ವಜ್ರಮುಖಿ

ಒಂದು ಖಡ್ಗದ ದಂತಕಥೆ

ProfileImg
25 Dec '23
5 min read


image

ಅದು ಸೂರ್ಯೋದಯದ ಸಮಯ ದಟ್ಟ ಅರಣ್ಯದ ಬೆಟ್ಟದ ಮೇಲೆ ಒಬ್ಬ ದೃಢಕಾಯ ವ್ಯಕ್ತಿ ಮೈಯಲ್ಲ ರಕ್ತವಾಗಿ ಸೂರ್ಯನಿಗೆ ಎದುರಾಗಿ ಕುಳಿತಿದ್ದ. ಅವನ ವೇಷ ನೋಡಿದರೆ ಅವನೊಬ್ಬ ಸಿಪಾಯಿಯಂತೆ ಕಾಣುತ್ತಿದ್ದ. ಅವನ ಪಕ್ಕದಲ್ಲಿದ್ದ ಖಡ್ಗದಲ್ಲಿನ ರಕ್ತದಾನಿಗಳನ್ನು ನೋಡಿದರೆ ಅವನು ಸ್ವಲ್ಪ ಸಮಯದ ಮುಂಚೆ ಯಾವುದೋ ಯುದ್ಧ ಮಾಡಿದ ರೀತಿ ಕಾಣುತ್ತಿತ್ತು. ಅವನು ಕೋಪದಿಂದ ಮತ್ತು ಆವೇಶದಿಂದ ಎದುರುಸಿರು ಬಿಡುತ್ತಾ ಉದಯಸುತ್ತಿರುವ ಸೂರ್ಯನನ್ನು ನೋಡುತ್ತಾ ಕುಳಿತಿದ್ದನು. ಆ ವ್ಯಕ್ತಿಯ ಹೆಸರು ಅಗ್ನಿಸೇನಾ ನೋಡುತ್ತಿದ್ದಂತೆ ಅವನು ಬಂಡೆಯ ಮೇಲಿಂದ ಕೆಳಗೆ ಬಿದ್ದನು. ಆಗ ಅಲ್ಲಿಗೆ ಓಡಿ ಬಂದ ಜನರು ಅವನು ಕೆಳಗೆ ಬೀಳುವುದನ್ನು ನೋಡುತ್ತಾ ನಿಂತರು.

ಅರಮನೆಯ ಒಂದು ಕೊಠಡಿಗೆ ಬಂದ ಐದು ಜನ ಮುಸುಕುದಾರಿಗಳು ಅಲ್ಲಿದ್ದ ಇಬ್ಬರು ವ್ಯಕ್ತಿಗಳಿಗೆ ಬಾಗಿ ನಮಸ್ಕರಿಸಿ “ಮಹಾಪ್ರಭು ಉಗ್ರಸೇನಾ ಮತ್ತು ಅವನ ಕುಟುಂಬ ಸದಸ್ಯರು ಹತರಾದರು ಆದರೆ ವಜ್ರಮುಖಿಖಡ್ಗದೊಂದಿಗೆ ಅಗ್ನಿಸೇನಾ ತಪ್ಪಿಸಿಕೊಂಡು ಹೋದನು” ಎಂದನು. ಕೋಪಗೊಂಡ ಆ ವ್ಯಕ್ತಿ ಹೆಚ್ಚಿನ ಸೈನಿಕರೊಂದಿಗೆ ಹೋಗಿ ಖಡ್ಗತರುವಂತೆ ಆದೇಶ ಮಾಡಿದ.

