ಅಮ್ಮನೇ ದೇವರಾಗಿರಲು…
ಅಮ್ಮನೇ ಜೊತೆಯಾಗಿರಲು…
ಬೆಚ್ಚಗಿನ ಅಮ್ಮನ ಮಡಿಲು,
ಕಂಕಳಲ್ಲಿ ಬಚ್ಚಿಕೊಂಡಿರಲು,
ಅಮ್ಮನು ತೂಗುವ ತೊಟ್ಟಿಲು,
ತುತ್ತು ಉಣಿಸುವ ಬಟ್ಟಲು,
ಚಂದಮಾಮನ ಬೊಟ್ಟು ಮಾಡಿ ತೋರಲು,
ಅಮ್ಮ ಎಂದು ತೊದಲು ನುಡಿದೆ ಮೊದಲು..
ತನ್ನ ಕೂಸಿನ ಬಗ್ಗೆ ತಾಯಿಯು ಹೊತ್ತಿರುವ ಕನಸುಗಳು ಸಾಲು,
ಕನಸುಗಳು ನನಸಾಗಿ ಅಮ್ಮನ ಮುಂದೆ ನಿಂತು ಕೈಗಳ ಮುಗಿಯುತಿರಲು,
ಅಮ್ಮನ ಆ ಅಪ್ಪುಗೆಯ ಸ್ಪರ್ಷಕೆ ಕಂಬನಿಗಳು ಖುಷಿಯಿಂದ ಜಾರಲು,
ಸಾಧ್ಯವೇ ಆ ತುಂಬು ಕ್ಷಣಗಳ ಮರೆಯಲು..
ಶಾಂತಾರಾಮ ಹೊಸ್ಕೆರೆ,ಶಿರಸಿ..
ಉತ್ತರ ಕನ್ನಡ, 7676106237
ಬರಹಗಾರ...
0 Followers
0 Following