ಅತ್ಯಾಚಾರಗಳಿಗೆ ಮುಕ್ತಿ ಎಂದು ?

ProfileImg
27 Sep '24
4 min read


image

ಅತ್ಯಾಚಾರಗಳಿಗೆ ಮುಕ್ತಿ ಎಂದು ?
ಭಾರತದಲ್ಲಿ ಹೆಣ್ಣು ಪೂಜ್ಯಳು,ಹೀಗೆಂದು ಪುರಾಣ, ಇತಿಹಾಸ ಮತ್ತು ಪುಸ್ತಕಗಳು ಬಿಂಬಿಸುತ್ತಿವೆ !ನಾವು ಭಾರತೀಯರು"ಮಾತೃ ದೇವೋ ಭವ " ಎಂಬ ಪರಿಕಲ್ಪನೆಯನ್ನು ನಂಬಿದ್ದೇವೆ ಮತ್ತು ಇನ್ನೂ ಸಹ ನಂಬುತ್ತಿದ್ದೇವೆ,ಅಂದರೆ ಹೆಣ್ಣನ್ನು ಅಥವಾ ತಾಯಿಯನ್ನು ಪೂಜಿಸುವುದು ಎಂದರ್ಥ! ಆದರೆ ವಾಸ್ತವವನ್ನು ದೃಷ್ಟಿಸಿ ನೋಡಿದಾಗ ವಾಸ್ತವ ಸ್ಥಿತಿ ಬೇರೆಯೇ ಇದೆ, ಭಾರತೀಯ ಸ್ತ್ರೀಯರಾದ ನಮಗೆ ಪುರಾಣ ಪುಸ್ತಕಗಳು ಹೇಳುವ ಪೂಜ್ಯ ಸ್ಥಾನ ದಯವಿಟ್ಟು ಬೇಡ. ಪೂಜ್ಯಳೆಂದು ಪೂಜಿಸಿವುದು ಬೇಡ,ಹಾಗೆಯೇ ಭೋಗದ ವಸ್ತು ಮತ್ತು ಗುಲಾಮಳೆಂದು ಶೋಷಿಸುವುದು ಹಾಗೂ ದೌರ್ಜನ್ಯ ಎಸಗವುದೂ ಬೇಡ.ನಮಗೆ ನಿಜವಾಗಿಯೂ ಬೇಕಿರುವುದು ಗೌರವ,ರಕ್ಷಣೆ, ಮತ್ತು ಸಮಾನತೆ, ಇಲ್ಲಿ ಸಮಾನತೆ ಎಂದರೆ ಕಾನೂನು ಮತ್ತು ಹಕ್ಕುಗಳಲ್ಲಿ ಅಲ್ಲ ಮಹಿಳೆಯರನ್ನು ನೋಡುವ ದೃಷ್ಟಿಯಲ್ಲಿ ಸಮಾನತೆ ಬೇಕಾಗಿದೆ.ಸೃಷ್ಟಿಯಲ್ಲಿ ಹೆಣ್ಣು ಗಂಡು ಇಬ್ಬರೂ ಒಂದೇ ಸಮಾನರು ಆದರೆ ಇದನ್ನೂ ಕೂಡ ಪುಸ್ತಕಗಳು ನಾಣ್ನುಡಿ ಅಡು ಮಾತುಗಳು ಮಾತ್ರ ಹೇಳುತ್ತಿವೆ, ಆದರೆ ವಾಸ್ತವದ ವಸ್ತು ಸ್ಥಿತಿ ಬೇರೆಯೇ ಇದ್ದು  ಪುರುಷ ಪ್ರಧಾನ ವಾದ ಈ ಸಮಾಜದಲ್ಲಿ ಬಹುತೇಕ ಮಹಿಳೆಯರು ಬಹಳ ಹೀನಾಯ ದುಸ್ಥಿತಿ ಗತಿಗಳನ್ನು ಅಭವಿಸುತ್ತಿದ್ದಾರೆ,ಭಾರತ ಕಳೆದ ಕೆಲವು ದಶಕಗಳಿಂದ ತಾಂತ್ರಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅದ್ಭುತವಾದ ಬೆಳವಣಿಗೆಯನ್ನು ಕಂಡಿದೆ. ಆದರೆ ಈ ಎಲ್ಲಾ ಅಭಿವೃದ್ಧಿ ಮತ್ತು ಬೆಳವಣಿಗೆಯ ಹೊರತಾಗಿಯೂ ಮಹಿಳೆಯರು ಮಾತ್ರ ನಿತ್ಯವೂ ಒಂದಲ್ಲ ಒಂದು ಭಯಾನಕ ಶೋಷಣೆಗೆ ಬಲಿಯಾಗುತ್ತಿರುವುದು ನಿಜಕ್ಕೂ ಅತಂಕಕಾರಿಯಾದ ಬೆಳವಣಿಗೆಯಾಗಿದೆ, 1980 ರಲ್ಲಿ ಪ್ರಕಟವಾದ ಯುಎನ್ ವರದಿಯ ಪ್ರಕಾರ ಮಹಿಳೆಯರು ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಇದ್ದಾರೆ, ಸುಮಾರು ಮೂರನೇ ಎರಡರಷ್ಟು ಕೆಲಸದ ಸಮಯವನ್ನು ಮಹಿಳೆಯರು ನಿರ್ವಹಿಸುತ್ತಾರೆ ವಿಶ್ವದ ಆದಾಯದ ಹತ್ತನೇ ಒಂದು ಭಾಗವನ್ನು ಮಹಿಳೆಯರು ಪಡೆಯುತ್ತಾರೆ ಅಲ್ಲದೆ ನಿತ್ಯ ಬದುಕಿನಲ್ಲಿ ಸಮಾಜದ ಪ್ರತಿ ಕ್ಷೇತ್ರದಲ್ಲೂ ಎಲ್ಲಾ ಸ್ತರಗಳಲ್ಲಿಯೂ ಪುರುಷರಿಗಿಂತ ಒಂದು ಪಟ್ಟು ಹೆಚ್ಚಾಗಿಯೇ ಮಹಿಳೆಯರು ಸೇವೆ ಸಲ್ಲಿಸುತ್ತಿದ್ದಾರೆ, ಆದರೂ ಆಕೆಗೆ ಅಬಲೆ ನಿಶಕ್ತಳು ಶೋಷಿತಳು,ಎಂಬ ಕೆಟ್ಟ ಹಣೆಪಟ್ಟಿ ಯನ್ನು ಕಟ್ಟಿದೆ ಈ ಸಮಾಜ,ಇದಕ್ಕೆಲ್ಲಾ ಕಾರಣ ಹೆಣ್ಣು ಇರುವುದೇ ಭೋಗಕ್ಕಾಗಿ ಎಂಬ ಅಜ್ಞಾನ ಮತ್ತು ಜೀವವಿರುವ ಹೆಣ್ಣನ್ನು ಒಂದು ಭೋಗದ ವಸ್ತುವಾಗಿ ನೋಡುತ್ತಿರುವುದು.!ಇಂತಹ ಹೀನ ಮನಸ್ಥಿತಿಯನ್ನು ಹೊಂದಿರುವುದರಿಂದಲೇ ಅತ್ಯಾಚಾರದಂತಹ ಆಸಹ್ಯ ಪ್ರಕರಣಗಳು ನಡೆಯುತ್ತಿರುವುದು, ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧೆಯರನ್ನೂ ಬಿಡದೆ ತಮ್ಮ ಕಾಮ ತೃಷೆಯನ್ನು ತೀರಿಸಿ _ಕೊಳ್ಳಲು