ಅದು ತ್ರಿಕೋಟ ಮಹಾಸಂಸ್ಥಾನ ಸಕಲ ಸಂಪನ್ಮೂಲಗಳನ್ನು ಒಳಗೊಂಡಿದ್ದ ರಾಜ್ಯ ನೆಮ್ಮದಿಯಿಂದ ಇತ್ತು. ರಾಜ ಕೃತವರ್ಮನು ಆ ರಾಜ್ಯವಾಳುತಿದ್ದನು, ಅವನ ಮುಂದಿನ ಉತ್ತರಾಧಿಕಾರಿಯಾಗಿ ಯುವರಾಜ ಮಹೇಂದ್ರವರ್ಮನಿದ್ದನು, ರಾಜನ ಮಡದಿ ಕೆಲವು ವರ್ಷಗಳ ಹಿಂದೆ ತೀರಿಹೋಗಿದ್ದರು. ಆ ರಾಜ್ಯಕ್ಕೆ ಉಗ್ರಸೇನಾ ಸೈನ್ಯಧಿಕಾರಿಯಾಗಿದ್ದನು, ಮತ್ತವರ ವಂಶಸ್ಥರು ಸತತವಾಗಿ ಸೈನ್ಯ ಮುನ್ನಡೆಸುತ್ತಿದ್ದರು.  ಅಲ್ಲಿನ ಸೇನೆಯಲ್ಲಿ ಎರಡು ತಂಡಗಳಿದ್ದವು ಒಂದು ರಾಜನ ಅಧೀನದಲ್ಲಿತ್ತು ಅದನ್ನು ರಾಜಮುಖಿಸೈನ್ಯ ಎಂದು ಕರೆಯುತ್ತಿದ್ದರು. ಅವರು ರಾಜನ ಆದೇಶಗಳು ಪಾಲಿಸುತ್ತಿದ್ದರು ಅಲ್ಲಿ ಒಂದು ಅಕ್ಷೋಣಿ ಸೈನಾಬಲವಿತ್ತು, ಮತ್ತೊಂದು ವಜ್ರಮುಖಿಸೈನ್ಯವಾಗಿತ್ತು ಇಲ್ಲಿ ಐವತ್ತುಸಾವಿರ ಸೈನಿಕರಿದ್ದರು ಅವರು ಏಕಕಾಲದಲ್ಲಿ 50 ಜನ ಸೈನಿಕರನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದರು. ಈ ಸೈನಿಕರು ವಂಶಪಾರಂಪರ್ಯವಾಗಿ ವಜ್ರಮುಖಿಖಡ್ಗಕ್ಕೆ ನಿಷ್ಠಾವಂತರಾಗಿದ್ದರು. ಈ ಸೈನ್ಯವು ಯಾವಾಗಲೂ ಅಜ್ಞಾತವಾಗಿರುತ್ತಿತ್ತು.

ತ್ರಿಕೂಟ ಸಂಸ್ಥಾನದ ಯುವರಾಜ ಮತ್ತು ಸೈನಾಧಿಕಾರಿಗಳ ಮಗ ಅಗ್ನಿಸೇನ ಒಂದೇ ಗುರುಕುಲದಲ್ಲಿ ಓದಿದ್ದರಿಂದ ಅವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದರು. ಮಹೇಂದ್ರವರ್ಮ ಗದಾಯುದ್ಧ ಮತ್ತು ಬಿಲ್ಲುಗಾರಿಕೆಯಲ್ಲಿ ಪ್ರವೀಣನಾಗಿದ್ದರೆ, ಅಗ್ನಿಸೇನನ್ನು ಕತ್ತಿವರಸೆ ಮತ್ತು ಈಟಿ ಎಸೆತದಲ್ಲಿ ನಿಷ್ಣಾತನಾಗಿದ್ದನು. ಯುವರಾಜನ ಅಂತಃಪುರಕ್ಕೆ ರಾಜನನ್ನು ಬಿಟ್ಟರೆ ಕೇವಲ ಅಗ್ನಿಸೇನಗೆ ಮಾತ್ರ ಪ್ರವೇಶವಿತ್ತು. ಅಗ್ನಿಸೇನನು ತನ್ನ ತಂದೆಗೆ ಯಾವಾಗಲೂ ವಜ್ರಮುಖಿಖಡ್ಗವನ್ನು ಕೊಡುವಂತೆ ಕೇಳುತ್ತಿದ್ದನು ಆದರೆ ಉಗ್ರಸೇನನು ಇದು ಸರಿಯಾದ ಸಮಯವಲ್ಲವೆಂದು ಹೇಳುತ್ತಿದ್ದನು.

