ರಾಮಾಯಣದ ಪ್ರಕಾರ ರಾಮನು ಲಂಕೆಗೆ ಸೇತುವೆಯನ್ನು ಕಟ್ಟಲು ಕೇವಲ 5 ದಿನಗಳನ್ನು ತೆಗೆದುಕೊಂಡಿದ್ದ. ರಾವಣನನ್ನು ಸಂಹರಿಸಿದ ಪರಾಕ್ರಮಿ ಶ್ರೀರಾಮನ ಬಿಲ್ಲಿನ ಹೆಸರು ಕೋದಂಡ.
ವಿಭಿಷಣನು ರಾಮನಿಗೆ ಯುದ್ಧದಲ್ಲಿ ರಾವಣನ ಹತ್ತು ತಲೆಯ ಶಕ್ತಿ ಹಾಗೂ ದೌರ್ಬಲ್ಯದ ಬಗ್ಗೆ ರಾಮನಿಗೆ ತಿಳಿಸಿದ. ವಿಭೀಷಣ ರಾಮನಿಗೆ ಸಹಾಯ ಮಾಡಿದ್ದರಿಂದ ರಾವಣನಿಗೆ ಸೋಲಾಯಿತು. ರಾವಣ, ತನ್ನ ಶಕ್ತಿಸಾಮರ್ಥ್ಯಗಳ ಕುರಿತು ಬಡಾಯಿ ಕೊಚ್ಚಿಕೊಳ್ಳುವಾಗ, ಪತ್ನಿ ಮಂಡೋದರಿಯು 'ಲಕ್ಷ್ಮಣನು ಎಳೆದಿರುವ ಗೆರೆಯನ್ನು ದಾಟಲೂ ಕೂಡ ಅಸಮರ್ಥನು' ಎಂದು ಮೂದಲಿಸಿ ವಾನರರ ತಂಟೆಗೆ ಹೋಗಬೇಡ, ಸೀತೆಯನ್ನು ರಾಮನಿಗೊಪ್ಪಿಸು ಎಂದು ರಾವಣನ ದೌರ್ಬಲ್ಯ ನೆನಪಿಸಿದರೂ ಅಹಂ ಬಿಡಲಿಲ್ಲ. ಸಂಧಾನಕ್ಕೂ ಮುಂದಾಗಲಿಲ್ಲ.
ವಾನರಬಲ ನೋಡಲು ಹೋಗಿ ರಾವಣನ ಅನೇಕ ಸೈನಿಕರು ಹೊಡೆತ ತಿಂದು ಬಂದರು. ರಾವಣನು ನೀತಿವಿಶಾರದ ಚಾರರನ್ನು ರಾಮನಲ್ಲಿಗೆ ಹೋಗಿ ಬಲವನ್ನು ಮತ್ತೊಮ್ಮೆ ತಿಳಿದುಬರುವಂತೆ ಆಜ್ಞಾಪಿಸಿದಾಗ ಶಾರ್ದೂಲನೆಂಬ ಚಾರನು ಶ್ರೀರಾಮನಿಗೆ ನಮಸ್ಕರಿಸಿದ್ದರಿಂದ ರಾಮನ ದಯೆಯಿಂದ ವಾನರರ ಹೊಡೆತಕ್ಕೆ ಸಿಗದೇ ರಾವಣನಲ್ಲಿಗೆ ಬಂದು ಶ್ರೀರಾಮನು ಗರುಡವ್ಯೂಹವನ್ನು ರಚಿಸಿ ಲಂಕೆಯತ್ತ ಬರುತ್ತಿರುವನು ಎಂದ.
ಗರುಡವ್ಯೂಹ: ರಾಮನ ಸೈನ್ಯವನ್ನು ವ್ಯೂಹದ ರೀತಿಯಲ್ಲಿ ನಿಲ್ಲಿಸಿದ. ಅಂಗದನು ತನ್ನ ಬಲವನ್ನು ತೆಗೆದುಕೊಂಡು ನೀಲನೊಡನೆ ವಾನರ ಸೈನ್ಯದ ಮಧ್ಯೆ ನಿಲ್ಲಲಿ. ಋಷಭನು ಬಲಭಾಗದಲ್ಲಿ ನಿಲ್ಲಲಿ. ಗಂಧಮಾದನನು ಎಡಭಾಗದಲ್ಲಿ ನಿಲ್ಲಲಿ.