ಬಲಿ ತೆಗೆದುಕೊಳ್ಳುತ್ತಿರುವ ಹೊಲಸು ವ್ಯಕ್ತಿಗಳಿಗೆ ಕಠಿಣ ಕಾನೂನು ಇಲ್ಲದಿರುವುದು ನಿಜಕ್ಕೂ ಕೂಡ ನಾಗರೀಕ ಸಮಾಜ ತಲೆ ತಗ್ಗಿಸಬೇಕಾದ ವಿಷಯ. ಇಂದು ಮನುಕುಲ ಸಂಸ್ಕಾರ ಮತ್ತು ಮಾವೀಯ ಮೌಲ್ಯಗಳನ್ನು ಕಾಲಲ್ಲಿ ಹೊಸಕಿ 23 ನೇ ಶತಮಾನಕ್ಕೆ ಹೊಸ ಹೊಸ ತಾಂತ್ರಿಕತೆ ಹಾಗೂ ಆದುನಿಕತೆಯೊಂದಿಗೆ ಕೆಟ್ಟ ಪೈಪೋಟಿಯ ಜೊತೆ ಶರವೇಗದಲ್ಲಿ ಬೆಳೆಯುತ್ತಿದೆಯೇ ಹೊರತು ಆರೋಗ್ಯಕರವಾಗಿ ಬೆಳೆಯುತ್ತಿಲ್ಲ ಇದಕ್ಕೆ ಅತ್ಯುತ್ತಮ ಉದಾಹರಣೆಗೆ ಎಂದರೆ ಮಹಳೆಯರ ಮೇಲೆ ನೆಡೆಯುತ್ತಿರುವ ಲೈಂಗಿಕ ಅತ್ಯಾಚಾರಗಳು.ಇದೊಂದು ನಾಚಿಕೆ ಗೇಡಿನ ಬೆಳವಣಿಗೆಯಾಗಿದ್ದು ಇತ್ತೀಚೆಗೆ ಇಂತಹ ಹೀನ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ನಮ್ಮ ದೇಶದ ಕಾನೂನು ಮತ್ತು ವ್ಯವಸ್ಥೆಯ ದುಸ್ಥಿತಿಯನ್ನು ನಗ್ನವಾಗಿ ತೋರಿಸುತ್ತಿವೆ, ಸಮಾಜಕ್ಕೆ ಕಂಟಕ ಪ್ರಾಯರಾದ ಕನಿಷ್ಠ ಮಾನವೀಯತೆ ಸಂಸ್ಕಾರ ಹಾಗೂ ಸಾಮಾನ್ಯ ಜ್ಞಾನವೇ ಇಲ್ಲದ ಮೃಗಗಳಿಗಿಂತಲೂ ಕಡೆಯಾದ ಅತ್ಯಾಚಾರಿಗಳಿಂದ ಸಮಾಜಕ್ಕೆ ಉಪಯೋಗವಾದರೂ ಏನು? ಇಂಥವರಿಗೆ ನಾಗರಿಕ ಸಮಾಜದಲ್ಲಿ ಬದುಕುವ ಯಾವ ಹಕ್ಕಿದೆ? ಇಂಥ ನೀಚರನ್ನು ಏತಕ್ಕಾಗಿ ಬದುಕಲು ಬಿಡಬೇಕು?ಇಂತಹ ನಾಚಿಕೆಗೇಡಿನ ಕೃತ್ಯವೆಸಗಿದವರಿಗೆ ಕಾನೂನಿ ನಲ್ಲಿ ಕಠಿಣವಾದ ಶಿಕ್ಷೆಗಳು ಏಕಿಲ್ಲ? ಇಂತಹ ಕಿಡಿಗೇಡಿಗಳಿಂದ ಏನು ಉಪಯೋಗ? ಇದಕ್ಕೆ ಕೊನೆ ಎಂಬುದು ಯಾವಾಗ? ಇದಕ್ಕೆಲ್ಲಾ ಉತ್ತರಿಸಬೇಕಾದ ಸರ್ಕಾರ ಯಾವಾಗ ಉತ್ತರಿಸುತ್ತದೆ? ಪ್ರಕರಣದ ಗಂಭೀರತೆ ಸತ್ಯಾಸತ್ಯತೆ ತಿಳಿದಮೇಲೂ ಇಂತಹ ಹೇಯ ಕೃತ್ಯ ವೆಸಗಿದ ದುಷ್ಟರಿಗೆ ಕಾನೂನಿನಲ್ಲಿ ರಕ್ಷಣೆ ಏಕೆ ಬೇಕು ? ಇಂತಹ ಮಹಾಅಪರಾಧ ಮಾಡಿದ ತಪ್ಪಿತಸ್ಥರು ಸಿಕ್ಕ ತಕ್ಷಣವೇ ಎನ್ಕೌಂಟರ್ ಮಾಡುವ ಕಾನೂನು ಬರುವುದಾದರೂ ಯಾವಾಗ? ತಮ್ಮ ತಮ್ಮ ಕಾಮ ತೃಷೆಯನ್ನು ತೀರಿಸಿ ಕೊಳ್ಳಲು ಒಂದು ಹೆಣ್ಣನ್ನು ಮೃಗಗಳಿಗಿಂತ ಕಡೆಯದಾಗಿ ಉಪಯೋಗಿಸಿ ಕೊಂಡು ಅವಳನ್ನು ಸಾಯಿಸುವ ಕ್ರೂರ ವ್ಯಕ್ತಿಗಳನ್ನು ಸರ್ಕಾರ ಯಾವುದೇ ಮುಲಾಜಿಲ್ಲದೆ ಗಲ್ಲಿಗೇರಿಸ ಬೇಕೆಂಬ ಕಾನೂನು ತಂದು ಒಂದೇ ಒಂದು ಸಾರಿ ಈ ಅತ್ಯಾಚಾರಿ ಕಟುಕರನ್ನು ಗಲ್ಲಿಗೇರಿಸಲಿ ಇಲ್ಲವೇ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲಿ ಆಗ ಸಹಜವಾಗಿಯೇ ಅತ್ಯಾಚಾರ ಪ್ರಕರಣಗಳು ಖಂಡಿತ ಕೊನೆಗೊಳ್ಳುತ್ತವೆ. ವಕೀಲರು ಇಂತಹ ಪ್ರಕರಣಗಳನ್ನು ಖಡಾಖಂಡಿತವಾಗಿ ತಿರಸ್ಕರಿಸಬೇಕು. ಇಂತಹವರ ಪರ ಯಾವುದೇ ವಕೀಲರು ವಾದ ಮಾಡಬಾರದು ಹಾಗೆ ಅವರ ಪರವಾಗಿ ವಾದ ಮಾಡುವುದರಿಂದ ತಮ್ಮ ವಿದ್ಯೆಯ ಜೊತೆ ತಮ್ಮ ವಕೀಲ ವೃತ್ತಿಗೂ ಅವಮಾನ ಮಾಡಿದಂತೆ ಆಗುತ್ತದೆ ಎಂದರೂ ತಪ್ಪಿಲ್ಲ. ಇಲ್ಲಿ ಅರಿತುಕೊಳ್ಳಬೇಕಾದ ಮತ್ತೊಂದು ವಿಷಯವೆಂದರೆ ಅತ್ಯಾಚಾರವು ಕೆಲವು ಪುರುಷರ ಲೈಂಗಿಕ ದಾಹದ ಜೊತೆ ಅಧಿಕಾರಕ್ಕೆ ಸಂಬಂಧಿಸಿದ್ದೂ ಆಗಿದೆ  ಪುರುಷರು ಮಹಿಳೆಯರನ್ನು ಸರಕು ಇಲ್ಲವೇ ಭೋಗದ ವಸ್ತುಗಳಂತೆ ನೋಡುತ್ತಿದ್ದಾರೆ, ಹಾಗಾಗಿ ನೋಡುವ ದೃಷ್ಟಿ ಬದಲಾಗುವವೆರೆಗೂ ಎಂದಿಗೂ ಅತ್ಯಾಚಾರಗಳು ನಿಲ್ಲುವುದಿಲ್ಲ.