ತುಳುನಾಡಿನ ದೈವ ಚಾಮುಂಡಿ ಕೂಡಾ ಮೂಲತಃ ಬ್ರಾಹ್ಮಣ ಕನ್ಯೆ ಯೇ ?

ತುಳುವರ ಆರಾಧ್ಯ ದೈವಗಳಾದ ಬ್ರಾಹ್ಮಣರು: ಚಾಮುಂಡಿ

ProfileImg
24 May '24
5 min read


image

ಎರಡು  ಮೂರು ದಿನಗಳ ಮೊದಲು ತುಳುನಾಡಿನ ದೈವಗಳಾಗಿ ಆರಾಧನೆ ಪಡೆವ ಬ್ರಾಹ್ಮಣರ ಬಗ್ಗೆ ಬರೆಯುವಾಗ ಚಾಮುಂಡಿ ದೈವ  ಕೂಡ ಬ್ರಾಹ್ಮಣ ಕನ್ಯೆ ಎಂದು ಹೇಳಿದ್ದೆ

ಈ ಬಗ್ಗೆ ಅನೇಕರು  ಮಾ ಹಿತಿ ಕೇಳಿದ್ದಾರೆ.

ತುಳುನಾಡಿನ ಎಲ್ಲೆಡೆಗಳಲ್ಲಿ `ಚಾಮುಂಡಿ’ ಎಂಬ ಭೂತವು ಆರಾಧನೆಯನ್ನು ಹೊಂದುತ್ತದೆ. ತುಳುನಾಡಿನ ಭೂತಗಳು ಕೆಟ್ಟ ಶಕ್ತಿಗಳಲ್ಲ. ಶಿಷ್ಟ ರಕ್ಷಣೆಯನ್ನು ಮಾಡುವ ತುಳುನಾಡಿನ ಸತ್ಯಗಳು ಇವು. ಸಂಸ್ಕೃತದ  ಪೂತಂ ಎಂದರೆ ಪವಿತ್ರವಾದದ್ದು ಎಂಬ ಪದವೇ ಕಾಲಾಂತರದಲ್ಲಿ ಪೂತೊ ಆಗಿ ಭೂತೋ ಆಗಿರುವ ಸಾಧ್ಯತೆ ಇದೆ. ಕೊಡವರು ಇಂದಿಗೂ ಭೂತವನ್ನು ಪೂದ ಎಂದೇ ಕರೆಯುತ್ತಾರೆ. ಕೇರಳದಲ್ಲಿ ಭೂತವನ್ನು ತೆಯ್ಯಂ ಎಂದು ಕರೆಯುತ್ತಾರೆ. ಇದು ದೈವ ಎಂಬುದಕ್ಕೆ ಸಂವಾದಿಯಾಗಿರುವ ಪದವಾಗಿದೆ.

ತುಳುನಾಡಿನ ದೈವಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯದು ಪೌರಾಣಿಕ ಮೂಲದ ಭೂತಗಳು. ಇದರಲ್ಲಿ ಪುರಾಣೋಕ್ತ ದೈವಗಳು ಭೂತದ ರೂಪದಲ್ಲಿ ಆರಾಧನೆ ಪಡೆಯುವ ಭೂತಗಳು ಸೇರುತ್ತವೆ. ಗುಳಿಗ, ವಿಷ್ಣುಮೂರ್ತಿ, ರಕ್ತೇಶ್ವರಿ, ಚಾಮುಂಡಿ ಮೊದಲಾದುವುಗಳು ಪುರಾಣಮೂಲ ಭೂತಗಳಾಗಿವೆ ಎಂದು ಭಾವಿಸಲಾಗಿದೆ.

. ಜನಸಾಮಾನ್ಯರಂತೆ ಜನಿಸಿ ಅಸಾಮಾನ್ಯ ಸಾಹಸವನ್ನು ಮೆರೆದು ದುರಂತವನ್ನಪ್ಪಿ ದೈವತ್ವಕ್ಕೇರಿ ಆರಾಧಿಸಲ್ಪಡುವ ಕೊರಗ-ತನಿಯ, ಕಲ್ಕುಡ-ಕಲ್ಲುರ್ಟಿ, ಕೋಟಿ-ಚೆನ್ನಯ ಮೊದಲಾದವರು ಎರಡನೆಯ ವರ್ಗದಲ್ಲಿ ಸೇರುತ್ತಾರೆ.