ನಾನೂ ಮತ್ತು ಲಕ್ಷ್ಮಣನೂ ವಾನರ ಸೈನ್ಯದ ಅಗ್ರಭಾಗದಲ್ಲಿ ನಿಲ್ಲುತ್ತೇವೆ. ಜಾಂಬವಂತ, ಸುಷೇಣ, ವೇಗದರ್ಶಿ ಈ ಮೂವರು ಸೈನ್ಯದ ಮಧ್ಯಭಾಗವನ್ನು ಕಾಪಾಡಲಿ ಎಂದು ವಾನರಸೈನ್ಯವನ್ನು ಗರುಡವ್ಯೂಹ ಆಕಾರದಲ್ಲಿ ನಿಲ್ಲಿಸಿದನು. ವಾನರರು ಬೆಟ್ಟ-ಗುಡ್ಡ, ವೃಕ್ಷಗಳನ್ನು ಹಿಡಿದು ಲಂಕೆಯನ್ನು ಮುತ್ತಲು ಉತ್ಸಾಹದಿಂದ ರಾಮಾಜ್ಞೆಗಾಗಿ ಕಾಯುತ್ತಿದ್ದರೆಂದು ಯುದ್ಧೋತ್ಸಾಹಿ ವಾನರಸೈನ್ಯವನ್ನು ವರ್ಣಿಸಲಾಗಿದೆ.
ರಾಮಾದಿಯಾಗಿ ಎಲ್ಲರೂ ಸುವೇಲ ಪರ್ವತ ಏರಿದರು. ಯುದ್ದಕ್ಕೂ ಮುನ್ನ ಹತ್ತೂ ದಿಕ್ಕನ್ನು ರಾಮ ಅವಲೋಕನ ಮಾಡಿದ. ರಾಕ್ಷಸರನ್ನು ಕಂಡಕೂಡಲೇ ವಾನರರಿಗೆ ಉತ್ಸಾಹ ಬಂತಂತೆ. ವಾನರಸೈನ್ಯವನ್ನು ಅರಮನೆಯ ಗೋಪುರದ ಮೇಲೆ ನಿಂತು ವೀಕ್ಷಿಸುತ್ತಿದ್ದ ರಾವಣನಲ್ಲಿಗೆ ನೆಗೆದು ಸುಗ್ರೀವ ಯುದ್ಧ ಶುರು ಮಾಡಿದ. ರಾವಣ ಕೋಪೋದ್ರೇಕನಾಗಿ 'ನನ್ನ ಮುಂದೆ ಹೀನಗ್ರೀವ ನೀನು' ಎಂದು ನಿಂದಿಸಿ ಎತ್ತಿ ನೆಲಕ್ಕೆಸೆದ. ಪುಟಿದೆದ್ದ ಸುಗ್ರೀವ ರಾವಣನನ್ನು ಎತ್ತಿ ನೆಲಕ್ಕೆಸೆದ. ಸೋಲೊಪ್ಪದೇ ಯುದ್ದೋನುಖರಾದರು. ರಾವಣನ ಸೋಲು ಖಚಿತವೆಂದಾಗ ಮಾಯಾಯುದ್ಧ ಮಾಡುತ್ತಿದ್ದುದ್ದನ್ನರಿತ ಸುಗ್ರೀವ ರಾಮನಿದ್ದಲ್ಲಿಗೆ ಬಂದ. ಅಲ್ಲಿಗೆ ರಾವಣ ಬರಲಿಲ್ಲ.
ಮಲ್ಲಯುದ್ಧ ಮಾದರಿಗಳು:
ಸ್ಥಾನ, ಮಂಡಲ, ಗೋಮೂತ್ರಕಗಳು, ಗತಪ್ರತ್ಯಾಗತಗಳು, ವಕ್ರಗತಾ, ವರ್ಜನ, ಆಪ್ಲಾವ, ಪರಾವೃತ್ತಗಳು, ಅಪಾವೃತ್ತಗಳು, ಅವದೃತ, ಉಪನ್ಯಸ್ತ, ಅಪನ್ಯಸ್ತ ಮತ್ತನೇಕ ಮಲ್ಲಯುದ್ಧದ ಪಟ್ಟುಗಳನ್ನು ಬಳಸಿದರು.
