ಕುಜದೋಷ

ಸ್ವಾತಿ ಜಾತಕದಲ್ಲಿ ಕುಜದೋಷ

ProfileImg
16 May '24
6 min read


image

ಎಲ್ಲರಿಗೂ ಶುಭೋದಯ .
❤️❤️❤️❤️❤️❤️❤️❤️❤️❤️❤️❤️❤️❤️❤️❤️❤️❤️

#ಕುಜದೋಷ.👫💔💔

ಸ್ವಾತಿ ಕೈ ಒರೆಸುತ್ತಾ ಅಡಿಗೆ ಮನೆಯಿಂದ ಹೊರ ಬಂದು ತಿಂಡಿ ತಟ್ಟೆ ಹಿಡಿದು ಡೈನಿಂಗ್ ಟೇಬಲ್ ಹತ್ತಿರ ಕುರ್ಚಿ ಎಳೆದು ಕುಳಿತಳು.
ಇಡ್ಲಿ ಮುರಿದು ಬಾಯಿಗೆ ಇಡಬೇಕು ಎಂದಾಗ  ಕಾಲಿಂಗ್ ಬೆಲ್ ಸದ್ದುಕೇಳಿಸಿತು..ಹೋಗಿ ಮುಂಬಾಗಿಲು ತೆರೆದವಳಿಗೆ ಆಶ್ಚರ್ಯಕಾದಿತ್ತು.ಬಾಲ್ಯದ ಗೆಳೆಯ ಸೋದರತ್ತೆ ಯ ಮಗ ಪ್ರಭಂಜನ ಎದುರಿಗೆ ನಿಂತಿದ್ದ .ಹಿಂದೆಯೇ ಅವನ ಹೆಂಡತಿ ಸುಮತಿ ,ಮಗಳು ಸುಮನಾ ,ಮಗ ಸುದೀನ್ದ್ರ ನಿಂತಿದ್ದರು.,👨‍👩‍👦‍👦

ಬನ್ನಿ ಬನ್ನಿ ಅಪರೂಪದ ಅತಿಥಿಗಳು ಎನ್ನುತ್ತಾ ಒಳಗೆ ಕರೆದಳು.
ಹೇಗಿದೀಯ  ಸ್ವಾತು...ಎಂದ ಪ್ರಭನಂನ ನನ್ನು ನೋಡಿ..ಸ್ವಾತಿಗೆ ಏನೋ ಒಂಥರಾ ಎದೆಯೆಲ್ಲ ಭಾರವಾಯಿತು ,ಕಣ್ಣಂಚಿನಲ್ಲಿ ನೀರು ತುಂಬಿತು. ಪ್ರಭಂಜನ...ನೀನು ನನ್ನ ಮರೆತಿಲ್ಲ..ಅದೇ ಏಕವಚನದಲ್ಲಿ ಅದೇ ಸಲುಗೆ..ಮನಸಿನಲ್ಲಿ ಹೇಳಿ ಕೊಂಡವಳು..ಚೆನ್ನಾಗಿದ್ದೇವೆ ಎಲ್ಲರೂ ,ಪ್ರಭು ಅತ್ತೆ ಹೇಗಿದ್ದಾರೆ ,ಮಾವ ನ ಆರೋಗ್ಯ ಹೇಗಿದೆ ಎಂದವಳೇ ಸುಮತಿ ಹೇಗಿದ್ದಿ..ಮಕ್ಕಳು ತುಂಬಾ ಮುದ್ದಾಗಿದ್ದರೆ ಎನ್ನುತ್ತಾ ಎಲ್ಲಾರು ಕೈ,ಕಾಲು ತೊಳೆದುಕೊಳ್ಳಿ ತಿಂಡಿ ತರುತ್ತೇನೆ ಎನ್ನುತ್ತಾ ಅಡಿಗೆ ಕೋಣೆಗೆ  ಹೋದಳು.
ತುಂಬಿ ಬಂದ ಕಣ್ಣೀರು ತೊಡೆಯುತ್ತಾ ,ತಟ್ಟೆ ಗಳಲ್ಲಿ ಇಡ್ಲಿ ಚಟ್ನಿ ಬಡಿಸಿ ,ನಿನ್ನೆ ಪತಿ ಮಹೇಶ್ ತಂದಿಟ್ಟಿದ್ದ ಹಲ್ವಾ ಫೀಸ್ ನ್ನು ಹಾಕಿ ಟೇಬಲ್ ಮೇಲೆ ಇಟ್ಟು ಲೋಟಕ್ಕೆ ನೀರು ಬಗ್ಗಿಸುತ್ತ ,ಸುಮತಿ ಎಲ್ಲರೂ ತಿಂಡಿ ತಿನ್ನುವ ಮತ್ತೆ ಮಾತಾನಾಡೋಣ ಎಂದು ಎರಡು ನಿಮಿಷ ಮೌನಕ್ಜೆ ಜಾರಿದಳು.🤐🤐

ಸುಮತಿ ಮಕ್ಕಳಿಗೆ ತಿಂಡಿ ತಿನ್ನಿಸುತ್ತ ತಾನು ತಿನ್ನತೊಡಗಿದಳು.ಹಳ್ಳಿಯಿಂದ ಬೆಳಗ್ಗೆಯೇ ಡ್ರೈವಿಂಗ ಮಾಡಿಕೊಂಡು ಹೊರಟು ಬಂದಿದ್ದರು. ಹೊಟ್ಟೆ ಕಾದಿತ್ತು.
ಎಲ್ಕರಿಗೂ ಮತ್ತೆರೆಡು ಇಡ್ಲಿ ಹಾಕಿ ಉಪಚಾರ ಮಾಡುತ್ತ ಕಾಫಿ ಮಾಡಲು ಒಳಗೆ ಹೋದಳು .