ಒಮ್ಮೆ ಯುವರಾಜ ಮತ್ತು ಅಗ್ನಿಸೇನಾ ಇಬ್ಬರು ಬೇಟೆಗೆ ಹೋಗಿದ್ದರು ಬೇಟೆ ಮುಗಿಸಿ ಹಿಂದಿರುಗುವಾಗ ಮಹೇಂದ್ರವರ್ಮನು ಅಗ್ನಿಸೇನನಿಗೆ “ಈ ರಾಜ್ಯವು ಮತ್ಸಲ ವಂಶದವರಿಗೆ ಸೇರಿದ್ದು ಇಲ್ಲಿನ ರಾಜ ಅಮರೇಶ ಗಂಧರ್ವ ಲೋಕಕ್ಕೆ ಹೋಗುವ ಮುಂಚೆ ನಮ್ಮ ತಾತನಿಗೆ  ರಾಜ್ಯವನ್ನು ಒಪ್ಪಿಸಿ ಮುಂದೆ ಅವರ ಉತ್ತರಾಧಿಕಾರಿ ಬರುವವರೆಗೆ ರಾಜ್ಯವು ನೋಡಿಕೊಳ್ಳುವಂತೆ ಹೇಳಿ ಹೋದರು. ಅವರ ಉತ್ತರಾಧಿಕಾರಿ ಬಂದರೆ ನಾವು ರಾಜ್ಯ ಮರಳಿ ಕೊಡಬೇಕೆಂದು” ಬೇಸರದಿಂದ ಹೇಳಿದ ಆಗ ಅಗ್ನಿಸೇನನು ನಾನು ನಿನ್ನ ಜೊತೆ ಯಾವಾಗಲು ಇರುತ್ತೇನೆ ಎಂದನು. ನಂತರ ಯುವರಾಜ ಅಗ್ನಿಸೇನನ ಬಳಿ ವಜ್ರಮುಖಿ ಸೈನ್ಯದ ಬಗ್ಗೆ ಕೇಳಿದ ಅಗ್ನಿಸೇನಾ ತನಗೆ ಅದರ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿ ಮುನ್ನಡೆದ.

ರಾಜನು ಆಸ್ಥಾನದಲ್ಲಿದ್ದಾಗ ಸೇನಾಧಿಕಾರಿ ಬಂದು ಅಲ್ಲಿದ್ದ ಎಲ್ಲಾ ಜನರನ್ನು ಹೊರಗೆ ಕಳುಹಿಸಿ ರಾಜನಿಗೆ ಹೇಳಿದ “ಸಂದೇಶ ಬಂದಿದೆ, ಮುಂದಿನ ಉತ್ತರಾಧಿಕಾರಿ ಇನ್ನು ಕೆಲವೇ ದಿನಗಳಲ್ಲಿ ಬರಲಿದ್ದಾರೆ ಅವರ ಸ್ವಾಗತಕ್ಕೆ ಸಿದ್ಧತೆ ನಡೆಸಿ” ರಾಜನು ಅದಕ್ಕೆ ನಗುತ್ತಾ ಸರಿ ಎಂಬಂತೆ ತಲೆಯಾಡಿಸಿದನು ಸೈನ್ಯಾಧಿಕಾರಿ ಅಲ್ಲಿಂದ ಹೊರಟನು ರಾಜನು ಕೆಲವು ಸೈನಿಕರನ್ನು ಕರೆದು ಏನನ್ನು ಹೇಳಿದ, ಅವರು ಅಲ್ಲಿಂದ ಹೊರಟರು. ರಾಜನ ಉತ್ತರಾಧಿಕಾರಿ ಸ್ವಾಗತಕ್ಕೆ ಎಲ್ಲಾ ತಯಾರಿ ನಡೆಸಲಾರಂಭಿಸಿದ.


