್ತೇವೆ ಎಂದು ಕಂಡುಕೊಳ್ಳುವುದು ಏಕೆಂದರೆ ಒಮ್ಮೆ ನಮ್ಮಲ್ಲಿ ಸಂಪೂರ್ಣವಾಗಿ ಇಚ್ಚಾಶಕ್ತಿಯು ಪ್ರಬಲವಾಗಿ ಬೇರೂರಿತೆಂದರೆ , ಎಂದೆAದಿಗೂ ಕಡಿಮೆಯಾಗದಂತೆ ಸಂಗ್ರಹವಾಯಿತೆAದರೆ ಆ ಕ್ಷಣಗಳಲ್ಲಿ ನಮ್ಮ ಆತ್ಮ ಶಕ್ತಿಯ ಉದಯವಾದಂತೆಯೇ ಸರಿ.

ನಮ್ಮೊಳಗಿನ ಇಚ್ಛೆಗೆ ನಮ್ಮ ಆತ್ಮವನ್ನು ಹಾಗು ಆತ್ಮ ಶಕ್ತಿಯನ್ನು ಅಲುಗಾಡಿಸಲು ಅಥವಾ ನಿಯಂತ್ರಿಸಲು ಬರುತ್ತದೆಯೇ , ಇದನ್ನು ತಿಳಿಯಲು ಭಾರತೀಯ ತಂತ್ರ ಮಾರ್ಗದ ಪರಕಾಯ ಪ್ರವೇಶ ಸಾಧನೆಯಲ್ಲಿ ಒಂದು ಉಪಾಯವಿದೆ.

ನಮ್ಮೆದುರಿಗೆ ಬೆಳಗುತ್ತಿರುವ ಒಂದು ದೀಪವನ್ನಿರಿಸಿಕೊಂಡು ನಮ್ಮೆಲ್ಲಾ ಸಂಕಲ್ಪಶಕ್ತಿಯನ್ನು ಒಗ್ಗೂಡಿಸಿಕೊಂಡು ನಮ್ಮ ಇಚ್ಛೆ ಆದೇಶಿಸಬೇಕು, ಅದು ಆರು ಎಂದರೆ ದೀಪ ಆರಬೇಕು ಜೋರಾಗಿ ಬೆಳಗು ಎಂದರೆ ಭುಗಿಲ್ಲನೆ ಪ್ರಜ್ವಲವಾಗಿ ಮತ್ತಷ್ಟು ದ್ವಿಗುಣವಾಗಿ ಅಗಾಧವಾಗಿ ಜ್ವಲಿಸಬೇಕು. ಇಂತಹ ಆತ್ಮಶಕ್ತಿಯನ್ನು ಹೊಂದಿದವನನ್ನೇ ಲೋಕವು ಋಷಿಯೆಂದು ಗೌರವಿಸುತ್ತದೆ.

