ಕಣ್ಣಲ್ಲಿ ಒಮ್ಮೆಯೂ ನೋಡಿರದ ಅಪರಿಚಿತರೂ ದ್ವೇಷ ಸಾಧಿಸುವ ಪರಿಗೆ ಏನೆನ್ನಲಿ ?

ಆತ್ಮ ಕಥೆಯ ಬಿಡಿ ಭಾಗಗಳು:8

ProfileImg
15 May '24
5 min read


image


ಕೊಟ್ಟವರ ಕೈ ಯಾವಾಗಲೂ ಮೇಲೆ 
ತಗೊಂಡವರ ಕೈ ಯಾವಾಗಲೂ ಕೆಳಗೆ

ಇದು ಮೂರು ಕಾಲಕ್ಕೂ ಸಲ್ಲುವ ಮಾತು.ಇದನ್ನು ನಾನು ಮೊದಲು ಕೇಳಿದ್ದು ಚಿನ್ಮಯ ಶಾಲೆಯ ಹಿರಿಯ ಶಿಕ್ಷಕರಾಗಿದ್ದ ಶೈಲಜಾ ಮಿಸ್ ಬಾಯಿಂದ.ಯಾವ ಸಂದರ್ಭದಲ್ಲಿ ಈ ಮಾತು ಬಂತೆಂದು ನೆನಪಿಗೆ ಬರುತ್ತಿಲ್ಲ
ಅವರು ಆ ಮಾತನ್ನು ಹೇಳಿದಾಗ ನನಗೂ ಅದು ನೂರಕ್ಕೆ ನೂರು ನಿಜವಾದ ಮಾತೆನ್ನಿಸಿತು
ಅದುನಿಜ ತಾನೇ? ತಗೊಂಡವರ ಕೈ ಯಾವಾಗಲೂ ಕೆಳಗೆಯೇ ಇರುತ್ತದೆ ,ತಗೊಳ್ಳಬೇಕಾದರೆ ಕೈ ಚಾಚಿ ಹಿಡಿಯಬೇಕು.ಕೊಡುವಾತನ ಕೈ ಮೇಲೆಯೇ ಇರುತ್ತದೆ ಭೌತಿಕವಾಗಿ ಮತ್ತು ಮಾನಸಿಕವಾಗಿ ಇದು ನಿಜವಾದುದೇ ಆಗಿದೆ. 

ನನ್ಒನ ಹಿತೈಷಿಗಳ ಸಲಹೆಯಂತೆ ಒಬ್ಬರು ದಾನಿಯಲ್ಲಿ  ನಾನು ಕರಾವಳಿಯ ಸಾವಿರದೊಂದು ದೈವಗಳು ಗ್ರಂಥ ಪ್ರಕಟಣೆಗೆ ಅನುದಾನ ನೀಡುವಂತೆ ಕೇಳಿದ್ದೆ

ಈಗ ಪುಸ್ತಕ ಪ್ಕಟವಾದರೆ ಮಾರಾಟ ಆಗಲಾರದು.. ಮುನ್ನೂರು ಜನರ ಪಟ್ಟಿ ಬೇಕು ಮರು ಮುದ್ರಣ ಆಗುವಾಗ 500 ಪ್ರತಿ ತಗೊಳ್ತೇವೆ ಎಂಬರ್ಥದ ಪತ್ರ ಬಂದಿತ್ತು 

ಈಗ  ನನಗೆ ಪುಸ್ತಕ ಪ್ರಕಟಣೆ ಗೆ ಅನುದಾನ ಸಿಗದ್ದೇ ಒಳ್ಳೆಯದಾಯಿತು ಎನಿಸಿದೆ.ಯಾಕೆಂದರೆ ನನ್ನ ಕೈ ಕೆಳಗಾಗದೆ ಮೇಲೆಯೇ ಉಳಿಯಿತಲ್ಲ..


ಆದರೂ ಕೆಲವೊಮ್ಮೆ ನಾವು ನಿರೀಕ್ಷಿಸಿದ ಸಹಾಯ ಬಾರದೇ ಇದ್ದಾಗ ನಮಗೆ ಖೇದವೆನಿಸುತ್ತದೆ. 

