ಡಾ. ನಾ. ಮೊಗಸಾಲೆ ಅವರು ನನ್ನ ಕರಾವಳಿಯ ಸಾವಿರದೊಂದು ದೈವಗಳು - ಒಂದು ಐತಿಹಾಸಿಕ ಸಾಮಾಜಿಕ ಸಾಂಸ್ಕೃತಿಕ ವಿಶ್ಲೇಷಣಾತ್ಮಕ ನೋಟ ಎಂಬ ಸಂಶೋಧನಾ ಗ್ರಂಥಕ್ಕೆ ಬರೆದ ಬೆನ್ನುಡಿ ಇದು
ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇರಿಸಿದ ನವಿಲುಗರಿ
ಡಾ.ಲಕ್ಷ್ಮೀ ಪ್ರಸಾದ್ (ಲಕ್ಷ್ಮೀ ವಾರಣಾಸಿ) . ಅ ವರು ಕಾಸರಗೋಡು ಜಿಲ್ಲೆಯ ಕೋಳ್ಯೂರು ಗ್ರಾಮದ ವಾರಣಾಸಿ ಮೂಲದವರು. ತಂದೆ ವೇದಮೂರ್ತಿ ನಾರಾಯಣ ಭಟ್ಟರು ವಿದ್ವಾಂಸರೆಂದು ಪ್ರಸಿದ್ಧರು. ತನ್ನ ಮನೆತನವು ವೈದಿಕಾಚರಣೆಯನ್ನೇ ಹೊಂದಿದ್ದರೂ, ಕುಟುಂಬದಲ್ಲಿ ದೈವದ ಆರಾಧನೆಯನ್ನು ಮಾಡುತ್ತಿರುವುದೇಕೆ ಎಂಬ ಕುತೂಹಲವೇ ಡಾ. ಲಕ್ಷ್ಮೀ ಪ್ರಸಾದ್ ಅವರಿಗೆ ಪ್ರೇರಣೆಯಾಗಿ ಅವರು ಈ ಕುರಿತಾದ ಸಂಶೋಧನೆಗೆ ಇಳಿದರು.
ಇದರಿಂದ ಕರಾವಳಿ ಕರ್ನಾಟಕದ ಅಂದರೆ ಅವಿಭಜಿತ ದ.ಕ.ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ ಮತ್ತು ಕೊಡಗನ್ನೂ ಒಳಗೊಂಡಂತೆ ದೈವರಾಧನೆಯ ಆಶಯ ಆಕೃತಿಯನ್ನು ನಿರಂತರ ಸಂಶೋಧಿಸಲು ಅವರು ಮುಂದಾದರು. ಈ ನಿರಂತರತೆ ಇಪ್ಪತ್ತೊಂದು ವರುಷಗಳ ಕಾಲ ನಡೆದುದರ ಪರಿಣಾಮವಾಗಿ ಈ ಮೇಲಿನ ಪ್ರದೇಶಗಳಲ್ಲಿ ಒಟ್ಟು ಎರಡು ಸಾವಿರದ ನೂರ ಐವತ್ತನಾಲ್ಕು ದೈವಗಳು ಆರಾಧಿಸಲ್ಪಡುತ್ತವೆ ಎನ್ನುವ ಸತ್ಯ ಗೋಚರಿಸಿತು.
ಹಿರಿಯ ಜಾನಪದ ತಜ್ಞರೂ ವಿದ್ವಾಂಸರೂ ಆಗಿರುವ ಪ್ರೊ| ಬಿ.ಎ.ವಿವೇಕ ರೈ ಅವರು ತಮ್ಮ ಮಹಾಪ್ರಬಂಧದಲ್ಲಿ (1985) ಇನ್ನೂರ ಹದಿನೇಳು ದೈವಗಳನ್ನು ಗುರುತಿಸಿದ್ದರೆ, ಇನ್ನೋರ್ವ ಜಾನಪದ ವಿದ್ವಾಂಸ ಪ್ರೊ| ಚಿನ್ನಪ್ಪಗೌಡರು ತಮ್ಮ ಮಹಾಪ್ರಬಂಧದಲ್ಲಿ (1990) ಮುನ್ನೂರು ದೈವಗಳ ಅಸ್ತಿತ್ವವನ್ನು ಕಂಡರಿಸಿದ್ದಾರೆ.. ಮುಂದೆ ರಘುನಾಥ ವರ್ಕಾಡಿಯವರು ತಮ್ಮ ‘ಕಂಡಂಬಾರು ಮಲರಾಯ’ ಕೃತಿಯಲ್ಲಿ (2014) ನಾಲ್ಕು ನೂರ ಏಳು ದೈವಗಳನ್ನು ಉಲ್ಲೇಖಿಸಿದರು.
ಆಮೇಲೆ ಈ ಬಗ್ಗೆ ಸಂಶೋಧನೆ ನಡೆದದ್ದು ಕಡಿಮೆ ಅಥವಾ ಈ ಅರಿವಿನಲ್ಲೆ ಗಿರಕಿ ಹೊಡೆದದ್ದೇ ಹೆಚ್ಚು. ಆದರೆ ಡಾ. ಲಕ್ಷ್ಮಿ ಪ್ರಸಾದ್ ಅವರ ಆಸಕ್ತಿ ಅಥವಾ ಜಿಜ್ಞಾಸೆಯು ತಾವು ರಚಿಸಿದ ಮಹಾಪ್ರಬಂಧದ ಹೊತ್ತಿಗೆ (2007) ಸಾವಿರದ ನಾಲ್ಕು ನೂರ ಮೂವತ್ತೈದು ದೈವಗಳ ಕ್ಷೇತ್ರ ಕಾರ್ಯದ ತನಕ ಹಬ್ಬಿತು. ಇದೀಗ ಅವರು ಎರಡು ಸಾವಿರದ ನೂರ ಐವತ್ತನಾಲ್ಕು ದೈವಗಳನ್ನು ಸಾಕ್ಷಿ ಸಮೇತ ಗುರುತಿಸಿ ನಾಡು ಬೆರಗಾಗುವಂತೆ ಮಾಡಿದ್ದಾರೆ.
