ಕೆಲಸದ ನಿಮಿತ್ತ ದೆಹಲಿಗೆ ಹೋಗ ಬೇಕಿತ್ತು.
ನಾವು ಮೂವರು ಗೆಳೆಯರು ಕಂಪನಿಯ ಪ್ರಾಜೆಕ್ಟ್ ಕೆಲಸಕ್ಕಾಗಿ ಮನಸಿಲ್ಲದ ಮನಸ್ಸಿನಿಂದ ಹೊರಟಿದ್ದೆವು. 6-7 ತಿಂಗಳ ಕೆಲಸವದು, ಆದರೆ ಮನೆಯವರನ್ನೆಲ್ಲ ಬಿಟ್ಟು 6-7 ತಿಂಗಳು ಇರುವುದು ಹೇಗೆ ಎಂಬುದೇ ಗೊಂದಲ.
ನಾವಿಬ್ಬರು ಹೇಗೊ ಮನಸ್ಸು ಗಟ್ಟಿ ಮಾಡಿ ಒಂದು ಬದಲಾವಣೆಯನ್ನು ಬಯಸಿ, ಹೊರಟಿದ್ದೆವು.
ಆದರೆ ನಮ್ಮ ತಂಡದಲ್ಲಿದ್ದ ಮತ್ತೊಬ್ಬ ನಮ್ಮ ಸಹೋದ್ಯೋಗಿಗೆ ಅವನ ತಾಯಿಯನ್ನು ಬಿಟ್ಟು ಬರುವುದಕ್ಕೆ ಮನಸ್ಸಿರಲಿಲ್ಲ.
ನನ್ನದು ಒಂದು ರೀತಿ ಅದೇ ಪರಿಸ್ಥಿತಿ, ಆದರೆ ಏನು ಮಾಡುವುದು ಪರಿಸ್ಥಿತಿ, ಹೇಗೊ 2 ತಿಂಗಳಿಗೊಮ್ಮೆ ಒಂದು ವಾರ ರಜೆ ಇರುತ್ತೆ, ಬಂದು ಹೋಗಲು ವ್ಯವಸ್ಥೆ ಕಂಪನಿಯವರೆ ಮಾಡ್ತೀವಿ ಅಂತ ಭರವಸೆ ಕೊಟ್ಟ ಮೇಲೆ, ಅವನಿಗೂ ಧೈರ್ಯ ಹೇಳಿ ಜೊತೆಯಲ್ಲಿ ಕರ್ಕೊಂಡ್ ಹೊರಟ್ವಿ.
ರಾತ್ರಿ 8 ಕ್ಕೆ ರಾಜಧಾನಿ ಎಕ್ಸ್ ಪ್ರೆಸ್ ಗೆ ಹೊರಡಬೇಕಿತ್ತು, ನಾವಿಬ್ರು 7-20ಕ್ಕೆಲ್ಲ ರೈಲ್ವೆ ಸ್ಟೇಷನ್ ತಲುಪಿ ಕಾಯ್ತಿದ್ರೆ 7-45 ಆದ್ರು ಅವನ ಪತ್ತೆ ಇಲ್ಲ, ಕಾಲ್ ಮಾಡಿದ್ರೆ ಅದು ಕನೆಕ್ಟ್ ಆಗ್ತಿಲ್ಲ ಏನು ಮಾಡೋದು ಅಂತ ಚಿಂತೆಯಲ್ಲಿರುವಾಗ್ಲೆ ಅವನ ಕರೆ ಬಂತು, ಅವನು ರೈಲ್ವೆ ಸ್ಟೇಷನ್ ತಲುಪಿದ್ದ, ಅವನನ್ನು ಬೀಳ್ಕೊಡಲು ಅವನ ತಮ್ಮ ಮತ್ತು ತಾಯಿ ಕೂಡ ಬಂದಿದ್ರು, ರೈಲು ಹೊರಡಲು ಇನ್ನು 10 ನಿಮಿಷ ಮಾತ್ರ ಉಳಿದಿತ್ತು, ನಾವು ನಮ್ಮ ಪರಿಚಯ ಮಾಡ್ಕೊಂಡು ಅವನ ಬಗ್ಗೆ ನಾವು ಕಾಳಜಿ ವಹಿಸುತ್ತೇವೆ ಅಂತ ಹೇಳಿ ಅವರನ್ನು ಸಮಾಧಾನ ಮಾಡಿ, ಆಗಲೆ ತಡವಾಗಿದ್ದರಿಂದ ರೈಲು ಹತ್ತಿ ಕುಳಿತೆವು, ರೈಲು ಹೊರಡುವವರೆಗು ಆ ತಾಯಿ ಫ್ಲಾಟ್ ಫಾರಂನಲ್ಲಿ ನಿಂತೇ ಇದ್ದರು.