ಒಂದು ದಿನ ಸೇನಾಧಿಕಾರಿ ಮತ್ತು ಅಗ್ನಿಸೇನ ಇಬ್ಬರು ವನವಿಹಾರಕ್ಕೆ ಹೋದರು ಮಧ್ಯದಲ್ಲಿ ಉಗ್ರಸೇನ ವಜ್ರಮುಖಿಖಡ್ಗವ ಅಗ್ನಿಸೇನನಿಗೆ ಕೊಟ್ಟನು, ಅದನ್ನು ಅಚ್ಚರಿಯಿಂದ ನೋಡುತ್ತಿದ್ದ ಅಗ್ನಿಸೇನನ್ನು ಗಮನಿಸಿದ ಉಗ್ರಸೇನ “ನೀನು ಕೇಳದೆ ಕೊಟ್ಟಿದ್ದಕ್ಕೆ ಆಶ್ಚರ್ಯ ಆಗುತ್ತಿದೆಯಾ ನಿನಗೆ ಈ ಖಡ್ಗದ ಬಗ್ಗೆ ಏನು ಗೊತ್ತು?” ಎಂದು ಕೇಳಿದ ಅಗ್ನಿಸೇನ ತನಗೆ ಏನೂ ಗೊತ್ತಿಲ್ಲವೆಂದು ತಲೆಯಾಡಿಸಿದನು. ಉಗ್ರಸೇನಾ ಖಡ್ಗದ ಬಗ್ಗೆ ಹೇಳಲಾರಂಬಿಸಿದ “ಈ ಖಡ್ಗವನ್ನು ರಾಜ ಅಮರೇಶ ತಾನು ಗಂಧರ್ವ ಲೋಕಕ್ಕೆ ಹೋಗುವ ಮೊದಲು ನಮ್ಮ ತಾತ ವಿಶ್ವಸೇನನಿಗೆ ಕೊಟ್ಟಿದ್ದನು ಮತ್ತೆ ಈ ಖಡ್ಗವನ್ನು ಕೇವಲ ತುರ್ತು ಸಂದರ್ಭದಲ್ಲಿ ಮಾತ್ರ ಬಳಸುವಂತೆ ಹೇಳಿದ್ದ ಆದರೆ ನಾವು ಯಾರೂ ಕೂಡ ಇದನ್ನು ಬಳಸುವ ಸಂದರ್ಭ ಬಂದಿಲ್ಲ” ಅಗ್ನಿಸೇನ ಖಡ್ಗ ಹಿಡಿದು ಜಳಪಿಸುತ್ತಾ ತನ್ನ ತಂದೆಯ ಬಳಿ ಉತ್ತರಾಧಿಕಾರಿಯ ಬಗ್ಗೆ ಕೇಳಿದ. ಆಗ ಉಗ್ರಸೇನನ್ನು “ಅವನು ಈ ಖಡ್ಗವನ್ನು ಬೆಂಕಿ ಖಡ್ಗವಾಗಿ ಬದಲಿಸುತ್ತಾನೆ ಮತ್ತೆ ಅವನು ತನ್ನ ಮನ ಶಕ್ತಿಯಿಂದಲೇ ಈ ಖಡ್ಗವ ನಿಯಂತ್ರಿಸುವ ಶಕ್ತಿಯನ್ನು ಹೊಂದಿರುತ್ತಾನೆ” ಎಂದನು ಉಗ್ರಸೇನಾ ಮಾತು ಮುಂದುವರಿಸುತ್ತಾ “ವಜ್ರಮುಕಿ ಸೈನಿಕರು ವಿದ್ಯಾಪರ್ವತ ಬಳಿ” ಕೂಡಲೇ ತನ್ನ ಮಾತು ನಿಲ್ಲಿಸಿದ ಉಗ್ರಸೇನ ತನ್ನ ಬಳಿ ಇದ್ದ ಮತ್ತೊಂದು ಖಡ್ಗ ತೆಗೆದು ತನ್ನ ಬಳಿ ಬರುತ್ತಿದ್ದ ಬಾಣವನ್ನು ತುಂಡು ಮಾಡಿದ. ಅವರಿಬ್ಬರೂ ಬಾಣಬಂದ ಕಡೆ ನೋಡಿದರು ಅಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಸೈನಿಕರು ಇವರ ಕಡೆ ನುಗ್ಗಿ ಬರುತ್ತಿದ್ದರು. ಅಪಾಯದ ಅರಿವಾಗಿ ಕೂಡಲೇ ಇಬ್ಬರು ತಮ್ಮ ತಮ್ಮ ಖಡ್ಗಗಳ ಹಿಡಿದು ಹೋರಾಡಲಾರಂಭಿಸಿದರು. ಇವರ ಎದುರಿನ ಸೈನ್ಯ ಬಲವು ಹೆಚ್ಚಿದ್ದರಿಂದ ಕೆಲವೇ ಕ್ಷಣಗಳಲ್ಲಿ ಇವರ ಮೈತುಂಬ ಗಾಯಗಳಾದವು. ದಾಳಿ ಅವರ ಒಳ ಮರ್ಮ ಅರಿತ ಉಗ್ರಸೇನ ಅಗ್ನಿಸೇನನಿಗೆ ಕೂಡಲೇ ವಜ್ರಮುಖಿ ಖಡ್ಗದೊಂದಿಗೆ ವಿಂದ್ಯಾಪರ್ವತ ಕಡೆ ಓಡುವಂತೆ ಆದೇಶ ಮಾಡಿದ ಅವನ ಆದೇಶದಂತೆ ಅಗ್ನಿಸೇನನ್ನು ಒಡಲಾರಂಭಿಸಿದ. ಕೆಲ ಸಮಯದ ಬಳಿಕ ಹಿಂದುರಿಗಿ ನೋಡಿದ ಅಗ್ನಿಸೇನನಿಗೆ ತನ್ನ ತಂದೆಯು ಸೈನಿಕರಿಂದ ಕೊಲ್ಲಲ್ಪಡುತ್ತಿರುವುದು ಕಂಡಿತು. ಅವನು ಅಲ್ಲಿಂದ ಬೆಟ್ಟದ ತುದಿಯ ತಲುಪಿದ ಅವನ ಮೈಯಿಂದ ರಕ್ತ ಧಾರಾಕಾರವಾಗಿ ಹರಿಯುತ್ತಿತ್ತು. ಅವನು ಬೆಟ್ಟದಿಂದ ಕೆಳಗೆ ಹಾರಿ ಒಂದು ನೀರಿನ ಹೊಂಡಕ್ಕೆ ಬಿದ್ದನು.