ತುಳು ಸಂಸ್ಕೃತಿಯ ಪ್ರಧಾನ ಅಂಗವಾಗಿ ದೈವಾರಾಧನೆ ಇದೆ. ಅದು ಇಲ್ಲದ ತುಳು ಸಂಸ್ಕೃತಿಯೇ ಇಲ್ಲ ಎನ್ನುವುದು ಅದರ ಪಾರಮ್ಯ. ನಂಬಿಕೆಯ ಆಧಾರದ ಮೇಲೆ ನಿಂತಿರುವ ಈ ಆರಾಧಾನ ಪದ್ಧತಿಯು ಶತಮಾನಗಳ ಪರಂಪರೆಯುಳ್ಳದ್ದು. ಇಂಥ ಸಂಸ್ಕೃತಿಯ ಬೇರುಗಳ ಆಳಕ್ಕೆ ಇಳಿದು ಚಿನ್ನವನ್ನು ಅಗೆದು ತೆಗೆದು ಪುಟಕ್ಕಿಡುವ ಹಾಗೆ ಮಾಡುವ ಕೆಲಸವು ಸಂಕೀರ್ಣವೂ, ಸಂಕಷ್ಟದ್ದೂ ಹೌದು, ಹಾಗೆಯೇ ಪುರುಷರಿಗಷ್ಟೇ ಸೀಮಿತ ಎನ್ನುವಂತಿದ್ದ ಈ ಸಂಶೋಧನೆಯನ್ನು ಮಹಿಳೆಯರು ಮಾಡಬಹುದೆನ್ನುವಂತೆ ಡಾ.ಲಕ್ಷ್ಮೀ ಪ್ರಸಾದರು ಮಾಡಿ ತೋರಿಸಿದ್ದಾರೆ.
ಇದಕ್ಕೆ ಅವರು ಹುಟ್ಟಿದ ಗಂಡು ಮೆಟ್ಟಿನ ನೆಲದ ಪ್ರಭಾವ ಎಷ್ಟು ಕಾರಣವೋ ಅಷ್ಟೇ ಅವರ ಗಂಡೆದೆಯೂ ಕೂಡಾ! ಡಾ. ಲಕ್ಷ್ಮೀ ಪ್ರಸಾದ್ ಅವರು ಕನ್ನಡ,ಹಿಂದಿ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಒಂದು ಎಂ.ಫಿಲ್ ಪದವಿ ಹಾಗೂ ಎರಡು ಪಿ.ಹೆಚ್.ಡಿಯ ಗರಿಯೂ ಅವರ ಸಾಧನೆಗೆ ದಕ್ಕಿದೆ. ಸಂಸ್ಕೃತ ಎಂ.ಎಯಲ್ಲಿ ಪ್ರಥಮ ರರ‌್ಯಾಂಕ್ ಪಡೆದಿರುವ ಅವರು ಕನ್ನಡ ಎಂ.ಎ.ಯಲ್ಲಿ ನಾಲ್ಕನೇ ರ‌್ಯಾಂಕಿಗೂ ಭಾಜನರಾಗಿದ್ದಾರೆ.
ಬದುಕನ್ನು ಅಧ್ಯಯನ ,ಅಧ್ಯಾಪನ ಮತ್ತು ಸಂಶೋಧನೆಗಳಿಗೆ ಮೀಸಲಿಟ್ಟಿರುವ ಅವರ ಈ ಇಪ್ಪತ್ತಮೂರನೆಯ ಕೃತಿ ಅವರ ಮಹಾತ್ವಾಕಾಂಕ್ಷೆಯ ಶಿಖರ.
ಸರಕಾರದ ಆಶ್ರಯವಿಲ್ಲದೆ, ಅಕಾಡಮಿಗಳ ಪ್ರೋತ್ಸಾಹವಿಲ್ಲದೆಯೇ ತನಗೆ ತಾನೇ ಸ್ವಯಂ ಭೂವಾಗಿ ನಡೆಸಿದ ಈ ಕ್ಷೇತ್ರ ಕಾರ್ಯ ಅಪರೂಪದಲ್ಲಿ ಅಪರೂಪದ್ದು.
ಭೂತ ಕಟ್ಟುವ ಜನಾಂಗದವರಿಂದ ಮತ್ತು ಇನ್ನಿತರ ಸಂಸ್ಕೃತಿ ಚಿಂತಕರ ಮೂಲದ ಐತಿಹ್ಯಗಳಿಂದ ಸಂಗ್ರಹಿಸಲ್ಪಟ್ಟ ಅವರ ಸಂಶೋಧನೆಯಲ್ಲಿ ಆಯ್ದ ಸಾವಿರದ ಇನ್ನೂರ ಏಳು ದೈವಗಳ ಮಾಹಿತಿಗಳನ್ನು ಈ ಗ್ರಂಥದಲ್ಲಿ ಅವರು ಅನಾವರಣಗೊಳಿಸಿದ್ದಾರೆ.
ಇದು ತುಳು ಸಂಸ್ಕೃತಿಯ ಹೊನ್ನ ಕಿರೀಟಕ್ಕೆ ಇಟ್ಟ ನವಿಲಗರಿ.
