ಅಪ್ರತಿಮ ಜ್ಞಾನಭಂಡಾರ:ಶ್ರೀ ಶಂಕರಾಚಾರ್ಯರು

ಅದ್ವೈತ ಅಧ್ಯಾತ್ಮದ ಗಣಿ

ProfileImg
01 Jun '24
2 min read


image

 ಆದಿ ಶಂಕರಾಚಾರ್ಯರನ್ನು ಭಗವಂತ ಶಿವನ ಅವತಾರ. ಇವರೊಬ್ಬ ತತ್ವಜ್ಞಾನಿ ಹಾಗೂ ದೇವತಾಶಾಸ್ತ್ರಜ್ಞರೂ ಆಗಿದ್ದರು. ಇವರು ಅದ್ವೈತ  ತತ್ವಜ್ಞಾನದ ಸಮರ್ಥಕರಾಗಿದ್ದರು ಹಾಗೂ ಹಿಂದೂ ಧರ್ಮದ ಹಲವಾರು ನಂಬಿಕೆಗಳನ್ನು ಆದಿ ಶಂಕರಾಚಾರ್ಯರೇ ಆಚರಣೆಗೆ ತರಲು ಶ್ರಮಪಟ್ಟರು.
 

   ಶಿವಗುರು- ಆರ್ಯಾಂಬಾ ದಂಪತಿಗಳು ಲೋಕವಿಖ್ಯಾತಿ ಪಡೆಯುವ ಸಂತಾನವನ್ನೇ ನೀಡುವಂತೆ ಶಿವನನ್ನು ಬೇಡಿಕೊಂಡ ಫಲವೇ ಶಂಕರಾಚಾರ್ಯರು. ತಮ್ಮ ಮಗು ಕೇವಲ ದೀರ್ಘಾಯಸ್ಸು ಪಡೆಯುವುದಕ್ಕಿಂತಲೂ ವಿಶ್ಯವಿಖ್ಯಾತಿ ಪಡೆಯುವುದಕ್ಕೆ ಇವರು ಆದ್ಯತೆ ನೀಡಿದ್ದರು. 

ಅಪ್ರತಿಮ ಪ್ರತಿಭೆಯುಳ್ಳ ಬಾಲಕ ಶಂಕರಾಚಾರ್ಯ

ಆಚಾರ್ಯ ಎಂದರೆ ಗುರು ಎಂದು ಅರ್ಥ. ಇದುವರೆಗೆ ಈ ಜಗತ್ತು ಕಂಡಿರುವ ಇತರ ದೈವಿಕ ವ್ಯಕ್ತಿಗಳಂತೆಯೇ ಶಂಕರಾಚಾರ್ಯರೂ ಲೋಕಕಲ್ಯಾಣಕ್ಕಾಗಿ ಸನ್ಯಾಸತ್ವವನ್ನು ಸ್ವೀಕರಿಸಲು ಒಲವು ತೋರಿದ್ದರು. ಮುಂದಿನ ಜೀವನವನ್ನು ಸನ್ಯಾಸಿಯಾಗಿ ಕಳೆಯಲು ಅವರು ಬಾಲಕನಾಗಿದ್ದಾಗಲೇ ದೃಢಸಂಕಲ್ಪ ಹೊಂದಿದ್ದರು. ಬಾಲಕನಾಗಿದ್ದಾಗಲೇ ಇವರು ಅಪ್ರತಿಮ ಪ್ರತಿಭೆಯನ್ನು ಪ್ರಕಟಿಸಿದ್ದರು. ಕೇವಲ ಮೂರು ವರ್ಷದವರಾಗಿದ್ದಾಗಲೇ ಇವರು ಮಲಯಾಳಂ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲವರಾಗಿದ್ದರು. ಏಳನೆ ವಯಸ್ಸಿನಲ್ಲಿಯೇ ಇವರು ಎಲ್ಲಾ ವೇದಗಳನ್ನು ಕಲಿತು ಪಾರಾಂಗತರಾಗಿದ್ದರು.ಮೊಸಳೆ ಶಂಕರಾಚಾರ್ಯರ ಕಾಲು ಹಿಡಿದಾಗ; ತಾಯಿಯಿಂದ ಸಂನ್ಯಾಸಿಯಾಗಲು ಅಪ್ಪಣೆ ಪಡೆದ ನಂತರ ಸನ್ಯಾಸಿಯಾಗಲು ಅಗತ್ಯವಿರುವ ಶಿಕ್ಷಣವನ್ನು ಪಡೆಯಲು ಹೊರಟರು. ಈ ಸಂದರ್ಭದಲ್ಲಿ ಅವರ ವಯಸ್ಸು ಕೇವಲ ಎಂಟು ವರ್ಷ! ಹನ್ನೆರಡನೆಯ ವಯಸ್ಸಿನಲ್ಲಿ ಇವರು ಎಲ್ಲಾ ಶಾಸ್ತ್ರಗಳನ್ನು ಕಂಠಪಾಠ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಹದಿನಾರನೇ ವಯಸ್ಸು ತಲುಪುವಷ್ಟರಲ್ಲಿ ಸುಮಾರು ನೂರಕ್ಕೂ ಹೆಚ್ಚು ಗ್ರಂಥಗಳನ್ನು ಇವರು ಬರೆದಿದ್ದರು. 