ಹಿಂದೆಯೇ ಬಂದ ಪ್ರಭಂಜನ ,ಸ್ವಾತು ಹಳೆಯದು ಮರೆತಿಲ್ಲವೇ ಬಿಡು ಅದನ್ನು ನಿನ್ನ ಕಣ್ಣೀರು ಕಾಣದಷ್ಟು ಕುರುಡನಲ್ಲಾ ನಾನು 
ಹೇಗಿದ್ದಾರೆ ಭಾವ ,ಮಗಳನ್ನು ಮೊನ್ನೇ ಯೂಟ್ಯೂಬ್ ನಲ್ಲಿ ನೋಡಿದೆ ಎಷ್ಟು ಚೆಂದ ಹಾಡುತ್ತಾಳೆ. ಆಗಲೇ 14 ರ ಬಾಲೆ..
ತುಂಬಾ ಚೆನ್ನಾಗಿದ್ದಾಳೆ  ಎಲ್ಲದರಲ್ಲೂ ಬುದ್ದಿವಂತೆ ಎಂದು ಅತ್ತೆ ಮಾವ ಹೇಳುತ್ತಿರುತ್ತಾರೆ .

ಸ್ವಾತಿ ನಗುತ್ತ ಹಂ..ಪ್ರಭು ಅವಳೇ ನೋಡು ನನ್ನ ಲೋಕ ,
ಜಗತ್ತನ್ನು ಪರಿಚಯಿಸಿದ್ದೆ ಅವಳು .ಹೌದು ಇದ್ದಕ್ಕಿದ್ದ ಹಾಗೆ ಬಂದಿದ್ದೀರಿ  ಏನು ವಿಶೇಷ ಹಾಸನದಲ್ಲಿ ಕೊಳ್ಳುವುದು ಇತ್ತೆ ಏನಾದರೂ ಜೋರಾ ಶಾಸ್ಪಿಂಗ್ ಈಗೇನು ಮಾರಾಯ ಬೆಂಗಳೂರು ಶಿವಮೊಗ್ಗೆ ಗಿಂತ ಹಾಸನ ದಲ್ಲಿಎಲ್ಲವೂ  ಸಿಗುತ್ತದೆ ಅದು ಹೆಂಡತಿ ಮಕ್ಕಳು ಒಟ್ಟಿಗೆಬಂದಿದ್ದಾರೆ.
ನೀನೊಬ್ಬನೇ ಬಂದರು ನನ್ನ ಮನೆಗೆ ಬರುವುದಿಲ್ಲ ಎಂದು ಗೊತ್ತು ಅದಕ್ಕೆ ಕೇಳಿದ್ದು ಮಾರಾಯ .

ಅಷ್ಟರಲ್ಲಿ ಒಂದು ಹರಿವಾಣದಲ್ಲಿ ❣️ಸೀರೆ ಪಂಚೆ ಒಂದು ಫ್ರಾಕ್..ಅರಿಸಿನ ಕುಂಕುಮ ಮಂತ್ರಾಕ್ಷತೆ  ಹೂವು ಇಟ್ಟುಕೊಂಡು ಬಂದ ಸುಮತಿ ಸ್ವಾತಿ ಬನ್ನಿ  ದೇವರ ಮುಂದೆ ಕುಳಿತು ಕೊಳ್ಳಿ ಕುಂಕುಮ ಇಟ್ಟುಕೊಳ್ಳಿ..ಎನ್ನುತ್ತಾ  ನಾಡಿದ್ದು ಭಾನುವಾರ ಕಾರ್ತಿಕ ಶುದ್ಧ ದಶಮಿ ಮಗುವಿಗೆ ಚೌಲ ವಿದೆ .ನೀವು ಅಣ್ಣ ಮಗು ದಯವಿಟ್ಟು ಬನ್ನಿ..ಏನಾದರೂ ಅತ್ತೆ ಮೇಲೆ ಕೋಪ ಇದ್ದರೆ ಅದನ್ನು ಮರೆತು ಬಿಡಿ ಎನ್ನುತ್ತಾ ಹರಿವಾಣ ಕೈಯಲ್ಲಿಇಟ್ಟು ನಮಸ್ಕಾರ ಮಾಡಿದಳು.
ಸ್ವಾತಿ ಅತ್ತೆ ಮೇಲಿನ ಕೋಪ ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಏನೋ ಆಗಿದ್ದು ಆಗಿ ಹೋಗಿದೆ .ಈಗ ನಮ್ಮ ಕಾಲ ಊರಿಗೆ ಬರ್ತೀರ 
ನಮ್ಮ ಮನೆಗೆ ಬರುವುದಿಲ್ಲ ಈಗಿರುವುದು ಎಲ್ಲರ ನಡುವೆ ಸ್ನೇಹಾ ಮಾತ್ರ ಸ್ವಾತಿ .ನಾನು ಅತ್ತೆಯಿಂದ ಸಾಕಷ್ಟು ಅನುಭವಿಸಿದ್ದೇನೆ ಏನು ಮಾಡುವುದು ಹೇಳಿ ದಯವಿಟ್ಟು ಬನ್ನಿ 
ನಾಲ್ಕು ದಿನ ಇದ್ದು ಬರುವಿರಂತೆ ,ನೆಂಟರು ಬರುತ್ತಾರೆ ನಿಮಗೂ 
ಒಂದು ಬದಲಾವಣೆ ಸಿಗುತ್ತೆ.