ಇದು ‘ಪಿಂತಿಲ್ಲ ಮುಂತಿಲ್ಲ’ ಎನ್ನುವ ಜಾನಪದ ಸಂಶೋಧನೆಯ ಆಚಾರ್ಯಕೃತಿಯಾಗಿದ್ದು ‘ಅಯ್ಯಯ್ಯ ಎಂಚ ಪೊರ್ಲಾಂಡ್‍ಂದ್ ತುಳುವರು ಮೈಯುಬ್ಬಿ ಹೇಳಬೇಕಣ್ಣ’ ಎನ್ನುವುದನ್ನು ಈ ಕಾಲದಲ್ಲಿ ಅನುರಣಿಸಲು ಕಾರಣವಾಗಿರುವ ವಿಸ್ಮಯ.
******
ಕರಾವಳಿಯ ಸಾವಿರದೊಂದು ದೈವಗಳು ಅನುಕ್ರಮಣಿಕೆ ಪ್ರಸ್ತಾವನೆ :
1 ಅಕ್ಕಚ್ಚು
2- ಅಕ್ಕ ಬೋಳಾರಿಗೆ
3-4ಅಕ್ಕೆರ್ಲು- ಅಂಬೆರ್ಲು
5 ಅಗ್ನಿ ಕೊರತಿ
6-9 ಅಗ್ನಿ ಭೈರವನ್ ಮತ್ತು ಪರಿವಾರ
10-11 ಅಚ್ಚು ಮತ್ತು ಮೆಚ್ಚು ಬಂಗೇತಿಯರು 12-14 ಅಜ್ಜಮ್ಮ ದೇವರು ಮತ್ತು ಪರಿವಾರ 15-16 ಅಜ್ಜ ಬಳಯ ಮತ್ತು ಮಾಮಿ ಕುಲೆ 17-23 ಅಜ್ಜಿ ಭೂತ , ಕೂಜಿಲು ಮತ್ತು ಇತರ ದೈವಗಳು
24 ಅಜ್ಜಿ ಬೆರೆಂತೊಲು
25-26 ಅಜ್ಜೆರ್ ಭಟ್ರು ಮತ್ತು ಅಜ್ಜೆರ್ ಪರಿವಾರ
27 ಅಡ್ಯಲಾಯ
28 ಅಡ್ಯಂತಾಯ
29 ಅಡಿ ಮಣಿತ್ತಾಯ
30-31 ಅಣ್ಣ ತಮ್ಮ ದೈವಗಳು/ಅತ್ತಾವರದ ದೈವಗಳು
32-33 ಅಣ್ಣೋಡಿ ಕುಮಾರ- ಕಿನ್ಯಂಬು
34 ಗುಟ್ಟು ಬಿಟ್ಟು ಕೊಡದ ಅಬ್ಬೆ ಜಲಾಯ 35-36 ಅರಬ್ಬಿ ಭೂತ ಮತ್ತು ಬ್ರಾಂದಿ ( ಬ್ರಾಹ್ಮಣತಿ)
37 -40 ಅರಸು ಬಂಗಾಡಿತ್ತಾಯ ಮತ್ತು ಸೇರಿಗೆ ದೈವಗಳು
41 ಅಸುರಾಳನ್/ ಅಸುಳಾನುಂ ಮಕ್ಕಳು
42-43 ಅಂಗಕ್ಕಾರನ್ ಮತ್ತು ಮರುಟೋಳನ್
44 ಅಂಗಾರ ಬಾಕುಡ
45 ಅಂಮಣ ಬನ್ನಾಯ
46-47 ಅಂಕೆ- ಉಮ್ಮಯ
48 ಆಚಾರಿ ಭೂತ
49 ಆಟಕಾರ್ತಿ
50 ಆಟಿ ಕಳೆಂಜ
51-53 ಆದಿ ವೇಡನ್ ಮತ್ತು ಪರಿವಾರ.
54 ಇಡಲದಜ್ಜಿ
55 ಇಷ್ಟಜಾವದೆ
56 ಉಗ್ಗೆದಲ್ತಾಯ
57- 60 ಉಮ್ಮಲ್ತಿ ,ಉಮ್ಮಲಾಯ,ಬೆಮ್ಮಲ್ತಿ ಬೆಮ್ಮಲಾಯ
61 ಉಪ್ರಝಾಸ್ಸಿ
62 ಉಚ್ಚಬಲಿ ತೆಯ್ಯಂ
63-64 ಉರವ ಎರುಬಂಟ
65-88 ಉಳ್ಳಾಕುಲು ಮತ್ತು ಉಳ್ಳಾಲ್ತಿ ದೈವಗಳು
89-90 ಎರು ಶೆಟ್ಟಿ( ಮಲೆ ಮುದ್ದ)
91-92 ಎಂಬ್ರಾನ್ ದೇವ- ಐಪ್ಪಳ್ಳಿ
93-99 ಏಲುವೆರ್ ಸಿರಿಕುಲು
100 ಒಕ್ಕು ಬಲ್ಲಾಳ
101-102 ಒರು ಬಾಣಿಯೆತ್ತಿ ,ನೆಲ್ಲೂರಾಯ 103- 105 ಓಣಂ ದೈವಗಳು
106 ಓಟೆಚರಾಯ
107: ಕಟ್ಟು ಎಡ್ತುನ್ ಕುಟ್ಟಿ
108 ಕಟ್ಟದಲ್ತಾಯ
109-110 ಕಡವಿನ ಕುಂಞ ಮತ್ತು ಕಳವಿನ ಚಿಕ್ಕ 111-112 ಕಡಂಬಳಿತ್ತಾಯ/,ಕೊಡಂಬಿಲ್ತಾಯ ಮತ್ತು ಮಲ್ಯೋಡಿತ್ತಾಯ
113 -114 ಕನಪಾಡಿತ್ತಾಯ, ಮಗ್ರಂದಾಯ ಮತ್ತು ಪಂಬದ
115 ಕನ್ನಡ ಕಲ್ಕುಡ
116 ಕನ್ನಡ ಬೀರ
117 ಕನ್ನಡ ಭೂತ
118-119 ಕನ್ನಲಾಯ ಮತ್ತು ಸ್ವಾಮಿ ನಂದೆದಿ 120 ಕನಿಯತಿ
121 ಕಪ್ಪಣ ಸ್ವಾಮಿ
