ಗೆಳತಿಗೆ..

(ಪುಟ್ಟ ಬರಹ)

ProfileImg
24 Jul '24
1 min read


image

ಗೆಳತೀ,

ತುಂಬಾ ದಿನಗಳಿಂದ ಹೇಳಬೇಕೇನಿಸಿದ್ದ ಮಾತುಗಳು ಇವು.. ಈ ವಿಷಯಕ್ಕೆ ಹೇಳಬೇಕೇನಿಸಿತು.

" ತಾಯ್ತನ " ಎಂತಹ ಸುಮಧುರ ಪದ ಅಲ್ವಾ? ಪ್ರತಿಯೊಂದು ಹೆಣ್ಣಿಗೂ ತಾಯಿಯಗಬೇಕೆಂಬ, ಕನಸು- ಆಸೆ ಮಹತ್ವದ್ದು. ತಾಯಂದಿರ ದಿನ ಬಂದಾಗಲೆಲ್ಲ ನಾನೂ ತಾಯಿ, ಅದನ್ನು ಸಂಭ್ರಮಿಸಬೇಕು ಎಂಬುದಕ್ಕಿಂತ ಹೆಚ್ಚು, ಇನ್ನೂ ಗರ್ಭದಲ್ಲೊಂದು ಕುಡಿ ಅರಳದ ನನ್ನ ಸಹಜೀವಿ ನಿನ್ನ ನೆನಪಾಗಿ ಮನಸು ನೋಯುತ್ತದೆ. 

ಮದುವೆಯಾಗಿ "ಮಗುವಿಗೆ" ತಾಯಾಗದ ನಿನ್ನoತ ಗೆಳತಿಯರನ್ನು, ವಯಸ್ಸು ಆಗಿದ್ದರೂ ಮದುವೆಯಾಗದೆ (ಕೆಲವರಿಗೆ ಮದುವೆಯಾಗುವ ಮನಸ್ಸಿಲ್ಲ. ಅವರನ್ನು ಇಲ್ಲಿ ಉಲ್ಲೇಖಸುತ್ತಿಲ್ಲ) ಇರುವ ನನ್ನ ಗೆಳತಿಯರನ್ನು ಗಟ್ಟಿಯಾಗಿ ಅಪ್ಪಿ, "ಎಲ್ಲವೂ ಸರಿ ಹೋಗುತ್ತದೆ" ಎಂದು ಹೇಳಬೇಕು ಎನಿಸುತ್ತದೆ.

ಯಾಕೇ?

ಕಾರಣವಿದೆ.

ಮದುವೆಯಾಗಿಯೂ ತಾಯಿಯಾಗದ ಹೆಣ್ಣೂ ತಾಯಿಯೇ.. ತಾಯ್ತನ ಹೆಣ್ಣಿಗೆ ಸೃಷ್ಟಿಯ ಉಡುಗೊರೆ.. ಅವಳ ಕಣ ಕಣದಲ್ಲೂ ತಾಯ್ತನ ಇದೇ.. "ಬಂಜೆ", "ಗೊಡ್ಡು" ಎಂಬ ಪದಗಳು ಅವಳ ಮನಸ್ಸನ್ನು ಹಿಂಡುವಷ್ಟು ಬೇರೆ ಯಾವುದೂ ಹಿಂಡದು.. ತಾಯಿಯಾದವಳು ತನ್ನ ಮಕ್ಕಳನ್ನು ಪ್ರೀತಿಸುವಳು, "ಮಗುವಿಗೆ" ತಾಯಿಯಾಗದವಳು ಎಲ್ಲರನ್ನೂ ಪ್ರೀತಿಸುವಳು. ಅಲ್ಲವೇ? ಅವಳೂ ನಮ್ಮಲ್ಲೊಬ್ಬಳು..! (ಈ ಮಾತು ನೋಯಿಸುವವರಿಗೆ ಮಾತ್ರ)

ಎಂದಿಗೂ ಇಂತಹ ಮಾತುಗಳ ಮನಸ್ಸಿನವರೆಗೂ ತೆಗೆದುಕೊಂಡು ಹೋಗದಿರು ನೀನು..

ನನ್ನಂತಹ ಹಲವು ತಾಯಂದಿರಿಗೆ ನಿನ್ನ ಬಗ್ಗೆ ಗೊತ್ತಿದೆ.. ನಮ್ಮಂತೆ ನೀನೂ ತಾಯಿಯೇ..

ಇನ್ನು ನೀನು.. ನೀನೇ ಕಣೇ.. ವರ್ಷ ಮೂವತ್ತಾಯ್ತು.. ಮದುವೆ ಆಗಿಲ್ಲ.. ನಲವತ್ತಾಯ್ತು ಮದುವೆ ಆಗಿಲ್ಲ ಅಂತಾರಲ್ಲ ನಿನ್ನ? ತಾಯಿಯಾಗಿಲ್ಲ ಅನ್ನೋ ಬೇಸರವೇ.. 

ಬಾ ನನ್ನದೊಂದು ಸಿಹಿ ಮುತ್ತು ನಿನಗೇ.

ತಾಯಿಯಾಗಲು ಮದುವೆ ಏಕೆ..? ನಿನ್ನ ಮುದ್ದು ಮನಸು ಸಾಕು ಕಣೇ..! ಪ್ರೀತಿಸುವ ಹೃದಯ ಇದ್ದರೆ ಸಾಕು..! 

ಲಹರಿ ✍️

 

 

 

Category:Parenting and Family



ProfileImg

Written by Aparna_Lahari

ಕಳೆದ ೩ ವರ್ಷಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಿರುವೆ.

0 Followers

0 Following