ಹಳ್ಳಿಯರಿಗೇಕಿಲ್ಲ ಹೆಣ್ಣು
ಇದೇನು ಈ ರೀತಿ ಶೀರ್ಷಿಕೆ ಇಟ್ಟಿದ್ದೀನಿ ಅಂತ ಯೋಚಿಸುತ್ತಿದ್ದೀರಾ? ಇದು ಹಳ್ಳಿಯಲ್ಲಿ ವಾಸಮಾಡುತ್ತಿರುವ ಗಂಡು ಮಕ್ಕಳಿಗೆ ಹೆಣ್ಣು ಕೊಡಲು ನೀರಾಕರಿಸುತ್ತಿರುವುದು ಅಥವಾ ಯುವತಿಯರೇ ಮದುವೆ ಆಗಲು ಒಪ್ಪದೇ ಬರಿ ನಗರಗಳಿಗೆ ಅದರಲ್ಲೂ ಬೆಂಗಳೂರು, ಫಾರೀನ್ ನಲ್ಲಿರುವ ಗಂಡಿಗೆ ಮದುವೆಯಾಗಲು ಬಯಸುತ್ತಿರುವುದು ಮಾಮೂಲಾಗಿದೆ. ಆ ಗಂಡು ಯಾವ ಕೆಲಸಕ್ಕೆ ಹೋಗುತ್ತಾನೋ, ಎಷ್ಟು ದುಡಿಯುತ್ತಾನೆ, ಅವನ ಹಿನ್ನೆಲೆಯೇನೋ ಏನು ತಿಳಿಯದೆ ಕೇವಲ ಸಾಪ್ಟವೇರ್ ನಲ್ಲಿ ಕೆಲಸವೆಂದೊಡನೆ ಹಿಂದೂ ಮುಂದೂ ಯೋಚಿಸದೇ ಮದುವೆಯಾಗುವುದು ರೂಡಿಯಲ್ಲಿದೆ. ಇತ್ತ ನೂರಾರು ಎಕರೆ ಗದ್ದೆ, ತೋಟ ಇರುವ ರೈತರು, ರೈತ ಕಾರ್ಯದ ಜೊತೆ ಪುರೋಹಿತರು, ಅಡಿಗೆ ಕೆಲಸದವರು, ಇಂತಹವರನ್ನು ಮದುವೆಯಾಗಿ ಪ್ರಕೃತಿಯ ಮಡಿಲಲ್ಲಿ ಆರೋಗ್ಯಕರ ಜೀವನ ನಡೆಸುವುದು ಬೇಕಾಗದೆ ಹೋಗಿದೆ. ಅದರಲ್ಲೂ ಸಹ ಗಂಡು ಮಕ್ಕಳು ಸಹ ಒದಿಯೋ ಅಥವಾ ಓದಿಲ್ಲದಿದ್ದರೂ ಸಹ ಪಟ್ಟಣಕ್ಕೆ ಕೆಲಸ ಅರಸಿ ಹೋಗುತ್ತಾರೆ. ಕೆಲ ಹುಡುಗ ಹುಡುಗಿಯರು ಹಳ್ಳಿಯಲ್ಲೆ ವಾಸಿಸುತ್ತಿದ್ದಾರೆ.