122 ಕರಣಿಕ / ಕಾರ್ಯಸ್ಥನ್ ತೆಯ್ಯಂ
123-124 ಕರಿಯಣ್ಣ ನಾಯಕ, ಕೋಟಿ ನಾಯಕ
125 ಕರಿಯ ಮಲ್ಲಯ್ಯ
126-133 ಕರಿಂತಿರಿ ನಾಯರ್ ,ಪುಲಿಯೂರ್ ಕಾಳಿ ಮತ್ತು ಪುಲಿ ದೈವಗಳು
134 -135 ಕರ್ನಗೆ ಮತ್ತು ಮಲಾರ್ ಜುಮಾದಿ 136-137 ಕಲಿಯಾಟ ಅಜ್ಜಪ್ಪ, ಕಾಟಾಳ ಬೊಳ್ತು
138-139 ಅಲಿಖಿತ ಇತಿಹಾಸ ಸಾರುವ ಕಲ್ಕುಡ ಕಲ್ಲುರ್ಟಿ ದೈವಗಳು
140 ಕಂಡನಾರ ಕೇಳನ್
141 ಕಂರ್ಭಿ ಬೈದ್ಯೆದಿ
142 ಕಾಜಿಗಾರ್ತಿ
143-153 ಕಾಡ್ಯನಾಟದ ದೈವಗಳು
154- 155 ಕಾಡೆದಿ ಮತ್ತು ಕಾಡ್ತಿಯಮ್ನ 156-157 ಅತಿಕಾರೆ ಬೆಳೆಯನ್ನು ತಂದ ಕಾನದ ಕಟದರು
158-160 ಕಾನಲ್ತಾಯ ಮತ್ತು ಪರಿವಾರ ದೈವಗಳು
161-162 ಕಾಯರ್ತಾಯ ಮಾದ್ರಿತ್ತಾಯ 163-167 ಕಾರಿ ಕಬಿಲ ದೈವಗಳು
168 ಕಾಳರಾತ್ರಿ
169-172 ಕಾಳರಾಹು,ಕಳರ್ಕಾಯಿ ,ಕುಮಾರ ಸ್ವಾಮಿ ಕನ್ಯಾಕುಮಾರಿ
173-178 ಕಾಂತಾ ಬಾರೆ ,ಬೂದಾ ಬಾರೆ , ಅಚು ಬೈದ್ಯೆತಿ ,ಪುಲ್ಲ ಪೆರ್ಗಡ್ತಿ ,ಉಳ್ಳಾಯ ,ಸಾರಮಾನ್ಯ ದೈವಗಳು
179 ಕಾಂತು ನೆಕ್ರಿ ಭೂತ
180 ಕಿನ್ನಿದಾರು
181 ಕೀಳು ದೈವ
182-183 ಮದುಮಕ್ಕಳ ರೂಪದಲ್ಲಿ ಕಂಗೊಳಿಸುವ ಕುಕ್ಕೆತ್ತಿ ಬಳ್ಳು ದೈವಗಳು
184-185 ಕುಜುಂಬ ಕಾಂಜವ ಮತ್ತು ಕಾಚು ಕುಜುಂಬ ದೈವಗಳು
186-187 ಕುಟ್ಟಿಚ್ಚಾತ್ತನ್ ಮತ್ತು ಪಮ್ಮಚ್ಚು 188 ಕುಡಿ ವೀರನ್
189 ಕುದುರೆತ್ತಾಯ / ಕುದುರೆ ಮುಖ ದೈವ 190-191 ಕುರವ ಮತ್ತು ಸತ್ಯಂಗಳದ ಕೊರತಿ 192 ಕುರುವಾಯಿ ದೈವ
193- 199 ಕುಲೆ ಭೂತಗಳು – ತುಳುನಾಡಿನ ವಿಶಿಷ್ಟ ದೈವಗಳು
200 ಕುಂಞಮ್ಮ ಆಚಾರ್ದಿ
201 ಕುಂಞಾಳ್ವ ಬಂಟ
202 ಕುಂಞಿ ಭೂತ
203 ಕುಂಞಿ ರಾಮ ಕುರಿಕ್ಕಳ್
204 -208 ಕುಂಜಿರಾಯ ದೈವಗಳು
209-210 ಕುಂಜಿ ಮತ್ತು ಅಂಗಾರ ದೈವಗಳು 211 ಕುಂಜೂರಂಗಾರ
212 ಕುಂಟಲ್ದಾಯ
213-214 ಕುಂಟುಕಾನ ಮತ್ತು ಕೊರವ ದೈವಗಳು
215-216 ಕುಂಡ – ಮಲ್ಲು ದೈವಗಳು
217 ಕುಂಡೋದರ
218–221 ಕೆಂಚಣ್ಣ ಕರಿಯಣ್ಣ ಪಾಪಣ್ಣ ಮತ್ತು ಲಕ್ಷ್ಮೀ ನರಸಿಂಹ
222-223 ಕೇಚ ರಾವುತ ಮತ್ತು ರೇವಂತ 224 ಕೇತುರ್ಲಾಯ
225 ಕೊಟ್ಟೆದಲ್ತಾಯ
226-228 ಕೊಡಮಣಿತ್ತಾಯ,ವೈದ್ಯನಾಥ ,ಕುಡುಮದಾಯ ಮತ್ತು ಕುಕ್ಕಿನಂತಾಯ ದೈವಗಳು
239 ಕೊನ್ನೊಟ್ಟು ಕಡ್ತ
230-231 ತುಳುನಾಡಿನ ಜನಾನುರಾಗಿ ದೈವ ಕೊರಗ ತನಿಯ ಮತ್ತು ಮೈರೆ ಕೊರತಿ
232 ಕೊರತಿ
233 ಕೊಲ್ಲಿ ಕುಮಾರ ಮತ್ತು ಕೊಲ್ಯತ್ತಾಯ 234-235 ಕೊಂಡಾಣದ ಬಂಟ ಮತ್ತು ತಂಕರು ಮೂಲ್ಯೆದಿ