ನೀರಿನ ಹೊಂಡಕ್ಕೆ ಬಿದ್ದ ಅಗ್ನಿಸೇನ ಅಲ್ಲಿಂದ ಈಜುತ್ತಾ ದಡಕ್ಕೆ ಒಂದು ಮಲಗಿದನು. ಅವನು ಕಣ್ಣು ಬಿಟ್ಟಾಗ ಒಂದು ಗುಡಿಸಿನಲ್ಲಿದ್ದ, ಅವನ ಗಾಯಗಳಿಗೆ ಪಟ್ಟಿ ಕಟ್ಟಲಾಗಿತ್ತು. ಅವನು ಎದ್ದು ಸುತ್ತಲೂ ನೋಡಿದ ಆಗ ಅಲ್ಲಿ ಅವನಿಗೆ ಒಬ್ಬ ವಯಸ್ಸಾದ ವ್ಯಕ್ತಿ ಕಂಡನು, ಇವನು ಎಚ್ಚರ ಆಗಿದ್ದನ್ನು ಕಂಡು ಆ ವ್ಯಕ್ತಿ “ಈ ದಿನ ಇಲ್ಲೇ ಇದ್ದು ನಾಳೆ ಬೆಳಗ್ಗೆ ನಿನ್ನ ಪ್ರಯಾಣ ಶುರು ಮಾಡು ಇಲ್ಲವಾದರೆ ಅವರು ಇಲ್ಲಿಗೂ ಹುಡುಕಿಕೊಂಡು ಬರುತ್ತಾರೆ” ಎನ್ನುತ್ತಾ ಅಲ್ಲಿಂದ ಹೊರಗೆ ಹೋದನು. ಅವನ ಹಿಂದೆ ಅಗ್ನಿಸೇನನ್ನು ಹೋಗಿ ಅವನ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿದ. ಆದರೆ ಆ ವ್ಯಕ್ತಿ ಏನು ಹೇಳಲಿಲ್ಲ ಮಾರನೆಯ ದಿನ ಅಲ್ಲಿಂದ ಹೊರಟ ಅಗ್ನಿಸೇನನಿಗೆ ಆ ವ್ಯಕ್ತಿ ಒಂದು ಉಂಗುರವನ್ನು ಕೊಟ್ಟು ಅದನ್ನು ಯಾವಾಗಲೂ ಧರಿಸುವಂತೆ ಹೇಳಿದ.