ಚಾಮುಂಡಿ ತುಳುನಾಡಿನ ಎಲ್ಲಡೆಗಳಲ್ಲಿ ಆರಾಧಿಸಲ್ಪಡುವ ಪ್ರಧಾನ ದೈವ. ಚಾಮುಂಡಿ ಮೂಲತಃ ಪುರಾಣ ಮೂಲ ದೈವವೇ? ಎಂಬ ಬಗ್ಗೆ ಇದಮಿತ್ಥಂ ಎಂಬ ನಿರ್ಣಯಕ್ಕೆ ಬರುವುದು ಕಷ್ಟಸಾಧ್ಯವಾದ ವಿಚಾರವಾಗಿದೆ.

 ಚಾಮುಂಡಿ ದೈವದ ಆರಾಧನೆಯ ಸಂದರ್ಭದಲ್ಲಿ ಅದರ ಪ್ರಸರಣ ಕಾರಣಿಕದ ಕುರಿತಾದ ಪಾಡ್ದನವನ್ನು ಹೇಳುತ್ತಾರೆ. ಚಾಮುಂಡಿ ಭೂತದ ಹುಟ್ಟಿನ ಕುರಿತಾಗಿ ಏನನ್ನೂ ಹೇಳುವುದಿಲ್ಲ. ಅಲೌಕಿಕ ನೆಲೆಯಲ್ಲಿ ಏಳು ಸಮುದ್ರದ ನಡುವೆ ಎಪ್ಪತ್ತೇಳು ನಾಗಬಿಂಬಗಳ ನಡುವೆ ಚಾಮುಂಡಿ ದೈವ ಉದ್ಭವಿಸಿ ಬಂತು ಎಂದು ಹೇಳುತ್ತಾರೆ.

 ತುಳುನಾಡಿನಲ್ಲಿ ಕೆರೆ ಚಾಮುಂಡಿ ಮಲೆ ಚಾಮುಂಡಿ, ಮುಡ ಚಾಮುಂಡಿ, ಅಗ್ನಿ ಚಾಮುಂಡಿ, ಒಲಿ ಚಾಮುಂಡಿ, ಕೋಮಾರು ಚಾಮುಂಡಿ, ಮಲೆಯಾಳ ಚಾಮುಂಡಿ, ರುದ್ರ ಚಾಮುಂಡಿ, ವಿಷ್ಣುಮೂರ್ತಿ ಚಾಮುಂಡಿ, ಪಿಲಿಚಾಮುಂಡಿ, ಕರಿಚಾಮುಂಡಿ, ಪಾಪೆಲು ಚಾಮುಂಡಿ ಇತ್ಯಾದಿಯಾಗಿ ಅನೇಕ ಚಾಮುಂಡಿ ಭೂತಗಳಿವೆ. ಹೆಸರಿನೊಂದಿಗೆ `ಚಾಮುಂಡಿ’ ಎಂದು ಸೇರಿಕೊಂಡಿದೆಯಾದರೂ ಇವೆಲ್ಲ ಒಂದೇ ದೈವ ಚಾಮುಂಡಿಯ ಬೇರೆ-ಬೇರೆ ಹೆಸರುಗಳಲ್ಲ. ಬದಲಾಗಿ ಚಾಮುಂಡಿ ಎಂಬ ಹೆಸರನ್ನು ಸೇರಿಸಿಕೊಂಡಿರುವ ಬೇರೆ ಬೇರೆ ದೈವಗಳಾಗಿವೆ

 ಕೆರೆ ಚಾಮುಂಡಿ / ಮೂಲ ಚಾಮುಂಡಿ ಮೂಲತಃ ಭೀಮುರಾಯ ಭಟ್ಟರ ಕೆರೆಯಲ್ಲಿ ಉದ್ಭವ ವಾದ ದೈವ ಎಂಬ ನಂಬಿಕೆ ಇದೆ .ಆದರೆ  ಚಾಮುಂಡಿ ಪಾಡ್ದನ ಕ ೆ ಯನ್ನು ಲಕ್ಷಿಸಿದಾಗ  ಚಾಮುಂಡಿ ಮೂಲತಃ ಭೀಮುರಾಯ ಭಟ್ಟರು ಸಾಕಿದ ಹುಡುಗಿ ಎಂದು ಸ್ಪಷ್ಟವಾಗುತ್ತದೆ