236: ಅಪ್ರತಿಮ ವೀರ ಕೋಚು ಮಲ್ಲಿ
237-239 ತುಳುನಾಡು ಬೆಳಗಿದ ಅವಳಿ ವೀರರು : ಕೋಟಿ ಚೆನ್ನಯರು ಮತ್ತು ದೇಯಿ ಬೈದ್ಯೆತಿ
240-241 ಅಪ್ರತಿಮ ಸಾಹಸಿ ಕೋಟೆದ ಬಬ್ಬು ಮತ್ತು ಕಚ್ಚೂರ ಮಾಲ್ದಿ
242: ಕೋಟ್ರ ಗುತ್ತಿನ ಬಬ್ಬು
243-244 ಕೋಟೆರಾಯ ಮತ್ತು ಕೋಟೇಶ್ವರ ದೈವಗಳು
245 ಕೋರಚ್ಚನ್
246 ಕೋಲು ಭಂಡಾರಿ
247 ಕೋಳೆಯಾರ ಮಾಮ
248 ಗಣಪತಿ ಕೋಲ
249 ಗಂಗೆ ನಾಡಿ ಕುಮಾರ ,( ಓಡಿಲ್ತಾಯ) 250-251 ಗಂಡ ಗಣಗಳು ಮತ್ತು ಡೆಂಜಿ ಪುಕ್ಕೆ
252 ಗಂಧರ್ವ ದೈವಗಳು
253 ಗಿಳಿರಾಮ
254 ಗಿಳಿರಾವಂತ
255-256 ಗಿರಾವು ಮತ್ತು ಕೊಡೆಕಲ್ಲಾಯ 257 ಗುರು ಕಾರ್ನವೆರ್
258 ಗುರುನಾಥನ್
259-275 ಗುಳಿಗ ಮತ್ತು ಸೇರಿಗೆ ದೈವಗಳು 276-300 ಚಾಮುಂಡಿ ಮತ್ತು ಸೇರಿಗೆ ದೈವಗಳು
301-302 ಚಾವುಂಡೇಶ್ವರ ಮತ್ತು ಚಂಡಿಕೇಶ್ವರ
303 -313 ಚಿಕ್ಕು/ ಚಿಕ್ಕಮ್ಮ ಪರಿವಾರ ದೈವಗಳು
314-318′ ಐವರು ಚಿನಿಕಾರ/ಚೀನೀ ಭೂತಗಳು
319 ಚೆನ್ನಿಗರಾಯ
320-322′ ಚೆಮ್ಮರತಿಮತ್ತು ಪಡೆವೀರನ್ ದೈವಗಳು
323 ಜಟಾಧಾರಿ
324 -334 ಜಟ್ಟಿಗ ದೈವಗಳು (ಜೈನ ಜಟ್ಟಿಗ ಕೋಟೆ ಜಟ್ಟಿಗ ನೆತ್ರಾಣಿ ಜಟ್ಟಿಗ ಹೊಗೆವಡ್ಡಿ ಜಟ್ಟಿಗ ಅರಮನೆ ಜಟ್ಟಿಗ ಇತ್ಯಾದಿ)
335-337 ಜಮೆಯ- ಜಮಯತಿ ,ಬಡೆದಿ ದೈವಗಳು
338 ಜಂಗ ಬಂಟ
339 ಜಾನು ನಾಯ್ಕ
340 ಜಾರಂದಾಯ
341-342 ಜಾಲ ಬೈಕಾಡ್ತಿ/ ಜಾಲ ಕೊರತಿ ಮತ್ರು ಅಂಗಾಡಿ ಕೊರತಿ ದೈವಗಳು
343 ಪನ್ನೆ ಬೀಡಿನ ಜಾಲ್ಸೂರಾಯ
344-345 ಇರ್ವೆರ್ ಜೋಕುಲು ದೈವೊಲು 346 ಜೈನ ಗುಜ್ಜಾರ್ಲು
347 ಜೈನ ಭೂತ
348 ತಪ್ಪೇದಿ/ ತಪ್ಪೆದಿ
349 ತನ್ನಿಮಾಣಿಗ
350-352 ತಂತ್ರಿಗಣಗಳು
353 ತಿಮ್ಮಣ್ಣ ನಾಯಕ
354 -356ತೆಕ್ಕನ್ ಕರಿಯಾತನ್, ಕನ್ನಿಕ್ಕೊರುಮಗನ್ ಮತ್ತು ಕೈಕೋಲನ್ ತೆಯ್ಯಂ 357 ತೋಡ ಕುಕ್ಕಿನಾರ್
358 ದಾರಮ್ಮ ಬಳ್ಳಾಲ್ತಿ
359-362 ದಾರು ಕುಂದಯ ದೈವಗಳು
363 ದೀಪದ ಮಾಣಿ
364-365 ದುಗ್ಗಲಾಯ ಮತ್ತು ಸುತ್ತು ಕೋಟೆ ಚಾಮುಂಡಿ
366 ದೂಮ
367 ದೂಧುರ್ಮ / ದೂರ್ದುಮ
368-369 ದೆಸಿಲು ಮತ್ತು ಕಿಲಮರತ್ತಾಯ ದೈವಗಳು
370 ದೇಬೆ ದೈವ
371-372 ದೇರೆ ಮತ್ತು ಮಾನಿ ದೈವಗಳು 373 ದೇವಾನು ಪಂಬೆದಿಯಮ್ಮ
374 ದೇಯಿ ಬೈದೆತಿ
375-376 ದೇಸಿಂಗ ಉಳ್ಳಾಕುಲು ಮತ್ತು ,ಕೋಟೆದಾರ್
377–380; ದೈವ ಸಾದಿಗೆ ಒಲಿಪ್ರಾಂಡಿ , ,ದೈವನ ಮುಟ್ನಾಯೆ ,ಅಡ್ಯೊಲ್ತಾಯೆ
