ಗೋಡೆ..(ಸಣ್ಣಕಥೆ)image

ಗೋಡೆ..(ಸಣ್ಣಕಥೆ)

ಚಲಿಸುತ್ತಿರುವ ಗಡಿಯಾರಕ್ಕೂ & ಆತನ ಜೀವನ ಚಕ್ರಕ್ಕೂ ಗೋಡೆಯೇ ಆಧಾರವಾಗಿತ್ತು ,೪ ಗೋಡೆಗಳ ಮಧ್ಯದ ಆತನ ಜೀವನದ ಯಾನ ನೆಮ್ಮದಿಯ ನಿತ್ರಾಣ.. ಒಡೆಯನ ಮನೆಯಲ್ಲಿನ ಚಾಕರಿ, 

ದನ, ಕರುಗಳಲಾಲನೆಪಾಲನೆಗೈದು ಹಾಲನ್ನು ಹಿಂಡಿ,ಸಮೀಪದ ಡೈರಿಗೆ ಹಾಕಿಬರುವುದು ಆತನ ಬರಿಗಾಲಿನ  ಸವಾರಿಯ ದಿನಚರಿ, ಇದರಿಂದ ಆತನಿಗೆ  ಅಕ್ಕಿ, ಧಾನ್ಯಗಳು,ಕಾಸು ದೊರೆಯುತ್ತಿತ್ತು,ಜೀವನ ಸಾಗುತ್ತಿತ್ತು,ಆತನ ಮಡದಿಯೋ ಅಪ್ಪಟ ಹಳ್ಳಿಯಸೊಗಡಿನ ಕೈ ಮುಗಿಯುವಂತಹ ಕಾಯಕ ಜೀವಿ, ಮಳೆ ಬಂದರೆ ಸೋರುವ ಮೇಲ್ಮನೆಯದ್ದೆ ಚಿಂತೆ ಗಂಡನಿಗೆ,  ೯ ತುಂಬಿದ ತುಂಬು ಗರ್ಭಿಣಿಗೆ ೪ ಮಣ್ಣಿನ ಗೋಡೆಗಳೇ ಬೆಚ್ಚಗಿಡುವ ಭದ್ರ ಕೋಟೆ,

ಪಟ್ಟಣಕ್ಕೆ ಹೋಗುವುದೆಂದರೆ ಹೊಳೆಯ ದಾಟುವುದಕ್ಕೆ ದೋಣಿಯ ಹುಟ್ಟನ್ನು  ಮೀಟುವುದೇ ಕಾಯಕ.

ಇದ್ದಕ್ಕಿದ್ದಂತೆ ರಾತ್ರಿ ಭೀಕರ ಗಾಳಿ, ರಭಸವಾದ ಜೋರು ಮಳೆ, ಕಂಗಾಲಾದ ದಂಪತಿಗಳ ಮುಖದಲ್ಲಿ ಬದುಕಿನ ಕೊನೆಯ ನೋಟವೇ ಕಣ್ಣೆದುರು ಬಂದಿತ್ತು, ದೇವರನ್ನು  ಸದಾಕಾಲ ನೆನೆಯುವ ಇಂತಹ ಪುಣ್ಯಾತ್ಮರಿಗೆ ಕೊನೆಯಲ್ಲಿ ಕೈ ಹಿಡಿಯದಿದ್ದರೆ ದೇವರಿಗೂ ಅವರ ಶಾಪ ತಟ್ಟದೇ ಇರದು, ಏನೇ ಆಗಲೀ ಬೆಳಗ್ಗಿನ ಸೂರ್ಯನ ಬೆಳಕನ್ನು ನೋಡಿದಾಗಲೇ ಅವರಿಗೆ ನಿಟ್ಟುಸಿರು ಬಿಡಲು ಸಾಧ್ಯ, ಪ್ರಕೃತಿಯ ಮುನಿಸು ಅಪಾಯದ ಮಟ್ಟ ಮೀರಿತ್ತು, ಅದೇನೊ ಗೊತ್ತಿಲ್ಲ  ಗೋಡೆಗೆ ಒರಗಿಕೊಂಡು ಕುಳಿತದ್ದೊಂದೇ ಗೊತ್ತು, ಆ ಗೋಡೆಗಳೇ ಅವರ ಜೀವಕ್ಕೆ, ಜೀವನಕ್ಕೆ ರಕ್ಷಕರಾಗಿದ್ದವು, ರಾತ್ರಿಯ ಅಬ್ಬರಕ್ಕೆ ಕಂಗಾಲಾದ ಜೀವಗಳಿಗೆ ಗೋಡೆಯ ಕಿಂಡಿಯೊಳಗಿಂದ ಸೂರ್ಯನ ಅರುಣೋದಯದ ಕಿರಣಗಳು ಹಾಸಿದವು, ಆಗ ನಿಟ್ಟುಸಿರು ಬಿಟ್ಟರು, ಗೋಡೆಯ ಮೇಲಿನ  ಗಡಿಯಾರ ಕಂಡಿತು, ಗೋಡೆಯ ಮೇಲೆ ತೂಗು ಹಾಕಿದ ದೇವರ ಪಟ ಕಂಡು ಕಣ್ಣಾಲೇ ತುಂಬಿದವು.... 

ಗೋಡೆಗಳೇ ಅವರಿಗೆ ಕಾವಲಾಗಿನಿಂತ ದೇವರಾಗಿತ್ತು..

ಶಾಂತಾರಾಮ ಹೊಸ್ಕೆರೆ,

ಶಿರಸಿ, ಉತ್ತರ ಕನ್ನಡ..

7676106237

 

Category:StoriesProfileImg

Written by ಶಾಂತಾರಾಮ ಹೊಸ್ಕೆರೆ,ಶಿರಸಿ

ಬರಹಗಾರ...