 

 

ಹಾಗಾಗಿ ಇಲ್ಲಿ ಚಾಮುಂಡಿ ಹುಟ್ಟಿನ ಪಾಡ್ದನದ ಜೊತೆಗೆ ಮೂಲ ಕಥೆಯನ್ನು ಬರೆದಿದ್ದೇನೆ 

ಎಡ ಮಲೆ ಬಲ ಮಲೆಯ ನಡುವೆ ಭೀಮುರಾಯರ ಸಂಪಿಗಾನ ತೋಟವಿದೆ.ಇಲ್ಲಿ ಒಂದು ಮುತ್ತಿನ ಕೆರೆ ಇದೆ.ಒಂದು ದಿನ ಭೀಮುರಾಯ ಭಟ್ಟರು ಮುತ್ತಿನ ಕೆರೆಯಲ್ಲಿ ಸ್ನಾನ ಮಾಡುವಾಗ ಬಿಳಿಯ ತಾವರೆ ಹೂವೊಂದು ಮಡಿಲಿಗೆ ಬಂದು ಬೀಳುತ್ತದೆ.ಇದನ್ನು ತಂದು ತೆಂಕು ದಿಕ್ಕಿನ ದೇವರ ಕೋಣೆಯಲ್ಲಿ ಇರಿಸುತ್ತಾರೆ.ಆಗ ಅದು ಏಳು ಏಳೂವರೆ ತಿಂಗಳ ಹೆಣ್ಣು ಮಗುವಾಗಿ ಅಳುತ್ತದೆ.ಅಳುವ ಸದ್ದು ಕೇಳಿ ಬಂದಾಗ ಕಾಣಿಸಿದ ಹೆಣ್ಣು ಮಗುವನ್ನು ನೋಡಿ ಮಕ್ಕಳಿಲ್ಲ ಭೀಮುರಾಯ ಭಟ್ಟರು ಇದು ತಮಗೆ ದೇವರು ಕರುಣಿಸಿದ ಮಗು ಎಂದು ಸಂಭ್ರಮದಿಂದ ತಮ್ಮ ಆರಾಧ್ಯ ದೇವತೆ ಚಾಮುಂಡಿ ಯ ಹೆಸರನ್ನು ಇಟ್ಟು  ಪ್ರೀತಿಯಿಂದ ಸಲಹುತ್ತಾರೆ

ಮುಂದೆ ಭೀಮುರಾಯ ಭಟ್ಟರ ದಾಯಾದಿ ಆಗಿರುವ ಗಣಪತಿ ಭಟ್ಟ ಎಂಬುವನು ಚಾಮುಂಡಿ ಗೆ ದ್ರೋಹ ಬಗೆಯುತ್ತಾನೆ.ಆಗ ಭೀಮುರಾಯರು ನಂಬಿದ ಕತ್ತಲೆಕಾನದ ಗುಳಿಗ ಗಣಪತಿ ಭಟ್ಟನನ್ನು ಸಂಹಾರ ? ಮಾಡುತ್ತದೆ.

ಮುಂದೆ ಆತ ಚಾಮುಂಡಿಯ ಜೊತೆಗೆ ಸೇರಿಕೊಂಡು ಜತ್ತಿಂಗ ದೈವವಾಗಿ ಆರಾಧನೆ ಪಡೆಯುತ್ತಾನೆ 

ಪ್ರಚಲಿತವಿರುವ ಐತಿಹ್ಯದ ಪ್ರಕಾರ ಜತ್ತಿಂಗ  ಭೂತ ಮೂಲತಃ ಒಬ್ಬ ತಂತ್ರಿ .ಚೌಂಡಿ ಆರಾಧನೆಯನ್ನು ಮಾಡುವಾಗ ಓರ್ವ ತಂತ್ರಿ ದ್ರೋಹವನ್ನು ಮಾಡುತ್ತಾರೆ .ಆಗ ಕೋಪಗೊಂಡ ಚೌಂಡಿ /ಚಾಮುಂಡಿ ದೈವ ಆತನನ್ನು ಮಾಯ ಮಾಡಿ ಜಟ್ಟಿಗ ಎಂಬ ಹೆಸರಿನಲ್ಲಿ ತನ್ನ ಸೇರಿಗೆಗೆ ಸೇರಿಸಿಕೊಳ್ಳುತ್ತದೆ.ಈ ದೈವವನ್ನು ಜತ್ತಿಂಗೆ /ಜಟ್ಟಿಂಗ ಎಂದೂ ಕರೆಯುತ್ತಾರೆ