ಕೆಲವು ದಿನಗಳ ಪ್ರಯಾಣದ ನಂತರ ಅಗ್ನಿಸೇನ ವಿಂಧ್ಯಾ ಪರ್ವತವನ್ನು ತಲುಪಿದ. ಕೂಡಲೇ ಅವನ ಮೇಲೆ ದಾಳಿ ಶುರುವಾಯಿತು. ತಕ್ಷಣ ಎಚ್ಚೆತ್ತು ಅಗ್ನಿಸೇನನ್ನು ಯುದ್ಧಕ್ಕೆ ಸಿದ್ದನಾದ. ಅಗ್ನಿಸೇನಾ ಭೈರವವನಂತೆ ನುಗ್ಗಿ ಶತ್ರುಗಳ ತಲೆ ಕಡಿಯಲಾರಂಭಿಸಿದ ಆದರೆ ಒಂದು ಬಾರಿ ಒಬ್ಬ ಸೈನಿಕನ ದಾಳಿಯಿಂದ ಇವನ ಕೈಯಲ್ಲಿದ್ದ ವಜ್ರಮುಖಿ ಸೈನ್ಯ ಕೆಳಗೆ ಬಿತ್ತು, ಆದರೂ ಎದೆಗುಂದದ ಅಗ್ನಿಸೇನಾ ಬೇರೊಬ್ಬ ಯೋಧರ ಖಡ್ಗವಾ ತೆಗೆದುಕೊಂಡು ಯುದ್ಧ ಮುಂದುವರೆಸಿದ ಅದೇ ಸಮಯದಲ್ಲಿ ಎದುರಾಳಿ ಅಗ್ನಿಸೇನ ಎದೆಗೆ ಗುರಿ ಮಾಡಿ ಈಟಿ ಒಂದನ್ನು ಎಸೆದ. ಅದು ಅಗ್ನಿಸೇನನ್ನ ತಲುಪುವ ಮೊದಲ ಎರಡು ತುಂಡಾಗಿ ಕೆಳಗೆ ಬಿತ್ತು, ನೋಡಿದರೆ ಅಲ್ಲಿ ಒಬ್ಬ ಎತ್ತರದ ದೃಢಕಾಯ ವ್ಯಕ್ತಿ ವಜ್ರಮುಖಿ ಖಡ್ಗವ ಹಿಡಿದು ನಿಂತಿದ್ದನು ಆ ಖಡ್ಗವು ಆಗ್ನೇಯಸ್ತ್ರದಂತೆ ದಗದಗಿಸುತ್ತಿತ್ತು. ಆ ಯೋಧ ಶರವೇಗದಲ್ಲಿ ಸೈನಿಕರ ಕಡೆ ನುಗ್ಗಿದ ಅವನು ವೀರಭದ್ರನಂತೆ ಶತ್ರುಗಳ ದೇಹವನ್ನು ಸೀಳುತ್ತಿದ್ದ. ಇದರಿಂದ ಉತ್ತೇಜನಗೊಂಡ ಅಗ್ನಿಸೇನ ತನ್ನ ದಾಳಿಯ ತೀವ್ರತೆ ಹೆಚ್ಚಿಸಿದ. ಅವರ ದಾಳಿಯ ತಡೆಯಲಾರದೆ ಸೈನಿಕರು ಓಡಿ ಹೋದರು ಅಗ್ನಿಸೇನಾ ಓಡಿ ಹೋಗುತ್ತಿದ್ದ ಸೇನಾ ಮುಖ್ಯಸ್ಥನನ್ನು ಹಿಡಿದು ದಾಳಿಯ ಉದ್ದೇಶವನ್ನು ಕೇಳಿದ ಆ ವ್ಯಕ್ತಿ ಹೇಳಿದ್ದನ್ನು ಕೇಳಿ ಕೋಪಗೊಂಡು ಅವನಿಗೆ ನಿಜವನ್ನು ಹೇಳುವಂತೆ ಒಡೆಯಲಾರಂಭಿಸಿದ. ಸೇನಾ ಮುಖ್ಯಸ್ಥ ತಾನು ಹೇಳಿದ್ದು ನಿಜ ಎಂದನು ಅದನ್ನು ಕೇಳಿ ಮತ್ತಷ್ಟು ಕೋಪಗೊಂಡ ಅಗ್ನಿಸೇನಾ ಮುಖ್ಯಸ್ಥನ ತಲೆಯ ಕತ್ತರಿಸಿದ. ಮುಖ್ಯಸ್ಥನು ತಾನು ಸಾಯುವ ಮುನ್ನ ದಾಳಿ ಮಾಡಲು ಮಹಾರಾಜ ಮತ್ತು ಯುವರಾಜರು ಹೇಳಿದ್ದು ಎಂದಿದ್ದ ಮತ್ತು ಯುವರಾಜನು ಅಗ್ನಿಸೇನನನ್ನು ಕೊಂದು ವಜ್ರಮುಖಿ ಖಡ್ಗ ತರುವಂತೆ ಆದೇಶ ನೀಡಿದ ಎಂದು ಹೇಳಿದ. ಅಗ್ನಿಸೇನ ಸತ್ತರೆ ಖಡ್ಗವು ರಾಜನ ಕೈ ಸೇರುತ್ತಿತ್ತು ಮತ್ತೆ ವಜ್ರಮುಕಿ ಸೇನೆಯು ರಾಜನ ವಶವಾಗುತ್ತಿತ್ತು, ಇದರಿಂದ ಮುಂದೆ ಬರುವ ರಾಜ್ಯದ ನಿಜ ಉತ್ತರಧಿಕಾರಿಯೊಬ್ಬನನ್ನು ಕೊಂದು ರಾಜ್ಯವನ್ನು ‘ವರ್ಮ’ ವಂಶಕ್ಕೆ ಉಳಿಸುವುದು ರಾಜನ ಉದ್ದೇಶವಾಗಿತ್ತು. ಇದಕ್ಕೆ ಯುವರಾಜನ ನೇರ ಬೆಂಬಲವಿತ್ತು. ಈ ವಿಷಯ ತಿಳಿದ ಅಗ್ನಿಸೇನನ್ನು ತುಂಬಾ ಬೇಸರಗೊಂಡಿದ್ದನ್ನು.