ಸ್ಥಾನವೆಂದರೆ ಪಾದಗಳನ್ನು ಹಿಂದೆ ಮುಂದೆ ಮಾಡಿ ಸಿಂಹ, ಹುಲಿ ಮೊದಲಾದ ಪ್ರಾಣಿಗಳಂತೆ ನಿಲ್ಲುವುದು. ವೈಷ್ಣವ, ಸಮಪಾದ, ವೈಶಾಖ, ಮಂಡಲ, ಪ್ರತ್ಯಾಲೀಢ, ಅನಾಲೀಢ ಎನ್ನುವ ಆರು ಜಾತಿಗಳಿವೆ. ಮಂಡಲಗಳು ಎಂದರೆ ಒಬ್ಬರನ್ನೊಬ್ಬರು ಸುತ್ತುವರಿಯುವುದು. ಅದರಲ್ಲಿ ಹೆಜ್ಜೆಗಳಿವೆ. ಚಾರಿ(ಒಂದು ಕಾಲನ್ನು ಮುಂದಿಡುವುದು), ಕರಣ(ಎರಡೂ ಕಾಲನ್ನು ಮುಂದಿಡುವುದು), ಹಲವು ಕರಣದಿಂದ ಖಂಡ, ಮೂರು-ನಾಲ್ಕು ಖಂಡಗಳಿಂದ ಮಹಾಮಂಡಲ, ಅವರ ಸಂಚಾರದ ವಿಶೇಷವದು.
ಗೋಮೂತ್ರಕ ಅಂದರೆ ವಕ್ರವಕ್ರವಾಗಿ ಹೋಗುವುದು. ಗತ ಎಂದರೆ ಶತ್ರುವಿನ ಮೇಲೆ ಥಟ್ಟನೆ ನುಗ್ಗುವುದು. ಪ್ರತ್ಯಾಗತ ಎಂದರೆ ಥಟ್ಟನೆ ಹಿಂದೆ ಸರಿಯುವುದು. ವಕ್ರಗತ ಎಂದರೆ ಎಡಕ್ಕೂ- ಬಲಕ್ಕೂ ತಿರುಗುತ್ತಾ ಇರುವ ಸಂಚಾರ, ವರ್ಜನ ಎಂದರೆ ಪ್ರಹಾರಕ್ಕೆ ಸಿದ್ದನಾಗಿದ್ದರೂ ಮಾಡದಿರುವುದು. ಪರಿಧಾವನ ಎಂದರೆ ಶತ್ರು ನಿಂತಾಗ ಸುತ್ತ ಓಡುವುದು. ಆಪ್ಲಾವ ಎಂದರೆ ಕಪ್ಪೆಯಂತೆ ಶರೀರವನ್ನು ಬಗ್ಗಿಸಿ ನೆಗೆಯುವುದು. ಪರಾವೃತ್ತವೆಂದರೆ ಹಿಂದೆ ಸರಿಯುವುದು. ಅಪಾವೃತ್ತವೆಂದರೆ ವಾಲುವುದು. ಅವದ್ಭತ ಎಂದರೆ ಶತ್ರುವನ್ನು ಹಿಡಿಯಲು ಬಗುವುದು. ಉಪನ್ಯಸ್ತ ಎಂದರೆ ಶತ್ರುವನ್ನು ಹಿಡಿಯಲು ಬಾಹುವನ್ನು ಮುಂದೆ ಚಾರ್ಚು 3/6 16 ಎಂದರೆ ಬಾಹುಗಳು ಕೆಳಗಿರುತ್ತವೆ. ನಿಜವಾಗಿಯೂ ಅವನು ಹಿಡಿಯುವ
ತಯಾರಿಯಲ್ಲಿರುತ್ತಾನೆ. ಇಂತಹ ಅನೇಕ ಮಲ್ಲಯುದ್ದದ ತಂತ್ರಗಳನ್ನು ಮಲ್ಲಯುದ್ಧದಲ್ಲಿ ಬಳಸಿದ್ದಾರೆ.
