ಜವಳಗೇರಾದಲ್ಲಿ ಶನಿವಾರ ಸಂಭ್ರಮದಿಂದ ನಡೆದ ವಾಸವಿ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಜವಳಗೇರಾ ಸಂಸ್ಥಾನದ ಪುರೋಹಿತರಾದ ನವಲಿ ಭೀಮಸೇನಾಚಾರ್ಯರು ,ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹ ಪುರಸ್ಕಾರ ಮಾಡುವ ಜೊತೆ ಸಂಸ್ಕಾರ ಸಂಸ್ಕೃತಿಯ ಬಗ್ಗೆ ಪ್ರಸ್ತುತ ದಿನಗಳಲ್ಲಿ ಹೇಳಬೇಕಾಗಿರುವುದು ಅತಿ ಅವಶ್ಯವಾಗಿದೆ ಎಂದರು.
ಅವರು ಜವಳಗೇರ ಗ್ರಾಮದಲ್ಲಿ ವಾಸವಿ ಜಯಂತಿ ಪ್ರಯುಕ್ತ ಆರ್ಯ ವೈಶ್ಯ ಸಮಾಜ ಹಾಗೂ ವಸಿಷ್ಠ ಧಾಮ ಸಿಂಧನೂರು ಇವರ ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕ ಗಳಿಸುವುದರ ಜೊತೆ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು, ಸಂಸ್ಕೃತಿ ಸಂಸ್ಕಾರ ಕಲಿಯಬೇಕಾಗಿರುವುದು ಅವಶ್ಯ ಎಂದರು.
ವಾಸವಿ ಯುವಜನ ಸಂಘದ ಅಧ್ಯಕ್ಷ ಎಂ. ಆರ್. ರಾಘವೇಂದ್ರ ಶೆಟ್ಟಿ, ಹುಡೇದ್ ವಿರೇಶ್ ಶೆಟ್ಟಿ, ಎಂ ಸತೀಶ್ ಶೆಟ್ಟಿ ಕಾರ್ಯಕ್ರಮ ಕುರಿತು ಮಾತನಾಡಿ ನಮ್ಮ ಸಮಾಜದ ವಿದ್ಯಾರ್ಥಿಗಳು ಇನ್ನು ಹೆಚ್ಚಿನ ಅಂಕ ಪಡೆದು ಸಮಾಜಕ್ಕೆ ಕೀರ್ತಿ ತರಬೇಕು ಎಂದರು.ವೆಂಕಟೇಶ್ವರ ದೇವಸ್ಥಾನ ದಿಂದ ವಾಸವಿ ದೇವಸ್ಥಾನದವರೆಗೆ ವಾಸವಿ ಭಾವಚಿತ್ರ, ಪೂರ್ಣ ಕುಂಭಗಳ ಜೊತೆ ಮೆರವಣಿಗೆ ನಡೆಯಿತು.
ಬೆಂಗಳೂರಿನ ರೇಣುಕಮ್ಮ ಕುಟುಂಬದವರಿಂದ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಗಣ ಹೋಮ, ನವಗ್ರಹ ಹೋಮ ಶ್ರೀ ಸೂಕ್ತ ಹೋಮ. ವಾಸವಿ ಮೂರ್ತಿಗೆ ಭಕ್ತರಿಂದ ಕ್ಷೀರಾಭಿಷೇಕ ಸಾಮೂಹಿಕ ಕುಂಕುಮ ಅರ್ಚನೆ ಹಾಗೂ ಅನ್ನ ಸಂತರ್ಪಣೆ ಜರುಗಿತು. ಈ ಸಂದರ್ಭದಲ್ಲಿ. ಎಂ ಸಣ್ಣ ವೆಂಕಯ್ಯ ಶೆಟ್ಟಿ, ಚೆಲ್ಲಾ ಕೃಷ್ಣಯ್ಯ ಶೆಟ್ಟಿ,ನರಸಿಂಹ ಶೆಟ್ಟಿ,ಆಂಜನೇಯ ಶೆಟ್ಟಿ,ಮುತ್ತಣ್ಣ ಶೆಟ್ಟಿ, ಎಂ ಆರ್ ಪ್ರಕಾಶ್, ಎಂ ಬಸವರಾಜ್ ಶೆಟ್ಟಿ. ಎಂ ರಾಘವೇಂದ್ರ ಶೆಟ್ಟಿ, ಚೆಲ್ಲಾ ಮಂಜುನಾಥ ಶೆಟ್ಟಿ ಸೇರಿದಂತೆ ಸಮಾಜದ ಸರ್ವ ಸದಸ್ಯರು ಉಪಸ್ಥಿತರಿದ್ದರು
Article Writer, Self Employee
0 Followers
0 Following