ಸ್ವಾತಿ ಸುಮತಿಯ ಮುಖ ನೋಡಿ ಏನಮ್ಮ ನಂಗೆ ದ್ವೇಷ,ಅವರು ಕರೆದಿರಲಿಲ್ಲ,ನಾನು ಬಂದಿರಲಿಲ್ಲ ಅಷ್ಟೇ ಖಂಡಿತ ಬರುತ್ತೇನೆ ಎಂದವಳು ಪ್ರಭು ಇವತ್ತು ಇರು ಮಹೇಶ್ ಹಾಗೂ ಮಗಳು ಸಂಜೆ ವೇಳೆಗೆಬರುತ್ತಾರೆ ಎಂದಾಗ,ಇಲ್ಲ ಸ್ವಾತು ಹೊರಡಬೇಕಿದೆ ,ತೋಟದಲ್ಲಿ ಕೆಲ್ಸ ನೆಡೆಯುತ್ತಿದೆ ಹಾಗೆ ಚಿಕ್ಕಮಗಳೂರುಲ್ಲಿ ಒಂದಷ್ಟುಮನೆಗೆ ಪತ್ರಿಕೆ ಕೊಟ್ಟು ಸಂಜೆ ಒಳಗೆ ಊರು ಮುಟ್ಟಬೇಕು .ಅಪ್ಪ ಇಲ್ಲ ಶಿವಮೊಗ್ಗಕ್ಕೆ ಹೋಗಿದ್ದಾರೆ ಅಡಿಕೆ ಮಂಡಿಲಿ ಕೆಲ್ಸ ಇತ್ತು  ಅಮ್ಮ ಒಬ್ಬಳೇ ಎಂದನು.
ಸುಮತಿ ಬನ್ನಿ ಅರಿಸಿನ ಕುಂಕುಮ ತೆಗೆದುಕೊಳ್ಳಿ ಎನ್ನುತ್ತಾ   ಸುಮತಿಗೆಂದು ಬೆಳ್ಳಿಯ ಅರಿಸಿನ ಕುಂಕುಮ ದ ಬಟ್ಟಲು ಮಕ್ಕಳ ಕೈಗೆ ಹಣ ಕೊಟ್ಟು   ಬಟ್ಟೆ ತೆಗೆದು ಕೊಡು ಪ್ರಭು ಎಂದಳು.
ಸ್ವಾತಿ ಮರೆಯದೆ ಬನ್ನಿ ಮಹೇಶಣ್ಣ ನಿಗೂ ಹೇಳಿಬಿಡಿ ಎನ್ನುತ್ತಾ ಎಲ್ಲರೂ ಕಾರು ಹತ್ತಿದರು.
ಮನಸ್ದು ಮಾತ್ರ ಎತ್ತೆತ್ತಲೋ ಇತ್ತು.
ರಸ್ತೆ ವರೆಗೂ ಬೀಳ್ಕೊಟ್ಟು ಕಾರು ರಸ್ತೆ ಬದಿಯಲ್ಲಿ ತಿರುಗಿದ ಮೇಲೇ ಒಳ ಬಂದವಳಿಗೆ, ಬಾಲ್ಯದ ನೆನಪು ಸುರುಳಿ ಸುತ್ತಿಸುತ್ತಿ
ಬಂತು .😥😥😣😣

ಚಿಕ್ಕಮಗಳೂರು ಜಿಲ್ಲೆಯ ಅಕ್ಕ ಪಕ್ಕದ ಹಳ್ಳಿಗಳು ಇಬ್ಬರದ್ದು 
ಇಬ್ಬರ ಮನೆಯಲ್ಲಿಯು ಕೃಷಿ ಯೇ ಕುಲ ಕಸುಬು,ಸ್ವಾತಿ ಅಪ್ಪ 
ಶ್ರೀಧರ್ ರವರು ಅವರ ಅಕ್ಕಾ ಕುಸುಮಾ ಪ್ರಭು ವಿನ ಅಮ್ಮ.
ಪ್ರಭು ಗು ಸ್ವಾತಿಗೂ 3 ವರ್ಷಗಳಅಂತರ ,ಒಟ್ಟಿಗೆ ಆಡಿಕೂಡಿ 
ಬೆಳೆದವರು .