381 ದೈವಂತಿ
382-396 ಧೂಮಾವತಿ ಮತ್ತು ಸೇರಿಗೆ ದೈವಗಳು
397 -400 ನಂದಿ ಹೆಸರಿನ ದೈವಗಳು
401-404 ನರಿ ತೆಯ್ಯಂ,ನರಿ ಪೂದ ಮತ್ತು ಸೇರಿಗೆ ದೈವಗಳು
405-406 ನಂದಿಗೆನ್ನಾಯ ಮತ್ತು ಬ್ರಾಣ ಭೂತ
407-409 ನಾಗ ಕನ್ನಿಕೆ ಮತ್ತು ನಾಗರಾಜರು 410 ನಾಗ ಬ್ರಹ್ಮ
411 ನಾಗ ಭೂತ
412-418 ನಾಗ ಬ್ರಹ್ಮ ಮಂಡಲದ ದೈವಗಳು
419-420 ನಾರಳ್ತಾಯ ಮತ್ತು ಭೂತರಾಜ 421 ನಾಲ್ಕೈತಾಯ
422-423 ನೀಚ ತನಿಯ ಮತ್ತು ಒಂಟಿ ಕಾಲಿನ ಬಬ್ಬರ್ಯ
424-425 ನುರ್ಗಿಮದಿಮಾಲ್ ಮತ್ತು ದುರ್ಗಿ ಮದಿಮಾಲ್
426 ನೇರಳತ್ತಾಯ
427-428 ನೈದಾಲ ಪಾಂಡಿ ಮತ್ತು ಮಹೇಶ್ವರನ್ ದೈವಗಳು
429 ಪಟ್ಟಾರ್ ತೆಯ್ಯಂ
430 ಪಟ್ಟೋರಿತ್ತಾಯ
431 ಪಡೆ ಬೀರ ಕಣ್ಣಂಡ ದೊಡ್ಡಯ್ಯ
432-433 ಪಡ್ಕಂತಾಯ ಮತ್ತು ಗೆಂಡಕೇತ್ರಾಯ
434 ಪತ್ತೊಕ್ಕೆಲು ಜನನಂದ ದೈವ
435-436 :ಪನಯಾರ್ ಮತ್ತು ಸಂಪ್ರದಾಯ ದೈವ
437:ಪಯ್ಯ ಬೈದ್ಯ
438-443’ಪಯ್ಯಂಬಿಲ್ ಚಂದು ತಚ್ಚೋಳಿ ಒದೆನನ್ ಮತ್ತು ಪರಿವಾರ
444-445 ಪರವ ಮತ್ತು ಪರಿವಾರ ನಾಯಕ 446 ಪಂಜಿ ಭೂತ
447 -466 ಪಂಜುರ್ಲಿ ಮತ್ತು ಸೇರಿಗೆ ದೈವಗಳು
467 ಪಾಣರಾಟ
468 ಪಿಲಿ ಭೂತ
469 -471 ಪುದರ್ ಚಿನ್ನ ಬಂಟ ಮತ್ತು ಪಿಲೆ ಪೆಲತ್ತಿ ದೈವಗಳು
472 ಪುದ ಮತ್ತು ಪೋತಾಳ
473- 490 ಪುರಾಣ ದೇವತೆಗಳು ಮತ್ತು ಭೂತ ತೆಯ್ಯಂ ಗಳು
491-501 ತುಳುನಾಡಿನ ಪುರುಷ ಭೂತಗಳು 502 ಪುಲಂದಾಯ ಬಂಟ
503 ಪುಲಿಮರಂಞ ತೊಂಡನ್
504 -511 ಪುಲಿಯೂರ್ ಕಾಳಿ ಪುಳ್ಳಿಕರಂಕಾಳಿ,ಕರಿಂತಿರಿ ನಾಯರ್ ಮತ್ತು ಐವರು ಹುಲಿ ದೈವಗಳು
512 ಪೆರಿಯಾಟ್ ಕಂಡನ್
513 ಪೆರುಂಬಳಯಚ್ಚನ್
514 ಪೊಟ್ಟನ್ 515- 521 ಪೊನ್ನಂಗಾಲತಮ್ಮೆ ಮತ್ತು ಆರು ಸಹೋದರರು
522 ಪೊನ್ವಾನ್ ತೊಂಡಚ್ಚನ್
523-525 ಪೊಸಮಹರಾಯ ,ಉಳ್ಳಾಲ್ತಿಯರು ಮತ್ತು ಮಾಡ್ಲಾಯಿ
526 -536 ಪೋಲೀಸ್, ಕಳ್ಳ ,ಶಾನುಭಾಗ,ಪಟೇಲ, ಗುರಿಕ್ಕಾರ,ತಿಗಮಾರೆರ್ ,ಬಲಾಯಿಮಾರೆರ್,ಸೇನವ ,ಕಡೆಂಜು ಬಂಟ,ಬಂಕಿನಾಯ್ಕ ದೈವಗಳು
537 ಪೋಲೀಸ್ ತೆಯ್ಯಂ
538-539 ಬಚ್ಚನಾಯಕ
540 -544 5ಬಬ್ಬರ್ಯ ಮತ್ತು ಸೇರಿಗೆ ದೈವಗಳು
545-548 ಬಲವಾಂಡಿ ,ಕಂಡೆತ್ತಾಯ , ಉಳ್ಳಾಯ ,ಕುರಿಯಾಡಿತ್ತಾಯ
549 ಬಲ್ಲ ಮಂಜತ್ತಾಯ
550-555 ಬಲ್ಲಾಳ ಬಲ್ಲಾಳ್ತಿ ಮತ್ತು ಇತರ ದೈವಗಳು
556 ಬಲೀಂದ್ರ
557 ಬಸ್ತಿನಾಯಕ
558 ಬಂಕಿ ನಾಯ್ಕ
559 ಬಂಡಿ ರಾಮ .
