ಒಳ್ಳೆಯ ಮನಸ್ಸು ಹೇಗಿದ್ದರೆ ಚೆನ್ನಾ?

ಒಂದು ಅನುಭವ

ProfileImg
07 May '24
2 min read


image

ನಾನು ಕೃಷ್ಣಮೂರ್ತಿ ಹೈಕಾಡಿ ಎಂ ಎ ಬಿ.ಇಡಿ ಪದವೀಧರ. ಸ್ವಲ್ಪ ಸಮಯ ಶಿಕ್ಷಕ ವೃತ್ತಿ ಮಾಡಿ ಈಗ ಸುಮಾರು 10 ವರುಷಗಳಿಂದ ಛಾಯಾಗ್ರಾಹಕನಾಗಿ ನನ್ನದೇ ಸ್ಟುಡಿಯೋ ನಡೆಸುತ್ತಿದ್ದೇನೆ. ಪ್ರತಿ ದಿನ ನಾವು ಮದುವೆ ಅಥವ ಇನ್ನಿತರ ಶುಭ ಕಾರ್ಯಕ್ರಮಗಳಿಗೆ ಹೋದಾಗ ಒಂದೊಂದು ಅನುಭವ ಅತ್ಯಂತ ಮನಸ್ಸಿಗೆ ಮುದ ನೀಡುತ್ತದೆ.  ಇತ್ತೀಚೆಗೆ ಫೋಟೋಗ್ರಫಿಯಲ್ಲಿ ಅತ್ಯಂತ ಆಧುನಿಕ ಸಾಮಗ್ರಿಗಳು ಒಂದರ ಮೇಲೊಂದರಂತೆ ಬರುತ್ತಲಿರುವುದು. ಕೆಲವರು ಹೊಸ ತಂತ್ರಜ್ಷಾನವನ್ನು ಉಪಯೋಗಿಸುವರು ಕೆಲವರು ಇನ್ನೂ ಹಳೆಯದು ಸಾಕು ನಮ್ಮ ಬಜೆಟ್‌ ಇಸ್ಟೆ ಎನ್ನುವವರು ಇದ್ದಾರೆ. ಹೊಸತನ್ನು ಅಳವಡಿಸಿಕೊಂಡು ಆಧುನಿಕ ಜಗತ್ತಿನಲ್ಲಿ ಓಡುತ್ತಾ ಇರಬೇಕಾದ ಪರಿಸ್ಥಿತಿ ಛಾಯಾಗ್ರಾಹಕರದ್ದು . ಇರುವಲ್ಲಿ ಸ್ವಲ್ಪ ಮಂದಿ ಅತ್ಯಂತ ಆಧುನಿಕತೆ ಮತ್ತು ಉತ್ತಮ ಮೌಲ್ಯದ ಫೋಟೊಗ್ರಫಿಗೆ ಬೇಕಾಗುವ ಉಪಕರಣವನ್ನು  ಕಾರ್ಯಕ್ರಮದಲ್ಲಿ ಉಪಯೋಗಿಸುವುದು ಸಹಜ ಅದರಲ್ಲಿ ನಾನೂ ಒಬ್ಬ . ಮದುವೆ ಸಮಾರಂಭದಲ್ಲಿ ಎದುರು ಬರುವ ಛಾಯಾಗ್ರಾಹಕ ಯಾವ ಕ್ಯಾಮರ ತಂದಿದ್ದಾನೆ ಮತ್ತು ಯಾವೆಲ್ಲ ಹೊಸ ತಂತ್ರಜ್ಞಾನ ಉಪಯೋಗಿಸಿ ಉತ್ತಮ ಫೋಟೋ ತನಗಿಂತಲು ಒಳ್ಳೆಯ ಗುಣಮಟ್ಟದಲ್ಲಿ  ತೆಗೆಯ ಬಹುದು ಎಂದು ಇನ್ನೊಬ್ಬ ಫೋಟೋಗ್ರಾಫರ ಆಲೋಚಿಸುವುದು ಸಹಜ. ಅಂದು ಒಂದು ಮದುವೆ ಸಮಾರಂಭದಲ್ಲಿ ನನಗಿಂತ 15 ರಿಂದ 16 ವರುಷ ಅನುಭವಸ್ಥ ಛಾಯಾಗ್ರಾಹಕರಿದ್ದು  ನಾನು ಬಂದಿದ್ದು ನೋಡಿ ಖುಷಿಪಟ್ಟರು. ಮದುವೆ ಎಲ್ಲಾ ಫೋಟೋಗಳನ್ನು ಮಾತನಾಡುತ್ತಾ ಹರಟೆ ಹೊಡೆಯುತ್ತಾ  ಸೆರೆ ಹಿಡಿದೆವು ಕೊನೆಯಲ್ಲಿ ಮದುವೆ ಜೊಡಿಗಳ ಫೋಟೋ ತೆಗೆಯುವ ಕಾರ್ಯಕ್ರಮ ಮಾತ್ರವೇ.  ನಮ್ಮ ವಿಡಿಯೋಗ್ರಾಫರ್‌  ಜೋಡಿ ಫೋಟೋವನ್ನು ಮಂಟಪದ ಹೊರಗಡೆ ಹಸಿರು ಮರದ ಕೆಳಗೆ ತೆಗೆಯುವ  ಎಂದಾಗ ಸ್ವಲ್ಪ ಸಮಯ ಯೋಚಿಸಿ ಬೇಡ  ಒಳಗೆ ಮಂಟಪದ ಮೇಲೆ ತೆಗೆಯುವ ನಮ್ಮ ಎದುರು  ಇರುವ ಫೋಟೋಗ್ರಾಫರ್‌ ಹೊರಗಡೆ ತೆಗೆಯಲು ಬೇಕಾದ ಲೈಟ್‌ ಇಲ್ಲಾ  ಹಾಗಾಗಿ ಅವರಿಗೆ ಬೇಕಾದ ಹಾಗೆ ಒಳಗಡೆ ತೆಗೆಯುವ ಎಂದಾಗ  ವಿಡಿಯೋ ಗ್ರಾಫರ್‌ ಒಪ್ಪಿದರು. ಕೊನೆಗೆ ಮದುವೆ ಮಂಟಪದ ಒಳಗೆ  ವಧು ವರರ ಜೋಡಿ ಫೋಟೊವನ್ನು ತೆಗೆದು ಮನೆಗೆ  ಹೊರಟಾಗ ನಮ್ಮ ಎದುರು ಬಂದಿರುವ ಫೋಟೋಗ್ರಾಫರ ಕೈಕೊಟ್ಟು ತಬ್ಬಿಕೊಂಡರು ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು  ಮಂಟಪದ ಒಳಗಡೆ ಫೋಟೊ ತೆಗೆಯಲು ಸಹಕರಿಸಿದ್ದಕ್ಕೆ ಧನ್ಯವಾದ ಹೇಳಿದರು. ಜೊತೆಗೊಂದು ಮಾತು ಹೇಳಿದರು  ಮನಸ್ಸು ಒಳ್ಳೇದಿದೆ ನಿಮ್ಮದು ಎಂದರು. ಆತ್ಮೀಯರೇ ಪರಿಸ್ಥಿತಿ ಎಲ್ಲರದ್ದು  ಒಂದೇ ರೀತಿ ಇರುತ್ತದೆ ಎಂದು ಹೇಳಲು ಸಾದ್ಯವಿಲ್ಲ. ಹೊಸತನಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ತನಗಿಂತ ಆತ ಕಡಿಮೆ ಎನ್ನುವ ಭಾವನೆ ಮನಸಿನಲ್ಲಿ ಬಾರದೇ ಎಲ್ಲರೂ ಒಂದಾಗಿ ಇರುವ ಎನ್ನುವ ಮನಸ್ಸು ಇದ್ದಾಗ ಮತ್ತು ಎದುರಿನವನ ಪರಿಸ್ಥಿತಿ ಎಂತಹದ್ದು ಎಂದು ನಾವು ಅರಿತಾಗ ಮಾತ್ರವೇ  ನಮ್ಮ ನಡುವೆ ಉತ್ತಮ ಸಾಮರಸ್ಯ ಬೆಳೆಯುತ್ತದೆ. ಮತ್ತು ಸ್ನೇಹ ಗಟ್ಟಿಯಾಗುತ್ತದೆ. ಮನಸ್ಸು ಯಾವಾಗಲು ಒಳ್ಳೆಯದನ್ನೇ ಮಾಡಿಸುತ್ತದೆ. 

Category:Personal Experience



ProfileImg

Written by krishnamurthy Haikady

0 Followers

0 Following