ರಜೆ ಬಂದರೆ ಪ್ರಭು ವೇ ಓಡಿ ಬರುತ್ತಿದ್ದ,ಸ್ವಾತಿ ಅಮ್ಮ ಸುಜಾತ ಅಂತೂ ಅಳಿಯ ನನ್ನು ಊರಿಗೆ ಕಳಿಸುತ್ತಲೇ ಇರಲಿಲ್ಲ.ಬೆಳೆಯುತ್ತ ಇಬ್ಬರೂ ಒಂದೇ ಸ್ವಭಾವ ದ ಜೊತೆಗೆ 
ಬುದ್ಧಿವಂತಿಕೆ ಯಲ್ಲೂ ಗುಣದಲ್ಲು ಒರೆ ಹಚ್ಚಿದಂತೆ ಇದ್ದರು 
ಸುಮ್ಮನಿರಲಾರದೆ ಕುಸುಮಾ ಸ್ವಾತಿಯೇ ನನ್ನ ಸೊಸೆಯೆಂದು ಊರೆಲ್ಲ ಹೇಳಿಕೊಂಡುಬಂದಿದ್ದರು.
👫👫
ದೊಡ್ಡವರು ಹೇಳಿದಂತೆ ಇಬ್ಬರು ಹೃದಯದಲ್ಲಿಯೇ,❣️❣️ ಭಾವನೆಗಳನ್ನು ಬೆಳೆಸಿಕೊಂಡು ಪ್ರೀತಿ ತುಂಬಿ ಕೊಂಡಿದ್ದರು.
ದೊಡ್ಡವರಿಗೂ ಇದು ಅರ್ಥವಾಗಿತ್ತು.
ಚಿಕ್ಕಮಗಳೂರುಲ್ಲಿ ಹಾಸ್ಟೆಲ್ ಲ್ಲಿ ಇದ್ದು ಓದುತ್ತಿದ್ದ ಸ್ವಾತಿಯನ್ನು ನೋಡಲು ವಾರ ವಾರ ಪ್ರಭು ಬರುತ್ತಿದ್ದ.
ಭಾನುವಾರದ ಒಂದು ರಜೆ ಇಬ್ಬರಿಗೂ ಅಲ್ಲಿ ಇಲ್ಲಿ ಸುತ್ತಲೂ ಮುಗಿದೆ ಹೋಗುತ್ತಿತ್ತು.
ಇಬ್ಬರು ಜೀಪು ಹತ್ತಿದರೆ ಸಾಕು ಮುಳ್ಳಾಯ್ಯನ ಗಿರಿ ದತ್ತ ಪೀಠ 
ಹತ್ತಿರದ ಎಸ್ಟೇಟ್ ಗಳಿಗೆ ಸುತ್ತು ಹೊಡೆಯುತ್ತಿದ್ದರು.
ಹಚ್ಚ ಹಸಿರಿನ ಪರಿಸರ ಏಕಾಂತವನ್ನು ,ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತಿತ್ತು.👫👫❤️❤️❤️

ಇಬ್ವರು ಒಂದು ದಿನವು ಎಲ್ಲೆ ಮೀರಿ ನೆಡೆದವರಲ್ಲ .ನಿಜವಾದ ಸ್ನೇಹ ಮತ್ತು ಪ್ರೇಮ ಇಬ್ಬರ ನಡುವಿನ ಗೌರವಮತ್ತುನಂಬಿಕೆ ಯನ್ನು ಉಳಿಸಿತ್ತು.
ಪದವಿ ಪಡೆದುಬಂದ ಸ್ವಾತಿ ಹೆಚ್ಚಿನ ಓದಿಗೆ ಹೋಗಲಿಲ್ಲ.
ಅವಳಿಗೆ ಕೆಲಸವು ಬೇಕಿರಲಿಲ್ಲ ಹೇಗೂ ಇಬ್ಬರು ಸೇರಿ ಎಸ್ಟೇಟ್ ನೋಡಿಕೊಂಡರೆ ಸಾಕು...ಎರಡು ಕುಟುಂಬಕ್ಕೂ ಕುಳಿತು ತಿನ್ನುವಷ್ಟು ಆಸ್ತಿ ಇತ್ತು.
ಶ್ರೀಧರ್ ಅವರು ಮದುವೆ ಮಾಡುವ ಬಗ್ಗೆ ಚಿಂತಿಸಿದಾಗ ಸುಜಾತ ಳು ನಿಮ್ಮ ಅಕ್ಕನ ಮಗ ಇರುವಾಗ ಎಲ್ಲಿ ಯಾಕೆ 
ಹುಡುಕುವುದು ,ಪಕ್ಕದಲ್ಲಿಯೇ  ಇರುತ್ತಾಳೆ ಸಣ್ಣವರಿಂದ ಲೇ ಅವರ ಮನಸ್ಸಿಗೆ ಗಂಡ ಹೆಂಡತಿ ಎಂದು ಹೇಳಿಯಾಗಿದೆ ಎಂದಾಗ ಅವರು ಒಪ್ಪಿದರು ಮನಸ್ಸು ಮಾತ್ರ ಅಕ್ಕಾ ನಿಗೆ ಸ್ವಾತಿ ಜಾತಕ ಕೊಟ್ಟಿಲ್ಲ 
ಜಾತಕ ನೋಡಿ ಬೇಡ ಎಂದುಹೇಳಿದರೆ ಏನು ಮಾಡುವುದು 
ಎಂದು ಯೋಚಿಸಿದರು .

ಆ ಸಮಯವೇ ಬಂದಿತು..ಒಂದು ದಿನ ಅಕ್ಕ ಭಾವ ಮಗನ ಜೊತೆ ಬಂದವರು ಜಾತಕ ಒಮ್ಮೆ ನೋಡಿಬಿಡೋಣ ಎಂದರು .
ಭಾವ ಶಂಕರ್ ಮಾತ್ರ ಸಂಬಂಧದಲ್ಲಿ ಜಾತಕ ಬೇಡ ಜೊತೆಗೆ ಇಬ್ಬರು ಪರಸ್ಪರರ ಒಪ್ಪಿಕೊಂಡು ಆಗಿದೆ ಮತ್ತೇಕೆ ಎಂದರು 
.ಯಾರದೋ ಮಾತು ಕೇಳಿ ಬಂದಿದ್ದ ಕುಸುಮಾ ಜಾತಕ ಹೊಂದುತ್ತದೆಯೇನೋಡಲೇ ಬೇಕು ಎಂದು ಹಠ ಹಿಡಿದುತೆಗೆದುಕೊಂಡುಹೋದರು.
ಎಲ್ಲಿಯಾದರೂ ಅಷ್ಟೇ ಹುಳಿ ಹಿಂಡು ವವರು ಇದ್ದೆ ಇರುತ್ತಾರೆ.
ಒಂದು ವಾರ ಕಳೆಯುವುದರಲ್ಲಿ ಫೋನ್ ಮಾಡಿ ಶ್ರೀಧರ್ ಈ ಮದುವೆ ಬೇಡ ನಿನ್ನ ಮಗಳ ಜಾತಕದಲ್ಲಿ ಕುಜ ದೋಷ ಇದೆ ಎಂದು ಹೇಳಿದರು ಭಟ್ಟರು.
ಅವರೇನೂ ಮಹಾನಕ್ಷತ್ರ ಮಾಡಿಕೊಳ್ಳಿ ಎಂದಿದ್ದಾರೆ ಆದರೆ 
ನಾನು ಮಾತ್ರ ಒಪ್ಪುವುದಿಲ್ಲ ಎಂದು ಕಡಖಂಡಿತವಾಗಿ ಹೇಳಿಬಿಟ್ಟರು.💔💔💔💔💔💔
ಇದನ್ನು ಕೇಳಿದ ಶ್ರೀಧರ್ ನಡುಗಿ ಹೋದರು.ಅವರಿಗೆ ಬೇರೆಗಂಡು ಹುಡುಕುವ ಕಷ್ಟ ಅಲ್ಲ ಆದರೆ ಅಕ್ಕನೆ ತಾನೇ ಮಕ್ಕಳ ಮನಸ್ಸಿಗೆ ಹಚ್ಚಿ ಕೊಟ್ಟಿದ್ದು .ಈಗ ಆ ಮಕ್ಕಳನ್ನು 
ಬೇರೆ ಬೇರೆ ಮಾಡಿದರೆ ಒಪ್ಪುವುದಿಲ್ಲ ದೇವರು ಎನ್ನುತ್ತ 
ಸುಜಾತ ನಾನು ಹೇಳಲಿಲ್ಲವೇ ನನ್ನ ಅಕ್ಕಾನ ಬುದ್ದಿ ಗೊತ್ತಿತ್ತು 
ಅದಕ್ಕೆ ನಾನು ಹೇಳುತ್ತಿದ್ದುದು ಇಷ್ಟು ಸಲಿಗೆ ಬೇಡ ವೆಂದು 
ಇದನ್ನು ಮಗುವಿಗೆ ಹೇಳುವುದಾದರು ಹೇಗೆ ಎಂದಾಗ 
ಸುಜಾತ ರು ಏನು ತೋಚದೆ ಕುಳಿತುಬಿಟ್ಟರು.
ಒಂದು ವಾರ ಮಾತಿಲ್ಲ ಕಥೆ ಇಲ್ಲ ಅಷ್ಟರಲ್ಲಿ ಈ ವಿಷ್ಯ ಎಲ್ಕೆಡೆ 
ಹಬ್ಬಿ ಹೋಗಿತ್ತು ,ಸ್ವಾತಿಗೂ ಗೊತ್ತಾಗಿ ಹೊಳೆ ದಂಡೆಯಲ್ಲಿ ಕುಳಿತು 
ಕಣ್ಣೀರು ಹರಿಸಿ ಬಂದಿದ್ದಳು.😣😣😣😥😥😥😥
ಅಮ್ಮನಿಗೆ ಗೊತ್ತಾಗದಂತೆ ಪ್ರಭು ನಾಲ್ಕರು ಬಾರಿ ಫೋನ್ ಮಾಡಿ ಮಾವ ಅತ್ತೆ ಸ್ವಾತಿಗೂ ಧೈರ್ಯ ಹೇಳಿದ್ದ ,ಶಂಕರ್ ಅವರು ಫೋನ್ ಮಾಡಿ ಹೇಗಾದರೂ ಹೆಂಡತಿ ಒಪ್ಪಿಸುತ್ತೇನೆ ಎಂದಿದ್ದರು.
ಕುಜದೋಷ ವೆಂದು ಸಂಬಂಧಿಕರು ,ಸ್ನೇಹಿತರು ಎಲ್ಲರಿಗೂ ಕುಸುಮಾ ಹೇಳಿದ್ದರಿಂದ ಅವಳಿಗೆ ಬೇರೆ ಗಂಡು ನೋಡುವುದು 
ದುಸ್ತರ ವಾಯಿತು.
ಸಣ್ಣವರಿಂದ ತಾನೇ ಉರಿಗೆಲ್ಲ ಸ್ವಾತಿ ತನ್ನ ಸೊಸೆ ಎಂದು ಹೇಳಿಕೊಂಡು ಬಂದಿದ್ದ ಕುಸುಮಾ ಒಡಕು ಬುದ್ಫಿ ತೋರಿಸಿದ್ದಳು.ಕೇವಲ ಮಗನ ಭವಿಷ್ಯ ನೋಡಿದಲೇ ಹೊರತು 
ಸ್ವಾತಿ ಯು ತನ್ನಂತೆ ಹೆಣ್ಣು ಎಂದು ಯೋಚಿಸಲು ಇಲ್ಲ.
ಹಠ ಹಿಡಿದು ಕುಸುಮಾ ಕೊನೆಗೂ ಮದುವೆ ಸಂಬಂದ ಮುರಿದಿದ್ದಳು .,💔💔💔💔💔💔.
ಅಲ್ಲಿಂದ ಮುಂದೆ ಎರಡು ಕುಟುಂಬ ಎಷ್ಟು ಬೇಕೋ ಅಷ್ಟು 
ಮಟ್ಟಿಗೆ ಇದ್ದರು.