ಆ ಪ್ರೀತಿ ಕಂಡು ನಮ್ಮ ಕಣ್ಣುಗಳು ತುಂಬಿ ಬಂದವು😢..
ಇದರಲ್ಲೇನಿದೆ ಇದನ್ನೇಕೆ ಹೇಳ್ತಿದ್ದಾನೆ, ಮಕ್ಕಳು ದೂರಾಗ್ತಾರೆ ಅಂದ್ರೆ ತಾಯಿಗೆ ದುಃಖ ಆಗೋದು ಸಾಮಾನ್ಯ ಅಂತ ನಿಮಗನ್ನಿಸ ಬಹುದು,
ಆದರೆ ಈ ಕೆಳಗಿನ ಮತ್ತೊಂದು ಘಟನೆ ಓದಿ, ಇದು 2 ವರ್ಷದ ಕೆಳಗೆ ಫೇಸ್ ಬುಕ್ನಲ್ಲಿ ಓದಿದ್ದ ಒಂದು ಕಥೆಯ ಪ್ರೇರಣೆಯೊಂದಿಗೆ, ನನ್ನ ಅನುಭವವನ್ನು ಸೇರಿಸಿ ಬರೆದಿದ್ದೇನೆ ಓದಿ ಅಭಿಪ್ರಾಯ ತಿಳಿಸಿ.😊😊
ಸರಿ ಸುಮಾರು ರಾತ್ರಿ ಒಂಬತ್ತು ಘಂಟೆಯ ಸಮಯ, ರಾಷ್ಟ್ರ ರಾಜಧಾನಿ ದೆಹಲಿಯಿಂದ ರೈಲು ಇನ್ನೇನು ಹೊರಡುವ ಸಮಯವಾಗಿತ್ತು , ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದವನು, ಮರಳಿ ಬರುತ್ತಿದ್ದೆ, ಮನೆಯವರನ್ನು ಬಿಟ್ಟು 6 ತಿಂಗಳು ಏಕಾಂಗಿಯಾಗಿದ್ದ ಸಮಯ, ಯಾವಾಗ ಮನೆಯವರನ್ನು ನೋಡುವೆನೊ ಎಂಬ ಕುತೂಹಲದಲ್ಲಿ ಕಣ್ಣು ಮುಚ್ಚಿದೆ, ಅಷ್ಟರಲ್ಲಿ 18-19 ವರ್ಷ ವಯಸ್ಸಿನ ಸುಂದರ ಹುಡುಗಿ ನನ್ನ ಎದುರು ಬಂದು ಕುಳಿತಳು, ಅವಳ ತಂದೆಯು ಅವಳನ್ನು ಬೀಳ್ಕೊಡಲು ಜೊತೆಯಲ್ಲೆ ಬಂದಿದ್ದರು.
ತನ್ನ ಸೀಟಿನಲ್ಲಿ ಕುಳಿತ ನಂತರ, ಅವಳು ತನ್ನ ತಂದೆಗೆ, "ಡ್ಯಾಡಿ, ದಯವಿಟ್ಟು ನೀವು ಹೊರಡಿ ತಡವಾಗುತ್ತದೆ, ರೈಲು ಹತ್ತು ನಿಮಿಷದ ನಂತರ ಹೊರಡುತ್ತದೆ.
ಅವಳ ತಂದೆ ದುಃಖಭರಿತ ಧ್ವನಿಯಲ್ಲಿ " ಪರವಾಗಿಲ್ಲ ಪುಟ್ಟ ನಾನು 10 ನಿಮಿಷ ಕಾಯುತ್ತಾ ನಿನ್ನೊಂದಿಗೆ ಸಮಯ ಕಳೆಯುತ್ತೇನೆ., ಇನ್ನು ನಿನ್ನ ತರಗತಿಗಳು ಪ್ರಾರಂಭವಾಗುತ್ತಿವೆ, ನೀನು ಬಹಳ ಸಮಯದ ನಂತರ ಬರುತ್ತೀಯಾ.."
ಹುಡುಗಿ ಅಧ್ಯಯನ ಮಾಡುತ್ತಿರಬಹುದು, ಏಕೆಂದರೆ ವಯಸ್ಸು ಮತ್ತು ವೇಷಭೂಷಣಗಳು ವಿವಾಹಿತಳಂತೆ ಗೋಚರಿಸಲಿಲ್ಲ.ರೈಲು ಹೊರಡಲು ಪ್ರಾರಂಭಿಸಿದಾಗ, ಕಿಟಕಿ ಹೊರಗೆ ಫ್ಲಾಟ್ ಫಾರಂ ಮೇಲೆ ನಿಂತಿದ್ದ ತನ್ನ ತಂದೆಗೆ ಬಾಯ್ ಹೇಳಿದಳು: -
"ಡ್ಯಾಡಿ ಡ್ಯಾಡಿ ...ಯಾಕೆ ಏನಾಯಿತು!
