ವಿಷ್ಣುವರ್ಧನ್ ಜೀವನಚರಿತ್ರೆ

ಕಲಾವಿದರು ನಡೆದರು ಬಂದ ದಾರಿ

ProfileImg
22 Mar '24
1 min read


image

ಬಾಲ್ಯ ಜೀವನ:
ಡಾ. ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳ ಮಗನಾಗಿ 18 ಸೆಪ್ಟೆಂಬರ್ 1950 ರಲ್ಲಿ ಜನಿಸಿದ್ದರು. ಇವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು.  ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಪೂರ್ಣಗೊಳಿಸಿ, ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ. ನೀವು ನೋಡಲೇಬೇಕಾದ ವಿಷ್ಣುವರ್ಧನ್ ರ ಚಲನಚಿತ್ರಗಳು

ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ  ವಿಷ್ಣುವರ್ಧನ್ ಒಬ್ಬರು. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟಿಸಲು ಪ್ರಾರಂಭಿದಾಗ ಇವರಿಗೆ ವಿಷ್ಣುವರ್ಧನ್ ಎಂದು ಕರೆಯಲಾಗಿತ್ತು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಇದುವರೆಗೆ ಒಟ್ಟು ಸುಮಾರು 200 ಕ್ಕು ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಹಲವಾರು ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿದ್ದಾರೆ. ವಿಷ್ಣುವರ್ಧನ್ ದಕ್ಷಿಣ ಭಾರತದ ಖ್ಯಾತ ನಟಿ ಭಾರತಿ ಅವರನ್ನು ಮದುವೆಯಾಗಿದ್ದರು.

ಸಿನಿಮಾರಂಗಕ್ಕೆ ನಡೆದು ಬಂದ ಹಾದಿ:
ವಿಷ್ಣು 1955ರಲ್ಲಿ "ಶಿವಶರಣ ನಂಬೆಯಕ್ಕ" ಎಂಬ ಸಿನೆಮಾದಲ್ಲಿ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು.
ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ (ವಿಷ್ಣು) ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು, ಮುಂದೆ 1956ರಲ್ಲಿ "ಕೋಕಿಲವಾಣಿ" ಎಂಬ ಮತ್ತೊಂದು ಸಿನೆಮಾದಲ್ಲಿ ಕೂಡ ವಿಷ್ಣು ನಟಿಸಿದ್ದರು. ಎಸ್ ಎಲ್ ಭೈರಪ್ಪನವರ ಕಾದಂಬರಿಯಾಧಾರಿತ ವಂಶವೃಕ್ಷ. ಇದರಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡರು.

1972 ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ "ನಾಗರಹಾವು" ಇವರ ಮೊದಲ ಚಿತ್ರದಲ್ಲಿ  ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಸಂಪತ್ ಕುಮಾರನಾಗಿ ಬಂದಿದ್ದ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ಹೆಸರಿನ ಬದಲಾವಣೆಯೊಂದಿಗೆ ನಾಯಕನಟನಾಗಿ ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂದು ಜನಪ್ರಿಯರಾಗಿದ್ದರು.1980 ರಲ್ಲಿ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂದ “ಮಾಲ್ಗುಡಿ ಡೇಸ್” ಎಂಬ ಕಿರುತೆರೆಯಲ್ಲಿ ನಟಿಸಿದರು .
ನಟನೆಯಲ್ಲದೇ  ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ, ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನವನ್ನೂ ಕೂಡ ಮಾಡಿದ್ದಾರೆ. ಹೀಗೆ ಕನ್ನಡ ಸಿನಿಮಾಗಳಲ್ಲಿ ನಟಿಸಿ ಇಡೀ ಚಿತ್ರರಂಗದಲ್ಲಿಯೇ ಸುಪ್ರಸಿದ್ಧ ನಟರಾಗಿ ಹೊರಹೊಮ್ಮಿದ್ದರು. ಹೀಗೆ ಕೇವಲ ಕನ್ನಡ ಚಿತ್ರಗಳಲ್ಲಿ ನಟಿಸದೆ  ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.

ನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ವಿಷ್ಣು 30 ಡಿಸೆಂಬರ್ 2009 ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ

'ಸಾಹಸ ಸಿಂಹ' ಡಾ. ವಿಷ್ಣುವರ್ಧನ್‌ ಅವರಿಗೆ ಇಂದು 70ನೇ ಜಯಂತೋತ್ಸವ. ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸುತ್ತಿದ್ದಾರೆ. ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಕಾಮನ್ ಡಿಪಿಯನ್ನು ನಟ ಸುದೀಪ್‌ ರಿಲೀಸ್ ಮಾಡಿದ್ದಾರೆ. ಜೊತೆಗೆ ಇಂದು (ಸೆ.18) ಅವರ ನೆನಪಿನಲ್ಲಿ ವಿಶೇಷ ಲಕೋಟೆಯನ್ನು ಅಂಚೆ ಇಲಾಖೆ ಹೊರತರುತ್ತಿದೆ. ವಿಷ್ಣು ಇಹಲೋಕ ತ್ಯಜಿಸಿ, 11 ವರ್ಷಗಳೇ ಕಳೆದರೂ, ಅವರ ನೆನಪು ಮಾತ್ರ ಶಾಶ್ವತವಾಗಿದೆ.

ಅಂದಹಾಗೆ, ಸಂಪತ್‌ಕುಮಾರ್ ಆಗಿದ್ದ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1972ರಲ್ಲಿ 'ವಂಶವೃಕ್ಷ' ಸಿನಿಮಾದ ಮೂಲಕ. ಆನಂತರ ಅವರಿಗೆ ಸ್ಟಾರ್ ಪಟ್ಟ ಸಿಕ್ಕಿದ್ದು ಅದೇ ವರ್ಷ ತೆರೆಗೆ ಬಂದ 'ನಾಗರಹಾವು' ಸಿನಿಮಾದ ಮೂಲಕ. ಅಲ್ಲಿಂದ ವಿಷ್ಣು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಸಾಲು ಸಾಲು ಯಶಸ್ವಿ ಸಿನಿಮಾಗಳನ್ನು ನೀಡುತ್ತ ಅಭಿಮಾನಿಗಳ ಎದೆಯಲ್ಲಿ 'ಅಭಿನಯ ಭಾರ್ಗವ'ನಾಗಿ ಉಳಿದುಬಿಟ್ಟರು, ಕನ್ನಡ ಚಿತ್ರರಂಗದಲ್ಲಿ 'ಸಾಹಸ ಸಿಂಹ'ನಾಗಿ ಮೆರೆದರು. ವಿಷ್ಣುವರ್ಧನ್ ಅವರು ತಮ್ಮ ವೃತ್ತಿಜೀವನದಲ್ಲಿ 200 ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೆ, ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲೂ ಅವರು ನಟಿಸಿದ್ದಾರೆ. ಜನ್ಮದಿನದ ಹಿನ್ನೆಲೆಯಲ್ಲಿ ವಿಷ್ಣುವರ್ಧನ್‌ ಅವರು ನಟಿಸಿದ ಐದು ಉತ್ತಮ ಚಿತ್ರಗಳ ಕುರಿತು ಮಾಹಿತಿ ಇಲ್ಲಿದೆ..

1972ರಲ್ಲಿ ತೆರೆಕಂಡ 'ನಾಗರಹಾವು' ವಿಷ್ಣು ಸಿನಿ ಬದುಕಿಗೆ ಭರ್ಜರಿ ಎಂಟ್ರಿ ದಕ್ಕಿಸಿಕೊಟ್ಟ ಸಿನಿಮಾ. ಪುಟ್ಟಣ್ಣ ಕಣಗಾಲ್‌ ಅವರ ದಕ್ಷ ನಿರ್ದೇಶನ, ಎನ್. ವೀರಾಸ್ವಾಮಿ ಅವರ ನಿರ್ಮಾಣದಲ್ಲಿ ಮೂಡಿಬಂದ ಈ ಸಿನಿಮಾದಲ್ಲಿ ವಿಷ್ಣು ಆ್ಯಂಗ್ರಿ ಯಂಗ್‌ಮ್ಯಾನ್‌ ಗೆಟಪ್‌ನಲ್ಲಿ ಸಖತ್ ಆಗಿಯೇ ಮಿಂಚಿದರು. ಅವರ ಪೋಷಿಸಿದ್ದ ರಾಮಾಚಾರಿ ಪಾತ್ರ ಈಗಲೂ ಅಭಿಮಾನಿಗಳು ಮನಸ್ಸಿನಲ್ಲಿ ಹಾಗೇ ಉಳಿದುಕೊಂಡಿದೆ. ಸಿನಿಮಾ ದೊಡ್ಡ ಯಶಸ್ಸು ಕಂಡಿತು. ಆ ಸಿನಿಮಾ ತೆರೆಕಂಡು 48 ವರ್ಷಗಳಾದರೂ, ಈಗಲೂ ಆ ಸಿನಿಮಾವನ್ನು ಜನರು ಮರೆತಿಲ್ಲ. ವಿಷ್ಣು ಜೊತೆ ಅಂಬರೀಷ್‌ ಕೂಡ ಆ ಸಿನಿಮಾದಿಂದಲೇ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಪಡೆದುಕೊಂಡರು. ಆರತಿ, ಲೀಲಾವತಿ, ಕೆ.ಎಸ್. ಅಶ್ವತ್ಥ್‌ ಅದ್ಭುತವಾಗಿ ಅಭಿನಯಿಸಿದ ಸಿನಿಮಾವದು. ಈ ಸಿನಿಮಾದ ನಟನೆಗಾಗಿ ವಿಷ್ಣುವರ್ಧನ್‌ ಅವರಿಗೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು.