ಅದ್ಯಾವ ಅದೃಷ್ಟವೋ ಹೆತ್ತವರುಇಲ್ಲದ ಅಕ್ಕ ಭಾವನ ಜೊತೆ ಬೆಳೆದಿದ್ದ ಮಹೇಶ್ ಸ್ವಾತಿಯನ್ನು ಇಷ್ಟ ಪಟ್ಟು ಕೇಳಿ ಕೊಂಡು ಬಂದಿದ್ದ.
ಇರುವ ವಿಚಾರ ತಿಳಿಸಿದಾಗ ಆತ ಅದೆಲ್ಲವನ್ನು ಬಿಟ್ಟು ಬಿಡಿ ಎಂದು ಸ್ವಾತಿ ಒಪ್ಪಿಗೆ ಪಡೆದು ಮದುವೆ ಆಗಿದ್ದ👫👫,ಇದಾಗಿ 16 ವರ್ಷಗಳು ಕಳೆದು ಹೋಗಿದೆ.
ಮಹೇಶ್ ಸ್ವಾತಿಯನ್ನು ತಂದೆ ತಾಯಿ ಪ್ರೀತಿ ಕೊಟ್ಟು 
ಯಾವ ಕೊರತೆಯು ಆಗದಂತೆ ನೋಡಿಕೊಂಡಿದ್ದ.
ಪ್ರೈವೇಟ್ ಕಂಪೆನಿಯಲ್ಲಿ ಕೆಲ್ಸ ಬರುವ ಸಂಬಳದಲ್ಲಿ 
ಪುಟ್ಟ ಸಂಸಾರ ಸಾಗುತ್ತಿತ್ತು. ಮಗಳು ಶಾರ್ವರೀ ಬದುಕಿಗೆ ಬಂದ ಮೇಲೆ ಇಬ್ಬರ ಜಗತ್ತು ಪ್ರೀತಿಯಲ್ಲಿ ತುಂಬಿ ತುಳುಕುತ್ತಿತ್ತು.

ಸ್ವಾತಿಯನ್ನು ಮರೆಯದೆ 4 ವರ್ಷ ಕಾಲ ತಳ್ಳಿದಾ ಪ್ರಭು ತಾಯಿ ಗೆ ಹೆದರಿ ಕೊಪ್ಪದ ಸುಮತಿಯನ್ನು ಮದುವೆ ಆಗಿದ್ದ.
ಸುಮತಿ ನಿಜಕ್ಕೂ ಸಮಾಧಾನದ ಹೆಣ್ಣು ಮಗು.
ಅತ್ತೆ ಯ ಬುದ್ಫಿ ಅರಿತ ಅವಳು ಮಾವ ಹೇಳಿದಂತೆ  ಗಂಡನನ್ನು ಪ್ರೀಯಿಯಿಂದ ಒಳಿಸಿಕೊಂಡಿದ್ದಳು.,👫❤️❤️.

  ಅತ್ತೆ ಪ್ರಭು ಮದುವೆಗೂ  ಸ್ವಾತಿಯನ್ನು  ಕರೆದಿರಲಿಲ್ಲ..ಒಳ್ಳೆ ಹುಡುಗ ಸಿಕ್ಕಿದನೆಂದು ಹೊಟ್ಟೆ ಕಿಚ್ಚು ಪಟ್ಟು ಊರೆಲ್ಲ ಕೆಟ್ಟದಾಗಿ ಹೇಳಿಕೊಂಡು ಬೇರೆ ಬಂದಿದ್ದರು.
ಇವಳು ಹೋಗುತ್ತಿರಲಿಲ್ಲ..ಊರಿಗೆ ಹೋದಾಗ ನೆನಪಾದರು ಮತ್ತೆ ಮತ್ತೆ ಅವಳಿಗೆ ನೆನಪು ಬಾರದಂತೆ ಮಹೇಶ್ ನೋಡಿಕೊಂಡಿದ್ದ.

