ll ಎಚ್ಚರಾಗು ಓ ಮನುಜ ll
ಜಲಲ ಜಲಲ ಜಲಧಾರೆ
ಸುರಿಸುಬಾ ವರ್ಷಧಾರೆ
ಕರೆಯು ಕೇಳಿಸದೆ ಮಳೆಯ ದೊರೆ
ಕಿವಿಗೊಟ್ಟು ಕೇಳು ನೀ ನಮ್ಮ ಮೊರೆ ||
ತೇಲಿ ತೇಲಿ ಬಾ ಮೇಘ ಮಾಲೆ
ಮೈ ತುಂಬಿ ಹರಿಯಲಿ ಜೀವನಾಲೆ
ಹಾಡಿ ನಲಿಯಲಿ ಸಸ್ಯ ಶ್ಯಾಮಲೆ
ಎದೆ ತುಂಬಿ ಹಾಡಲಿ ಕೋಗಿಲೆ ||
ಜಲವೇ ಬದುಕಿಗೆ ಆಸರೆ
ಉಳಿಸಿ ಕೊಳ್ಳಿರಿ ಪ್ರತಿ ಊರ ಕೆರೆ
ಜಲಮೂಲವ ಸಂರಕ್ಷಿಸಿರೇ
ತುಂಬಿಹರಿವುದು ಜೀವ ತೊರೆ ||
ಹಸಿರ ಬೆಳೆಸೋಣ ನೀರ ಉಳಿಸೋಣ
ಪಕ್ಷಿ ಸಂಕುಲವ ಬೆಳೆಸೋಣ
ಜೀವ ಸಂಕುಲ ಸಂರಕ್ಷಿಸೋಣ
ಮಾನವತೆಯ ಮೆರೆಯೋಣ ||
ಬಿಂದು ಬಿಂದು ಜಲ ಅಮೃತವು
ಇದನು ಮರೆತರೆ ನೀ ಮೃತವು
ಹಸಿರು ನಗುತಿರೆ ಜಗದುಳಿವು
ಕಾಂಕ್ರೀಟು ನಾಡಿನಲಿ ಜಗದಳಿವು ||
ಎಚ್ಚರಾಗಲೋ ಎಲೆ ಮನುಜ ||
ಬಿತ್ತದಿರು ವಿಷದಾ ಬೀಜ
ಅರಳಿ ನಲಿಯಲಿ ಅಂಬುಜ
ಜಗದುಳಿವಿಗೆ ನೀನಾಗು ಅಗ್ರಜ ||
✍🏻 ವಿಜಯಲಕ್ಷ್ಮಿ ನಾಡಿಗ್ ಮಂಜುನಾಥ್ ಕಡೂರು
0 Followers
0 Following