ವಾನರ ಸೈನ್ಯ:
ಕಪಿಸೇನೆಗೆ ಅನುಮತಿ ನೀಡಿ ರಾಮನು ಯುದ್ಧಾರಂಭ ಮಾಡುತ್ತಾನೆ. ಎಲ್ಲರಿಗಿಂತ ಮುಂದೆ ರಾಮ. ಹಿಂದೆ ಸುಗ್ರೀವ,ವಿಭೀಷಣ, ಲಕ್ಷ್ಮಣ, ಅಂಗದ, ಜಾಂಬವಂತ, ನಳ, ನೀಲ ಮತ್ತು ಧೂಮ್ರ, ವೃಕ್ಷರಾಜ (ಜಾಂಬವಂತನ ಅಣ್ಣ) ಅವರ ಹಿಂದೆ ಭೂಮಿಯನ್ನೇ ಮುಚ್ಚುವಂತಹ ಸೈನ್ಯ. ಎಲ್ಲರೂ ವೃಕ್ಷ-ಬೆಟ್ಟಗಳನ್ನು ಕೈಯಲ್ಲಿ ಹಿಡಿದುಕೊಂಡಿದ್ದಾರೆ. ರಾಮಾಜ್ಞೆಯಿಂದ ಪ್ರಚೋದಿತವಾದ ಕಪಿಗಳು ಎಲ್ಲೆಡೆ ಮುತ್ತಿದರು. ದಂಡೆಯನ್ನು ಒಡೆಯುವ ಸಮುದ್ರದಂತೆ ವಾನರರ ಶಬ್ದದಿಂದ ಲಂಕೆ ನಡುಗಿತು.
ಲಂಕೆಗೆ ಮುತ್ತಿಗೆ:
ಹನುಮಂತನು, ಋಷಭ, ಗವಾಕ್ಷ, ಗವಯರೊಡಗೂಡಿ ಇಂದ್ರಜಿತು ಇದ್ದ ಪಶ್ಚಿಮದ್ವಾರವನ್ನು ಮುತ್ತಿದ. ಪೂರ್ವದ್ವಾರವನ್ನು ನೀಲ, ಮೈಂದ ದ್ವಿವಿಧರೊಡಗೂಡಿ, ಮುತ್ತಿದರು. ರಾವಣ ಉತ್ತರದ್ವಾರದಲ್ಲಿ, ಇಂದ್ರಜಿತು ಪಶ್ಚಿಮದ್ವಾರದಲ್ಲಿ ಇದ್ದಾರೆ. ಹಾಗಾಗಿ ಮಧ್ಯದಲ್ಲಿ ಪ್ರಮಾಥಿ,ಪಗಸರೊಂದಿಗೆ ಸುಗ್ರೀವನಿದ್ದಾನೆ. 36 ಕೋಟಿ ಪ್ರಖ್ಯಾತ ಕಪಿನಾಯಕರು ಸುಗ್ರೀವನನ್ನು ಸುತ್ತುವರಿಯುತ್ತಾರೆ. ಬೇಕಾದಷ್ಟು ಸೈನ್ಯವನ್ನು ಪೂರೈಸಲಿಕ್ಕೆ ಇರುವಂತಹ ಸೈನ್ಯವದು. ಲಕ್ಷ್ಮಣನು ವಿಭೀಷಣನೊಡಗೂಡಿ ಇನ್ನೊಂದು ದ್ವಾರಕ್ಕೆ ಒಂದೊಂದು ಕೋಟಿ ಸೈನ್ಯದೊಂದಿಗೆ ಇದ್ದಾರೆ. ರಾಮನ ಪಶ್ಚಿಮದಲ್ಲಿ, ಬೇಕಾದರೆ ಎನ್ನುವ ಕಾರಣಕ್ಕೆ ಜಾಂಬವಂತನಿದ್ದಾನೆ. ಸುಷೇಣ ಸೈನಿಕರಿಗೆ ಪರಿಕರಗಳ ಸರಬರಾಜಲ್ಲಿದ್ದಾನೆ.
ವಾನರವೀರರ ವರ್ಣನೆ:
ಕಪಿಶ್ರೇಷ್ಟರಾದ ಸುಗ್ರೀವ,ಹನುಮಂತ, ಅಂಗದ, ನೀಲ, ನಳ, ಮೈಂದದ್ವಿವಿದರು, ಗಜ, ಗವಾಕ್ಷ, ಗವಯ, ಶರಭ, ಗಂಧಮಾದನರು, ಪನಸ, ಕುಮುದರು,ಹರ, ಯೂಥಪತಿ, ರಂಭ, ಜಾಂಬವಂತ, ಸುಷೇಣ, ಧೂಮ್ರ, ವೃಕ್ಷರಾಜ, ಋಷಭ, ದುರ್ಮುಖ, ಶತಬಲಿಗಳು ಇದ್ದರು.