ಮೂರು ವರ್ಷಗಳ ಮೊದಲು ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ತುಳು ಸಂಸ್ಕೃತಿ ಅದರಲ್ಲೂ ದೈವಗಳ ಕುರಿತಾದ ಅಧ್ಯಯನ ಹಾಗೂ ಅದರ ಪ್ರಕಟಣೆಗೆ ಅನುದಾನದ ಅಗತ್ಯವಿತ್ತು
ಈ ನಿಟ್ಟಿನಲ್ಲಿ ನಾನು ತುಳು ಅಕಾಡೆಮಿ ಹಾಗೂ ತುಳುವಿನ ಅಭಿವೃದ್ಧಿಗಾಗಿ ಅಪಾರ ಕೆಲಸ ಮಾಡುತ್ತಿರುವ ದೊಡ್ಡ ದಾನಿಯೊಬ್ಬರಲ್ಲಿ  ಸಹಾಯವನ್ನು ಕೇಳಿದ್ದೆ.ಒಂದು ನಯಾ ಪೈಸೆಯ ಸಹಾಯ ನನಗೆ ಬರಲಿಲ್ಲ.ಆ ಕ್ಷಣಕ್ಕೆ ನನಗದು ಬೇಸರವನ್ನುಂಟುಮಾಡಿತ್ತು.

ಯಾಕೆಂದರೆ ದೈವಗಳ ಕುರಿತಾದ ಮಾಹಿತಿ ಸಂಗ್ರಹ ಹಾಗೂ ಪ್ರಕಟಣೆಗೆ ತುಂಬಾ ಖರ್ಚಿದೆ.ಇದು ಕ್ಷೇತ್ರ ಕಾರ್ಯ ಅಧ್ಯಯನ ಮಾಡಿದವರಿಗೆ ಮಾತ್ರ ಅರ್ಥವಾಗಬಹುದಾದ ವಿಚಾರ.

ಇಲ್ಲಿ ನನಗೆ ಸಹಾಯ ಬಾರದೇ ಇರುವುದಕ್ಕೆ ಕಾರಣವೇನು ? ಅದರ ಹಿಂದಿನ ಕೈಗಳು ಯಾರದೆಂದು ನನಗೆ ನಂತರ ಗೊತ್ತಾಗಿದೆ.


ನನಗೆ ಪರಿಚಯವೇ ಇಲ್ಲದವರು ವಿನಾಕಾರಣ ದ್ವೇಷ ಸಾಧಿಸುತ್ತಿರುವುದು ತಿಳಿದಾಗ ನನಗೆ ಅಚ್ಚರಿ ಎನಿಸುತ್ತದೆ.

ನನಗೆ ಪರಿಚಿತ ವ್ಯಕ್ತಿಗಳಾಗಿದ್ದರೆ ನನ್ನಲ್ಲಿ ದ್ವೇಷ ಸಾಧಿಸಲು ಯಾವುದಾದರೂ ಕಾರಣವಿದ್ದರೂ ಇದ್ದೀತು‌.ಆದರೆ ಪರಿಚಯವೇ ಇಲ್ಲದ ವ್ಯಕ್ತಿಗಳೂ ದ್ವೇಷ ಸಾಧಿಸುತ್ತಾರೆಂದರೆ ಅದಕ್ಕೆ ಕಾರಣವೇನು ಇದ್ದೀತು ? ಇದೊಂದು ಉದಾಹರಣೆ ಅಷ್ಟೇ.