ಮೊಟ್ಟ ಮೊದಲನೆಯದಾಗಿ ಪುರುಷರು ಮಹಿಳೆಯರನ್ನು ಗೌರವಿಸಲು ಪ್ರಾರಂಭಿಸಿದ ದಿನ ಮತ್ತು ಅವರೂ ನಮ್ಮಂತೆ ಭಾವನೆಗಳಿರುವ ಮತ್ತು ರಕ್ತ ಮಾಂಸವಿರುವ ಜೀವವಿರುವ ಮನುಷ್ಯರು ಎಂದು ಭಾವಿಸಿದಾಗ ಮಾತ್ರ ಅತ್ಯಾಚಾರಗಳು ನಿಲ್ಲುತ್ತವೆ. ಇತ್ತೀಚೆಗೆ ಹೊರಬರುತ್ತಿರುವ ಕೃತ್ಯದ ಕ್ರೂರತೆಯನ್ನು ಪರಿಗಣಿಸಿದರೆ ಓದಿ ವಿದ್ಯಾವಂತರೆನಿಸಿ ಕೊಂಡವರೂ ಸಹ ಇಂಹತ ಪ್ರಕರಣಗಳಲ್ಲಿ ಬಾಗಿಯಾಗುತ್ತಿರು ವುದು ಬಹಳ ಆತಂಕಕಾರಿಯಾದ ವಿಷಯವಾಗಿದೆ,ಪ್ರಕರಣದ ಭೀಕರತೆಗೆ ಸಾಕ್ಷಿಯಾಗಿ ನಿಲ್ಲುವ ಸಾಕಷ್ಟು ಪ್ರಕರಣಗಳು ಇವೆ ಅದರಲ್ಲೂ ಮುಖ್ಯವಾಗಿ ಧರ್ಮಸ್ಥಳದ
ಸೌಜನ್ಯ ಹಾಗೂ ಕಲ್ಕತ್ತಾದ ವ್ಯೆದ್ಯೆಯ
ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳು ಎಂಥವರನ್ನೂ ರೊಚ್ಚಿಗೆಳುವಂತೆ ಮಾಡುತ್ತವೆ, ಕ್ರೂರತೆಗೆ ಸಾಕ್ಷಿಯಾಗಿರುವ ಇಂತಹ ಪ್ರಕರಣಗಳಿಗೆ ಇನ್ನೂ ನ್ಯಾಯ ಸಿಕ್ಕಿಲ್ಲದಿರು ವುದು ನಿಜಕ್ಕೂ ತುಂಬಾ ವಿಷಾದನೀಯ ವಿಷಯ,ಇಲ್ಲಿ ಬಹಳ ಮುಖ್ಯವಾಗಿ ಗಮನಿಸ ಬೇಕಾದ ಅಂಶವೆಂದರೆ ಶಾಲಾ ಕಾಲೇಜುಗಳಲ್ಲಿ ಮೌಲ್ಯಗಳ ಪ್ರಾಯೋಗಿಕ ಬೋಧನಾ ವ್ಯವಸ್ಥೆಯ ಅಗತ್ಯವಿದೆ ಎಂಬುದು ಮತ್ತು ಪ್ರತಿ ಮನೆಯಲ್ಲೂ ಗಂಡು ಮಕ್ಕಳಿಗೆ ಸಮಾಜದಲ್ಲಿ ಪ್ರತೀ ಹೆಣ್ಣಿನ್ನೂ ಗೌರವಿಸುವು _ದನ್ನು ಕಲಿಸಬೇಕಾಗಿದೆ,ಪ್ರತಿ ಪುರುಷರು ಹೆಣ್ಣನ್ನು ನಮ್ಮಂತೆಯೇ ಅದೇ ಭಾವನೆಗಳನ್ನು ಹೊಂದಿರುವ ಮನುಷ್ಯರಂತೆ ನೋಡಿದ ಕ್ಷಣ ಅವರುಗಳು ಹೆಣ್ಣನ್ನು ಶೋಷಿಸುವುದನ್ನು ನಿಲ್ಲಿಸುತ್ತಾರೆ.