ಒಮ್ಮೆ ನಮ್ಮೊಳಗೆ ಆತ್ಮ ಶಕ್ತಿ ಕೈಗೂಡಿತೆಂದರೆ ಅದುವೇ ಆಧ್ಯಾತ್ಮ ಜಗತ್ತಿನ ಕೀಲಿ ಕೈಯಾಗುತ್ತದೆ. ಸಮಸ್ತ ವಿಶ್ವ ಶಕ್ತಿಯ ವಿಶ್ವ ಚೈತನ್ಯ ನಮ್ಮೊಳಗೆ ಪ್ರವಹಹಿಸಲು ಅನುವು ಮಾಡಿಕೊಡುತ್ತದೆ. ಆ ಮಹಾನ್ ಶಕ್ತಿ ಆಟಕ್ಕೆ ನಮ್ಮ ದೇಹ ಮನಸ್ಸುಗಳನ್ನು ಉಪಕರಣವನ್ನಾಗಿಸುತ್ತದೆ. ಆಗ ನಮಗೆ ಅಸಾಧ್ಯವಾದುದು ಯಾವುದೂ ಇರುವುದಿಲ್ಲ. ಕಾಲವನ್ನು ನಿಲ್ಲಿಸಬಹುದು, ಕಾಲಾತೀತವೆನಿಸಬಹುದು. ವಿಶ್ವದ ಯಾವುದೇ ಸ್ಥಳಕ್ಕೆ ಮನೋವೇಗದಲ್ಲಿ ಚಲಿಸಬಹುದು. ವಸ್ತುಗಳನ್ನು ಸೃಷ್ಟಿಸಬಹುದು, ಮಾಯವಾಗಿಸಲೂ ಬಹುದು. ಅಷ್ಟ ಸಿದ್ದಿಗಳು ನಮ್ಮ ಆಟಿಕೆಗಳಾಗುತ್ತವೆ. ದಿವ್ಯ ದೃಷ್ಟಿ, ದೂರ ಶ್ರವಣ, ಅಣಿಮಾ, ಮಹಿಮಾ, ಗರಿಮಾ ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಈಶತ್ವ, ವಶಿತ್ವ ಗಳು ನಮ್ಮ ಕೈಯೊಳಿಗಿನ ಕೈಚಳಕವೆನಿಸುತ್ತವೆ. ಅಷ್ಟ ಸಿದ್ದಿಗಳು ನಮ್ಮ ಆಟಕ್ಕೆ ಆಟಿಕೆಗಳಾಗುತ್ತವೆ.  ನಿಸರ್ಗವೇ ಇಡಿಯಾಗಿ ನಮ್ಮ ಕೈಗೊಂಬೆಯಾಗುತ್ತದೆ. ನಮ್ಮ ಮನಸ್ಸು ಬ್ರಹ್ಮವೆನಿಸಿಕೊಳ್ಳುತ್ತದೆ. ಹೀಗೆ ನಿರಂತರವಾಗಿ ಆತ್ಮ ಬ್ರಹ್ಮ ಸ್ಥಿತಿಯನ್ನು ಸಾಧಿಸಿತೆಂದರೆ ಆ ಆತ್ಮವೇ ಕೊನೆಗೆ ಪರಮಾತ್ಮನಾಗಿ ಬದಲಾಗುತ್ತದೆ. ಆ ಸಮಯವೇ ಜೀವಿಯು ಕ್ಷÄಲ್ಲಕವಾದ “ನಾನು” ಎಂಬ ಆತ್ಮದ ಪರಿಧಿ ಮಾಯವಾಗಿ ಇಡೀ ವಿಶ್ವದಲಿ “ತಾನು” ಅನಿಸಿ, ಎಲ್ಲದರೊಳಂದಾಗಿ, ಕಣವಾಗಿ , ಅಣುವಾಗಿ , ಅಂಡ ಪಿಂಡ ಬ್ರಹ್ಮಾಂಡವಾಗಿ ಎಲ್ಲವೂ ಲೀಲೆಯೆನಿಸುವ ಪರಮಾನಂದಕ್ಕೆ ಸಾಕ್ಷಿ ಸ್ವರೂಪನಾಗುತ್ತಾನೆ.