ಇನ್ನೊಂದು ಪ್ರಕರಣ ಇದು

. ಯೂನಿವರ್ಸಿಟಿಯ   ಕನ್ನಡ ವಿಭಾಗದ ಮುಖ್ಯಸ್ಥರೊಬ್ಬರೂ ಹೀಗೆಯೇ ದ್ವೇಷ ಸಾಧಿಸಿದ್ದರು.ವಾಸ್ತವದಲ್ಲಿ ನನ್ನ ಪರಿಚಯವೇ ಅವರಿಗಿಲ್ಲ.ನಾನು ಬೆಂಗಳೂರಿನ ಆ ಯುನಿವರ್ಸಿಟಿಯ ಅಧಿಕೃತ ಅಧ್ಯಯನ ಕೇಂದ್ರದ ಮೂಲಕ ಎಂಎ ಗೆ ಕಟ್ಟಿದ್ದೆ.ಅಂಕ ಗಳಿಕೆಗಾಗಿಯೇ ಎರಡನೆಯ ಬಾರಿ ಕನ್ನಡ ಎಂಎ ಗೆ ಕಟ್ಟಿದ್ದಾಗಿತ್ತು.ಹಾಗಾಗಿ ಬಹಳ ಚೆನ್ನಾಗಿ ಓದಿದ್ದೆ.ಆದರೆ ಮೊದಲ ವರ್ಷದ ಫಲಿತಾಂಶ ಬಂದಾಗ 69% ಬಂದಿತ್ತು .ಹಾಗಾಗಿ ಯಾಕೆ ಹೀಗಾಯಿತೆಂದು ವಿಚಾರಿಸಲು ಆ ಯೂನಿವರ್ಸಿಟಿಗೆ ಹೋಗಿ ನಾನು ಮತ್ತು ಪ್ರಸಾಸ್ ಕನ್ನಡ ವಿಭಾಗದ ಮುಖ್ಯಸ್ಥರನ್ನು ಭೇಟಿಯಾದೆವು.ಆಗ ಅವರು ನನ್ನ ಅಂಕ ಪಟ್ಟಿಯನ್ನು ತಿರುಗಿಸಿ ತಿರುಗಿಸಿ ನೋಡಿದ್ದರು.ಇಷ್ಟು ಅಂಕಗಳಾದರೂ ಹೇಗೆ ಬಂತೆಂದು..ನನಗೆ ಅಂಕ ಕೊಡದೆ ಇರಲು ಕಾರಣ ಇಷ್ಟೇ..ಆ ಡೀನ್ ? ಬೆಂಗಳೂರಿನ ಅಧ್ಯಯನ ಕೇಂದ್ರಕ್ಕೆ ಬಂದಿದ್ದಾಗ ಇವರು ಸರಿಯಾಗಿ ಟ್ರೀಟ್  ಮಾಡಲಿಲ್ಲವಂತೆ.ಬಹುಶಃ ಲಂಚ ಕೊಡಲಿಲ್ವೋ ಏನೋ ಗೊತ್ತಿಲ್ಲ.ಅದಕ್ಕೆ ಆ ಅಧ್ಯಯನ ಕೇಂದ್ರದ ಮೂಲಕ ಎಂಎ ಗೆ ಅಥವಾ ಇನ್ಯಾವುದೇ ಪದವಿಗೆ ಕಟ್ಟಿದವರಿಗೆ ಉತ್ತಮ ಅಂಕ ಬಾರದಂತೆ ನೋಡಿಕೊಂಡಿದ್ದರು.

ಅಬ್ಬಾ..ದೊಡ್ಡವರ ಸಣ್ಣತನವೇ ಎನಿಸಿತ್ತು ನನಗೆ.ಆದರೂ ಬಿಡದೆ ಮರು ಮೌಲ್ಯ ಮಾಪನಕ್ಕೆ ಹಾಕಿದೆ.exact ಅಷ್ಟೇ ಅಂಕಗಳು ಬಂದವು.ನಂತರಾ ಯೂನಿವರ್ಸಿಟಿ ಬಿಟ್ಟು  ನಾನು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದಲ್ಲಿ ಕನ್ನಡ ಎಂಎ ಗೆ ಕಟ್ಟಿ ನಾಲ್ಕನೆಯ ರ‌್ಯಾಂಕನ್ನೂ 77% ಅಂಕಗಳನ್ನೂ ಗಳಿಸಿದೆ.