ಓಹ್ ದಯವಿಟ್ಟು ಕಣ್ಣೀರು ಹಾಕಬೇಡಿ"
ತಂದೆಯ ಕಣ್ಣುಗಳು ಅವಾಗಲೆ ಒದ್ದೆಯಾಗಿತ್ತು ,
ರೈಲು ವೇಗ ಹೆಚ್ಚಾದಂತೆ ಕರವಸ್ತ್ರದಿಂದ ಕಣ್ಣೀರನ್ನು ಒರೆಸುತ್ತಾ ಆ ತಂದೆ ನಿಲ್ದಾಣದಿಂದ ಹೊರಗೆ ಹೊರಟು ಹೋಗುತ್ತಿದ್ದರು.
ಹುಡುಗಿ ಫೋನ್ ತೆಗದು ಯಾರಿಗೊ ಕರೆ ಮಾಡಿದಳು....
"ಹಲೋ ಮಮ್ಮಿ .. ಡ್ಯಾಡಿ ಎಂತ ಮನುಷ್ಯ .!?
ರೈಲು ಹೊರಟ ತಕ್ಷಣ, ಡ್ಯಾಡಿ ಅಳಲು ಪ್ರಾರಂಭಿಸಿದರು ,ಎಲ್ಲರೂ ನನ್ನೆ ನೋಡುತ್ತಿದ್ದರು ಐ ಫೆಲ್ಟ್ ಗಿಲ್ಟಿ....
ನಾನು ಮುಂದಿನ ಬಾರಿ ಎಂದಿಗೂ ತಂದೆ ಜೊತೆ ಬರಲಾರೆ, ಏಕಾಂಗಿಯಾಗಿ ಆಟೋದಲ್ಲಿ ಬೇಕಾದರು ಬರುತ್ತೇನೆ ..
ಗುಡ್ ಬೈ ..
ನಾನು ಬರುವ ಸಮಯಕ್ಕೆ ಕರೆ ಮಾಡುತ್ತೇನೆ.
ಡ್ಯಾಡಿಯನ್ನು ಬರದಂತೆ ನೋಡಿಕೊಳ್ಳಿ. "
ಸ್ವಲ್ಪ ಕಾಲ ನಾನು ಹುಡುಗಿಯನ್ನು ನೋಡುತ್ತಿದ್ದೆ ಪಾರದರ್ಶಕ ಕನ್ನಡಕದ ಒಳಗೆ ಆ ಕಣ್ಣುಗಳಲ್ಲಿ ಕಣ್ಣೀರು ಕಾಣಬಹುದೆಂದು ಆದರೆ ನನಗೆ ನಿರಾಶೆ ಕಾದಿತ್ತು ಆ ಕಣ್ಣುಗಳಲ್ಲಿ ತೇವಾಂಶವಿರಲಿಲ್ಲ..
ಸ್ವಲ್ಪ ಸಮಯದ ನಂತರ ಆ ಹುಡುಗಿ ಮತ್ತೆ ಯಾರಿಗೋ ಕರೆ ಮಾಡಿದಳು.
"ಹಲೋ ಡಿಯರ್ , ನೀವು ಹೇಗೆ ಇದ್ದಿರಾ ... ನಾನು ರೈಲಿನಲ್ಲಿ ಕುಳಿತುಕೊಂಡಿದ್ದೇನೆ.ಹೌದು, ಇದೀಗ, ದೆಹಲಿಯಿಂದ,ಹೊರಟೆ ನಾಡಿದ್ದು ಮುಂಜಾನೆ ತಲುಪುತ್ತದೆ. ಲವ್ ಯು ಸ್ವಿಟ್ ಹಾರ್ಟ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಂಡೆ ಯಾವಾಗ ರಜೆ ಮುಗಿಯುತ್ತದೆ ಎಂದು ಕಾಯುುತ್ತಿದ್ದೆ. ಮಿಸ್ ಯು ಲಾಟ್ .. ಕೆಲವೇ ಗಂಟೆಗಳ ಕಾಲ ಮತ್ತು ತಾಳ್ಮೆ ಇರಲಿ ಡಿಯರ್, ರೀಚ್ ಯು ಸೂನ್ ಬೇಬಿ. "
ನಾನು ಸ್ನೇಹಿತರನ್ನು ಪ್ರೀತಿ ಪ್ರೇಮವನ್ನು ಒಪ್ಪುತ್ತೇನೆ ವಯೋಸಹಜ ಬಯಕೆಗಳದು....
