ಹೌದು ಸೂರ್ಯ ನಾರಾಯಣ ಭಟ್ ಹಿಳ್ಳೆ ಮನೆಯವರ ಕುಶಾಲು ತೋಪು ಓದುತ್ತಾ ಹುಚ್ಚಳಂತೆ ಒಬ್ಬಳೇ ಕುಳಿತು ನಗಾಡಿದ್ದೇನೆ.
ನನ್ನ ನಗು ಕೇಳಿ ಎಂತ ಸಂಗತಿ ಎಂದು ಪ್ರಸಾದ್ ಮತ್ತು ಅರವಿಂದ್ ನನ್ನ ಕೋಣೆಗೆ ಇಣುಕಿ ನೋಡಿ ಕೈಯಲ್ಲಿ ಪುಸ್ತಕ ಇರುವುದನ್ನು ನೋಡಿ ನೀನು ಓದಿದ ನಂತರ ನನಗೆ ಓದಲು ಕೊಡು ಎಂದಿದ್ದರು.ಅವರೂ ಓದಿ ನಗಾಡಿದ್ದರು
ಹಾಸ್ಯ ರಸ ಪ್ರಧಾನವಾದ ಕಾದಂಬರಿ. ಈ ಕಾದಂಬರಿ ಲಘು ಪ್ರಬಂಧ ಸಂಕಲನದಂತೆ ಇದೆ
ಓರ್ವ ಕಾಲ್ಪನಿಕ ಆಜಾನುಬಾಹು ಮಿಲಿಟರಿ ರಿಟೈರ್ಡ್ ವ್ಯಕ್ತಿ ನರಸಿಂಹ ರಾಯರು ಎಂಬ ಕಥಾನಾಯಕನ ಸುತ್ತ ಹೆಣೆದ ಕತೆ ಇದು.ಇದರ ಪ್ರತಿ ಅಧ್ಯಾಯಲ್ಲೂ ನರಸಿಂಹ ಭಟ್ಟರ ಸಾಹಸದ ಅಭಿವ್ಯಕ್ತಿ ಇದೆ.ಒಂದೊಂದು ಘಟನೆಯಲ್ಲೂ ಒಂದಕ್ಕಿಂತ ಒಂದು ಭಿನ್ನವಾದ ಸಂದರ್ಭಗಳಲ್ಲಿ ನಗು ಉಕ್ಕಿ ಹರಿಯುತ್ತದೆ.
ಇಲ್ಲಿನ ಹಾಸ್ಯ ಯಾರನ್ನು ಟಾರ್ಗೆಟ್ ಮಾಡಿರುವದ್ದು ಅಲ್ಲ.ಹಾಸ್ಯಕ್ಕಾಗಿ ಎಳೆದು ತಂದ ಕೃತಕ ಸನ್ನಿವೇಶಗಳಿಲ್ಲ.ತೊರೆಯ ನೀರು ಜುಳು ಜುಳು ಸದ್ದು ಮಾಡುತ್ತಾ ಹರಿವಂತೆ ಇಲ್ಲಿ ಕಥಾನಕದಲ್ಲಿ ತಮಾಷೆ ಸಹಜವಾಗಿ ಮೂಡಿ ಬಂದಿದೆ.
ಎರಡರ್ಥದ ಮಾತುಗಳಿಲ್ಲ.ಅಶ್ಲೀಲತೆಯ ಸೋಂಕಿಲ್ಲದ ಸಹಜ ಹಾಸ್ಯ ಇದೆ
ಕುವೆಂಪು ಅವರ ಮಲೆನಾಡಿನ ಚಿತ್ರಗಳು ಎಂಬ ಲಘು ಪ್ರಬಂಧ ಸಂಕಲನವನ್ನು ಕುಶಾಲ ತೋಪು ನೆನಪಿಸಿದೆ
ಇಲ್ಲಿ ಲೇಖಕರೇ ಕಥೆಯ ನಿರೂಪಕರಾಗಿ ತಾನು ಚಿಕ್ಕಂದಿನಿಂದಲೂ ನೋಡುತ್ತಾ ಬಂದದ್ದು ಎಂಬಂತೆ ವಿವರಿಸುತ್ತಾ ಹೋಗಿದ್ದಾರೆ .
ಗಡಿ ವಿವಾದ ಪರಿಹಾರ,ಪೋಲೀಸರ ರಕ್ಷಣೆ ಸೇರಿದಂತೆ ಸಾಮಾನ್ಯ ಜನರು ದಿನ ನಿತ್ಯ ಎದುರಿಸುವ ಸನ್ನಿವೇಗಳ ಚಿತ್ರಣ ಇದೆ.
ವಜ್ರಾದಪಿ ಕಠೋರಾಣಿ ಕುಸಕಮಾದಪಿ ಮೃದೂನಿಚ ಎಂಬಂತೆ ನರಸಿಂಹರಾಯರ ಉದಾರಗುಣವೂ ಅನುಸರಣೀಯವಾಗಿದೆ
ಕುಶಾಲು ತೋಪು ಬೇಕಾದವರು ಲೇಖಕರಾದ ಸೂರ್ಯ ನಾರಾಯಣ ಭಟ್ ಹಿಳ್ಳೆ ಮನೆಯವರನ್ನು ಸಂಪರ್ಕಿಸಬಹುದು ಮೊಬೈಲ್ : 99003 20869