ಇದೇ ರೀತಿ ಇನ್ನೊಂದು ವಿಷಯವೂ ನಡೆದಿದೆ.ಬಹುಶಃ 2014-15 ನೇ ಇಸವಿ ಇರಬೇಕು.ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಷತ್ ನ ಪದಾಧಿಕಾರಿಯೊಬ್ಬರು ಮುಖತಃ ಭೇಟಿಯಾಗಲು ಸಿಕ್ಕಿದ್ದರು ಎಲ್ಲಿ ಯಾವ ಕಾರ್ಯಕ್ರಮದಲ್ಲಿ ಭೇಟಿಯಾದದ್ದು ಎಂದು ನನಗೆ ನೆನಪಾಗುತ್ತಿಲ್ಲ.ಆದರೆ ಇಲ್ಲಿ ನಡೆದ ವೃತ್ತಾಂತವೊಂದರ ಬಗ್ಗೆ ಅವರಿಗೇ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಂಡಿರುವೆ
ಆಗ ಅವರು ಸಧ್ಯದಲ್ಲಿಯೇ ನಡೆಯಲಿದ್ದ ಬಂಟ್ವಾಳ ತಾಲೂಕಿನ ಸಾಹಿತ್ಯ ಸಮ್ಮಳನದ ವಿಚಾರ ಗೋಷ್ಟಿಯೊಂದರ ಅಧ್ಯಕ್ಷತೆಗೆ ಆಹ್ವಾನಿಸುತ್ತೇವೆ ಬನ್ನಿ ಎಂದಿದ್ದರು.ನಾನೂ ಬರುತ್ತೇನೆ ಎಂದು ಒಪ್ಪಿದ್ದೆ.ನಂತರ 
ನಾನು ಬೆಂಗಳೂರಿಗೆ ವರ್ಗವಾಗಿ ಬಂದೆ.ಆದರೆ ಬಂಟ್ವಾಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಆಹ್ವಾನ ಬರಲಿಲ್ಲ
ನಾನೂ ಈ ವಿಷಯ ಮರೆತಿದ್ದೆ.ಬ್ಲಾಗ್ ಬರೆಯಲು ಶುರುಮಾಡಿದ ನಂತರ ನನ್ನ ಅಧ್ಯಯನದ ವಿಚಾರವನ್ನು ಆಸಕ್ತರ ಜೊತೆ ಹಂಚಿಕೊಳ್ಳಲು ನನಗೆ ಅನ್ಯ ವೇದಿಕೆ ತೀರಾ ಅಗತ್ಯವೇನೂ ಆಗಿರಲಿಲ್ಲ.ಬ್ಲಾಹ್ ಬರೆಯುವ ತನಕ ನನಗದರ ಅಗತ್ಯವಿತ್ತು.
ಈ ವಿಷಯ ನನಗೆ ಮತ್ತೆ ನೆನಪಾದದ್ದು ಇತ್ತೀಚೆಗೆ.ಹಾಗಾಗಿ ಅವತ್ತು ನನ್ನನ್ನು ಕರೆಯುತ್ತೇನೆ ಎಂದವರು ಯಾಕೆ ಕರೆಯಲಿಲ್ಲ ಎಂದು ಅವರಲ್ಲಿಯೇ ವಿಚಾರಿಸಿದೆ.ಆಗಲೂ ನನಗೆ ಅಪರಿತವಾಗಿದ್ದ ವ್ಯಕ್ತಿಯೊಬ್ಬರು ಅಡ್ಡಗಾಲು ಹಾಕಿದ್ದು ತಿಳಿದಾಗ ನನಗೆ ನಿಜಕ್ಕೂ ಅಚ್ಚರಿ ಆಯಿತು.ಆ ವ್ಯಕ್ತಿಯ  ನೇರ ಪರಿಚಯ ನನಗಿಲ್ಲವಾದರೂ ಸಾಹಿತ್ಯಕ ಕ್ಷೇತ್ರದಲ್ಲಿದ್ದ ,ಪ್ರತಿಷ್ಟಿತ ಸಂಸ್ಥೆಯೊಂದರಲ್ಲಿ ಕನ್ನಡ  ಉಪನ್ಯಾಸಕರಾಗಿದ್ದ ಅವರ ಬಗ್ಗೆ ನನಗೆ ಅಪಾರ ಗೌರವ ಇತ್ತು.ಆದರೆ ಅವರೇಕೆ ದ್ವೇಷ ಸಾಧಿಸಿದರು ? ಬೆಳ್ಳಾರೆಯ ಪ್ರಿನ್ಸಿಪಾಲ್ ನನಗೆ ಕಿರುಕುಳ ನೀಡಿದ್ದು ಆ ಸಮಯದಲ್ಲಿ ನಾನವರ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದೆ.ಆ ಕಾರಣಕ್ಕೆ ಈ ವ್ಯಕ್ತಿ ನನ್ನನ್ನು ಬಂಟ್ವಾಳ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಗೆ ಬೇಡ ಎಂದದ್ದಂತೆ..ನನಗೆ ತೊಂದರೆ ಕೊಟ್ಟವರ ಮೇಲೆ ನಾನು ದೂರು ನೀಡುದಕ್ಕೂ ಸಾಹಿತ್ಯ ಸಮ್ಮೇಳನಕ್ಕೂ ಏನು ಸಂಬಂಧ ? ಆರೋಪಿಗಳನ್ನಾದರೂ ಅವರು ಆರೋಪ ಮುಕ್ತರಾಗುವ ತನಕ ಸಾಹಿತ್ಯ ಸಮ್ಮೇಳನದ ಅದ್ಯಕ್ಷತೆಗೆ ಬೇಡ ಎನ್ನಬಹುದೋ ಏನೋ..ಇಲ್ಲಿ ನಾನು ಆರೋಪಿಯಲ್ಲ.ನನಗೆ ಕಿರುಕುಳ ಕೊಟ್ಟ ಬಗ್ಗೆ ನಾನು ದೂರು ನೀಡಿದವಳು ಅಷ್ಟೇ..ಪುರುಷ ಪ್ರಧಾನ ಸಮಾಜದ ಲಕ್ಷಣ ಇದೇ ಇರಬೇಕು.ಸ್ತ್ರೀ ಯೊಬ್ಬಳಿಗೆ ತನಗೆ ಅನ್ಯಾಯ ಮಾಡಿದವರ ವಿರುದ್ಧ ದೂರು ಕೊಡುವ ಸ್ವಾತಂತ್ರ್ಯವೂ ಇಲ್ಲ.ಕೊಟ್ಟರೆ ಅಕೆಯ ವಿರುದ್ಧದ ದ್ವೇಷ ಸಾಧಿಸುವವರ ಹಿಂಡು ತಯಾರಾಗುತ್ತದೆ ಎಂದೆನಿಸುತ್ತದೆ.

ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ ಎಂಬ ಸಂಸ್ಥೆ ಯಲ್ಲೂ ಈತ ಮತ್ತೋರ್ವ ಮಂಗಳೂರು ಯೂನಿವರ್ಸಿಟಿ ಪ್ರೊಫೆಸರ್ ಸಾಕಷ್ಟು ರಾಜಕೀಯ ಮಾಡಿರುವುದನ್ನು ನನ್ನ ಸ್ನೇಹಿತೆ ಒಬ್ಬರು ತಿಳಿಸಿದ್ದಾರೆ 

 

 

ಇರಲಿ ಈಗ ಮೊದಲಿನ ವಿಷಯಕ್ಕೆ ಬರುವೆ


ನನ್ನಿಂದ ಮುದ್ರಣಕ್ಕೆ ಮೊದಲೇ ಪಾವತಿಸಿ ನನ್ನ ಕರಾವಳಿಯ ಸಾವಿರದೊಂದು ದೈವಗಳು ಪುಸ್ತಕ ಖರೀದಿಸಿದ್ದ ಬೆಂಗಳೂರಿನ  ಫ್ರೊಫೆಸರೊಬ್ಬರು  ನಾನು ಸಹಾಯ ಕೇಳಿದ್ದ  ದಾನಿಗಳಿಗೆ  ನನ್ನ ಕರಾವಳಿಯ ಸಾವಿರದೊಂದು ದೈವಗಳು ಕೃತಿಯನ್ನು ಪ್ರೀತಿಯಿಂದ ಕಾಣಿಕೆ ನೀಡಿದರು.