  ಶಂಕರಾಚಾರ್ಯರು ತಮ್ಮ ಗುರುವಾಗಿ ಗೋವಿಂದ ಭಾಗವತ್ಪಾದರನ್ನು ಆರಿಸಿಕೊಂಡರು. ಅಲ್ಲದೇ ಹಿಂದೂ ಧರ್ಮದ ಮೀಮಾಂಸೆಯ ವಿದ್ವಾಂಸರಾದ ಕುಮಾರಿಕಾ ಹಾಗೂ ಪ್ರಭಾಕರರನ್ನೂ ಇವರು ಭೇಟಿಯಾದರು. ಅಲ್ಲದೇ ಶಾಸ್ತ್ರಾರ್ಥ ಸಂದರ್ಭದಲ್ಲಿ ಬೌದ್ದರನ್ನೂ ಇವರು ಭೇಟಿಯಾದರು. ಶಾಸ್ತ್ರಾರ್ಥ ಎಂದರೆ ಬೌದ್ದ ವಿದ್ವಾಂಸರು ಹಾಗೂ ಜನಸಾಮಾನ್ಯರ ನಡುವೆ ನಡೆಯುವ ಸಭೆಯಾಗಿದ್ದು ಹಲವಾರು ಚರ್ಚೆಗಳು ನಡೆಯುತ್ತವೆ. ಈ ಸಭೆಗಳಲ್ಲಿ ಬೌದ್ಧ ಹಾಗೂ ಹಿಂದೂ ಧರ್ಮಗಳ ನಡುವಣ ವ್ಯತ್ಯಾಸಗಳನ್ನು ಆಳವಾಗಿ ಅಭ್ಯಸಿಸಿದ ಬಳಿಕ ಹಿಂದೂ ಧರ್ಮದ ಮೀಮಾಂಸೆಯ ವಿದ್ಯಾಶಾಲೆಯಲ್ಲಿ ಕಲಿಸುತ್ತಿರುವ ವಿಷಯಗಳ ಬಗ್ಗೆ ಹಲವಾರು ಟೀಕೆಗಳನ್ನು ಪ್ರಕಟಿಸಿದರು. ಹಿಂದೂ ಧರ್ಮದಲ್ಲಿ ಆತ್ಮಕ್ಕೆ ಸಾವಿಲ್ಲ ಎಂದು ತಿಳಿಸಲಾಗಿದ್ದರೆ ಬೌದ್ಧಧರ್ಮದಲ್ಲಿ ಆತ್ಮದ ಇರುವಿಕೆಯನ್ನೇ ಅಲ್ಲಗಳೆಯಲಾಗುವುದನ್ನು ಇವರು ಪ್ರತಿಪಾದಿಸಿದರು. 

   

 ವೇದಗಳು,ಪುರಾಣ ಹಾಗೂ ಭಗವದ್ಗೀತೆಯ ಕುರಿತು ಇವರು ಹಲವಾರು ಟಿಪ್ಪಣಿಗಳನ್ನು ಬರೆದರು. ಅಲ್ಲದೇ ಬ್ರಹ್ಮಸೂತ್ರ, ಬ್ರಹ್ಮಭಾಷ್ಯ, ಉಪದೇಶ ಸಹಸ್ರಿ ಮೊದಲಾದ ಗ್ರಂಥಗಳನ್ನು ರಚಿಸುವ ಸಹಿತ ಭಗವಂತ ಕೃಷ್ಣ ಹಾಗೂ ಭಗವಂತ ಶಿವನ ಕುರಿತ ಹಲವಾರು ಸ್ತೋತ್ರಗಳನ್ನು ರಚಿಸಿದರು.

    ಆತ್ಮ ಹಾಗೂ ಸರ್ವೋಚ್ಛ ಆತ್ಮಗಳ ತತ್ವಶಾಸ್ತ್ರದಲ್ಲಿ ನಂಬಿಕೆ ಹೊಂದಿದ್ದರು. ಇವರ ನಂಬಿಕೆಯ ಪ್ರಕಾರ ಆತ್ಮಕ್ಕೆ ಸಾವಿಲ್ಲದಾಗಿದ್ದು ದೇಹ ನಷ್ಟ ಹೊಂದಿದ ಬಳಿಕ ಇನ್ನೊಂದು ದೇಹವನ್ನು ಸೇರಿಕೊಳ್ಳುತ್ತದೆ. ಸರ್ವೋಚ್ಛ ಆತ್ಮ ಶಾಶ್ವತ ಹಾಗೂ ಸರ್ವವ್ಯಾಪಿಯಾಗಿದ್ದು ಇದು ಎಂದಿಗೂ ರೂಪಾಂತರ ಹೊಂದುವುದಿಲ್ಲ ಎಂದು ಹೇಳಿದರು.

   ಸನ್ಯಾಸಿಯಾಗಿ ಶಂಕರಾಚಾರ್ಯರು ಅತ್ಯಂತ ಸಾರ್ಥಕ ಜೀವನವನ್ನು ಸವೆಸಿದರು ಹಾಗೂ ತಮ್ಮ ಅಲ್ಪಾಯಸ್ಸಿನಲ್ಲಿಯೇ ಜನತೆಗೆ ಅಪಾರವಾದ ಮಾಹಿತಿ ಹಾಗೂ ರಕ್ಷಣೆಯನ್ನು ಒದಗಿಸಿದರು. -ಹನುಮಂತ.ಮ.ದೇಶಕುಲಕರ್ಣಿ.

Category:SpiritualityProfileImg

Written by Hanumant Deshkulkarni