ಈಗ ಬಹುತೇಕ ಹುಡುಗಿಯರು ತಾವು ಮದುವೆಯಾಗುವುದಾದರೆ ಬೆಂಗಳೂರಿನಲ್ಲಿರಬೇಕು ಅಲ್ಲಿ ಸಾಪ್ಟವೇರ್ ಕೆಲಸದಲ್ಲಿರಬೇಕು, ಕಾರು ಇರಬೇಕು, ಅತ್ತೆ ಮಾವ ಇರಬಾರದು ಹೀಗೆ ನೂರಾರು ಷರತ್ತುಗಳನ್ನು ಹಾಕುತ್ತಾರೆ. ಇಷ್ಟೆಲ್ಲಾ ಷರತ್ತು ಒಪ್ಪಿಕೊಂಡು ಮದುವೆಯಾಗಿ ಅವಾಗಲದರೂ ಗಂಡನ ಜೊತೆ ಸುಖವಾಗಿ ಬಾಳುತ್ತಾರಾ ಅದ್ದು ಇಲ್ಲ ಅದರಲ್ಲೂ ಮತ್ತೆ ಕಿರಿಕ್ ಇದ್ದಿದ್ದೇ. ಇದಕ್ಕೆಲ್ಲಾ ಮಕ್ಕಳೇ ನೇರ ಕಾರಣನ ಅವರ ಪೋಷಕರ ಅಥವಾ ಸಮಾಜನಾ ಅನ್ನೋದು ವಿಪರ್ಯಾಸ. ಇತ್ತ ರೈತಾಪಿ ಮಕ್ಕಳು ತಮ್ಮ ಅಣ್ಣ ತಮ್ಮಂದಿರಿಗೆ ಹೆಣ್ಣು ಸಿಗುತ್ತಿಲ್ಲ ಅಂತ ತಿಳಿದು ಅವರು ಸಹ ಪೇಟೆಯಲ್ಲಿರುವ ಗಂಡು ಅಂದುಕೊಂಡು ಹೋಗಿ ಮದುವೆಯಾಗುತ್ತಾರೆ. ಆಮೇಲೆ ನನ್ನ ಸಹೋದರನಿಗೆ ಹೆಣ್ಣು ಸಿಕ್ಕಿಲ್ಲ ಅಂತ ಗೋಳಾಡುತ್ತಾರೆ. ಅದರ ಬದಲು ತಾವು ಇನ್ನೊಬ್ಬ ರೈತಾಪಿ ಮಕ್ಕಳಿಗೆ ಮದುವೆಯಾಗಿ ತಾವು ಸಹ ಹಳ್ಳಿಯ ಸುಂದರವಾದ ಬದುಕು ಬದುಕೋದು ಬಿಟ್ಟು ಬೆಂಗಳೂರು ಎಂಬ ನರಕಕ್ಕೆ ಹೋಗಿ ಸಾಯ್ತಾರೆ. ಕೇಳಿದರೆ ಅದಲ್ಲಾ ನಮ್ಮಿಷ್ಟ ಅಷ್ಟಕ್ಕೂ ಈ ಹಳ್ಳಿಯಲ್ಲೇನಿದೆ. ಅದೇ ಬೆಂಗಳೂರು ಇಲ್ಲಾ ದೊಡ್ಡ ಸಿಟಿಗೆ ಹೋದರೆ ಮಾಲು, ಸಿನಿಮಾ ಥಿಯೇಟರ್, ರೋಡ ಸೈಡ್ ಗಾಡಿ, ಪಬ್ ಬಾರು ಎಲ್ಲಾ ಇದೆ ಎಂಜಾಯ್ ಮಾಡಬಹುದು ಅಂತ ಹೇಳ್ತಾರೆ. ಇನ್ನು ಕೆಲವರು ಹಳ್ಳಿಯಲ್ಲಿ ಮನೆಯಲ್ಲಿದ್ದರೆ ಎಂಜಾಯ್ ಮಾಡೋಕೆ ಆಗೊಲ್ಲಾ ಅಂತ ಪಟ್ಟಣಕ್ಕೆ ಹೋಗಿ ಯಾವುದಾದರೂ ಕಾಲ್ ಸೆಂಟರ್, ಬಿ.ಪಿ.ಓ. ಇಲ್ಲಾ ಕೆಲವು ಸಣ್ಣ ಪುಟ್ಟ ಕೆಲಸಕ್ಕೆ ಹೋಗಿ ತಾನೇನೋ ಸಾಧನೆ ಮಾಡ್ತಾ ಇದ್ದೀನಿ ಅನ್ನೋ ಭ್ರಮೆಯಲ್ಲಿರುತ್ತಾರೆ. ಇವರುಗಳು ಮನೆಯಲ್ಲಿದ್ದರೆ ನಿಜವಾಗಿಯೂ ಕೆಲಸದ ಅವಶ್ಯಕತೆ ಇದ್ದೋರಿಗೆ ಕೆಲಸ ಸಿಗುತ್ತೆ.