ನಾನು ಅದಕ್ಕೂ ಮೊದಲೇ ಅವರಿಗೆ  ಈ ಪುಸ್ತಕದ ಗೌರವ ಪ್ರತಿ ನೀಡಿದ್ದು ಅವರಿಗೆ ಗೊತ್ತಿರಲಿಲ್ಲ‌
ನಂತರ ಮಾತಿಗೆ ಸಿಕ್ಕಾಗ ಒಂದಿನ ನನ್ನ ಕೃತಿಯನ್ನು ನೀಡಿದ ಬಗ್ಗೆ ತಿಳಿಸಿದರು.ಆಗ ನಾನುಈ ಪುಸ್ತಕದ ಪ್ರತಿಯೊಂದನ್ನು ಅವರು ಖರೀದಿಸಲು ಕೇಳಿದ್ದು ಆಗ ನಾನು ತುಳುವಿಗಾಗಿ ಅಪಾರ ಕೆಲಸ ಮಾಡಿದ ಅವರಿಗೆ  ಗೌರವ ಪ್ರತಿ ನೀಡಿದ್ದನ್ನು ತಿಳಿಸಿದೆ.

ಆಗ ಅವರು  ನಿಮ್ಮಿಂದ ಈ ಪುಸ್ತಕದ ಒಂದಷ್ಟು ಪ್ರತಿಗಳನ್ನು ಅವರ ಸಂಸ್ಥೆಗಳಿಗಾಗಿ ,ಅತಿಥಿಗಳಿಗೆ ನೆನಪಿನ ಕಾಣಿಕೆ ಕೊಡುವುದಕ್ಕಾಗಿ ಖರೀದಿಸಿಲ್ಲವೇ ?ಎಂದು ಕೇಳಿದರು.ಇಲ್ಲವೆಂದೆ.


ಆಗ ಅಲ್ಲಿ ಪುಸ್ತಕ ವಿಭಾಗವನ್ನು ನೋಡಿಕೊಳ್ಳುತ್ತಿರುವವರೊಬ್ಬರ ಬಗ್ಗೆ ತಿಳಿಸಿ ಅವರನ್ನು ಸಂಪರ್ಕಿಸಲು ಬೆಂಗಳೂರಿನ ನನ್ನ ಹಿತೈಷಿಗಳಾದ ಪ್ರೊಫೆಸರ್ ಹೇಳಿದರು.ಅವರಲ್ಲಿ ಆಯಿತೆಂದು ತಲೆಯಾಡಿಸಿದೆ.ಆದರೆ ನನ್ನ ಮುಖ ಭಾವದಿಂದಲೇ ನನಗೆ ಅದು ಸಮ್ಮತವಾಗಿಲ್ಲವೆಂದು ಅವರಿಗರ್ಥವಾಗಿ ಯಾಕೆ ನೀವವರನ್ನು ಸಂಪರ್ಕಿಸಬಾರದು ? ಎಂದು ಕೇಳಿದರು.


ಅವರಲ್ಲಿ ಏನೂ ಹೇಳಲಿಲ್ಲ.ಆಗ ನನಗೆ ಬಂಟ್ವಾಳ ಸಾಹಿತ್ಯ ಸಮ್ಮೇಳನದ ವಿಚಾರ ನೆನಪಿಗೆ ಬಂದು ಆಗ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಚತ್ ನ ಪದಾಧಿಕಾರಿಗಳಾಗಿದ್ದ  ಹಿತೈಷಿಗಳಿಗೆ ಫೋನ್ ಮಾಡಿ ವಿಚಾರಿಸಿದೆ.

ಆಗ ನನಗೆ ಗೊತ್ತಾಯಿತು..ನನಗೆ ಗೊತ್ತೇ ಇಲ್ಲದ ಜನರೂ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು

 


ಇರಲಿ..

ಎಲ್ಲವೂ ದೈವೇಚ್ಛೆ.ದೈವ ದೇವರುಗಳು  ಸದಾ ನನ್ನ ಕೈ ಮೇಲೆ ಇರಬೇಕೆಂದೇ ಹೀಗೆ ನನಗೆ ಎಲ್ಲಿಂದಲೂ ಸಹಾಯ ಬರದೇ ಇರುವಂತೆ ಮಾಡಿ ಸ್ವಯಂ ಅಧ್ಯಯನ ಹಾಗೂ ಪ್ರಕಟಿಸುವ ಸಾಮರ್ಥ್ಯವನ್ನು ಅನುಗ್ರಹಿಸಿರಬಹುದು.

