ಆರೋಗ್ಯಕರ ಬೇಸಿಗೆಗೆ 5 ಲೈಟ್ ಬ್ರೇಕ್‌ಫಾಸ್ಟ್ ರೆಸಿಪಿ
1. ಆವಕಾಡೊ ಪಂಚ್
ಆವಕಾಡೊವನ್ನು ಪ್ರತಿದಿನ ತಿನ್ನುವುದು ಮಲದಲ್ಲಿನ ಪಿತ್ತರಸ ಆಮ್ಲಗಳನ್ನು ಕಡಿಮೆ ಮಾಡುತ್ತದೆ, ಕೊಬ್ಬಿನಾಮ್ಲಗಳನ್ನು ಹೆಚ್ಚಿಸುತ್ತದೆ. ಅಲ್ಲದೇ ಇವು ಜೀರ್ಣಕ್ರಿಯೆ ಮತ್ತು ಕರುಳಿನ ಬ್ಯಾಕ್ಟೀರಿಯಾ ಸಂಯೋಜನೆ ಮತ್ತು ಕಾರ್ಯದ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ, ನಿಮ್ಮ ಉಪಹಾರದಲ್ಲಿ ಅವಕಾಡೊವನ್ನು ಸೇರಿಸಿಕೊಳ್ಳೋದು ಸೂಕ್ತ
ಪದಾರ್ಥಗಳು
1 ಆವಕಾಡೊ
1 ಸಂಪೂರ್ಣ ಧಾನ್ಯದ ಬ್ರೆಡ್
1-2, ಅರ್ಧದಷ್ಟು ಚೆರ್ರಿ ಟೊಮ್ಯಾಟೊ
ರುಚಿಗೆ ತಕ್ಕಷ್ಟು ಉಪ್ಪು ಮತ್ತು ಮೆಣಸು
ನಿಂಬೆ ರಸ
ವಿಧಾನ
ಧಾನ್ಯದ ಬ್ರೆಡ್ ಅನ್ನು ಸ್ವಲ್ಪ ಬೆಣ್ಣೆ ಹಚ್ಚಿ ಟೋಸ್ಟ್ ಮಾಡಿ. ನಂತರ ಆವಕಾಡೊವನ್ನು ಸ್ಮ್ಯಾಶ್ ಮಾಡಿ ಅದರ ಮೇಲೆ ಹಾಕಿ. ಇದರ ಮೇಲೆ ಚೆರ್ರಿ ಟೊಮ್ಯಾಟೊ ಸೇರಿಸಿ. ಇದಕ್ಕೆ ಬಳಿಕ ಉಪ್ಪು, ಮೆಣಸು, ಮತ್ತು ನಿಂಬೆ ರಸವನ್ನು ಹಿಂಡಿ ಸೀಸನ್ ಮಾಡಿದರೆ ಆವಕಾಡೊ ಪಂಚ್ ರೆಡಿ.
2. ಚಿಯಾ ಫ್ರೂಟ್ ಪುಡ್ಡಿಂಗ್
ನೀವು ಮಧುಮೇಹದಿಂದ ಬಳಲುತ್ತಿದ್ದರೆ ಮತ್ತು ಬಿಸಿ ವಾತಾವರಣದಲ್ಲಿ ಮಲಬದ್ಧತೆಯ ಸಮಸ್ಯೆಗಳನ್ನು ಹೊಂದಿದ್ದರೆ, ಚಿಯಾ ಬೀಜಗಳು ಪ್ರಯೋಜನಕಾರಿಯಾಗಿದೆ.
ಚಿಯಾ ಬೀಜಗಳು ಇನ್ಸುಲಿನ್ ಉತ್ಪಾದನೆಯನ್ನು ಸುಧಾರಿಸುವ ಮೂಲಕ ಮತ್ತು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ನಾರಿನಂಶವೂ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ.
ಪದಾರ್ಥಗಳು
1/4 ಕಪ್ ಚಿಯಾ ಬೀಜಗಳು
1 ಕಪ್ ಹಾಲು
1 ಚಮಚ ಜೇನುತುಪ್ಪ
ತಾಜಾ ಹಣ್ಣುಗಳು (ಮಾವು, ಬಾಳೆಹಣ್ಣು, ಡ್ರ್ಯಾಗನ್ ಹಣ್ಣು)
ವಿಧಾನ
ಒಂದು ಬಟ್ಟಲಿನಲ್ಲಿ ಚಿಯಾ ಬೀಜಗಳು, ಹಾಲು ಮತ್ತು ಜೇನುತುಪ್ಪವನ್ನು ಸೇರಿಸಿ ರಾತ್ರಿ ಫ್ರಿಡ್ಜ್‌ನಲ್ಲಿ ಇಡಿ. ಬೆಳಗ್ಗೆ ಬ್ರೇಕ್‌ಫಾಸ್ಟ್ ಮಾಡುವ ಮುನ್ನ ಅದನ್ನು ಹೊರ ತೆಗೆದು ನಿಮ್ಮಿಷ್ಟದ ಅಥವಾ ಮೇಲೆ ಹೇಳಿರುವ ಹಣ್ಣುಗಳನ್ನು ಬೆರೆಸಿ ತಿನ್ನಿ.