560 ಬಾಕುಡತಿ
561 ಬಾಲೆ ಕನ್ಯಾಪು
562 -606 ಬ್ರಾಹ್ಮಣ ಮೂಲದ ದೈವಗಳು 607 ಬಿರ್ಮಣಾಚಾರಿ
608-609 ಬಿಲ್ಲಾರ ಬಿಲ್ಲಾರ್ತಿ ದೈವಗಳು
610 ಕುಂಬಳೆ ಸಿಮೆಯ ಪಟ್ಟದ ದೈವ ಬೀರಣ್ಣಾಳ್ವ
611 ಬೀರ್ನಾಚಾರಿ
612-614 ಬೂಡು ಬೊಮ್ಮಯ್ಯ ಮತ್ತು ಕತ್ತಲೆ ಬೊಮ್ಮಯ್ಯ,ಪಟ್ಟಂತರಸು
615-616 ಬೆರ್ಮೆರ್,ಕಂಬೆರ್ಲು ಮತ್ತು ಹಕ್ಕೆರ್ಲು
617-618 ಬೆಲೆಟಂಗರಜ್ಜ ಮತ್ತು ತಂಗಡಿ 619-620 ಬೇಡವ ಮತ್ತು ಬೇಟೆಗಾರ ದೈವಗಳು
621 ಬೊಟ್ಟಿ ಭೂತ
622 -625:ಬೋವ ದೈವಗಳು .
626 ಬೈನಾಟಿ
627 ಬೈಸು ನಾಯಕ
628-690 ಭಗವತಿ ದೈವಗಳು
691 ಭಟಾರಿ ದೈವ
692-694 ಭದ್ರಕಾಳಿ ,ಭದ್ರಕಾಳಿ ಭಗವತಿ ಮತ್ತು ವಣ್ಣಾತಿ ದೈವ
695 – 696 ಭದ್ರಕಾಳಿಮತ್ತು ಬೊಳ್ಳಿ ಬಿಲ್ ಅಯ್ಯಪ್ಪ
697-698 ಭಂಡಾರಿ ಮತ್ತು ಪಿಲಡ್ಕತ್ತಾಯ 699 ಮಡಿಕತ್ತಾಯ
700-701 ಮದನಕ್ಕೆ ದೈಯಾರ್ ,ಕಳಿಗೋಂಕು ಮಾಬೀರರು
702-703′ ಮದಂಗಲ್ಲಾಯ ಮತ್ತು ಕಡಂಗಲ್ಲಾಯ
704-705 ಮದಿಮಾಯ ಮದಿಮಾಲ್ 706 ಮನಕ್ಕಡನ್ ಗುರುಕ್ಕಳ್
707 ಮನಕ್ಕೊಟ್ಟ್ ಅಮ್ಮ
708- 716 ಮನ್ಸರ ದೈವಗಳು
717 ಮರಾಂಗಣೆ
718;ಮರುತಿಯೋಡನ್ ಕುರಿಕ್ಕಳ್
719-720 ಮಲಯಾಳ ಬ್ರಹ್ಮ ಮತ್ತು ಮಲ್ಯಾಳ ಭಟ್ರು
721 ಮಲರಾಯ
722 ಮಲೆಕುಡಿಯರ ಅಯ್ಯಪ್ಪ
723-726: ಮಲೆ ತಮ್ಮಚ್ಚ ಮತ್ತು ಪರಿವಾರ 727 ಮಲೆರಾಯ ಮತ್ತು ಪರಿವಾರ
728 ಮಲೆಸಾವಿರ ದೈವ
729-730 ಮಂಗಳೆರ್ ಮತ್ತು ಗುರು ಮಂಗೞೆರ್
731-733 ಮಂತ್ರ ಗಣ ಮಂತ್ರ ದೇವತೆ ಮಂತ್ರ ಮೂರ್ತಿ ದೈವಗಳು
734 ಮಂದ್ರಾಯ
735 ಮಹಾಕಾಳಿ
736 ಮಾಂಕಾಳಿ ದೈವಗಳು
737-741 ಮಾಯಂದಾಲ್ ಮತ್ತು ಪರಿವಾರ 742-743 ಮಾಯೊಲು ಮಾಯೊಲಜ್ಜಿ. 744-757 ಮಾರಿ ಭೂತಗಳು
758-760 ಮಾಲಿಂಗ ರಾಯ ದಂಡಪ್ಪ ನಾಯಕ ಮಂಞ ನಾಯಕ ದೈವಗಳು
761 ಮಾಸ್ತಿಯಮ್ಮ
762-763 ಮಿತ್ತೂರು ನಾಯರ್ ದೈವಗಳು 764 ಮಿಲಿಟ್ರಿ ಅಜ್ಜ
765 ಮೀನು ಗಾರ್ತಿ
766 -780 ಮುಗೇರ ದೈವಗಳು
781 ಮುಡದೇರ್ ಕಾಳ ಭೈರವ
782-784 ಮುತ್ತಪ್ಪನ್ ,ತಿರುವಪ್ಪನ್ ,ಮೂಲಂಪೆತ್ತಮ್ಮ
785 ಮುತ್ತು ಮಾರಿಯಮ್ಮ
786 ಮುನಿಸ್ವಾಮಿ ದೈವ
787 ಮುವ್ವೆ ಮೂವ,ಮೂವಿಗೆ ವಾತೆ
788-813 ಮುಸ್ಲಿಂ ಮೂಲದ ದೈವಗಳು
814 ಮೂಜಿಲ್ನಾಯ
815-816 ಮೂಡೊಟ್ನಾರ್,ಪಡುವೆಟ್ನಾರ್ 817 ಮೂರಿಲು
818 ಮೂರ್ತಿಲ್ಲಾಯ
