ತುಳುನಾಡಿನ ವಿಶಿಷ್ಟ ಸಂಪ್ರದಾಯ ಪ್ರೇತ ಮದುವೆ..

ಪ್ರೇತ ಮದುವೆ ಮಾಡಿಸೋದು ಸುಲಭದ ಮಾತಲ್ಲ.. ಹೇಗಿದೆ ಈ ಆಚರಣೆ

ProfileImg
21 May '24
2 min read


image

ಮದುವೆ ಮಾಡೋದು, ಗಂಡು ಹೆಣ್ಣು ಹುಡುಕುವುದು, ಜಾತಕ ಹೊಂದಾಣಿಕೆ ಎಲ್ಲವೂ ಸುಲಭದ ಮಾತಲ್ಲ. ಹಾಗಾಗಿ ಮಾಧ್ಯಮದ ಮೊರೆ ಹೋಗುತ್ತಿದ್ದ ಕಾಲವೊಂದಿತ್ತು.
ಪೇಪರ್ ತೆಗೆದರೆ ಇಂತಿಷ್ಟು ವರ್ಷದ ವಧುವಿಗೆ ಇಂತಹ ವರ ಬೇಕಾಗಿದೆ, ಎರಡನೇ ಮದುವೆಗೆ ವರ ಬೇಕಾಗಿದೆ ಅಥವಾ ವಧು ಬೇಕಾಗಿದೆ ಎಂದೆಲ್ಲಾ ಜಾಹೀರಾತು ನೋಡಿದ್ದೇವೆ.

ಆದರೆ ಇತ್ತೀಚೆಗೆ ಕರಾವಳಿ ಪತ್ರಿಕೆಯೊಂದರಲ್ಲಿಯೇ ಬಂದ ಜಾಹೀರಾತು ಒಂದು ತುಂಬಾ ವೈರಲ್ ಆಗಿತ್ತು.  ಅದು ಪ್ರೇತ ಮದುವೆಯ ಜಾಹೀರಾತು. ನನಗೂ ಒಂದು ಕ್ಷಣ ವಿಚಿತ್ರ ಎನಿಸಿದರೂ ಕರಾವಳಿ ಭಾಗದಲ್ಲಿ ಇದೆಲ್ಲ ಸಾಮಾನ್ಯ ವಿಚಾರ.

ಆದರೆ ಪತ್ರಿಕೆಯಲ್ಲಿ ಈ ಬಗ್ಗೆ ಜಾಹಿರಾತು ನೀಡಿರುವುದು ಇದೇ ಮೊದಲ ಬಾರಿಗೆ ಎನ್ನಲಾಗಿದೆ. ಜಾಹೀರಾತಿನಲ್ಲಿ ಬಂಗೇರ ಬದಿಯ 30 ವರ್ಷದ ಹಿಂದೆ ತೀರಿ ಹೋದ ಹೆಣ್ಣು ಮಗುವಿಗೆ ಅದೇ ಜಾತಿಯ ಇತರ ಬದಿಯ 30 ವರ್ಷದ ಹಿಂದೆ ತೀರಿ ಹೋದ ಗಂಡನ ಮನೆಯವರು ಪ್ರೇತ ಮದುವೆ ಮಾಡಿಸಲು ತಯಾರಿದ್ದರೆ ಸಂಪರ್ಕಿಸಿ ಎಂದು ಜಾಹೀರಾತು ನೀಡಲಾಗಿತ್ತು.

 

ಅಷ್ಟಕ್ಕೂ ಈ  ಪ್ರೇತ ಮದುವೆ ಎಂದರೇನು? ಹೇಗೆ ಮಾಡುತ್ತಾರೆ ಇನ್ನೊಂದು ನೋಡುವುದಾದರೆ. ಕರಾವಳಿ ಭಾಗದಲ್ಲಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳುವರು ಆಚರಿಸುವ ವಿಶಿಷ್ಟ ಸಂಪ್ರದಾಯ. ಯಾರಾದ್ರೂ ಮದುವೆ ಆಗುವ ಮೊದಲೇ ಯುವಕ ಅಥವಾ ಯುವತಿ ಮೃತಪಟ್ಟರೆ ಅವರ ಕುಟುಂಬದಲ್ಲಿ ಮದುವೆಗೆ ಬಂದ ಯುವಕ ಯುವತಿಯರಿಗೆ ಪ್ರೇತ ತೊಂದರೆ ನೀಡುತ್ತಿದ್ದಾರೆ ಕುಟುಂಬದಲ್ಲಿ ಮದುವೆ ಪ್ರಯಕ್ಕೆ ಬಂದವರಿಗೆ ಮದುವೆ ಆಗದಿದ್ದರೆ ಪ್ರೇತಗಳೇ ಕಾಟ ನೀಡುತ್ತಿವೆ ಎಂದು ಪ್ರೇತಗಳ ಆತ್ಮಕ್ಕೆ ಅಥವಾ ಪ್ರೇತಗಳನ್ನ ತೃಪ್ತಿಪಡಿಸಲು ಈ ರೀತಿಯ ಪ್ರೇತ ಮದುವೆ ಮಾಡಿಸುತ್ತಾರೆ.


 ಪ್ರೇತಗಳ ಮದುವೆ ಮಾಡಿಸಿದರೆ ಅವರ ಕುಟುಂಬಕ್ಕಾಗಲಿ ಅಥವಾ ಮುಂದೆ ಯಾವುದೇ ರೀತಿ ತೊಂದರೆಯಾಗುವುದಿಲ್ಲ ಎನ್ನುವುದು ಇವರ ನಂಬಿಕೆ.