ಹುಲಿ ಹಲ್ಲುಗಳು, ಕೈಯಲ್ಲಿ ವೃಕ್ಷಗಳು-ಬಂಡೆಗಳು. ಭಯಬೀಳುವಂತೆ ಉಗುರುಗಳು, ದೇಹಾಕಾರ-ಮೊಗ ನೋಡಿದರೆ ಹೆದರಿಕೆ ಆಗುವಂತೆ ಇದೆ. ಹತ್ತಾನೆ, ನೂರಾನೆ, ಸಾವಿರಾನೆ
ಬಲದವರು. ಕೆಲವರು ಆನೆಹಿಂಡಿಗೆ ಇರುವಷ್ಟು ಬಲದವರು ಇದ್ದಾರೆ. ಕೆಲವು ಕಪಿಬಲ ಅಂದಾಜಿಲ್ಲದಷ್ಟು ಬಲವಂತರಾಗಿದ್ದರು.
ಯುದ್ಧರಂಗ:
ಲಕ್ಷ್ಮಣನು, ಇಂದ್ರಜಿತ್‌ನ ವಿಷಕಾರಿ ಬಾಣಗಳಿಂದ ಪಾರ್ಶ್ವವಾಯುವಿಗೆ ಒಳಗಾಗಿದ್ದನು. ಅವುಗಳನ್ನು ಗುಣಪಡಿಸಲು ವಿಶೇಷ ಸಸ್ಯವನ್ನು ಹನುಮ ತಂದ. ಇದೇ ರೀತಿ ಸಂಜೀವಿನಿ ಪರ್ವತ ತಂದು ಲಕ್ಷ್ಮಣ ಸಹಿತ ಎಲ್ಲ ಕಪಿಗಳನ್ನು ಬದುಕಿಸಿದ. ರಾವಣನ ಸಹೋದರರು,ಮಕ್ಕಳು ಸಂಹಾರವಾದರು. ಪ್ರಹಸ್ತನ ಮರಣದಿಂದ ರಾವಣ ಉದ್ವಿಗ್ನನಾಗಿ ನಾನೇ ಯುದ್ಧಕ್ಕೆ ಹೋಗುತ್ತೇನೆ. ವಾನರರು ಒಳಗೆ ನುಗ್ಗದಂತೆ ಕೋಟೆಯ ಕಾಯಿರಿ ಎಂದು ಅರಮನೆಯೊಳಗಣ ಸೈನ್ಯಕ್ಕೆ ಆಜ್ಞಾಪಿಸಿ ಯುದ್ಧಭೂಮಿಗಾಗಮಿಸಿದ.
ರಾವಣನನ್ನು ನೋಡಿದ ಸುಗ್ರೀವ ದೊಡ್ಡ ಕಲ್ಲನ್ನೆಸೆದದ್ದನ್ನು ರಾವಣ ಅದನ್ನು ನಿಗ್ರಹಿಸಿ ಬಂಗಾರದ ಬಾಣಗಳಿಂದ ಸುಗ್ರೀವನ ಎದೆಗೆ ಹೊಡೆದು ಮೂರ್ಛಗೊಳಿಸಿದ. ಗವಯ,ಗವಾಕ್ಷ,ಸುಷೇಣ, ಋಷಭ,ನಲ ಮೊದಲಾದ ವಾನರ ವೀರರನ್ನು 4,6,8,12 ಬಾಣಗಳನ್ನು ಒಂದೇ ಬಾರಿಗೆ ಹೊಡೆದು ಬೀಳಿಸಿದ. ವಾನರ ವೀರರನ್ನು ಹೊಡೆಯುತ್ತಿದ್ದಾನೆಂದು ಓಡಿಬಂದ ಹನುಮ ರಾವಣನಿಗೆ ಮುಷ್ಟಿಯಿಂದ ಗುದ್ದಿದ.