 ಈ ಬಗ್ಗೆ ಶಶಾಂಕ ನೆಲ್ಲಿತ್ತಾಯರು ನೀಡಿದ ಒಂದು ಮದಿಪಿನಲ್ಲೂ ಮಾಹಿತಿ ಇದೆ 
 
ಸ್ವಾಮಿ ಅಪ್ಪೆ ಚೌoಡಿ...........
ಆನಿದ ಕಾಲೋಡ್ ಗಟ್ಟದ ರಾಜ್ಯೋಡ್ ಬೀಮರಾಯೇ ತೋಟದ ಕಾರಂಬಡೆ ಮರತ ಮುದೆಲ್ ಪೊಟ್ಟು ಕಲ್ಲುಡ್ ನಿಲೆಯದ್ ಬೀಮರಾಯೇ ಚೌoಡಿ ಪಂಡುದ್ ಗೋಚರ ಮಲ್ಪಯಿ ದೈವದು ಉಲ್ಲ .
ಅನಿದ ಕಾಲೋಡ್ ನಿನನ್ ನಿಲೆ ಮಲ್ಪರೆ ಬತ್ತಿನ ತಂತ್ರಿಲು ಮೋಸ ಮಲ್ತೆರುಂದು ಪನ್ಪಿನೈಕದ್ ಅರೆನ್ ಮಾಯಾ ಮಲ್ತದು ಜಟ್ಟಿಗರಾಯೆ ಪನ್ಪಿನ ದೈವ ಸಗ್ತಿಯಾದ್ ನಿನ ಮರ್ಗಿಲ್ದ್ ನಂಬೊಂದು ಬರ್ಪಿಲೆಕ್ಕ ಮಲ್ತೊಂದು , ತುಳುನಾಡ ಪಂಚ ವರ್ಣದ ಪುಣ್ಯ ಬೂಮಿಡ್ ಬಡಕಾಯಿ ಅಂಕೋಲಾ ಗಡಿದುರ್ದ್ ತೆಂಕಾಯಿ ರಾಮೆಸರ ಗಡಿ ಮುಟ್ಟ ಜಾಗ್ ಜಾಗೆಡ್ ಸಂಚಾರೋಗ್ ಪಿದದೊಂಡ..

ಈತನನ್ನು ಜಟ್ಟಿಗರಾಯ ಎಂದು ಕರೆಯಬೇಕಿದ್ದರೆ ,ಇಲ್ಲಿ ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ ತಂತ್ರಿ ಜಟ್ಟಿಯೂ ಆಗಿದ್ದನೇ?ಎಂಬ ಸಂದೇಹ ಉಂಟಾಗುತ್ತದೆ .ಚಾಮುಂಡಿದೈವದಆಗ್ರಹಕ್ಕೆತುತ್ತಾಗಿಮಾಯವಾಗಿ  ದೈವತ್ವ ಪಡೆದ ತಂತ್ರಿ ಗೆ ಜಟ್ಟಿಗ ಎಂದು ಹೆಸರು ಬರಬೇಕಿದ್ದರೆ ಆತ ಜಟ್ಟಿ ಕೂಡಾ ಆಗಿದ್ದಿರಬೇಕು .
ಅಥವಾ ತಂತ್ರಿಗಳು/ತಂತ್ರಿದಾರ್ ಎಂಬುದು ಕಾಲಾಂತರದಲ್ಲಿ ತಂತ್ರಿಗ >ಜತ್ತಿಂಗ >ಜಟ್ಟಿಗ ಆಗಿ ಬದಲಾಗಿರುವ ಸಾಧ್ಯತೆ ಇದೆ 


 


 

