ಸೇವಾಭೂಷಣ ಪ್ರಶಸ್ತಿ ಸ್ವೀಕರಿಸಿದ ವೃಕ್ಷ ರಕ್ಷಕ ಅಮರೇಗೌಡ ಮಲ್ಲಾಪೂರ

ಜನಮನ ಕಲ್ಯಾಣ ಜಾತ್ರೆ 2024ರ ಶರಣ ಸಂಸ್ಕೃತಿಯ ಮೇಳ ಹಾಗೂ ವಚನ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ

ProfileImg
16 May '24
1 min read


image

ಲಿಂಗಸೂಗೂರು ತಾಲೂಕಿನ ಮುದಗಲ್ಲ ಸಮೀಪದ ಸುಕ್ಷೇತ್ರ ತಿಮ್ಮಾಪೂರ ಗ್ರಾಮದ ಶ್ರೀ ಮಹಾಂತೇಶ್ವರ ಮಠದಲ್ಲಿ ಮೇ 10 ರಿಂದ 16 ರವರೆಗೆ ನಡೆದಿರುವ ಜನಮನ ಕಲ್ಯಾಣ ಜಾತ್ರೆ  2024ರ ಶರಣ ಸಂಸ್ಕೃತಿಯ ಮೇಳ ಹಾಗೂ ವಚನ ಪಲ್ಲಕ್ಕಿ ಮಹೋತ್ಸವ ಕಾರ್ಯಕ್ರಮದಲ್ಲಿ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕರಾದ ಅಮರೇಗೌಡ ಮಲ್ಲಾಪೂರ ಅವರು ವನಸಿರಿ ಫೌಂಡೇಶನ್ ಸ್ಥಾಪಿಸಿ ಪರಿಸರ ಪ್ರಜ್ಞೆಯನ್ನು ಜನಮಾನಸದಲ್ಲಿ ಜಾಗೃತಿ ಮಾಡುವ ಮೂಲಕ ವೃಕ್ಷ ರಕ್ಷಕರಾಗಿ ಸೇವೆಯಲ್ಲಿರುವದನ್ನು ಗುರುತಿಸಿ ಕಲ್ಯಾಣಾಶ್ರಮದ ಜನಮನ ಕಲ್ಯಾಣ ಜಾತ್ರಾಮಹೋತ್ಸವ ಪುಣ್ಯಪರ್ವದಿ ದಿನಾಂಕ 15-05-2024ರಂದು ರಾಜ್ಯ ಮಟ್ಟದ "ಸೇವಾಭೂಷಣ" ಪ್ರಶಸ್ತಿಯನ್ನು ಅತ್ಯಂತ ಗೌರವ ಪೂರ್ವಕವಾಗಿ ಪ್ರದಾನ ಮಾಡಲಾಯಿತು.

ಇವರ ಜೊತೆಗೆ ಶರಣಬಸವ ಪಾಟೀಲ್ ವ್ಯಾಕರನಾಳ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರು,ರೋಹಿತ್ ಷಣ್ಮುಖಪ್ಪ ಮುದಗಲ್ ನಾಯಕನಟನಾಗಿ ರಕ್ತಾಕ್ಷ ಸಿನಿಮಾ ನಿರ್ಮಿಸಿದ ಖ್ಯಾತಿ, ವಿಜಯಕುಮಾರ ಗಣಾಚಾರಿ ಆಡಳಿತಾಧಿಕಾರಿಗಳು ಶ್ರೀ ಉಮಾಮಹೇಶ್ವರಿ ಕಾಲೇಜು ಲಿಂಗಸೂಗೂರು,ಶರಣಬಸವ ಪಟ್ಟೇದ ಕ್ಯಾಶುಟೇಕ್ ಆಡಳಿತ ಅಧಿಕಾರಿಗಳು ಶಕ್ತಿನಗರ ರಾಯಚೂರು, ಡಾ. ಶರಣಪ್ಪ ನಿವೃತ್ತ ಪಶುವೈದ್ಯಾಧಿಕಾರಿಗಳು ಮುದಗಲ್, ವಿಜಯಕುಮಾರ ಗುಡಿಹಾಳ ಶ್ರೀ ಗವಿಸಿದ್ದೇಶ್ವರ  ರೈಸ್ ಮಿಲ್ ಸಿಂಧನೂರು ಇವರಿಗೂ ಕೂಡ ಶ್ರೀಮಠದ ವತಿಯಿಂದ ರಾಜ್ಯ ಮಟ್ಟದ ಸೇವಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಮಹಾಂತಸ್ವಾಮೀಜಿ, ಮಾತೋಶ್ರೀ ವಚನ ಗೀತಮ್ಮ,ಮಸ್ಕಿ ಶಾಸಕರಾದ ಆರ್.ಬಸನಗೌಡ ತುರವಿಹಾಳ,ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಕಾಳಪ್ಪ ಬಡಿಗೇರ ಕಸಬಾಲಿಂಗಸೂಗೂರು ಹಾಗೂ ವನಸಿರಿ ಫೌಂಡೇಶನ್ ಸದಸ್ಯರು,‌ಶಿಕ್ಷಕ ಅಮರಯ್ಯಸ್ವಾಮಿ ಪತ್ರಿಮಠ, ವನಸಿರಿ ಫೌಂಡೇಶನ್ ಪದಾಧಿಕಾರಿಗಳಾದ ರಾಜು ಬಳಗಾನೂರ, ಗಿರಿಸ್ವಾಮಿ ಹೆಡಗಿನಾಳ ಹಾಗೂ ಅನೇಕ ಪರಪ ಪೂಜ್ಯರು,ಗಣ್ಯವ್ಯಕ್ತಿಗಳು, ತಿಮ್ಮಾಪೂರ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

Category:NewsProfileImg

Written by Avinash deshpande

Article Writer, Self Employee