ನೀಲನ ಸೂಕ್ಷ್ಮತಂತ್ರ: ಸೈನ್ಯಾಧಿಕಾರಿಯಾದ ನೀಲನು ಇರುವೆಯಷ್ಟು ರೂಪಾಂತರವಾಗಿ ರಾವಣನನ್ನು ಹಿಂಸಿಸಿದ. ಬಾಣಗಳ ಮಧ್ಯೆಯಿಂದ ಹೋಗಿ, ಕಿರೀಟದ ಮೇಲೇರಿ ರಾವಣನ ಕಿವಿ-ಮೂಗುಗಳನ್ನು ಕಚ್ಚಿದ. ವಸ್ತದೊಳಗೂ ತೂರಿ ಕಿರಿಕಿರಿಗೊಳಿಸಿದ. ಕೋಪದಿಂದ ರಾವಣ ಆಗ್ನೇಯಾಸ್ತ್ರವನ್ನು ನೀಲನ ಮೇಲೆ ಬಿಟ್ಟ, ನೀಲ ಅಗ್ನಿಯ ಅಂಶವಾಗಿದ್ದರಿಂದ ಪ್ರಜ್ಞೆಯಷ್ಟೇ ತಪ್ಪಿದ.
ರಣರಂಗದಲ್ಲಿ ರಾಮ-ರಾವಣ:
ರಾವಣನ ಬಾಣಗಳನ್ನು ಲಕ್ಷಣ ನಿಗ್ರಹಿಸಿದ. ಕ್ರೋಧೀತನಾಗಿ ಬ್ರಹ್ಮದೇವರು ಕೊಟ್ಟ 'ಶಕ್ತಿ' ಎಂಬ ಭಯಂಕರ ಅಸ್ತ್ರವನ್ನು ಬಿಟ್ಟು ಮೂರ್ಛಿತಗೊಳಿಸಿದಾಗ ರಾಮ ಕೋಪವಿಷ್ಟನಾದ.
ರಾವಣನು ರಥದಲ್ಲಿದ್ದು ಯುದ್ಧ ಮಾಡಿದರೆ ನೀವು ಕೆಳಗಿರುವುದು ಸರಿಯಲ್ಲವೆಂದು ಹನುಮನು ರಾಮನನ್ನು ಹೆಗಲ ಮೇಲೆ ಕೂರಿಸಿಕೊಂಡ. ರಾವಣನು ಹನುಮನ ಮೇಲೆ ಬಾಣಗಳನ್ನು ಬಿಟ್ಟು ರಕ್ತಸಿಕ್ತಗೊಳಿಸಿದ. ರಾಮನು ಕ್ರೋಧದಿಂದ ಅರ್ಧಚಂದ್ರಾಕಾರ ಬಾಣಗಳು,
ಚೂಪಾದ ಬಾಣಗಳನ್ನು ಮಿಂಚುಗಳಂತೆ ಬಿಟ್ಟ. ರಾವಣನ ಕುದುರೆಗಳು,ಸಾರಥಿ,ಧ್ವಜ,ರಥಚಕ್ರಗಳನ್ನು ಬೀಳಿಸಿದಾಗ; ರಾವಣ ಬಿಲ್ಲು,ಖಡ್ಗಗಳನ್ನು ಹಿಡಿದು ನೆಲದ ಮೇಲೆ ನಿಂತಿದ್ದ. ರಾವಣನ ಭುಜಕ್ಕೆ ಬಾಣ ಬಿಟ್ಟು, ಬಿಲ್ಲು-ಖಡ್ಗಗಳನ್ನು ಮುರಿದು ಕಿರೀಟವನ್ನೂ ಬೀಳಿಸಿದ. ರಾಮನು, ಕಣ್ಣಲ್ಲಿ ಭಯ ಕಾಣಿಸುತ್ತಿದ್ದು,ವಿಶ್ರಾಂತಿ ತೆಗೆದುಕೊಂಡು ಉತ್ತಮ ರಥ-ಸಾರಥಿಗಳ ಜೊತೆ ನಾಳೆಗೆ ಬರಬೇಕೆಂದು ರಾವಣನನ್ನು ಕಳಿಸಿದ.
ಮರುದಿನ ರಾವಣ ಕಪ್ಪುಕುದುರೆಗಳ ರಥದೊಂದಿಗೆ ಯುದ್ಧರಂಗಕ್ಕೆ ಬಂದ. ರಾಮನು ಮಾತಲಿಗೆ, ರಾವಣ ಬರುತ್ತಿದ್ದಾನೆ.. ಯಾವುದೇ ಸಮಯದಲ್ಲೂ ಮೈ ಮರೆಯಬೇಡ. ರಥವನ್ನು ಬಲಕ್ಕೆ ನಡೆಸು. ನೀನು ಇಂದ್ರಸಾರಥಿಯಿರುವುದರಿಂದ ನಿನಗೆಲ್ಲ ತಿಳಿದಿದೆ. ಧೈರ್ಯ ಬರಲು ಹೇಳಿದೆ ತಪ್ಪು ಭಾವಿಸಬೇಡವೆಂದ.