ಯೋಗ ಅಥವಾ ಆಧ್ಯಾತ್ಮ ಸಾಧನೆಯ ಸರಳೀಕೃತ ವಿಷ್ಲೇಷಣೆ. 
    ಧ್ಯಾನ ಸಿದ್ಧಿ : 
ಮೊದಲು ಸುಖಾಸನದಲ್ಲಿ ಸುಮ್ಮನೆ ಕೂರುವುದನ್ನು ಅಭ್ಯಾಸ ಮಾಡಬೇಕು. ಕಣ್ಣು ತೆರೆದಿಟ್ಟುಕೊಂಡರೆ ಪ್ರಾಪಂಚಿಕ ವಸ್ತುಗಳು ಕಾಣುತ್ತವೆ ಅಲ್ಲದೆ ಅನೇಕ ಆಲೋಚನೆಗಳಿಗೆ ದಾರಿ ಮಾಡಿಕೊಡುತ್ತವೆ ಆದರಿಂದ ಸುಮ್ಮನೆ ಕುಳಿತುಕೊಂಡಾಗ ಕಣ್ಣು ಮಚ್ಚಿಕೊಳ್ಳುವುದು ಒಳ್ಳೆಯದು. ಮೊದ ಮೊದಲು ಹೀಗೆ ಕುಳಿತುಕೊಂಡಾಗ ಈ ಕ್ರಿಯೆ ನಮಗೆ ಭಾರಿ ಕಷ್ಟದಾಯಕವೆನಿಸುತ್ತದೆ. ಆದುದರಿಂದ, ದೇಹಕ್ಕೆ ಕಷ್ಟವಾಗದಂತಹ, ಮನಸ್ಸಿಗೆ ತೊಂದರೆಯಾಗದAತಹ ಸ್ಥಳ ಹಾಗು ಕಾಲ ಆರಿಸಿಕೊಳ್ಳುವುದು ಸೂಕ್ತ. ಇದಕ್ಕೆ ಏಕಾಂತ ಸ್ಥಳ ಹಾಗು ಬೆಳಗಿನ ಜಾವ ಒಳ್ಳೆಯದು. 
ಸುಮ್ಮನೆ ಕಣ್ಣು ಮುಚ್ಚಿ ಕುಳಿತುಕೊಂಡಾಗ ನಮ್ಮ ಮನಸ್ಸು ನಮಗೆ ಮತ್ತಷ್ಟು ಹತ್ತಿರವಾಗುತ್ತದೆ. ಹೀಗೆ ಮನಸ್ಸು ಹತ್ತಿರ ಕಂಡಷ್ಟೂ ಅದರ ಚಂಚಲತೆ ಗಲಭೆ ಗೊಂದಲಗಳು ನಮಗೆ ಅರಿವಾಗುತ್ತದೆ. ನಮ್ಮ ಉದ್ದೇಶ ಮನಸ್ಸನ್ನು ನಿಲ್ಲಿಸಿ ನಿಶ್ಛಲ ಸ್ಥಿತಿಗೆ ತಂದು ಮನೋಶಕ್ತಿಯು ಹರಿದು ಹಂಚಿಹೋಗದAತೆ  ಪ್ರಯತ್ನಿಸುವುದು.  ಆದರೆ ಮನಸ್ಸು  ಅಮೂರ್ತವಾದದ್ದರಿಂದ ಅದು ನಮ್ಮ ಹಿಡಿತಕ್ಕೆ ಸಿಗುವುದಿಲ್ಲ. ಅದಕ್ಕಾಗಿ ಒಂದು ಉಪಾಯವೆಂದರೆ ನಾವು ನಮ್ಮ ಮನಸ್ಸನ್ನು ಮೂರ್ತ ಸ್ವರೂಪದಲ್ಲಿ ಭಾವಿಸುವುದು. ನಾವು ಕಣ್ಣು ಮುಚ್ಚಿ ಕುಳಿತಾಗ ಎಲ್ಲಾ ಭಾವನೆಗಳನ್ನು ಬದಿಗಿರಿಸಿ ಮನೋಭೂಮಿಕೆಯಲ್ಲಿ ನಮ್ಮ ಕಣ್ಣೆದಿರು ಕುಣಿದಾಡುವ ಆಕಾರಗಳನ್ನು, ವಸ್ತುಗಳನ್ನು , ಸಂಗತಿಗಳನ್ನು ಸುಮ್ಮನೆ ಸಾಕ್ಷಿ ಸ್ವರೂಪರಾಗಿ ನೋಡುತ್ತಾ ಹೋಗುವುದು. ಕೆಲವೊಮ್ಮೆ ಮನಸ್ಸಿನ ಆಕಾರÀÀಗಳಿಗೆ/ ವಿಷಯಗಳಿಗೆ ಮಿತಿಯೇ ಇರುವುದಿಲ್ಲ ಆದಕಾರಣ ನಮ್ಮ ಮನಸ್ಸನ್ನು ಏಕಾಗ್ರಗೊಳಿಸುವ ಯಾವುದಾದರು ಒಂದು ವಸ್ತು/ ವಿಷಯವನ್ನೇ ಕಲ್ಪಿಸಿಕೊಳ್ಳುತ್ತಾ ಇದ್ದರೆ ಲಾಭವಾಗುವುದು. ಮೊದ ಮೊದಲು ಅನೇಕ ಆಕಾರಗಳನ್ನು ಬಾಸಗೊಳಿಸುವ ಮನಸ್ಸು ಕ್ರಮೇಣ ಸಾಧನೆಯು ಸಿದ್ದಿಸಿದಂತೆ ಅವೆಲ್ಲಾ ಮಾಯವಾಗಿ ನಮಗೆ ಹಲಾವರು ಬಣ್ಣಗಳು ಗೋಚರಿಸ ತೊಡಗುತ್ತವೆ, ಉದಾಹರಣೆಗೆ ಮೋಡದಂತೆ, ಹೊಗೆಯಂತೆ, ನೀಲಿ ಕೆಂಪು ಮುಂತಾದ ಬಣ್ಣಗಳು. ಸಾಧನೆಯು ತೀವ್ರವಾದಾಗ ಕೊನೆಗೆ ಮಿಂಚಿನ ಸ್ವರೂಪದ ಬೆಳಕು ಗೋಚರಿಸಿ ಶಾಶ್ವತವಾಗಿ ನಮ್ಮ ಮನಸ್ಸಿನಲ್ಲಿ ನೆಲೆಗೊಳ್ಳುವುದು ಹೀಗೆ ಮಿಂಚು ಕಂಡರೆ ನಮಗೆ ಧ್ಯಾನ ಸಿದ್ದಿಸಿದಂತೆ. 
•    ಧ್ಯಾನ ಸಿದ್ಧಿಯ ನಿದರ್ಶನ/ ಉಪಯೋಗ: 
    ವಜ್ರದಂತೆ ಹೊಳಪಾದ ಕಣ್ಣು. ನೆಮ್ಮದಿಯಾದ ಕನಸಿಲ್ಲದ ನಿದ್ದೆ. ಹಿತ ಮಿತವಾದ ಭೋಜನದಲ್ಲಿ ಆಸಕ್ತಿ. ಹಸಿವು , ಬಾಯಾರಿಕೆ, ರೋಗ ಮುಂತಾದ ಕ್ಲೇಷಗಳು ಕಾಡುವುದಿಲ್ಲ. ಸತ್ಯವಾದ ಮಾತುಗಳನ್ನಾಡುವ ಸಾತ್ವಿಕ ಜೀವನದಲ್ಲಿ ಆಸಕ್ತಿ. ಮೋಸ ವಂಚನೆ ನಿಮ್ಮ ಬಳಿ ಸುಳಿಯುವುದಿಲ್ಲ. ಯಾವುದೇ ಶಾಸ್ತç , ವಿದೈ, ಕಲಾಪ್ರಕಾರ, ವಿಜ್ಞಾನ, ಸಾಹಿತ್ಯಗಳ ಅಧ್ಯಯನ ಹಾಗು ಅಭ್ಯಾಸ ಸುಲಭವಾಗುತ್ತದೆ. ಸಾಮಾನ್ಯರಿಗೆ ಗಹನವೆನಿಸುವ ಶಾಸ್ತçಗಳೂ ಸಹ ಅತಿ ಸರಳವಾಗಿ ಅರ್ಥವಾಗುತ್ತದೆ. ಸಮಾಜದಲ್ಲಿ ಗೌರವಯುತ ಸ್ಥಾನ ಗಳಿಸಬಹುದು. ಸಕಲ ರೀತಿಯಲ್ಲೂ ಆರೋಗ್ಯಕರವೆನಿಸುವ ನೆಮ್ಮದಿಯಾದ ಜೀವನ ಪಡೆಯಬಹುದು.
