ನಾವು ಗೆಳೆಯರು...



image

ನಾವು ಗೆಳೆಯರು ಎಂದಾಗ ನೆನಪಾಗುವುದು ಶಂ.ಗು.ಬಿರಾದಾರ ರವರ ರಚನೆಯ ಶಾಲಾದಿನಗಳಲ್ಲಿ ಓದಿದ ಹಾಡು" ನಾವು ಎಳೆಯರು ನಾವುಗಳೆಯರು... "

ನೆನಪಾಗುವುದು.. 

ನಾವು ಎಳೆಯರು ನಾವು ಗೆಳೆಯರು

ಹೃದಯ ಹೂವಿನ ಹಂದರ

ನಾಳೆ ನಾವೇ ನಾಡ ಹಿರಿಯರು

ನಮ್ಮ ಕನಸದೊ ಸುಂದರ ।। ಪಲ್ಲವಿ ।।

ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿ-

ಗೊಂದೆ ಭಾರತ ಮಂದಿರ

ಶಾಂತಿ ದಾತನು ಗಾಂಧಿ ತಾತನು

ಎದೆಯ ಬಾನಿನ ಚಂದಿರ ।। ೧ ।।

ಜಾತಿ ರೋಗದ ಭೀತಿ ಕಳೆಯುತ

ನೀತಿ ಮಾರ್ಗದಿ ನಡೆವೆವು

ಒಂದೆ ಮಾನವ ಕುಲವು ಎನ್ನುತ

ವಿಶ್ವ ಧರ್ಮವ ಪಡೆವೆವು ।। ೨ ।।

..................... 

ವೈರ ಮತ್ಸರ ಸ್ವಾರ್ಥ ವಂಚನೆ

ಕ್ರಿಮಿಗಳೆಲ್ಲವ ತೊಡೆವೆವು

ದೇಶ ಸೇವೆಗೆ ದೇಹ ಸವೆಸುವ

ದೀಕ್ಷೆ ಇಂದೇ ತೊಡೆವೆವು ।। ೩ ।।

................. 

ನಮ್ಮ ಸುತ್ತಲು ಹೆಣೆದು ಕೊಳ್ಳಲಿ

ಸ್ನೇಹ ಪಾಶದ ಬಂಧನ

ಬೆಳಕು ಬೀರಲಿ ಗಂಧ ಹರಡಲಿ

ಉರಿದು ಪ್ರೇಮದ ಚಂದನ ।। ೪ ।।

(ಸಾಹಿತ್ಯ: ಶಂ.ಗು. ಬಿರಾದಾರ⁠⁠) 

ಈ ಕವಿತೆ ಗೆಳೆತನದ ಹಲವು ವಿಚಾರಗಳನ್ನು ಬಿಚ್ಚಿಡುತ್ತದೆ. 

ಗೆಳೆಯರು ನಾವು, 

ಹೆಣ್ಣು-ಗಂಡು ಭೇದವಿಲ್ಲದೇ ಒಟ್ಟಿಗೆ ಬೆರೆಯುವೆವು, 

ಶಾಲೆಗಳಿಗೆ ನಿತ್ಯವೂ ಹೋಗುವೆವು,

ಊರು-ಕೇರಿ, ಮನೆ-ಮಠ, ದೇವಸ್ಥಾನ, 

ಬೆಟ್ಟ-ಗುಡ್ಡ,ಕಾಡು-ಮೇಡು, ಅಂಗಡಿ-ಪ್ಯಾಟೇ-ಪಟ್ನವನ್ನು ಒಟ್ಟಿಗೆ ಸುತ್ತಾಡುವೆವು-ತಂಡಿ -ತಿನಿಸುಗಳನ್ನು ಸವಿಯುವೆವು, 

ದಿನಾಲೂ ತುಂಬಾ ಬಗೆಯ ಆಟಗಳನ್ನಾಡುವೆವು, 

ಜಗಳ ಆಡಿಕೊಳ್ಳುವೆವು-ಪ್ರೀತಿಮಾಡುವೆವು, 

ಹಾಡುವೆವು-ಕುಣಿಯುವೆವು, 

ಒಟ್ಟಿಗೆ ಬೆಳೆಯುತ್ತಿರುವೆವು....... 