ಯುದ್ಧ ನಡೆಯುತ್ತಿರಬೇಕಾದರೆ ಸಮುದ್ರಗಳು ಕೋಭಿಸಿ ನದಿಗಳಲ್ಲಿ ಪ್ರವಾಹವುಂಟಾಯಿತು. ಭೂಮಿ ಧೂಳುಮಯವಾಯಿತು. ನೇರ ಹೋರಾಟದ ಮೂಲಕ ಯುದ್ಧದ ಫಲಿತಾಂಶ ಘೋಷಿಸುವುದೆಂದು ತೀರ್ಮಾನಿಸಿದಾಗ ಕಾಳಗದ ತೀವ್ರತೆ ಹೆಚ್ಚಿತು. ದೇವತೆಗಳೂ ಭೀತರಾದರು.
ಏಳು ರಾತ್ರಿ ಏಳು ಹಗಲುಗಳು:
ರಾಮ ವಿಷಸರ್ಪದ ಬಾಣವನ್ನು ರಾವಣನ ಕಂಠಕ್ಕೆ ಗುರಿಯಿಟ್ಟು ಹೊಡೆದ. ಒಂದು ಶಿರಸ್ಸು ಬಿತ್ತಾದರೂ ಮರುಕ್ಷಣವೇ ಮತ್ತೆ ಸೇರಿತು ಹೀಗೆ ನೂರು ಬಾರಿಯಾದರೂ ರಾವಣನ ಹತ್ತೂ ತಲೆಗೆ ಏನಾಗಲಿಲ್ಲ. ರಾಮ-ರಾವಣರ ಯುದ್ಧ ಸತತವಾಗಿ 7 ರಾತ್ರಿ 7 ಹಗಲುಗಳು ನಡೆಯಿತು. ಆಕಾಶವೆಲ್ಲ ದೇವತೆಗಳು-ಋಷಿಗಳಿಂದ ತುಂಬಿತು.
ಮಾತಲಿಯು ರಾಮನಿಗೆ, 7 ದಿನಗಳಿಂದ ಯುದ್ಧ ಮಾಡುತ್ತಿರುವೆ. ದೇವತೆಗಳು ರಾವಣನ ವಧೆಗೆ ನಿರ್ಣಯಿಸಿದ ಮಹೂರ್ತ ಸನ್ನಿಹಿತವಾಗಿದೆ. ಅಗಸ್ಯರು ಕೊಟ್ಟ ದಿವ್ಯಬಾಣ ಪ್ರಯೋಗಿಸು ಎಂದ. ಲೋಕವನ್ನು ರಕ್ಷಿಸಲು ಬ್ರಹ್ಮದೇವರು ಇಂದ್ರನಿಗೆ ಕೊಟ್ಟ ಅಸ್ತ್ರ. ವಾಯುವೇಗದ ಶಕ್ತಿಯುಳ್ಳದ್ದು. ಬಾಣದ ಶಿರಸ್ಥಾನದಲ್ಲಿ ಅಗ್ನಿ, ಸೂರ್ಯರಿರುತ್ತಾರೆ. ಅದರ ಶರೀರವೆಲ್ಲ ಬ್ರಹ್ಮಮಯ. ಸೂರ್ಯ ತೇಜಸ್ಸಿನ ಬಾಣ ಕಾಲಾಗ್ನಿಯಂತಿರುತ್ತದೆ. ಎಷ್ಟೋ ರಾಕ್ಷಸರನ್ನು ಕೊಂದಿರುವ ಆ ಬಾಣವನ್ನು ತೆಗೆದರೆ ಸತ್ತ ಹೆಣಗಳನ್ನು ಭಕ್ಷಿಸಲು ನರಿ, ಹದ್ದುಗಳಂತಹ ಕ್ರೂರಪ್ರಾಣಿಗಳು ಬರುತ್ತಿದ್ದವು.