"ಸಾವಿರ ಪುಟಗಳ ದೊಡ್ಡ ಪುಸ್ತಕವನ್ನು ಅದರ ವಿಷಯ ಘನತೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಆರ್ಟ್ ಪೇಪರ್ ನಲ್ಲಿ ಪ್ರಕಟಿಸಲು ದುಡ್ಡಿಗೇನು ಮಾಡಲಿ? ಎಂಬ ಚಿಂತೆಯಲ್ಲಿದ್ದಾಗ ಹಿತೈಷಿಗಳೊಬ್ಬರು ಮುಂಗಡ ಬುಕಿಂಗ್ ಶುರು ಮಾಡಿ.ಈಗಾಗಲೇ ನಿಮ್ಮ ಬರಹಗಳ ಬಗ್ಗೆ ನಿಮ್ಮ ಬಗ್ಗೆ ಜನರಿಗೆ ಗೊತ್ತಿದೆ ಹಾಗಾಗಿ ಪೂರ್ಣ ಬೆಲೆಗಿಂತ ಕಡಿಮೆ ಬೆಲೆ ಇರಿಸಿ ಮುಂಗಡ ಕಾಯ್ದಿರಿಸಲು ಹೇಳಿದರೆ ಜನರು ತಗೊಂಡೇ ತಗೊಳ್ತಾರೆ" ಎಂದು ಸಲಹೆ ನೀಡಿದರು.

ಹಾಗೆಯೇ ಮಾಡಿದೆ.ಯಶಸ್ಸನ್ನು ಪಡೆದೆ ಕೂಡ.
ಯಾರಿಂದಲೂ ಆರ್ಥಿಕ ಸಹಾಯ ಬೇಕಾಗಿ ಬರಲಿಲ್ಲ.ಯಾರಲ್ಲಿ ನಾನು ಸಹಾಯವನ್ನು ಕೇಳಿದ್ದೆನೋ ಅವರಿಗೆ ಗೌರವ ಪ್ರತಿಯನ್ನು ನೀಡುವಂತೆ ಆಯಿತು.ಇದು ನಿಜಕ್ಕೂ ದೈವ ಕೃಪೆಯೇ ತಾನೇ ? 
ಈ ಭೂಮಿಯಲ್ಲಿ ಯಾರೂ ಶಾಶ್ವತರಲ್ಲ.ನಾನೂ ಅಲ್ಲ.ಆದರೆ ನನ್ನ ಅಧ್ಯಯನ ಕೃತಿ ನನ್ನ ನಂತರವೂ ಇರುತ್ತದೆ.

ಕಾಯಕ್ಕೆ ಅಳಿವಿದೆ.ಕಾಯಕಕ್ಕೆ ಅಳಿವು ಇಲ್ಲ ಎಂಬುದು ನಿಶ್ಚಿತ .
ಬಹುಶಃ ನನ್ನ ಬದುಕಿನಲ್ಲಿ ಮಾತ್ರ ಇಂತಹದ್ದು ನಡೆದದ್ದು ಇರಲಾರದು
ಸಮಾಜದಲ್ಲಿ ತನ್ನ ಕಾಲ ಮೇಲೆ ನಿಂತು ಅನ್ಯರಿಗೆ ಬಕೆಟ್ ಹಿಡಿಯದೆ ಸ್ವಂತಿಕೆಯಿಂದ ಬದುಕುವ ಅನ್ಯರಿಗೂ ಇಂತಹ ನಾನಾ ರೀತಿಯ ಅನುಭವಗಳಾಗಿರಬಹುದು.ನನ್ನ ಅನುಭವವನ್ನು ನಾನು ಹಂಚಿಕೊಂಡಿರುವೆ.
 ಡಾ.ಲಕ್ಷ್ಮೀ ಜಿ ಪ್ರಸಾದ 

Category:Personal Experience



ProfileImg

Written by Dr Lakshmi G Prasad

Verified