Do you have a passion for writing?Join Ayra as a Writertoday and start earning.

ಜಾಲ ತಾಣ (ಲಘು ಹಾಸ್ಯ ಬರಹ)

ಮೇ-2024 ರ ಆಯ್ರಾ ಬರವಣಿಗೆ ಸ್ಪರ್ಧೆ

ProfileImg
03 May '24
3 min read


image

 

 

ಮೊನ್ನೆ ಯಾರೋ ಮಾಡಿದ ರೀಲ್ಸ ನೋಡಿದೆ. ಅದರಲ್ಲಿ ಒಂದು ಗಂಡ ಹೆಂಡತಿ,  pregnancy test kit ನಲ್ಲಿ ಪರೀಕ್ಷೆ ಮಾಡಿ, ಎರಡು ಗೆರೆ ಮೂಡುವದನ್ನ ಪ್ರೇಕ್ಷಕರಿಗೆ ತೋರಿಸಿ, ದಂಪತಿಗಳಿಬ್ಬರೂ  ಅಪ್ಪಿಕೊಂಡು ಸಂಭ್ರಮಿಸಿದ್ದು, ಗಂಡ ತನ್ನ ಖುಷಿಯ ಕಣ್ಣನೀರನ್ನು ಒರಸಿಕೊಂಡಿದ್ದನ್ನ ಇನ್ಯಾರಿಂದಲೋ‌ ವಿಡಿಯೋ ಮಾಡಿಸಲಾಗಿತ್ತು. ಅದರಲ್ಲಿ ಗಂಡನ ತಾಯಿ ಕೂಡ ಖುಷಿಪಟ್ಟಿದ್ದನ್ನ ತೋರಿಸಿದ್ದರು. ಯಾವುದೋ ಸಿನಿಮಾದ ದೃಶ್ಯ ನೋಡಿದ ಹಾಗಾಯ್ತು. ಸಿನೆಮಾದವರ  ಮಾತು, ಬಟ್ಟೆ ಬರೆ,  ಜೀವನ ಶೈಲಿಯನ್ನ ಜನರು ಅನುಕರಿಸುವುದು ಹೊಸದಲ್ಲ. ಸಾಮಾಜಿಕ ಜಾಲತಾಣವನ್ನು ಅವರವರ ವಿವೇಚನೆಗೆ ತಕ್ಕಂತೆ ಬಳಸಿಕೊಳ್ಳುವ ಪೂರ್ಣ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಜನರನ್ನು ಆಕರ್ಷಿಸುವ ಭರದಲ್ಲಿ ನಮ್ಮ ಜೀವನದ ಖಾಸಗಿ‌ ಕ್ಷಣಗಳು ಮತ್ತು ಸಾರ್ವತ್ರಿಕ ಕ್ಷಣಗಳ‌ನಡುವಿನ ಅಂತರವನ್ನು ಮರೆತುಬಿಡುತ್ತೇವೆ. ಇದರ ಬಗ್ಗೆ ಸ್ವಲ್ಪ ವಿಷಾದ ಅನಿಸುತ್ತದೆ. 

 

ಹೋಗಲಿ ಬಿಡಿ, ಈ ವಿಡಿಯೋ ನೋಡಿದ ಮೇಲೆ ನಾನು ಹಾಗೆಯೇ ಹಿಂದಿನ ಕಾಲದಲ್ಲಿ ಈ reels,  fb, insta. ಇದ್ದಿದ್ರೆ ಈ pregnancy test  ಏನಾಗುತಿತ್ತು ಎಂದು ವಿಚಾರ ಮಾಡಿದೆ.  ರಾಜ ಮಹಾರಾಜ ಬಾದಶಹಾಗಳಿಗೆ ರಾಶಿ ರಾಶಿ ಹೆಂಡತಿಯರು, ಉಪ ಪತ್ನಿಯರು, ಅವರಲ್ಲಿ ಪ್ರತಿಯೊಬ್ಬರಿಗೂ  ಬರೀ ಮೊದಲನೇ  ಸಲದ pregnancy reveal  ಮಾಡುವುದಕ್ಕೆ reels  ಮಾಡಿದರೂ ಸಹ ಪಾಪ ಆ ರಾಜನಿಗೆ ಬೇರೆ ಕೆಲಸವೇ ಇರ್ತಿರಲಿಲ್ಲ. ವರ್ಷವಿಡೀ ಖುಷಿಯಿಂದ ಅಳುವುದರಲ್ಲಿಯೇ ಜೀವನ ಮುಗಿಯುತ್ತಿತ್ತು.  ಅದರಲ್ಲೂ ತನ್ನ ವಿಡಿಯೋದಲ್ಲಿ ರಾಜ ನಿಜವಾಗಿಯೂ ಖುಷಿಯಾಗಿ ಕಣ್ಣೀರಿಟ್ಟಿದ್ದ, ನಿನ್ನ ವಿಡಿಯೋದಲ್ಲಿ ಬರೀ ನಾಟಕ ಅಂತ, ರಾಣಿಯರ ಜಗಳ.  