ರಾಮ ಅಸ್ತ್ರ ತೆಗೆದು ಕಣ್ಣಿಗೆ ಒತ್ತಿಕೊಂಡು,ವೇದೋಕ್ತವಾಗಿ ಬ್ರಹ್ಮಾಸ್ತ್ರವನ್ನು ಅಭಿಮಂತ್ರಿಸಿದ. ತನ್ನ ಬಿಲ್ಲಿಗೆ ಹೆದೆಯೇರಿಸಿ,ಕಿವಿಯವರೆಗೂ ಎಳೆದು, ಶತ್ರು ನಿಗ್ರಹವಾಗಲೆಂದು ಪರಮಾತ್ಮನ ಸ್ತೋತ್ರ ಪಠಿಸಿ ವಿಭೀಷಣನ ಸೂಚನೆಯಂತೆ ರಾವಣನ ಎದೆಗೆ ಗುರಿಯಿಟ್ಟ, ಒಂದೇ ಕ್ಷಣದಲ್ಲಿ ರಾವಣನ ಎದೆಯು ಸೀಳಿದಾಗ ಕೈಯಲ್ಲಿದ್ದ ಬಿಲ್ಲು, ಆಯುಧಗಳು ಕೆಳಗೆ ಬಿದ್ದು ರಾವಣ ವಧೆಯಾಗಿದ್ದ.
ವಾನರ ಸೈನ್ಯದ ಬಗ್ಗೆ ಅಪಹಾಸ್ಯ ಮಾಡಿತು. ಆದರೆ ವಾನರರ ಅಮೋಘವಾದ ಶಕ್ತಿಯನ್ನು ಹಾಗೂ ಅವರನ್ನು ರಾವಣನ ಸೈನ್ಯವು ಕೀಳಂದಾಜು ಮಾಡಿತು. ಆದರೆ ದೈವೇಚ್ಚೆ ಸಹ ಅದೇ ಆಗಿತ್ತು ಅಲ್ಲವೇ? ಯಾರ ಮಾತು ಕೇಳದ ರಾವಣ ತನ್ನ ಅಹಂನಿಂದ ರಾಮಬಾಣಕ್ಕೆ ಆಹುತಿಯಾದ. ಅಹಂ ಬಂದಾಗ ಯಾರ ಹಿತನುಡಿಗಳು ರುಚಿಸುವುದಿಲ್ಲ. ರಾಮ-ಲಕ್ಷ್ಮಣರಲ್ಲಿ ದೈವ ಶಕ್ತಿ ಇದ್ದರೆ ಅವರ ಬಾಣದಿಂದ ಸಾಯುತ್ತೇನೆ. ಅದರಿಂದ ನಾನು ಮೋಕ್ಷ ಪಡೆಯುತ್ತೇನೆ ಎಂದು ಹೇಳಿದನೆಂದು ಕೆಲವೆಡೆ ಉಲೇಖವಿದೆ. ಭಗವಂತನಿಂದ ಶೀಘ ಮೋಕ ಪಡೆಯುವ ಶಕ್ತಿಯುಳ್ಳದ್ದು. ಬಾಣದ ಶಿರಸ್ಥಾನದಲ್ಲಿ ಅಗ್ನಿ, ಸೂರ್ಯರಿರುತ್ತಾರೆ. ಅದರ ಶರೀರವೆಲ್ಲ ಬ್ರಹ್ಮಮಯ. ಸೂರ್ಯತೇಜಸ್ಸಿನ ಬಾಣ ಕಾಲಾಗ್ನಿಯಂತಿರುತ್ತದೆ. ಎಷ್ಟೋ ರಾಕ್ಷಸರನ್ನು ಕೊಂದಿರುವ ಆ ಬಾಣವನ್ನು ತೆಗೆದರೆ ಸತ್ತ ಹೆಣಗಳನ್ನು ಭಕ್ಷಿಸಲು ನರಿ,ಹದ್ದುಗಳಂತಹ ಕ್ರೂರಪ್ರಾಣಿಗಳು ಬರುತ್ತಿದ್ದವು.
ಪುಷ್ಪವೃಷ್ಟಿ:
ಆಕಾಶದಿಂದ ಪುಷ್ಪಗಳು ರಾಮನ ಮೇಲೆ
-ಹನುಮಂತ.ಮ.ದೇಶಕುಲಕರ್ಣಿ.
"ಪ್ರತ್ಯಗ್ರ ಲೇಖಕ"
ಸಾ.ಭೋಗೇನಾಗರಕೊಪ್ಪ-581196
ತಾ.ಕಲಘಟಗಿ ಜಿ.ಧಾರವಾಡ
9480364915
0 Followers
0 Following