ಇಂದಿನ ಯುಗದಲ್ಲಿ ಉನ್ನತ ಶಿಕ್ಷಣಕ್ಕಾಗಿ ಮಕ್ಕಳನ್ನು ಹೊರಗೆ ಕಳುಹಿಸಬೇಕಾದ ಅಗತ್ಯವಿರುತ್ತದೆ, ಆದರೆ ಹಲವಾರು ವಿಷಯಗಳಲ್ಲಿ ಪ್ರತಿಕೂಲ ಪರಿಣಾಮಗಳಿಲ್ಲ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ.
ಹೊರಗಡೆ ಅಧ್ಯಯನ ಮತ್ತು ಕೆಲಸ ಮಾಡುತ್ತಿರುವ ಎಲ್ಲ ಹುಡುಗಿಯರು ಈ ಮನೋಭಾವದವರಾಗಿದ್ದಾರೆಂದು ನಾನು ಹೇಳುತ್ತಿಲ್ಲ. ನಾನು ಪಾಶ್ಚಿಮಾತ್ಯ ಸಂಸ್ಕೃತಿಗೆ ಆಕರ್ಷಿತರಾಗಿ, ನಮ್ಮ ಸಂಸ್ಕೃತಿ, ಸಂಬಂಧಗಳನ್ನು ಮರೆಯುತ್ತಿರುವವರ ಬಗ್ಗೆ ಮಾತನಾಡುತ್ತಿದ್ದೇನೆ.
ಅವರಿಗೆ ತಮ್ಮ ಹೆತ್ತವರ, ಒಡಹುಟ್ಟಿದವರ ಪ್ರೀತಿ ನೆನಪಿರುವುದಿಲ್ಲ, ಕೇವಲ ಒಂದು ಪ್ರೀತಿ ನೆನಪಿನಲ್ಲಿದೆ ಆದೇ ಅವರ ಪ್ರಾಮುಖ್ಯತೆ. !!!
ತಮ್ಮ ಹೆತ್ತವರು ಹೇಗೆ ಕಷ್ಟಪಟ್ಟು ಮಕ್ಕಳ ವಿಧ್ಯಾಭ್ಯಾಸಕ್ಕೆ ಹಣ ಒಟ್ಟುಗೂಡಿಸುತ್ತಾರೆ ಮತ್ತು ಅವರ ಕನಸುಗಳನ್ನು ಏಕಾಗ್ರಗೊಳಿಸಲು ತಮ್ಮ ಕರುಳ ಕುಡಿಯನ್ನು ದೂರದ ಊರಿಗೆ ಕಳುಹಿಸಿ ದಿನಂಪ್ರತಿ ಮಕ್ಕಳನ್ನು ನೆನೆಯುತ್ತಾ ತಮ್ಮ ಸಂತೋಷವನ್ನು ಸಮಾಧಿ ಮಾಡುತ್ತಾರೆ ಎಂದು ಮಕ್ಕಳು ಮರೆಯುತ್ತಾರೆ.
ಆದರೆ ತಮ್ಮ ಜೀವನದಲ್ಲಿ ಹಾದಿ ತಪ್ಪಿದರೆ ತಮ್ಮ ಕುಟುಂಬದ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅದರ ಫಲಿತಾಂಶ ಏನು? ಎಂಬುದನ್ನು ಮಕ್ಕಳು ಅರಿಯುವುದಿಲ್ಲ
ಅದಕ್ಕಾಗಿಯೇ ಎಲ್ಲರಲ್ಲೂ ವಿನಂತಿ
ನಿಮ್ಮ ಹೆತ್ತವರ ಭಾವನೆಗಳ ಜೊತೆ ಆಟವಾಡಬೇಡಿ.
ಇಲ್ಲಿ ಗಂಡು-ಹೆಣ್ಣೆಂಬ ಬೇದವಿಲ್ಲ. ಎಲ್ಲರೂ ಒಂದೇ ಆದರೆ
ವಿಶೇಷವಾಗಿ ಹುಡುಗಿಯರು ... ಏಕೆಂದರೆ ಹುಡುಗಿಯ ಗೌರವ ತನ್ನ ಕುಟುಂಬದ ಗೌರವದೊಂದಿಗೆ ಸಂಬಂಧಿಸಿದೆ .. ||
🙏🙏
ಮೌಲ್ಯವಿಲ್ಲದ ಮಾತು, ಎಷ್ಟು ಆಡಿದರೇನು! ಮತಿಗೇಡಿ, ಬೊಗಳೆ ಎನ್ನುವರೆಲ್ಲ. ತಿಳಿದು ತಿಳಿಯದಂತಿದ್ದು ಬಿಡುವುದು ಲೇಸು|| ಇಲ್ಲದಿದ್ದಾಗ ಬೆಲೆ, ನಮ್ಮ ಮಾತಿಗಲ್ಲಿ. A Part Time ✍️ Writing is My Hobby. 9035970453📱