ಅರಮನೆ ಜಟ್ಟಿಗ .ಕೋಟೆ ಜಟ್ಟಿಗ ಮೊದಲಾದ ದೈವಗಳು ಮೂಲತಃ ಜಟ್ಟಿಗರೇ/ಕುಸ್ತಿ ಪಟುಗಳೇ ಆಗಿರಬೇಕು /ಆದರೆ ಜತ್ತಿಂಗ ಮಾತ್ರ ಮೂಲತ ಓರ್ವ ಬ್ರಾಹ್ಮಣ ತಂತ್ರಿ .ಚಾಮುಂಡಿ ದೈವದ ಆರಾಧನೆಯಲ್ಲಿ ದ್ರೋಹ ಮಾಡಿದ್ದಕ್ಕೆ ದೈವ ಆತನನ್ನು ಮಾಯ ಮಾಡಿದೆ .ದೈವದ ಆಗ್ರಹಕ್ಕೆ ಸಿಲುಕಿ ಮಾಯವದವರು ಅದೇ ದೈವದ ಸೇರಿಗೆಗೆ ಸಂದು ದೈವತ್ವ ಪಡೆದು ಆರಾಧಿಸಲ್ಪಡುವ ವಿಚಾರ ತುಳುವ ಸಂಸ್ಕೃತಿಯಲ್ಲಿ ಅಸಹಜವೇನೂ ಅಲ್ಲ.ಹಾಗೆಯೇ ಇಲ್ಲಿ ಕೂಡ ದ್ರೋಹವೆಸಗಿ ಚಾಮುಂಡಿ ದೈವದ ಆಗ್ರಹಕ್ಕೆ ತುತ್ತಾದ ಬ್ರಾಹ್ಮ ತಂತ್ರಿ ದೈವತ್ವ ಪಡೆದು ಜತ್ತಿಂಗ ದೈವವಾಗಿ ಆರಾಧಿಸಲ್ಪಡುತ್ತಿರುವ ಸಾಧ್ಯತೆ ಹೆಚ್ಚಾಗಿದೆ .
ಈ ಭೂತದ ವೇಷ ಭೂಷಣ ಅಭಿನಯ ಅಭಿವ್ಯಕ್ತಿಗಳು ಕೂಡ ಇದನ್ನು ಸಮರ್ಥಿಸುತ್ತದೆ .
ಜತ್ತಿಂಗ ಭೂತಕ್ಕೆ ಸಾಮಾನ್ಯವಾಗಿ ಬ್ರಾಹ್ಮಣರು ಧರಿಸುವ   ಜನಿವಾರ ಕಚ್ಚೆ ನಾಮ ಹಾಕಿ ಭೂತ ಕಟ್ಟುತ್ತಾರೆ .

ಇಲ್ಲಿ ದಾಯಾದಿ ಆಗಿರುವ ಗಣಪತಿ ಭಟ್ಟ ಭೀಮುರಾಯ ಭಟ್ಟರ ಸಾಕು ಮಗಳಿಗೆ ದ್ರೋಹ ಮಾಡಿದ ಬಗ್ಗೆ ಸೂಚನೆ ಇದೆ.

ಇಲ್ಲಿ ಭೀಮುರಾಯ ಭಟ್ಟರ  ಸಾಕು ಮಗಳು ಚಾಮುಂಡಿ ದೇವಿಯ ಹೆಸರಿರುವ ಕನ್ಯೆ ದೈವವಾದ ಬಗ್ಗೆ ತಿಳಿದು ಬರುವುದಾದರೂ ದೈವತ್ವ ಪಡೆಯಲು ಕಾರಣ ಏನು ಎಂಬ ಮಾಹಿತಿ ಸಿಗುವುದಿಲ್ಲ 

ಬಹುಶಃ ದಾಯಾದಿಗಳ ಕುತಂತ್ರದಿಂದ ದುರಂತವನ್ನಪ್ಪಿ ಮಾಯಕಕ್ಕೆ ಸಂದು ದೈವತ್ವವನ್ನು ಪಡೆದು ಆರಾಧನೆ ಪಡೆದಿರುವ ಸಾಧ್ಯತೆ ಹೆಚ್ಚಿದೆ.ತುಳು ಸಂಸ್ಕೃತಿ ಯಲ್ಲಿ ದುರಂತ ಮತ್ತು ದೈವತ್ವ ಒಟ್ಟೊಟ್ಟಿಗೆ ಸಾಗಿರುವದ್ದನ್ನು ಗಮನಿಸಿದಾಗ ಈ ಸಾಧ್ಯತೆ ನಿಚ್ಚಳವಾಗಿ ಗೋಚರಿಸುತ್ತದೆ 

ಹಾಗಾಗಿ ಮೈಸೂರಿನ ಚಾಮುಂಡೇಶ್ವರಿ ಮ ್ತು ತುಳುವರಿಂದ  ಆರಾಧಿಸಲ್ಪಡುವ ಚಾಮುಂಡಿ ರೈವ ಬೇರೆ ಬೇರೆ ಶಕ್ತಿಗಳು .