ಅಲ್ಲದೆ ಹಳ್ಳಿಯ ಹುಡುಗರಿಗೆ ಹೆಣ್ಣು ಕೊಡೋದು ಅವನು ಹಳ್ಳಿ ಬಿಟ್ಟು ಬೇರೆ ಕಡೆ ಕೆಲಸ ಮಾಡೋರಿಗೆ ಮಾತ್ರ. ಅದೇ ಜಮೀನು, ತೋಟ, ಪುರೋಹಿತಗೆ, ಅಡುಗೆ ಕೆಲಸ, ಇನ್ನೇನ್ನಾದರು ಕೆಲಸ ಮಾಡುವರಿಗೆ ಪಾಪ ಬಹಳ ಕಷ್ಟ. ನಮ್ಮ ಮಲೆನಾಡಿನಲ್ಲಂತೂ ಹಲವರನ್ನು ನೋಡಿದ್ದೇನೆ ವಯಸ್ಸು ಮೀರಿ ಮದುವೆ ಇಲ್ಲದೆ ಹಾಗೆ ಇದ್ದೋರು. ಇನ್ನು ದೊಡ್ಡ ದೊಡ್ಡ ಶ್ರೀಮಂತರ ಮನೆ ಮಕ್ಕಳು ತೋಟ, ಪುರೋಹಿತರಿಗೆ, ಅಡುಗೆ ಕೆಲಸದವರಿಗೆ ಮದುವೆಗೆ ಹೆಣ್ಣು ಕೊಡೋದು ಕಷ್ಟವಾಗಿದೆ. ಇತ್ತ ಎಲ್ಲಾ ಸಿಟಿಗೆ ಹೋಗಿ ಕಂಪ್ಯೂಟರ್ ಮುಂದೆ ಕೂತು ತಮ್ಮ ಅರೋಗ್ಯ ಹಾಳುಮಾಡಿಕೊಂಡು ಒದ್ದಾಡುತ್ತಿರುತ್ತಾರೆ. ಅದೇ ಹಳ್ಳಿಯಲ್ಲಿ ಸಣ್ಣಪುಟ್ಟ ಮನೆಕೆಲಸ ಮಾಡಿಕೊಂಡು ಅರೋಗ್ಯವಾಗಿ ಸುಂದರವಾದ ಜೀವನ ನಡೆಸುವುದು ಇವರಿಗೆ ಬೇಡವಾಗಿದೆ. ಅಲ್ಲದೇ ಪಟ್ಟಣದಲ್ಲಿ ಈಗಿನ ಜೀವನಶೈಲಿ ಹೇಗಿದೆ ಎಂದರೆ ಅದರಲ್ಲೂ ಕಾಲ್ ಸೆಂಟರ್, ಬಿಪಿಓ ಹಾಗೂ ಇನ್ನಿತರೇ ಕೆಲವು ಕೆಲಸಗಳಲ್ಲಿ ಶಿಫ್ಟ್ ಗಳಲ್ಲಿ ಕೆಲಸ ಮಾಡಬೇಕಿರುತ್ತದೆ. ಹೀಗಿರುವಾಗ ಕೆಲಸಕ್ಕೆ ಹೋಗಬೇಕಾದರೆ ಟೈಮ್ ಆಯಿತು ಅಂತ ತಿಂಡಿ ತಿನ್ನದೇ ಮನೆಯಿಂದ ಹೊರಡುತ್ತಾರೆ ಆಮೇಲೆ ಇನ್ಯಾವುದೀ ಹೊತ್ತಿಗೆ ಕೇವಲ ಸ್ನಾಕ್ಸ್ ಗಳನ್ನು ತಿನ್ನಿವುದು/ಕರೆದಿದ್ದು ತಿನ್ನುವುದು, ಜೊತೆಗೆ ಫಾಸ್ಟ್ ಪುಡ್ ಗಳನ್ನು ತಿಂದು ಜಾಸ್ತಿ ಓದಾಡದೇ ಎ.ಸಿ. ರೂಮಲ್ಲಿ ಕೂತು ಬಹಳ ಹೊತ್ತು ಕೆಲಸ ಮಾಡುತ್ತಾರೆ. ಇದರಿಂದ ಆರೋಗ್ಯದಲ್ಲಿ ತೊಂದರೆಗಳಾಗುತ್ತದೆ. ಆಮೇಲೆ ಜೀವನವಿಡಿ ನೋವು, ಕಾಯಿಲೆಗಳಿಂದ ನರಳುತ್ತಾರೆ.