ವಿಷ್ಣು ವೃತ್ತಿಜೀವನದ ಮತ್ತೊಂದು ಅದ್ಭುತ ಸಿನಿಮಾವೆಂದರೆ, ಅದು 'ಬಂಧನ'. ಉಷಾ ನವರತ್ನರಾಮ್‌ ಅವರು ಬರೆದ 'ಬಂಧನ' ಕಾದಂಬರಿಯನ್ನು ಅದೇ ಹೆಸರಿನಲ್ಲಿ ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು ಸಿನಿಮಾ ಮಾಡಿದ್ದರು. ವಿಷ್ಣುಗೆ ನಾಯಕಿಯಾಗಿ ಸುಹಾಸಿನಿ ಕಾಣಿಸಿಕೊಂಡಿದ್ದರು. ಸ್ಯಾಡ್‌ ಎಂಡಿಂಗ್ ಲವ್‌ ಸ್ಟೋರಿಯುಳ್ಳ ಈ ಸಿನಿಮಾ ಆ ಕಾಲಕ್ಕೆ ದಾಖಲೆಯ ಹಿಟ್ ಆಗಿತ್ತು. ಎಂ. ರಂಗಾರಾವ್ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ 'ಬಂಧನ' ಚಿತ್ರದ ಹಾಡುಗಳು ಈಗಲೂ ಕೇಳುಗರ ನೆಚ್ಚಿನ ಗೀತೆಗಳಾಗಿವೆ. ಡಾ. ಹರೀಶ್ ಪಾತ್ರದಲ್ಲಿ ವಿಷ್ಣು ಅಮೋಘವಾಗಿ ನಟಿಸಿದ್ದರು. ಅವರ ಉತ್ತಮ ಅಭಿನಯಕ್ಕಾಗಿ ಪ್ರತಿಷ್ಠಿತ ಫಿಲ್ಮ್‌ಫೇರ್‌ ಪ್ರಶಸ್ತಿಯೂ ಸಿಕ್ಕಿತ್ತು.

ಎಸ್‌.ವಿ. ರಾಜೇಂದ್ರ ಸಿಂಗ್ ಬಾಬು ಮತ್ತು ಡಾ. ವಿಷ್ಣುವರ್ಧನ್‌ ಅವರ ಕಾಂಬಿನೇಷನ್‌ನಲ್ಲಿ ಮೂಡಿಬಂದ ಮತ್ತೊಂದು ಉತ್ತಮ ಸಿನಿಮಾ 'ಮುತ್ತಿನ ಹಾರ'. 1990ರಲ್ಲಿ ತೆರೆಗೆ ಬಂದ ಸಿನಿಮಾವನ್ನು ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣವನ್ನು ಸಿಂಗ್ ಬಾಬು ಮಾಡಿದ್ದರು. ವಿಷ್ಣು ಕೊಡಗಿನ ವೀರ ಯೋಧ ಮೇಜರ್ ಅಚ್ಚಪ್ಪನಾಗಿ ಕಾಣಿಸಿಕೊಂಡಿದ್ದರು. ಕಾಶ್ಮೀರ ಗಡಿಯಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲಾಗಿತ್ತು. ವಿಷ್ಣು ಅಭಿನಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು. ಹಂಸಲೇಖ ಅವರ ಸಂಗೀತ ಸಂಯೋಜನೆಯ ಹಾಡುಗಳು ಹಿಟ್ ಆಗಿದ್ದವು. ಜೊತೆಗೆ ಅನೇಕ ಪ್ರಶಸ್ತಿಗಳನ್ನು ಈ ಸಿನಿಮಾ ಪಡೆದುಕೊಂಡಿತ್ತು. ರಾಮ್‌ಕುಮಾರ್, ಮಾಸ್ಟರ್ ಆನಂದ್, ಕೆ.ಎಸ್‌. ಅಶ್ವತ್ಥ್‌ ಪ್ರಮುಖ ಪಾತ್ರಗಳಲ್ಲಿದ್ದರು.