ತುಳು ನಾಡಿನ ಚಾಮುಂಡಿ ಗೂ ಪುರಾಣ ದೇವತೆ ಚಾಮುಂಡೇಶ್ವರಿ ಗೂ ಯಾವುದೇ ಸಂಬಂಧವಿಲ್ಲ 

ಆಧಾರ ಕರಾವಳಿಯ ಸಾವಿರದೊಂದು ದೈವಗಳು ಲೇ ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ಮೊಬೈಲ್ 9480516684

 

 

ಚಾಮುಂಡಿ ಪಾಡ್ದನ- (ಸಂಪಾದನೆ) ಮ ್ತು ಕ ್ನಡ  ಅನುವಾದ ಡಾ.ಲಕ್ಷ್ಮೀ ಜಿ ಪ್ರಸಾದ್ ,ಹಾಡಿದವರು ಶಾರದಾ ಜಿ ಬಂಗೇರ 

 ಡೆನ್ನಾನಾ ಡೆನ್ನಾನಾ ಡೆನ್ನಾಡೆನ್ನಾನಾ

ಓಯೇ ಡೆನ್ನಾನ ಡೆನ್ನಾನ ಡೆನ್ನಾಡೆನ್ನಾನಾ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ಎಡ ಭಾಗದಲ್ಲಿದೆ ಎಡಮಲೆ

ಬಲ ಭಾಗದಲ್ಲಿದೆ ಬಲಮಲೆ

ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಓ ನಡುವಿನಲ್ಲಿ ಸಂಪಿಗೆ ಸುರಗೆ ತೋಟವಿದೆ