ಇದ್ಯಾಕೆ ಇಷ್ಟೆಲ್ಲಾ ಹೇಳುತ್ತಿದ್ದೀನಿ ಅಂದರೆ ಹಳ್ಳಿಯ ಜೀವನ ಬಹಳ ಚೆನ್ನಾಗಿರುತ್ತದೆ ಇದು ಎಲ್ಲರಿಗೂ ತಿಳಿದ ವಿಷಯ. ಅಲ್ಲಿಯೂ ಒಳ್ಳೊಳ್ಳೆ ಮನೆಗಳಾಗಿವೆ, ಫೋನ್, ವೈಫೈ, ಕಾರು, ಗಾಡಿ ಎಲ್ಲಾ ಸೌಕರ್ಯಗಳು ಆಗಿದೆ. ಇನ್ನು ಎಷ್ಟೇ ಕುಗ್ರಾಮವೆಂದರೂ ಕೆಲವೊಂದು ಸೌಕರ್ಯ ಇದ್ದೆ ಇದೆ. ಇಂತಹ ಹಳ್ಳಿ ಮನೆಗೆ ಮದುವೆ ಆಗಿ ಹೋದರೆ. ಹೆಣ್ಣು ಮಕ್ಕಳು ತಮಗಿಷ್ಟವಾದ ರುಚಿರುಚಿಯಾದ ತಿನಿಸುಗಳನ್ನು ಮಾಡಿಕೊಂಡು ತಿಂದು, ಕೆಲಸ ಮಾಡಿಸಿ (ಅನುಕೂಲ ಅಷ್ಟಿಲ್ಲದಿದ್ದರೆ ಕೆಲಸ ಮಾಡಿ) ಅಗಾಗ ಪೇಟೆ ಶಾಪಿಂಗ್ ಇತ್ಯಾದಿ ಮಾಡಿ ಸಿಟಿಗಿಂತ ಒಳ್ಳೆಯ ಜೀವನವನ್ನು ನಡೆಸಬಹುದು. ಅದು ಅಲ್ಲದೇ ಹಣ ಇದ್ದೋರು ಅರಾಮವಾಗಿ ಓಡಾಡಿಕೊಂಡು ಮಕ್ಕಳನ್ನು ಶಾಲೆಗೆ ಬಿಟ್ಟುಬರೋದು, ಕರೆದುಕೊಂಡು ಬರುವುದು, ಶಾಪಿಂಗಿಗೆ ಹೋಗೋದು, ತೋಟ ಗದ್ದೆಗಳಿಗೆ ಹೋಗೋದು, ಕೆಲಸಗಾರರಿಂದ ಕೆಲಸ ಮಾಡಿಸೋದು ಸಿಟಿಯಲ್ಲಿ ಬೇರೆಯವರಿಗೆ ಕೈಕಾಲು ಹಿಡಿಯುವುದಕ್ಕಿಂತ ಹಳ್ಳಿಯಲ್ಲೇ ಆರಾಮವಾಗಿ ಬಾಳಬಹುದು. ಅದು ಬಿಟ್ಟು ಗೊತ್ತಿಲ್ಲದ ಊರಿಗೆ ಹೋಗಿ ನರಕ ಅನುಭವಿಸುವುದಕ್ಕಿಂತ ಹಳ್ಳಿಯಲ್ಲೇ ಉತ್ತಮ ಅನ್ನೋದು ನನ್ನ ಭಾವನೆ.