ಡಾ. ವಿಷ್ಣುವರ್ಧನ್‌ ಅವರ ವೃತ್ತಿಜೀವನದ ಉತ್ತಮ ಸಿನಿಮಾಗಳಲ್ಲಿ 'ನಿಷ್ಕರ್ಷ' ಕೂಡ ಒಂದು. 1994ರಲ್ಲಿ ತೆರೆಕಂಡ ಈ ಥ್ರಿಲ್ಲರ್ ಸಿನಿಮಾ, ಆ ಕಾಲಕ್ಕೆ ದೊಡ್ಡ ಪ್ರಯೋಗವೇ ಆಗಿತ್ತು. ಕಮರ್ಷಿಯಲ್ ಸಿನಿಮಾಗಳ ಸಿದ್ಧಸೂತ್ರಗಳನ್ನು ಬ್ರೇಕ್ ಮಾಡಿ, 'ನಿಷ್ಕರ್ಷ'ವನ್ನು ಮಾಡಿದ್ದರು ನಿರ್ದೇಶಕ ಸುನೀಲ್ ಕುಮಾರ್‌ ದೇಸಾಯಿ. ಕಮಾಂಡೋ ಅಜಯ್ ಪಾತ್ರದಲ್ಲಿ ವಿಷ್ಣು ನಟಿಸಿದ್ದರು. ಬ್ಯಾಂಕ್ ದರೋಡೆ ಕುರಿತ ಕಥೆಯನ್ನು 'ನಿಷ್ಕರ್ಷ' ಹೊಂದಿತ್ತು. ನಿರೂಪಣೆಯಿಂದಲೇ ಈ ಸಿನಿಮಾ ಗಮನಸೆಳೆದಿತ್ತು. ವಿಷ್ಣು ಜೊತೆಗೆ ಅನಂತ್ ನಾಗ್, ಪ್ರಕಾಶ್ ರೈ, ರಮೇಶ್ ಭಟ್, ಸುಮನ್ ನಗರ್ಕರ್ ಮುಂತಾದವರು ನಟಿಸಿದ್ದರು. ಖಳನಾಗಿ ನಟಿಸುವುದರ ಜೊತೆಗೆ ಸಿನಿಮಾವನ್ನು ನಿರ್ಮಾಣ ಮಾಡಿದ್ದರು ಬಿ.ಸಿ. ಪಾಟೀಲ್‌.

2004ರಲ್ಲಿ ತೆರೆಗೆ ಬಂದ 'ಆಪ್ತಮಿತ್ರ' ಸಿನಿಮಾ ವಿಷ್ಣುವರ್ಧನ್ ಅವರ ಕರಿಯರ್‌ನ ದೊಡ್ಡ ಹಿಟ್ ಸಿನಿಮಾ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಇದು ಸತತ ಒಂದು ವರ್ಷ ಪ್ರದರ್ಶನ ಕಂಡಿತ್ತು. ಮೂಲ ಮಲಯಾಳಂನ 'ಮಣಿಚಿತ್ರತ್ತಾಳ್‌' ಸಿನಿಮಾದ ರಿಮೇಕ್ ಆಗಿದ್ದರೂ, ಕನ್ನಡ ನೆಟಿವಿಟಿಗೆ ತಕ್ಕಂತೆ ಅದನ್ನು ಬದಲಾಯಿಸಿ, ನಿರ್ದೇಶಿಸಿದ್ದರು ಪಿ. ವಾಸು. ಕನ್ನಡದಲ್ಲಿ ಬಂದಮೇಲೆ ಈ ಸಿನಿಮಾ ತಮಿಳು-ಹಿಂದಿಯಲ್ಲೂ ರಿಮೇಕ್ ಆಗಿತ್ತು. ಸೌಂದರ್ಯಾ, ಪ್ರೇಮಾ, ರಮೇಶ್‌ ಅರವಿಂದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವಿಷ್ಣುವರ್ಧನ್‌ ಅವರಿಗೆ ಫಿಲ್ಮ್‌ಫೇರ್‌ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಸಿಕ್ಕಿತ್ತು. ಹಾರರ್ ಥ್ರಿಲ್ಲರ್ ಮಾದರಿಯ ಸಿನಿಮಾವನ್ನು ದ್ವಾರಕೀಶ್ ನಿರ್ಮಿಸಿದ್ದರು.




ProfileImg

Written by Sidduraju M