ಪ್ರೇತಗಳ ಮದುವೆಗೆ ಕಂಡಿಶನ್:

 ಪ್ರೇತ ಮದುವೆಗೆ ಅದೇ ಪ್ರಾಯದ ಹುಡುಗ ಅಥವಾ ಹುಡುಗಿ ಬೇಕಾಗುತ್ತದೆ ಸಂಪ್ರದಾಯದ ಪ್ರಕಾರ ಎಲ್ಲಾ ಶಾಸ್ತ್ರಗಳನ್ನ ನೆರವೇರಿಸಬೇಕು ಆದರೆ ಈ ಮದುವೆನಾ ಆಷಾಡ ತಿಂಗಳಲ್ಲಿ ಮಾತ್ರ ಮಾಡಲಾಗುತ್ತದೆ. ಮದುವೆ ದಿನ ನಿಗದಿ ಮಾಡಿದ ಬಳಿಕ ಕುಟುಂಬದವರಿಗೆ ಆಹ್ವಾನ ನೀಡಿ ಜೀವಂತ ಇರುವವರಿಗೆ ಮದುವೆ ಮಾಡಿಸಿದಂತೆ ಪ್ರೇತಗಳಿಗೂ ಮದುವೆ ಮಾಡಿಸಲಾಗುತ್ತದೆ.

ಆದರೆ ಈ ಮದುವೆಯಲ್ಲಿ ಯಾವುದೇ ರೀತಿಯ ಹೋಮ ಹವನ ಮಾಡುವುದಿಲ್ಲ ಮಂತ್ರ ಹೇಳಲು ಪುರೋಹಿತರು ಕೂಡ ಇರುವುದಿಲ್ಲ ಬದಲಾಗಿ ಎರಡು ಕುರ್ಚಿ ಹಾಗೂ ಕಲ್ಲಿನ ಮೇಲೆ ಸೀರೆ ಪಂಚೆ, ಇಟ್ಟು ಮದುವೆ ಶಾಸ್ತ್ರವನ್ನ ಮಾಡಲಾಗುತ್ತದೆ.

ಹುಡುಗನಿಗೆ ಪಂಚೆ, ಶಲ್ಯ ಹಾಗೂ ಹುಡುಗಿಗೆ ರೇಷ್ಮೆ, ಸೀರೆ, ತಾಳಿ, ಹೂವು ಎಲ್ಲವನ್ನ ರೆಡಿ ಮಾಡಿ ಮದುವೆಗೆ ಬಂದ ಅತಿಥಿಗಳಿಗೆ ಊಟುಪಚಾರದ ವ್ಯವಸ್ಥೆ ಕೂಡ ಮಾಡುತ್ತಾರೆ. ಹಿಂದೆಲ್ಲಾ ಪ್ರೇತದ ಮದುವೆ ತುಂಬಾ ಗೌಪ್ಯವಾಗಿ ನಡೆಯುತ್ತಿತ್ತು. ಯಾಕೆಂದರೆ ಇಂದಿನ ಯುಗದಲ್ಲಿ ಯಾರು ಇದನ್ನ ನಂಬುವುದಿಲ್ಲ ಮತ್ತು ಇದನ್ನು ಹೇಳಿದರೆ ಪ್ರೇತ ಮದುವೆ ಎಂದು ಅಲ್ಲಗಳಿಯುತ್ತಾರೆ ಎಂದು ಗೌಪ್ಯವಾಗಿ ಮಾಡುತ್ತಿದ್ದರು.

ಆದರೆ ಈಗ ಈ ಆಚರಣೆ ಬೆಳಕಿಗೆ ಬಂದಿದೆ. ಮದುವೆ ಮಾಡಿ ಬಿಟ್ಟರೆ ಸಾಕು ಎಂದು ಇರುವಂತಿಲ್ಲ ಮದುವೆ ಮಾಡಿಸಿದ ಎರಡು ಕುಟುಂಬಗಳು ಕೂಡ ಸಂಬಂಧವನ್ನು ಮುಂದುವರೆಸಿಕೊಂಡು ಹೋಗಬೇಕಾಗುತ್ತದೆ.


ಪತ್ರಿಕೆ ಜಾಹೀರಾತು ನೋಡಿ ವರ ಕೂಡ ಸಿಕ್ಕಿ ಆಯ್ತು
ಇತ್ತೀಚಿಗೆ  ವೈರಲ್ ಆಗಿದ್ದ ಈ ಪ್ರೇತ ಮದುವೆ ಜಾಹೀರಾತು ನೋಡಿ ಕಾಸರಗೋಡು ನಿಂದ ವರ ಕೂಡ ನಿಗದಿಯಾಗಿದೆ ಇನ್ನು ಆಷಾಢ ತಿಂಗಳಿನಲ್ಲಿ  ಪ್ರೇತ ಮದುವೆ ಮಾಡಲಾಗುತ್ತದೆ.

ಹೀಗೆ ನಮಗೆ ಗೊತ್ತಿಲ್ಲದ ಅನೇಕ ಸಂಪ್ರದಾಯಗಳು ಈಗ ಬೆಳಕಿಗೆ ಬರುತ್ತಿದೆ. ತುಳುನಾಡಿನ ನಂಬಿಕೆಯಾದ ಪ್ರೇತ ಮದುವೆ ನಿಜಕ್ಕೂ ವಿಶೇಷ ಎನ್ನಬಹುದು.

Category:NewsProfileImg

Written by Meghana Basavanna

Photographer, Graphic Designer, Content Writer