        ರಾಣಿಯರ ದಾಸಿಯರು ಇವರ ವಿಡಿಯೋಗಳಿಗೆ ಲೈಕ್ ಶೇರು ಕೊಡುವುದು, ಅದರಿಂದ ಯಾವ ರಾಣಿ ಹೆಚ್ಚು ಜನಪ್ರಿಯಳು ಎಷ್ಟು ಪ್ರಭಾವಶಾಲಿ ಎಂದು ಪ್ರಜೆಗಳು ಅಳೆಯುವುದು,, ಅದೆಷ್ಟು ಮಜವಾಗಿರುತ್ತಿತ್ತು ಊಹಿಸಿಕೊಳ್ಳಿ. ನಾಲ್ಕು ಗೋಡೆಗಳ ಮಧ್ಯೆ ಇದ್ದುಕೊಂಡೇ ಅಷ್ಟೊಂದು ಅಲಂಕಾರ ಮಾಡಿಕೊಳ್ಳುತ್ತಿದ್ದ ರಾಣಿಯರಿಗೆ ಈಗಿನ ತರ face book, insta , whats app ಸಿಕ್ಕಿದ್ದರೆ, ಗಂಟೆಗೊಂದು style ಮಾಡಿಕೊಂಡು ತಮ್ಮ profile, dp ಬದಲಿಸಿ ಅದೆಷ್ಟು like, share, comment ಪಡೆಯುತ್ತಿದ್ದರೋ ????


 

 

 

 

 

ಸಾಮಾನ್ಯ ಜನರು ಈ‌ ವಿಷಯಕ್ಕೆ‌ reels ಮಾಡಿದರೆ....
ಪ್ರತಿ ಎರಡು ವರ್ಷಕ್ಕೊಂದಾದರೂ ಗಂಡಸು ಖುಷಿಯಿಂದ ಅಳುವ ಪ್ರಸಂಗ, (ಪಾಪ ಖುಷಿಯೋ ದು:ಖವೋ ಅವನಿಗಷ್ಟೇ ಗೊತ್ತು)
ಈ reels , fb ista ಗಳು ಆಗ ಇದ್ದಿದ್ದರೆ ಯಾರೂ ವಸ್ತ್ರಾಭರಣ ಧರಿಸಿ ರಥ ಹತ್ತಿ ರಾಜನ‌ ಆಸ್ಥಾನಕ್ಕೆ ಬರತ್ತಲೇ ಇರಲಿಲ್ಲ. ಶಾಸನ ರಚನೆ ಇರಲಿ, ಕವಿಗೋಷ್ಠಿ ಇರಲಿ, ಸಂಗೀತ ನೃತ್ಯ ಎನಿದ್ದರೂ ಎಲ್ಲರೂ ಮನೆಯಿಂದಲೇ‌ fb ಯಲ್ಲಿ ಚರ್ಚೆ ಮಾಡಿ ಲೈಕ್‌ಶೇರ್ ಮಾಡಿಬಿಡ್ತಾ ಇದ್ರು. ಬಹುಷ ಯುದ್ಧನೂ ರಣರಂಗದಲ್ಲಿ ನಡೀತಿರಲಿಲ್ಲವೆನೋ. ಪಬ್ಜಿ ಆಡಿ ಸೋಲು ಗೆಲುವು ನಿರ್ಧಾರ ಆಗಿಬಿಡ್ತಿತ್ತೇನೋ??
 