ಭೀಮುರಾಯರ ಮಣ್ಣಿನಲ್ಲಿ

ಬೆಳಗಿನ ಜಾವದಲ್ಲಿ ಎದ್ದರು

ಭೀಮುರಾಯರು ಭಟ್ಟರು ಒಡೆಯರು ( ಸಂ) ಡಾ.ಲಕ್ಷ್ಮೀ ಜಿ ಪ್ರಸಾದ್ 

ಕೈಕಾಲು ಮುಖ ತೊಳೆದು

ಭೀಮುರಾಯರು ಭಟ್ಟರು ಒಡೆಯರು

ಮಡಿತುಂಬು ಇಡುವ ಕೋಣೆಗೆ ಹೋದರು

ಭೀಮುರಾಯರು ಭಟ್ಟರು ಒಡೆಯರು

ತುಂಡು ತೆಗೆದು ಸೊಂಟಕ್ಕೆ ಮಡಿಬಟ್ಟೆ

ಸುತ್ತಿಕೊಂಡರು ಭೀಮುರಾಯರು ಭಟ್ಟರು

ಸಂಪಿಗೆ ಸುರಗೆ ತೋಟದಲ್ಲಿ

ಭೀಮುರಾಯರ ಮಣ್ಣಿನಲ್ಲಿ

ಮುತ್ತು ತಾವರೆಯ ಕೆರೆಯಲ್ಲಿ

ಕೈಕಾಲು ಮುಖ ತೊಳೆದುಕೊಂಡು ಹೋಗುವರು

ಅವರು ಭೀಮುರಾಯರ ಭಟ್ಟರು ಒಡೆಯರು

ಬಿಳಿಯ ತಾವರೆಯ ಹೂವಾಗಿ

ನಲಿದುಕೊಂಡು ನಗಾಡಿಕೊಂಡು ಬರುವುದಲ್ಲಿ

ಬಿಳಿಯ ತಾವರೆಯ ಹೂವೊಂದು

ಆ ಹೊತ್ತಿಗೆ ಸೆರಗು ಒಡ್ಡಿದರು

ಆ ಹೊತ್ತಿಗೆ ಸೆರಗು ಒಡ್ಡಿದರು

ಅವರು ಭೀಮುರಾಯರು ಭಟ್ಟರು ಒಡೆಯರು

ನಲಿಯುತ್ತಾ ನಗುತ್ತಾ ಬರುವುದು

ಬಿಳಿಯ ತಾವರೆಯ ಹೂವೊಂದು

ಉಟ್ಟಮಡಿ ವಸ್ತç ಅಂಗವಸ್ತçವನ್ನು ಒಡ್ಡಿದಾಗ

ಬಂದು ಬೀಳುವುದು ಬಿಳಿಯ ತಾವರೆಯ ಹೂವು

ಆರು ಎಸಳಿನಲ್ಲಿ ಮೂರು ಕುಸುಮದಲ್ಲಿ

ಬೆಳೆದು ಅರಳುವುದು ನೋಡಿದಾಗ

ಬಾರಿ ದೊಡ್ಡ ಸೋಜಿಗವೇ ಕಾಣಿಸುತ್ತದೆ ( ಸಂ) ಡಾ.ಲಕ್ಷ್ಮೀ ಜಿ ಪ್ರಸಾದ್ 

ಭೀಮುರಾಯರು ಬಂದರAತೆ

ಹಿಡಿದುಕೊAಡು ಅಂಗವಸ್ತçವನ್ನು ಕೊಡುವರು

ಚಾವಡಿ ನಡುಮನೆಗೆ ಬಂದು

ದೇವರ ಗುಂಡದ ಹೊಸಿಲಿನಲ್ಲಿ

ಇಡುವಾಗ ಕಾಣಿಸುತ್ತದೆ

ಪೂರ್ವದಲ್ಲಿ ಸೂರ್ಯ

ಹುಟ್ಟಿದಂತೇ ಕಾಣುತ್ತದೆ

ಬಿಳಿಯ ತಾವರೆಯ ಹೂವಾಗಿ

ಒಳಗಿನ ಸುತ್ತಿಗೆ ಹೋಗುವರು

ಭೀಮುರಾಯರು ಭಟ್ಟರು ಒಡೆಯರು

ದೇವರ ತಲೆಯಲ್ಲಿ ಇರಿಸುವರು

ಭೀಮುರಾಯರು ಭಟ್ಟರು ಒಡೆಯರು

ಅಡ್ಡ ಜಾರಿ ಬೀಳುತ್ತದೆ.

ಬಿಳಿಯ ತಾವೆಯ ಹೂವು ಅದು

ಆರು ಎಸಲು ಮೂರು ಕುಸುಮ ಬೀಳುವಾಗ

ನಡುವಿನಲ್ಲಿ ಮಗು ಆಳುವ ಶಬ್ದ ಕೇಳುವುದು

ಆ ಕಡೆ ಈ ಕಡೆ ನೋಡುವರು ಭೀಮುರಾಯರು ಭಟ್ಟರು

ಗಿಂಡಿಯ ನೀರು ತಳಿಯುವಾಗ

ಒಂದು ಬಿಳಿಯ ತಾವರೆಯ ಹೂವಿನಲ್ಲಿ

ಒಂದು ಮಗು ಉಂಟಾಯಿÄತ

ಕುಟುAಬ ಸಂಸಾರ ಇಲ್ಲದ

ಮನೆಯಲ್ಲಿ ಮಗು ಆಳುವ ಧ್ವನಿ ಕೇಳುತ್ತದೆ

ಎಂದರು ಭೀಮುರಾಯರು ಭಟ್ಟರು ಒಡೆಯರು

ಏನು ಹೆಸರು ಇಡುವುದು ಎಂದು ಕೇಳುವಾಗ

ಹೇಳಿದರು ಅವರು ಆರು ಎಸಳು ಮೂರು ಕುಸುಮದಲ್ಲಿ

ಉದ್ಭವವಾದ ದೇವಿ ಅವರೇ

ಚಾಮುಂಡಿ ಎಂದು ಹೆಸರು ಇಟ್ಟರು.-

ಆಧಾರ ಕರಾವಳಿಯ ಸಾವಿರದೊಂದು ದೈವಗಳು ಲೇ ಡಾ‌.ಲಕ್ಷ್ಮೀ ಜಿ‌ ಪ್ರಸಾದ್ ಮೊಬೈಲ್ 9480516684

 

Category:Stories



ProfileImg

Written by Dr Lakshmi G Prasad

Verified