ನಿನ್ನ ಅಂದ ಚೆಂದವ ಹೊಗಳಲು
ನಾನೇನೂ ಕಾಳಿದಾಸನ
ವಂಶದವನಲ್ಲ......
ನಿನ್ನ ಚೆಂದಕೆ ಮರುಳಾಗಿ
ಮಕರಂದ ಹೀರುವ
ದುಂಬಿಯು ನಾನಲ್ಲ....
ನಿನ್ನ ಕಡುಕೋಪಕೇ
ಕಾರಣವಾಗಿ ತುಸು ನಗಿಸುವ
ಹಾಸ್ಯ ಕಲಾವಿದನು ನಾನಲ್ಲ.....
ನಿನ್ನ ಸೌಂದರ್ಯಕೇ ಬೆರಗಾಗಿ
ಶಿಲಾಬಾಲಿಕೆ ಕೆತ್ತುವ
ಶಿಲ್ಪಿಯು ನಾನಲ್ಲ....
ಒಟ್ನಲ್ಲಿ ನಿನ್ನ ನೋಡಿದಾಗಿನಿಂದ
ನಾನೇ ನನ್ನಲ್ಲಿಲ್ಲಾ ಅದ್ಯಾಕೋ ಗೊತ್ತಿಲ್ಲ....
.......................….… ಕಿರಣ್ 🙈🙉🙊
I am Kiran
0 Followers
0 Following