    ಸಂಕಲ್ಪ ಸಿದ್ಧಿ : 
ಧ್ಯಾನ ಸಿದ್ಧಿಯನ್ನು ಪಡೆದ ಮನಸ್ಸಿಗೆ ತನ್ನ ಶಕ್ತಿಯ ಮೂಲ ಸ್ವರೂಪದ ಅಂದರೆ ಬುದ್ದಿ, ಭಾವನೆ, ಕಲ್ಪನೆ, ಆಲೋಚನೆ, ನೆನಪು, ಗ್ರಹಿಕೆ , ಇಚ್ಛೆ, ಮುಂತಾದ ಶಕ್ತಿಗಳ ಅರಿವಾಗಿರುತ್ತದೆ. ಹೀಗೆ ಬದಲಾದ ಮನಸ್ಸಿಗೆ ಇಚ್ಛಾಶಕ್ತಿ ಬರುತ್ತದೆ. ಇಚ್ಛಾಶಕ್ತಿ ಅಭ್ಯಾಸ ಮಾಡುವ ಉಪಾಯವೆಂದರೆ ಸಾಧಕನು ತನ್ನ ಕಣ್ಣುಗಳನ್ನು ಮುಚ್ಚಿಕೊಂಡು ಒಂದು ವಸ್ತುವಿನ ಆಕಾರವನ್ನು ಮನಸ್ಸಿನಲ್ಲಿ ಕಲ್ಪಿಸಿ ಅದನ್ನು ತಾನು ಬೇಕಿನಿಸಿದಷ್ಟು ಹೊತ್ತು ನಿಲ್ಲಿಸಲು ಬರಬೇಕು. ಆ ಕಲ್ಪಿತ ವಸ್ತುವು ನಮ್ಮ ಇಚ್ಛಾನುಸಾರ ಚಲಿಸುತ್ತದೆ,  ಅಂದರೆ , ಬಲಗಡೆ ಎಂದುಕೊAಡರೆ ಬಲಗಡೆ ಎಡಗಡೆ ಎಂದರೆ ಎಡಗಡೆ ಚಲಿಸುತ್ತದೆ. ನಿಲ್ಲು ಎಂದರೆ ನಿಲ್ಲಬೇಕು. ದೊಡ್ಡದಾಗು ಎಂದರೆ ನಮ್ಮ ಮನೋಆವರಣದಲ್ಲಿಯೇ ಅದು ಬೆಳಯುತ್ತದೆ. ಬದಲಾಗು ಎಂದರೆ ನಿಶ್ಚಿತ ಆಕಾರಕ್ಕೆ ಬದಲಾಗುತ್ತದೆ. ಇಂತಹ ಹಲವಾರು ಕ್ರಿಯೆಗಳನ್ನು ಅಭ್ಯಾಸ ಮಾಡಿ ನಮ್ಮ ಇಚ್ಛಾಶಕ್ತಿಯನ್ನು ಬಲಗೊಳಿಸಕೊಳ್ಳಬೇಕು. ನಂತರ ಮನೋ ಆವರಣವನ್ನು ತೊಡೆದು ಆ ಶಕ್ತಿಯನ್ನು ಪ್ರಾಪಂಚಿಕವಾಗಿ ತೊಡಗಿಸುವುದನ್ನೇ ಸಂಕಲ್ಪ ಶಕ್ತಿಯೆನ್ನುತ್ತಾರೆ. 
•    ಸಂಕಲ್ಪ ಸಿದ್ಧಿಯ ನಿದರ್ಶನ/ ಉಪಯೋಗ:
ಸಕಲ ಪ್ರಾಣಿಗಳ ಮನಸ್ಸಿನ ಮೇಲೆ ನಮ್ಮ ಮನೋಹಿಡಿತ ಸಾಧಿಸಬಹುದು. 
ಉದಾಹರಣೆಗೆ: ನಮ್ಮಿಂದ ಎಷ್ಟೋ ದೂರದಲ್ಲಿ ನಿಂತ ಹಸು ನಾವು ಮನಸ್ಸಿನಲ್ಲಿಯೇ ಕರೆದರೂ ನಮ್ಮ ಬಳಿಗೆ ಬರುತ್ತದೆ. ಸರಿದಾಡುವ ಸರ್ಪಕ್ಕೆ ನಿಲ್ಲು ಎಂದರೆ ಅತ್ತಿತ್ತ ಸರಿಯದಂತೆ ನಿಶ್ಚಲವಾಗಿ ನಿಲ್ಲುತ್ತದೆ. ಹಾರುವ ಹಕ್ಕಿಗೆ ಹಾರಾಡದಂತೆ ಸುಮ್ಮನಾಗುವಂತೆ ಮಾಡಬಹುದು. 