ಮಹೇಶನ ಒಳ್ಳೆತನ ಎಲ್ಲರಿಗು ಮಾದರಿಯಾಗಿತ್ತು.
ತಂದೆ ತಾಯಿ ಪ್ರೀತಿ ಕಾಣದ ಮಹೇಶ್ ಅತ್ತೆ ಮಾವ ಭಾವ ಮೈದುನರಲ್ಲಿ ಅದನ್ನು ಹುಡುಕುತ್ತಿದ್ದ .
ಸ್ವಾತಿಯು ಇಂದಿಗೂ ಅವನಿಗೆ ಎಲ್ಲಿಯೂ ನೋವಾಗದಂತೆ 
ಪ್ರೀತಿ ತೋರುತ್ತಿದ್ದಳು .ಮಗಳು ಚಿನ್ನು ಹುಟ್ಟಿದ ಮೇಲೆ ಅವಳ ಬದುಕೇ ಬದಲಾಗಿತ್ತು.ಚಿನ್ನು ಅವಳ ಪ್ರಪಂಚವಾಗಿದ್ದಳು.
ಗಂಡ ಅತ್ತಿಗೆ ಭಾವ ನ ಪ್ರೀತಿಯಲ್ಲಿ ಮಿಂದೆದ್ದ ಸ್ವಾತಿ ಇಂದಿಗೂ 
ಪ್ರಭು ನೆನಪು ಬರದಂತೆ ಆಗಿತ್ತು.
ಅತ್ತೆಯ ಕುತಂತ್ರದಿಂದ ನಾವಿಬ್ಬರು ಎಂದು ಸೇರದ ಎರಡು ರೇಖೆ ಗಳಾಗಿ ಉಳಿದು ಬಿಟ್ಟೆವು ಎಂದು ಕೊಂಡಳು.
ಇಷ್ಟೆಲ್ಲ ಯೋಚಿಸುವಾಗ ಕೆಲ್ಸ ವು ಮಾಡದೆ ಕುಳಿತ ಸ್ವಾತಿಗೆ ಮತ್ತೆ ಕಾಲಿಂಗ್ ಬೆಲ್ ಕೇಲಿ ಬಾಗಿಲು ತೆರೆದು ನೋಡಿದರೆ ಮಹೇಶ್ ನಿಂತಿದ್ದ.
ಏನಿದು ಸ್ವಾತಿ 10 ನಿಮಿಷ ದಿಂದ ಬೆಲ್ ಮಾಡುತ್ತಿದ್ದೇನೆ ,ಯಾಕೆ ನಿದ್ದೇ ಮಾಡಿದ್ಯಾ ಎಂದಾಗ ಹಾಂ ಇಲ್ಲ ಮಹಿ,ಬೆಳಗ್ಫೆ ಪ್ರಭು ಮತ್ತು ಕುಟುಂಬ ಬಂದು ಹೋದರು ಕೆಲ್ಸ ಲೇಟ್ ಆಯಿತು 
ಹಾಗಾಗಿ ಕೇಳಲಿಲ್ಲ ಒಳಗಡೆ ಇದ್ದೆ ಎಂದಳು.
ಓಹ್ ಹೌದ ಏನು ವಿಶೇಷ ಎಂದಾಗ ,ಮಗುವಿಗೆ ಅಕ್ಷರಅಭ್ಯಾಸ ಮತ್ತು ಚೌಲ ಎಂದು ಕರೆದು ಹೋದರು ಎಂದಳು.

ಹೋಗಿ ಬರ್ತಿಯ ಸ್ವಾತಿ ನೀನು ,ಬೇಸರಿಸಬೇಡ ಅರ್ಜೆಂಟ್ ಕೆಲಸದ ಮೇಲೆ 5 ದಿನ ಚೆನ್ನೈ ಗೆ ಹೋಗುತ್ತಾ ಇದ್ದೇನೆ.ನೀನೊಂದು ಕೆಲ್ಸ ಮಾಡು ನಾನು ಬರುವವರೆಗೂ ಊರಿಗೆ ಹೋಗಿಬಾ ಅತ್ತೆ ಮಾವನ ಜೊತೆ ಪ್ರಭು ಮನೆಗೂ 
ಕಾರ್ಯಕ್ರಮಕ್ಕೆ ಹೋಗ್ಬಿಟ್ಟು ಬಾ ಸುಮತಿ ಒಳ್ಳೆ ಮನಸ್ಸಿನ ಹೆಣ್ಣು ಮಗು ,ಪ್ರಭುವಿಗೂ ನೋವಿರುತ್ತೆ. ನೀನು ಹೋದರೆ ಎಲ್ಕರೂ ಸರಿ ಆಗುತ್ತರೆ ಏನಂತಿಯ ಎಂದಾಗ ಸರಿ ಎಂದಳು.
ಶಾರ್ವರೀ ಗೆ ಶಾಲೆಗೆ ನಾಲ್ಕು ದಿನಗಳ ರಜೆ ಹಾಕಿಸು 
ಆರಾಮವಾಗಿ ಹೋಗಿ ಬಾ ಅಲ್ಲಿನ ಪರಿಸರ ನಿಂಗೂ ಇಷ್ಟ ಒಂಟಿತನ ಕಡಿಮೆ ಮಾಡುತ್ತದೆ.