ಇದ್ಯಾಕೆ ಹೇಳ್ತಿದ್ದೀನಿ ಅಂದರೆ ನಾನು ನಮ್ಮೂರಲ್ಲಿ ಬಹುತೇಕ ಹುಡುಗರಿಗೆ ಮದುವೆಯಾಗಿಲ್ಲ. ಇನ್ನು ಕೆಲವರಿಗೆ ಮದುವೆ ಆಗಿದೆ. ಆ ಹುಡುಗಿಯರು ಮದುವೆ ಆಗಿಬಂದು ಮಕ್ಕಳಾದ್ರು ಅವರು ಮನೆ ತೋಟ, ನೋಡ್ಕೊಂಡು, ಮನೆಯ ಜವಾಬ್ದಾರಿ ಎಲ್ಲಾ ವಹಿಸಿಕೊಂಡು ಆರಾಮಾಗಿದ್ದಾರೆ, (ಅವರ ಒಳಗಿನ ವಿಷಯ ಬಿಟ್ಟು ) ದ್ವಿಚಕ್ರ ವಾಹನ ತೆಗೆದುಕೊಂಡಿದ್ದಾರೆ, ಅವರ ಗಂಡಂದಿರು ಕಾರು ಇಟ್ಟುಕೊಂಡಿದ್ದಾರೆ, ಕಾರ್ಯಕ್ರಮ, ಫಿಲಂ, ಎಲ್ಲಾ ಕಡೆ ಓಡಾಡಿಕೊಂಡು ಇದ್ದಾರೆ. ಜೊತೆಗೆ ಊರಿನ ಹೆಣ್ಣುಮಕ್ಕಳೆಲ್ಲಾ ಸೇರಿಕೊಂಡು ಭಜನೆ ಬ್ಯಾಚ್ ಮಾಡಿಕೊಂಡಿದ್ದಾರೆ, ಈ ಬ್ಯಾಚ್ ಎಲ್ಲೆಲ್ಲಿ ಭಜನೆಗೆ ಕರೆಯುತ್ತಾರೋ ಆ ಉರುಗಳಿಗೆ ಹೋಗಿ ಭಜನೆ ಮಾಡಿ ಬರುತ್ತಾರೆ. ಅಗಾಗ ಬೆಂಗಳೂರು, ಮಂಗಳೂರು ಹೀಗೆ ಓಡಾಡುತ್ತಾರೆ. ಅದನ್ನು ನೋಡಿದ ಮೇಲೆ ನನಗೆ ಅನಿಸಿದ್ದು, ಇಂತಹ ಒಳ್ಳೆಯ ಜೀವನವನ್ನು ಬಿಟ್ಟು ಬೆಂಗಳೂರು, ಪಟ್ಟಣ/ಫಾರೀನ್ ಅಂತ ಇಲ್ಲಸಲ್ಲದ ಸಾಬುಬು ಹೇಳಿಕೊಂಡು ಒಂದು ಒಳ್ಳೆಯ ಜೀವನ ಹಾಳುಮಾಡಿಕೊಳ್ಳುತ್ತಿರುವುದು ಹಲವಾರು ಜನರನ್ನು ನೋಡಿದ್ದೇವೆ.
ಅದಕ್ಕೆ ನನ್ನ ಕಳಕಳಿಯ ಮನವಿ ನಿಜವಾಗಲೂ ನೀವು ಸಾಧನೆ ಮಾಡಬೇಕು ಅಂದುಕೊಂಡು ಅದನ್ನು ಸಾಧಿಸಲಿಕ್ಕೆ ಬೇಕೇ ಬೇಕು ಅನ್ನೋ ಹಾಗಿದ್ದರೆ ದೊಡ್ಡದೊಡ್ದ ಪಟ್ಟಣಕ್ಕೆ ಹೋಗಿ, ಇನ್ನು ಕೆಲವರು ವಿಧಿಯಿಲ್ಲದೇ ಹೋಗುವರು ಹೋಗಲಿ, ಅದನ್ನು ಬಿಟ್ಟು ಏನು ಇಲ್ಲದೆ ಮದುವೆ ಆಗಿ ಜೀವನ ಕಳೆಯುತ್ತೀರಿ ಅನ್ನೋರು ಹಳ್ಳಿಯ ಹುಡುಗರಿಗೆ ಮದುವೆಯಾಗಿ ಜೊತೆಗೆ ಹಳ್ಳಿ ಹುಡುಗಿಯರು ಆದಷ್ಟು ರೈತಾಪಿ ಮಕ್ಕಳಿಗೆ ಮದುವೆಯಾಗಿ ರೈತ ಕುಟುಂಬವನ್ನು ಬೆಳೆಸಿರಿ ಎನ್ನುವುದು ನನ್ನ ಕಳಕಳಿಯ ಮನವಿ.
ಇದು ಸಿಟಿಗಿಂತ ಹಳ್ಳಿಯಲ್ಲಿ ಆರಾಮಾಗಿ ಬದುಕಬಹುದೆಂದು ನನ್ನ ಅನಿಸಿಕೆ. ಅದನ್ನು ಬಿಟ್ಟು ಹೆಣ್ಣು ಮಕ್ಕಳಿಗೆ ಕಿರುಕುಳ, ಹಿಂದೆ ದೌರ್ಜನ್ಯ ನೀಡಿದ್ದರು ಅನ್ನುವ ಯಾವ ವಿಷಯದ ಬಗ್ಗೆಯೂ ಅಲ್ಲ.
ಪ್ರವೀಣ್ ರಾವ್
Writer
0 Followers
0 Following