ಸರ್ವ ಜನರಲ್ಲಿಯೂ ಹಿಡಿತ ಸಾಧಿಸಬಹುದು: 
ನಮ್ಮ ಶತ್ರುಗಳೂ ನಮ್ಮ ಸೇವಕರಾಗುತ್ತಾರೆ. ಅನೇಕರು ಆತ್ಮೀಯರಾಗುತ್ತಾರೆ. ಉತ್ತಮ ಸಾಮಾಜಿಕ , ಆರ್ಥಿಕ ಗೌರವಗಳನ್ನು ನಮ್ಮದಾಗುತ್ತವೆ. ಮನಸ್ಸಿಟ್ಟು ಆಡಿದ ಮಾತು ಎಂದಿಗೂ ಸುಳ್ಳಾಗುವುದಿಲ್ಲ , ಊಹಿಸಿದ ಊಹೆಗಳು ಕಾರ್ಯರೂಪದಲ್ಲಿ ತೋರದೇ ಇರುವುದಿಲ್ಲ. ಸಂಕಲ್ಪ ಸಿದ್ಧಿ ಪಡೆದವರು ಇಟ್ಟರೆ ಶಾಪ ಕೊಟ್ಟರೆ ವರ. 
ವಸ್ತುಗಳ ಮೇಲಿೆನ ಹಿಡಿತ: 
ಒಂದು ಹೂವನ್ನು ನೋಡಿ ಬಾಡಿಹೋಗು ಎಂದರೆ ಕೆಲವೇ ಸಮಯದಲ್ಲಿ ಮುದುಡಿಹೋಗುತ್ತದೆ. ಒಣಗಿದ ಹೂವನ್ನು ಪುನಃ ಅರಳಿಸ ಬಹುದು. ವಸ್ತುಗಳ ಬಣ್ಣ ಬದಲಿಸ ಬಹುದು.ಆಕಾಶದಲ್ಲಿ ಓಡಾಡುವ ಮೋಡದ ಚಲನೆ ನಿಯಂತ್ರಿಸಬಹುದು. ಮಳೆ ತರಿಸಬಹುದು. ಬೇಸಿಗೆಯ ಬಿಸಿಲಲ್ಲಿ ತಾಪವಾದಾಗÀ ಒಂದು ಕೊಠಡಿಯೊಳಗೆ ಕುಳಿತು ಆ ಕೊಠಡಿಯನ್ನಷ್ಟೇ ತಂಪಾಗಿಸಬಹುದು. 
    ಆತ್ಮ ಸಿದ್ಧಿ: 
ಸಂಕಲ್ಪ ಸಿದ್ದಿಯಾದ ನಂತರ ಆತ್ಮ ಸಿದ್ಧಿಯಲ್ಲಿ ತೊಡಗಬೇಕು. ಅರ್ಧ ರಾತ್ರಿಯ ನಂತರ ಕತ್ತಲಲ್ಲಿ ನಮ್ಮ ದೇಹವನ್ನು ಅನುಕೂಲಕರ ಆಸನದಲ್ಲಿ ನಿಶ್ಚಲವಾಗಿಸಿಕೊಂಡು ನಮ್ಮ ಆತ್ಮವನ್ನು ಅನುಭವಿಸಲು ಪ್ರಯತ್ನಿಸಬೇಕು. ಕೆಲವೇ ದಿನಗಳಲ್ಲಿ ನಮ್ಮ ಆತ್ಮ ( ಅಥವಾ ಸೂಕ್ಷö್ಮ ಶರೀರ)  ನಮ್ಮ ಎದೆಯ ಸಮೀಪದಲ್ಲಿ ಅಂಗುಷ್ಟದ ಆಕಾರದಲ್ಲಿ ಜ್ಯೋತಿ ಸ್ವರೂಪವಾಗಿ ಕಾಣಿಸಿಕೊಳ್ಳುತ್ತದೆ. ಹೀಗೆ ಅನುಭವಕ್ಕೆ ಸಾಧಿಸಿದ ನಂತರ ಆ ಆತ್ಮವನ್ನು