ದಿನಕಳೆದಂತೆ ಕ್ರಮೇಣ ದೂರವಾಗುತ್ತಿರುವೆವು... 

ಆದರೂ ಭೇಟಿ ಮಾಡುವೆವು.... 

(ನಾವೆಲ್ಲಾ  ಊರ್ಬದಿ ಮಕ್ಳು... ) 👭👬👫🥰🥰

ಇನ್ನೊಂದು ಭಾಗದ ಗೆಳೆತನವೆಂದರೆ ನಾವು ಸಾಗುವ ಯಾತ್ರೆಯಲ್ಲಿ ಹಲವಾರು ಗೆಳೆತನದ ಸವಿಯುುಂಟು... 

ಕೆಲವದರಲ್ಲಿ ನೋವುಂಟು-ಹಲವದರಲ್ಲಿ ನಲಿವುಂಟು..

ಶೈಕ್ಷಣಿಕ ರಂಗದಲ್ಲಿ, ಸಾಮಾಜಿಕ ರಂಗದಲ್ಲಿ, ಉದ್ಯೋಗ ಮಾಡುವಲ್ಲಿ, ಪ್ರಯಾಣ/ಸಂಚಾರದಲ್ಲಿ, 

ಫೇಸ್ಬುಕ್, ವಾಟ್ಸಾಪ್, ಇನಸ್ಟಾಗ್ರಾಂ... ಇತ್ಯಾದಿ ಹಲವದರಲ್ಲಿ ಗೆಳೆತನ ನೋಡಿರುತ್ತೇವೆ.... 

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು

ಸೇರಿಕೊಂಡು ನಮ್ಮ ದಾರಿ

ಬದುಕು ಎಷ್ಟೋ ಚಂದವೆಂದು

ಸಾರುತಿಹುದು ಸಾರಿ ಸಾರಿ

ನೀವು-ನೀವು ಅಂತ ಶುರುವಾಯ್ತು ಮೊದಲು

ಲೊ-ಲೊ ಅಂತ ಈಗ ಬದಲು

ನಮ್ಮ ನಡುವೆ ಇಲ್ಲ ಕೊಂಚ ಸಂಕೋಚವೂ

ಕೈಯ್ಯ ಹಿಡಿದು ಹೆಜ್ಜೆ ಬೆಸೆದು

ಮುಂದೆ ಮುಂದೆ ನಡೆವ ಎಂದು

O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ

O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ

ಮಳೆಯು ಬರಲು, ಕಾದ ದಾರಿ, ದೋಣಿ ಮಾಡಿ, ಬೆಟ್ಟ ನೆನಪು

ನಿನ್ನ ಕಂಡೂ ಬಾಲ್ಯವೆಲ್ಲ ಆಟವಂತೆ ಆಡೊ ಹುರುಪು

ತುಂಟತನವು ಸೇರಿ ನಮ್ಮ ಸಂಘದಲ್ಲಿ,

ಪಟ್ಟ ಖುಷಿಗೆ, ಲೆಕ್ಕ ಎಲ್ಲಿ

ತಿಳಿಸು ಬಗೆಗೆ ಅರಿವೆ, ನಿನಗೆ ಧನ್ಯವಾದವೆ

ಕೈಯ್ಯ ಹಿಡಿದು ಹೆಜ್ಜೆ ಬೆಸೆದು

ಮುಂದೆ ಮುಂದೆ ನಡೆವ ಎಂದು

O my friend ಕಣ್ಣ ಕಂಬನಿಯ ಒರೆಸುವ ಸ್ನೇಹಿತ

O my friend ನಮ್ಮ ಸ್ನೇಹವಿದು, ಇರಲಿ ಶಾಶ್ವತ... 

ಈ ಹಾಡು ನೆನಪಾಗುವುದು ಸಹಜ.... 

ಶಾಂತಾರಾಮ ಹೊಸ್ಕೆರೆ,

ಶಿರಸಿ, ಉತ್ತರ ಕನ್ನಡ..




ProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...

0 Followers

0 Following