ಚಿಯರ್ ಅಪ್ ಲೇಡಿ ಹಳೆದು ಮರೆತು ಹೊಸದು ನೋಡು..
ಮಗಳನ್ನು ನೋಡಿ ಕಲಿ ಎಷ್ಟು ಆಪಡೆಟ್ ಆಗಿದೆ.
ಒಂದು ಕೆಲಸ ಮಾಡು ಕ್ಯಾಬ್ ಮಾಡಿಕೊಂಡು ಹೋಗಿ ಎನ್ನುತ್ತಾ 
ಎಲ್ಲಿ ನನ್ನ  ಬಟ್ಟೆ ಪ್ಯಾಕ್ ಮಾಡಿ ಕೊಡು ,ಬಾ ಇಲ್ಲಿ 
ಈ ಸಣ್ಣ ಮುಖದಲ್ಲಿ ಯಾವ ನೋವು ಇರಬಾರದು ಎಂದವನು 
ಯಾರ ನೆನಪು ಬಾರದಂತೆ ತುಟಿಗೆ ತುಟಿಸೇರಿಸಿ ,ಗಲ್ಲ ಕೆನ್ನೆ ಕೆಂಪಾಗುವಂತೆ ಮುದ್ದು ಮಾಡಿದ್ದ ,ಅವನ ಹಿಡಿತ ಬಿಡಿಸಿಕೊಂಡು ಕಾಪಿ ತರಲು ಅಡಿಗೆ ಮನೆಗೆ ಓಡಿದಳು .
ಪವಿತ್ರ ಪ್ರೇಮ ಸದಾ ನಂಬಿಕೆಯಿಂದ ಇರುತ್ತದೆ .
ಮರು ದಿನ ಕ್ಯಾಬ್ ಮಾಡಿಕೊಂಡು ಮಗಳನ್ನು ಕರೆದುಕೊಂಡು 
ಚಿಕ್ಕಮಗಳೂರು ಸೇರಿದಳು.
ಅಪ್ಪ ಅಮ್ಮ ತಮ್ಮ ನ ಜೊತೆ ಒಡನಾಟ ಹೊತ್ತು ಹೋಗಿದ್ದೆ 
ತಿಳಿಯಲಿಲ್ಲ.ಪ್ರಭು ಮನೆಗೆ ಚೌಲಕ್ಕೂ ಹೋಗಿ ಬಂದಳು.
ಸ್ವಾತಿ ಬಂದಿದ್ಫು ನೋಡಿ ಮಾವ ಪ್ರಭು ಸುಮತಿ ಸಂತಸ ಪಟ್ಟರೆ 
ಕುಸುಮಾ ಳಿಗೆ ಸಂಕಟವಾಗಿತ್ತು.
ತಾನೇ ಹೋಗಿ ಅತ್ತೆಯನ್ನು ಮಾತನಾಡಿ ಸಿ ತಾನು ತಂದಿದ್ದ 
ರೇಷ್ಮೆ ಸೀರೆ ಇಟ್ಟು ಕುಂಕುಮ ಕೊಟ್ಟಳು.
ಅತ್ತೆ ಗೆ ದುರಾಸೆ ಎನ್ನುವುದು ಗೊತ್ತಿತ್ತು ...ಮಾವನ ಕಾಲಿಗೇರಗಿ 
ನಮಸ್ಕಾರ ಮಾಡಿ ಹೊರಟಳು.
ಬಂದವರಿಗೆಲ್ಲ ಆಶ್ಚರ್ಯ ಆಗಿತ್ತು ಕುಸುಮಾ ಸುಮ್ಮ್ ನೆ ಕುಜದೋಷ ಎಂದು ಕೊಂಕು ಹುದುಕಿದಳು ,ಬಂಗಾರದ ಹುಡುಗಿ ಅದೃಷ್ಟವಿರಲಿಲ್ಲ. ಎನ್ನುತ್ತಾ ಇದದ್ದು ಸ್ವಾತಿ ಕಿವಿಗೆ ಬಿದ್ಫಿತ್ತು.
ಕುಜದೋಷ ದ ನೆಪ ಮಹೇಶ ನಂತಹ ಅಳಿಯ ನನ್ನ ಹೆತ್ತವರಿಗೆ ಸಿಕ್ಕಿದನಲ್ಲ ಸಹನೆಯ ಪ್ರೀತಿ ತುಂಬಿದ ಹೃದಯ ನನ್ನವನದ್ದು ಎಂದುಕೊಂಡ ಸ್ವಾತಿ ಮಗುವಿನ ಕೈ ಹಿಡಿದು ಅಪ್ಪನ ಜೀಪು ಏರಿದ್ದಳು.
ಎಚ್ ಎಸ್ ಭವಾನಿಉಪಾಧ್ಯ.
 


 

Category:Stories



ProfileImg

Written by H. S.Bhavani Upadhya

ನಾನು ಲೇಖಕಿ.ಬರೆಯುವುದು ನನಗೆ ಅತ್ಯಂತ ಇಷ್ಟ. ಓದು ಬರಹ ನನ್ನ ಬದುಕಿನ ಭಾಗ.6363008419

0 Followers

0 Following