ನನ್ನ ಆಲೋಚನೆ  ಇಷ್ಟಕ್ಕೆ ಮುಗಿಯಲಿಲ್ಲ. ಈಗಿನ ಕಾಲಕ್ಕೆ ತಂತ್ರಜ್ಞಾನ ಇಷ್ಟೆಲ್ಲಾ‌ ಮುಂದುವರಿದಿದೆ. ಹಾಗಾಗಿ ನಮ್ಮನ್ನು‌ ಆಳುವವರು ಸದನಗಳ ಕಲಾಪವನ್ನು (ಮತ್ತು ಕಲಹವನ್ನು) online ಮೂಲಕವೇ ಮಾಡಬಹುದಲ್ಲ ಅನಿಸಿತು. ಅದರಿಂದ ಅವರು ಮತ್ತು ಅವರ ಹಿಂಬಾಲಕರ ದಂಡು ರಾಜಧಾನಿಗೆ ಹೋಗಿ ಬರುವ ಖರ್ಚುನ್ನು ಸಾಕಷ್ಟು ಉಳಿಸಬಹುದು.  ಪ್ರತಿ ಶಾಸಕರಿಗೂ ಒಂದು ಅಧಿಕೃತ fb/ tweeter/insta ಖಾತೆ  ರಚಿಸಿ ತಮ್ಮ ಎಲ್ಲ ಅಭಿಮತ , ಭಿನ್ನಮತ , ಮತದಾರರ ಅಹವಾಲು , ಓಟು ಕೇಳುವುದು, ಭಾಷಣ ಎಲ್ಲವನ್ನೂ ಅದರ ಮೂಲಕವೇ ಹೇಳಿ ಕೇಳಿ ಮಾಡಬಹುದಲ್ಲವೇ? ಯಾವುದಾದರೂ ಉದ್ಘಾಟನೆ ಮಾಡುದಾದರೆ ಅದರ ಒಂದು ಸಣ್ಣ ಪ್ರತಿಕೃತಿಯನ್ನು ಸಾಂಕೇತಿಕವಾಗಿ ಕುಳಿತಲ್ಲಿಂದಲೇ ಉದ್ಘಾಟಿಸಿ ಅದನ್ನು live telecast ಮಾಡಿದರೆ ಸಾಕಲ್ಲವೇ? ಇದರಿಂದ ಜನರು  ಒಂದೆಡೆ ಗುಂಪು ಸೇರುವುದು ತಪ್ಪುತ್ತದೆ. Traffic jam ಸಮಸ್ಯೆ, ಭದ್ರತಾ ಸಮಸ್ಯೆ ಕಡಿಮೆ ಆಗುತ್ತದೆ.    ಇಂಧನ ಉಳಿತಾಯದ ಜೊತೆಗೆ  ಸ್ವಲ್ಪಮಟ್ಟಿಗೆ ಪರಿಸರದ ಸಂರಕ್ಷಣೆಯೂ ಆಗುತ್ತಿತ್ತು. 

 

 

   ಮತದಾನವನ್ನೂ ಸಹ ಮುಂದಿನ‌ ದಿನಗಳಲ್ಲಿ online ಮೂಲಕ ಮನೆಯಲ್ಲಿಯೇ ಮಾಡಲು ಸಾಧ್ಯವಾದರೆ ಎಷ್ಟು ಒಳ್ಳೆಯದಾಗಿತ್ತಲ್ಲವೇ? ಪ್ರತಿ ಮತದಾನದಲ್ಲೂ ಖರ್ಚಾಗುವ ಎಷ್ಟೋ ಲಕ್ಷ ಕೋಟಿ ಹಣದಲ್ಲಿ ಒಂದಿಷ್ಟಾದರೂ ಉಳಿತಾಯ ಆಗಿ ಅದನ್ನು ಇನ್ಯಾವುದೋ ಅಭಿವೃದ್ಧಿಗೆ ಬಳಸಬಹುದಿತ್ತಲ್ಲವೇ? (ಸಣ್ಣದೊಂದು ಸ್ವಾರ್ಥ:-   ನನ್ನಂತ ಸರ್ಕಾರಿ ಆಳುಗಳಿಗೆ , ಮತದಾನದ ಸಮಯದಲ್ಲಿ  ಅನುಭವಿಸುವ ಮಾನಸಿಕ & ದೈಹಿಕ‌ ಕಿರಿಕಿರಿ ತಪ್ಪುತ್ತದೆ)
ಛೇ ಎಷ್ಟು ಸುಂದರ ಹಗಲುಗನಸು ನನ್ನದು, ಆದರೆ ....."ನಿರೀಕ್ಷೆಯೇ ನಿರಾಸೆಗೆ ಮೂಲ " ಕನಸು ಕಾಣಲೂ ಒಂದು ಮಿತಿ ಇರಬೇಕು . ಅಲ್ವೇ?

 

 

Category : Literature


ProfileImg

Written by Jyoti Hegde