3. ತಾಜಾ ಹಣ್ಣುಗಳೊಂದಿಗೆ ಓಟ್ಮೀಲ್
ಬಿರು ಬಿಸಿಲಿನಲ್ಲಿ ಎಣ್ಣೆ ವಸ್ತು, ಅನ್ನದ ಐಟಂ ತಿನ್ನಲು ಇಷ್ಟಪಡದಿರುವವರು ಈ ಆರೋಗ್ಯಕರ ರೆಸಿಪಿಯನ್ನು ಟ್ರೈ ಮಾಡಬಹುದು. ಹೇಳಿಕೇಳಿ ಓಟ್ಸ್ ಹೃದ್ರೋಗ, ಚರ್ಮದ ಸಮಸ್ಯೆಗಳನ್ನು ನಿಯಂತ್ರಿಸುವ ಸೂಪರ್ ಫುಡ್ ಎಂದೆನಿಸಿಕೊಂಡಿದೆ.
ಪದಾರ್ಥಗಳು
1/2 ಕಪ್ ಓಟ್ಸ್
1 ಕಪ್ ಹಾಲು
ಉಪ್ಪು
ತಾಜಾ ಹಣ್ಣುಗಳು (ಬಾಳೆಹಣ್ಣು, ಮಾವು, ಸೇಬು )
ಜೇನುತುಪ್ಪ
ವಿಧಾನ
ಒಂದು ಬೌಲ್‌ನಲ್ಲಿ ಓಟ್ಸ್, ನೀರು ಅಥವಾ ಹಾಲು, ಉಪ್ಪನ್ನು ಸೇರಿಸಿ ಸ್ವಲ್ಪ ಹೊತ್ತು ಬಿಸಿ ಮಾಡಿ. ನಂತರ ಇದನ್ನು ತಣ್ಣಗಾಗಿಸಿ ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿಡಿ. 2-3 ಗಂಟೆಗಳ ನಂತರ ಹೊರತೆಗೆದು ಇದಕ್ಕೆ ಪೀಸ್ ಮಾಡಿದ ಹಣ್ಣುಗಳು ಮತ್ತು ಜೇನುತುಪ್ಪ ಟಾಪಿಂಗ್ ಮಾಡಿ ಸವಿದರೆ ರುಚಿ ಅದ್ಭುತ.
4. ಆಮ್ಲೆಟ್
ತೂಕ ಕಮ್ಮಿ ಮಾಡಲು, ಲೈಟಾಗಿ ತಿನ್ನಲು ಮತ್ತೊಂದು ಅದ್ಭುತ ಆಯ್ಕೆ ಅಂದರೆ ಅದು ಆಮ್ಲೆಟ್. ಮೊಟ್ಟೆಯ ಪ್ರೋಟೀನ್ ಹಸಿವು ಮತ್ತು ತೂಕ ನಷ್ಟಕ್ಕೆ ಸಂಬಂಧಿಸಿದ್ದು, ರೆಸಿಪಿ ಮಾಡ್ಕೊಳ್ಳೋದು ಕೂಡ ಸಿಕ್ಕಾಪಟ್ಟೆ ಸುಲಭ.
ಪದಾರ್ಥಗಳು
ಮೊಟ್ಟೆಯ ಬಿಳಿ ಭಾಗ
ಸಣ್ಣದಾಗಿ ಕತ್ತರಿಸಿದ ಪಾಲಕ್ ½ ಕಪ್
1/4 ಕಪ್ ಚೀಸ್.
ಉಪ್ಪು, ಮೆಣಸು.
ವಿಧಾನ
ಪಾಲಕ್ ಅನ್ನು ನೀರಿನಲ್ಲಿ ಐದರಿಂದ ಹತ್ತು ನಿಮಿಷ ಬೇಯಿಸಿ. ಬದಿಯಲ್ಲಿ ಮೊಟ್ಟೆಗೆ ಮೆಣಸು, ಉಪ್ಪು, ಬೇಯಿಸಿದ ಪಾಲಕ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಆಮೇಲೆ ಬಾಣಲೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ಪೂರ್ತಿ ಮಿಶ್ರಣವನ್ನು ಸುರಿದರೆ ಆಮ್ಲೆಟ್ ರೆಡಿ.
5. ಬೀಟ್ರೂಟ್ ಡಿಲೈಟ್
ಉರಿ ಬಿಸಿಲಿನಲ್ಲಿ ಬೀಟ್ರೂಟ್ ಮತ್ತು ಮೊಸರು ನಿಮ್ಮ ದೇಹವನ್ನು ಹಗುರವಾಗಿರಿಸಲು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಸಖತ್ ಕಾಂಬಿನೇಷನ್.
ಪದಾರ್ಥಗಳು
ಬೀಟ್ರೂಟ್
ಮೊಸರು
ಉಪ್ಪು, ಮೆಣಸು
ವಿಧಾನ
ಮೊದಲಿಗೆ ಬೀಟ್ರೂಟ್ ಅನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ, ಇಲ್ಲಾ ತುರಿದು ಬೇಯಿಸಿಕೊಳ್ಳಿ. ಬೆಂದ ನಂತರ ಇದಕ್ಕೆ ಮೊಸರು, ಉಪ್ಪು, ಪೆಪ್ಪರ್ ಹಾಕಿದರೆ ಬೀಟ್ರೂಟ್ ಡಿಲೈಟ್ ರೆಡಿ.
ಮನದ ಮಾತು
0 Followers
0 Following