ನಮ್ಮ ದೇಶದಲ್ಲಿ ಅತ್ಯಾಚಾರವು ಮಹಿಳೆಯರ ಮೇಲಿನ ನಾಲ್ಕನೇ ಅತಿ ಸಾಮಾನ್ಯ ನಾಲ್ಕನೇ ಅಪರಾದವಾಗಿದೆ.ಬೇರೆ ಬೇರೆ ರಾಷ್ಟ್ರಗಳಲ್ಲಿ ಅತ್ಯಾಚಾರಿಗಳಿಗೆ ಕಾನೂನಿಲ್ಲಿ ಇರುವ ಶಿಕ್ಷೆಗಳನ್ನು ನೋಡಿದಾಗ ನಮ್ಮ ದೇಶದಲ್ಲಿ ಏಕೆ ಇಂತಹ ಕಠಿಣ ಕಾನೂನುಗಳಿಲ್ಲ ಎಂದು ಸಹಜವಾಗಿಯೇ ಅನ್ನಿಸುತ್ತದೆ ಜಗತ್ತಿನ ಬೇರೆ ಬೇರೆ ಕೆಲವು ರಾಷ್ಟ್ರಗಳಲ್ಲಿ ಇಂತಹ ಕಠಿಣ ಕಾನೂನುಗಳು ಇರುವುದರಿಂದ ಅಲ್ಲಿ ಅತ್ಯಾಚಾರಗಳಂತ ಹೀನ ಕೃತ್ಯಗಳನ್ನು ಮಾಡುವುದಕ್ಕೆ ಹೆದರುತ್ತಾರೆ. ಪುರುಷ ಪ್ರಧಾನ ಸಮಾಜ ಮಹಿಳೆಯರನ್ನು ಸರಕು ಅಥವಾ ವಸ್ತುಗಳಂತೆ ನೋಡುತ್ತಾ ಹೋದರೆ ಅತ್ಯಾಚಾರಗಳು ಎಂದಿಗೂ ನಿಲ್ಲುವುದಿಲ್ಲ. ಪುರುಷರು ಮಹಿಳೆಯರನ್ನು ಗೌರವಿಸಲು ಪ್ರಾರಂಭಿಸಿದ ದಿನ ಮತ್ತು ಎಂದು ಅವರನ್ನು ನಮ್ಮಂತೆ ಮನುಷ್ಯರು ಎಂದು ತಿಳಿದು ಭಾವಿಸುತ್ತಾರೋ ಅಂದು ಅತ್ಯಾಚಾರ ಪ್ರಕರಣಗಳು ಕೊನೆಗೊಳ್ಳಲು ಸಾಧ್ಯ ಇಲ್ಲವೇ ಕಾನೂನಿನಲ್ಲಿ ಎಂದು ಅತೀ ಕಠಿಣ ಶಿಕ್ಷೆಗಳು ಬರುತ್ತವೆಯೋ ಅಂದು ಮಾತ್ರ ಇಂಥ ಮೃಗೀಯ ವರ್ತನೆಯ ನೀಚ ಕೃತ್ಯಗಳು ನಿಲ್ಲಲು ಸಾಧ್ಯ, ಇನ್ನು ನಮ್ಮ ಸಮಾಜದಲ್ಲಿ ಇಂಥಹ ದರಿದ್ರ ನೀಚರು ಇರುವುದುರಿಂದ ಹಾಗೂ ಕಾನೂನಿನಲ್ಲಿ ಇನ್ನೂ ಸಹ ಯಾವುದೇ ಕಠಿಣ ಶಿಕ್ಷೆಗಳು ಇಲ್ಲದಿರುವುದರಿಂದ ಹೆಣ್ಣು ಮಕ್ಕಳೇ ಎಚ್ಚೆತ್ತು ಕೊಂಡು ತಮಗೆ ಬರುವ ಅಪತ್ತಿನ ಪರಿಸ್ಥಿತಿಯಲ್ಲಿ ಆತ್ಮ ವಿಶ್ವಾಸದೊಂದಿಗೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳು ವಂತಹ ಕರಾಟೆ ಇತ್ಯಾದಿ ವಿದ್ಯೆಯನ್ನು ಶಿಕ್ಷಣದ ಜೊತೆ ಕಲಿಯಬೇಕಾದ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಪೋಷಕರಾದಿಯಾಗಿ ಸರ್ಕಾರವೂ ಶಾಲಾ ಕಾಲೇಜುಗಳಲ್ಲಿ ಹೆಣ್ಣು ಮಕ್ಕಳಿಗೆ ಈ ಅನುಕೂಲತೆಯನ್ನು ಖಡಾಖಂಡಿತ ವಾಗಿಯೂ ಒದಗಿಸಬೇಕು. ಪ್ರತೀ ಬಾರಿಯೂ ಅತ್ಯಾಚಾರ ಪ್ರಕರಣಗಳು ನೆಡೆದಾಗ ಪ್ರತಿಭಟನೆ ಮಾಡುತ್ತ ಕಪ್ಪುಬಟ್ಟೆ ಧರಿಸಿ ಮೇಣದ ಬತ್ತಿ ಹಿಡಿದು ಮೆರೆವಣಿಗೆಗಳನ್ನು ಮಾಡುವ ಅಸಹಾಯಕ ಹೆಣ್ಣು ಮಕ್ಕಳ ಮುಂದೆ ಅತ್ಯಾಚಾರ ಮಾಡಿದ ಆ ಪಾಪಿಗಳನ್ನು ಕಪ್ಪು ಬಟ್ಟೆ ಸುತ್ತಿ ಅದೇ ಮೇಣದ ಬತ್ತಿಯಿಂದ ಸಾರ್ವಜನಿಕವಾಗಿ ಒಮ್ಮೆ ಸುಟ್ಟು ಬಿಟ್ಟರೆ ಇಂತಹ ಹೇಯ ಕೃತ್ಯಗಳು ಮತ್ತೆಂದೂ ಮರುಕಳಿಸುವುದಿಲ್ಲ, ಹೆಣ್ಣು ಮಕ್ಕಳು ಆ ಸಂದರ್ಭದಲ್ಲಿ ವಿಧಿಯಿಲ್ಲದೆ ಅನುಭವಿಸುವ ಸಹಿಸಲಸಾಧ್ಯವಾದ ನರಕ ಯಾತನೆ ನಿರಾಕಾರನ ಕೃಪೆಯಿಂದ ಕಾನೂನಿನ (ಸರ್ಕಾರ) ಕಣ್ಣಿಗೆ ಬಹುಬೇಗ ಕಾಣಿಸುವಂತಾಗಲಿ ಸರ್ಕಾರ ಇನ್ನಾದರೂ ಇಂತಹ ಪ್ರಕರಣಗಳನ್ನು ದಯವಿಟ್ಟು ಗಂಭೀರವಾಗಿ ಪರಿಗಣಿಸಿ ಬಲಿಷ್ಠ ಹಾಗೂ ಕಠಿಣ ಶಿಕ್ಷೆಯನ್ನು ಒಳಗೊಂಡ ಕಾನೂನನ್ನು ಜಾರಿಗೆ ತಂದು ಈ ಅತ್ಯಾಚಾರಕ್ಕೆ ಮುಕ್ತಿ ಕೊಡಲಿ ಎಂಬುದು ಈ ದೇಶದ ಪ್ರತೀ ಹೆಣ್ಣು ಮಕ್ಕಳ   ಕಳಕಳಿಯ ಮನವಿಯ ಜೊತೆ ಪ್ರಾರ್ಥನೆಯೂ ಕೂಡ ಆಗಿದೆ .
ಗೀತಾಂಜಲಿ ಎನ್,ಎಮ್

Category:Women



ProfileImg

Written by Geethanjali NM

Author ✍️

0 Followers

0 Following