818-900 ಮೂಲ ಪುರುಷ ದೈವಗಳು
901-1055 ಮೆಕ್ಕೆ ಕಟ್ಟಿನ ಉರುಗಳು
1056-1057 ಮೇರ ಮೇತಿಯರು
1058 ಮೇಲಂಟಾಯ
1059 ಮೈಯೊಂದಿ
1060 ಮೈಸಂದಾಯ
1061-1066 ಮೋಂದಿ ಕೋಲ
1067 -1117 ಯಕ್ಷ ಯಕ್ಷಿಯರು ಮತ್ತು ಶ್ರೀಲಂಕಾದ ಯಕುಮ ಕೋಲ
1118-1119 ರಕ್ತೇಶ್ವರಿ ಮತ್ತು ಬವನೊ 1120 ರಾಜನ್ ದೈವಗಳು
1121-1123 ವಣ್ಣಾತನ್ ವಯನಾಡು ಕುಲವನ್,ಕಣ್ಣನ್
1124 ವಡ್ಡಮರಾಯ
1125-1126 ವಿದೇಶೀ ಕಾಫ್ರೀ ದೈವಗಳು 1127-1128 ವಿಷ್ಣು ಮೂರ್ತಿ ಮತ್ತು ಪಾಲಂದಾಯಿ ಕಣ್ಣನ್
1129-1130 ವೀರಭದ್ರ/ ವೈರಜಾತ್,ವೀರನ್ 1131-1134 ವೀರ ವಿಕ್ರಮೆರ್ ಮತ್ತು ಇರ್ವೆರ್ ಬೈದ್ಯೆರ್
1135 ವೆಳ್ಳು ಕುರಿಕ್ಕಳ್
1136 ವೇಟಕ್ಕೊರುಮಗನ್
1137 ವೈದ್ಯಾಚಾರ್ಯ/ ವೈದ್ಯರಾಜನ್
1138 ಶಂಕರ ಬಡವಣ
1139-1141 ಶಾಸ್ತಾವು,ಕರಿ ಭೂತ,ಕೋಮಾಳಿ
1142 ಶಿರಾಡಿ ಭೂತ.
1143 ಶಿವರಾಯ
1144 ಶ್ರೀಮಂತಿ ದೈವ
1145-1146 ಸತ್ಯ ಮಾಗಣ್ತಿ ಮತ್ತು ಕಲ್ಲು ದೈವ 1147-1151 ಬಾಕುಡರ ಸರ್ಪಕೋಲದ ದೈವಗಳು
1152 ಸರ್ಪಂಕಳಿ
1153 ಸರ್ಪಂತುಳ್ಳಲ್
1154 ಸಂನ್ಯಾಸಿ ಮಂತ್ರ ದೇವತೆ
1155 ಸಾದಿಕರಾಯ ಮತ್ತು ಹಾದಿಕಾರಾಯ 1156 ಸಾರ ಮಾಂಕಾಳಿ
1157 ಸ್ವಾಮಿ ದೈವ
1158-1165 ಸೀತಾಯುಂ ಮಕ್ಕಳುಂ,ದೈವತಾರ್ ಮತ್ತು ಪರಿವಾರ
1166 ಸುಬ್ಬರಾಯ
1167 ಸೋಣದ ಜೋಗಿ
1168 ಸೋಣದಜ್ಜಿ/ ತಡ್ಯದಜ್ಜಿ
1169 ಹನುಮಂತ/ ಸಾರ ಪುಲ್ಲಿದಾರ್ ದೈವ 1170 ಹಳ್ಳತ್ತಾಯ ಮತ್ತು ಅಲ್ನತ್ತಾಯ
1171 ಹಳೆಯಮ್ಮ
1172-1181 ಹಾಯ್ಗುಳಿ ಮತ್ತು ಪರಿವಾರ 1182-1201 ಹಿರಿಯಾಯ ದೈವಗಳು 1202 -1203 ಹುಲಿ ಮತ್ತು ಹಸರ ತಿಮ್ಮ 1204 ಹೊಸಮ್ಮ ,
1205 ಹೊಸಳಿಗಮ್ಮ
1206-1207 ಹೌಟಲ್ದಾಯ ಮತ್ತು ಮಾಳದ ಕೊರಗ
ಅನುಬಂಧ:
1 ತುಳು ಕಲಿಕಾ ಪಠ್ಯ 2 ತಿಗಳಾರಿ( ತುಳು) ಲಿಪಿ- ಒಂದು ವಿಶ್ಲೇಷಣಾತ್ಮಕ ಅಧ್ಯಯನ 3 ಭೂತಾರಾಧನೆ ಮತ್ತು ಯಕ್ಷಗಾನ- ಒಂದು ತೌಲನಿಕ ನೋಟ 4 ತುಳುವ ಸಂಸ್ಕಾರಗಳು 5 ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು 6 ತುಳು ಭೂತಗಳ ನಡುವೆ ಗೌತಮ ಬುದ್ಧನೂ ಇದ್ದ 7 ಸಾಂಸ್ಕೃತಿಕ ಪದ ಕೋಶ 8 ಕ್ಷೇತ್ರ ಕಾರ್ಯದ ವಿವರ
* ಕರಾವಳಿಯ ಸಾವಿರದೊಂದು ದೈವಗಳು ಕೃತಿಗಾಗಿ ಸಂಪರ್ಕಿಸಬಹುದು
9480516684- ಡಾ.ಲಕ್ಷ್ಮೀ ಜಿ ಪ್ರಸಾದ್
0 Followers
0 Following