ಅಲುಗಾಡಿಸಲು ಅಂದರೆ ಮೇಲೆ ಕೆಳಗೆ ಅಕ್ಕ ಪಕ್ಕ ಓಡಾಡಿಸಲು ಕಲಿಯಬೇಕು ನಂತರ ನಮ್ಮ ದೇಹವನ್ನು ಬಿಟ್ಟು ಹೊರ ತರಲು ಪ್ರಯತ್ನಿಸಬೇಕು. ಹೊರ ತರುವುದನ್ನು ಅಭ್ಯಾಸ ಮಾಡಿದಲ್ಲಿ ನಮಗೆ ಸರ್ವ ಸಂಚರಣತ್ವ ಪ್ರಾಪ್ತಿಯಾಗುತ್ತದೆ. ಅಂದರೆ ನಾವು ನಮ್ಮ ಸೂಕ್ಷö್ಮ ಶರೀರದ ಸಹಾಯದಿಂದ ಎಲ್ಲಿ ಬೇಕಾದಲ್ಲಿ ಸಂಚರಿಸಬಹುದು. ಪರ್ವತ, ನೀರು, ಗಾಳಿ, ಭೂಮಿ, ಆಕಾಶ ಹೀಗೆ ಎಲ್ಲೆಂದರಲ್ಲಿ ತೂರಿಕೊಳ್ಳಬಹುದು. ನಮಗೆ ಪ್ರವೇಶ- ಇನ್ನೊಂದು ವಸ್ತು / ವೈಕ್ತಿಯ ಮನಸ್ಸಿನೊಳಗೆ ಸೇರಿಕೊಳ್ಳಲು ಮತ್ತು ಆವೇಶ- ಇನ್ನೊಂದು ವಸ್ತು / ವೈಕ್ತಿಯ ಮನಸ್ಸನ್ನು ನಮ್ಮ ಮನಸ್ಸಿನೊಳಗೆ ಸೇರಿಸಿಕೊಳ್ಳಲು ಬರುತ್ತದೆ. ಹೀಗೆ ಸರ್ವ ಸಂಚರಣ ಶಕ್ತಿ ಸಾಧಿಸಿದ ಆತ್ಮ ತನಗೆ ತಾನೇ ಆ ವಿಶ್ವ ಶಕ್ತಿಯನ್ನು ಅರಿಯಲು ತೊಡಗುತ್ತದೆ. ವಿಶ್ವ ಸಂಚಾರಿಯಾಗುತ್ತದೆ. ಕಾಲಾತೀತವಾಗುತ್ತದೆ. ಭೂತ ಭüವಿಷತ್ ವರ್ತಮಾನದ ಸಂಗತಿಗಳಿಗೆ ಸಾಕ್ಷಿಯಾಗುತ್ತದೆ. ಕೊನೆಗೆ ಬ್ರಹ್ಮಜ್ಞಾನವನ್ನು ಪಡೆದು ಸ್ಥೂಲ, ಸೂಕ್ಷö್ಮ, ಕಾರಣ , ಮಹಾಕಾರಣ ಸ್ಥಿತಿಗಳನ್ನು ಮೀರಿ ಪರಮ ಸಚ್ಚಿದಾನಂದ ಸ್ಥಿತಿ ಪಡೆದು ಪರಬ್ರಹ್ಮವೇ ತಾನಾಗುತ್ತದೆ. ಹೀಗೆ ಮನಸಿನಲ್ಲಿ ಬುದ್ದಿಯ ಎಲ್ಲೆ ತನ್ನ ಎಲ್ಲೆ ಮೀರಿ ಎಲ್ಲಿ ಕೊನೆಯಾಗುವುದೋ  ಆ ಸಚ್ಚಿದಾನಂದ ಸ್ಥಿತಿಯಿಂದ ಆಧ್ಯಾತ್ಮ ಆರಂಭವಾಗುವುದು.  


 

 

 

 


    
    

 

Category:Spirituality



ProfileImg

Written by Kalinga Hegade D N

0 Followers

0 Following