ಅಗ್ನಿಸೇನನ ಬಳಿಗೆ ರಾಜ್ಯದ ಮುಂದಿನ ಉತ್ತರಾಧಿಕಾರಿ ವಿರಾಟ ಬಂದನು. ಅವನನ್ನು ನೋಡಿದ ಅಗ್ನಿಸೇನಾ ಅವನಿಗೆ ತಲೆಬಾಗಿ ನಮಸ್ಕರಿಸಿದನು. ವಿರಾಟನು ಅವನನ್ನು ನೋಡಿ “ನಾವು ಇದಕ್ಕೆ ಪ್ರತಿ ಉತ್ತರ ತೆಗೆದುಕೊಳ್ಳುತ್ತೇವೆ” ಎಂದನು ನಂತರ ವಜ್ರಮುಖಿ ಖಡ್ಗವನ್ನು ಹಿಡಿದು ಒಂದು ಮಂತ್ರವ ಜಪಿಸಿ ನೆಲಕ್ಕೆ ಚುಚ್ಚಿದ ಕೂಡಲೇ ಖಡ್ಗದಿಂದ ಒಂದು ಬೆಳಕು ಆಕಾಶಕ್ಕೆ ಹಾರಿ ಸಿಡಿಯಿತು, ಅದರಿಂದ ಬಂದ ಬೆಳಕು ಇಡೀ ಕಾಡಿನ ತುಂಬಾ ಆವರಿಸಿತು. ಸ್ವಲ್ಪ ಸಮಯದ ಬಳಿಕ ಅಲ್ಲಿ ಇಡೀ ಕಾಡೆ ನಡುಗುವ ಅನುಭವವಾಯಿತು ಆಗ ಸುಮಾರು 50,000 ವಜ್ರಮುಖಿ ಸೈನಿಕರು  ಬಂದು ವಿರಾಟನ ಮುಂದೆ ಮಂಡಿಯೂರಿದರು.

                                                                    ಕಥೆ ಎರಡನೇ ಭಾಗದಲ್ಲಿ ಮುಂದುವರೆಯುತ್ತದೆ

 

 

Category:Stories



ProfileImg

Written by Srikanta Prasad D V