ಸಮಯ

ಸಮಯ

ProfileImg
26 Jun '24
2 min read


image

ಸಮಯವೇ ಉತ್ತರ

ಛೇ!!! ಈ ಕಾಲೇಜು ಜೀವನ ಇಷ್ಟು ಬೇಗ ಮುಗಿಯುವ ಕ್ಷಣ ಬರುತ್ತೆ ಎಂದುಕೊಂಡಿರಲಿಲ್ಲ. ದಿನಗಳ ಜೊತೆ ಹೆಚ್ಚು ಹಾಕಿ, ಹೊಸ ಮುಖಗಳ ಜೊತೆ ಪರಿಚಯ ಬೆಳೆಸಿಕೊಂಡು ನಾಲ್ಕು ಗೋಡೆಗಳ ಮಧ್ಯದ ತರಗತಿಯ ಹಚ್ಚಿಕೊಂಡು, ಕಾಲೇಜ್ ಕ್ಯಾಂಪಸ್ ನ ಮೆಚ್ಚಿಕೊಂಡು ಹಾಗೆ ಸುತ್ತಾಡುತ್ತಾ-ಪಾಠ ಕೇಳುತ್ತಾ-ಮೊದಲಿಗೆ ಸೀನಿಯರ್ ನ ಆದರ್ಶ ಆಲಿಸುತ್ತಾ ಮುಂದೆ ಜೂನಿಯರ್ ಗೆ ಸಂದೇಶ ಸಲಹೆಯ ನೀಡುತ್ತಾ ಹೀಗೆ ದಿನಗಳು ಉರುಳಿದ ವೇಗವೇ ತಿಳಿಯದೆ ಹೋಯಿತು. ಇನ್ನೇನು ಕಾಲೇಜು ಜೀವನಕ್ಕೆ ವಿದಾಯ ಹಾಡುವ ಗಳಿಗೆಯು ಬೇಡ... ಬೇಡ ಎಂದರು  ಸನಿಹಿಸುತ್ತಿದೆ.
ಸಮಯವೇ ಹಾಗೆ ತಾನೆ?. ಎಲ್ಲರನ್ನು ಒಂದು ಮಾಡಿ ಪರಸ್ಪರ ಬಾಂಧವ್ಯವನ್ನು ಬೆಳೆಸಿ ಸ್ನೇಹದ ಬಿಸಿಗೆಯಲ್ಲಿ ತೇಲಾಡುವಂತೆ ಮಾಡಿಬಿಡುತ್ತದೆ. ಸಮಯವೇ ಮುಂದೆ ನಾವಿದ್ದ ಸ್ಥಳದಿಂದ... ನಮ್ಮ ಜೀವಾಳ ಕಾಲೇಜಿನಿಂದ ಬೇರ್ಪಡಿಸಿಬಿಡುತ್ತದೆ. ಸಮಯಕ್ಕೆ ಯಾವುದೇ ಕನಿಕರ ಇಲ್ಲ. ದೈಹಿಕವಾಗಿ ಕಾಲೇಜಿನಿಂದ ದೂರವಾಗಿದ್ದರು ಸಹ ಮಾನಸಿಕವಾಗಿ ಆ ವಿದ್ಯಾ ಕೇಂದ್ರದ ಸೆಳೆತ ಗೆಳೆತನದ ಹಿಡಿತ ಮನದಲ್ಲಿ ಸದಾ ಹಾಸು ಹೊಕ್ಕಾಗಿರುತ್ತದೆ.
     ಹೊಸ ಪರಿಚಯ ಹೇಳುತ್ತಾ ಹುಟ್ಟಿಕೊಂಡ ಗೆಳೆತನ ಜೀವನದ ಭಾಗವೇ ಆಗುತ್ತದೆ. ಆದರ್ಶ ನೀಡುವ ಗುರುಗಳು ಕನಸು ಕಾಣುವ ಕಣ್ಣಿನ ನನಸ್ಸಿಗೆ ರೂವಾರಿಗಳೇ ಆಗಿರುತ್ತಾರೆ. ಕಲಿತ ವಿದ್ಯಾಕೇಂದ್ರ ಹೊಸ  ಜನುಮವನ್ನೇ ನೀಡಿದ ದೇಗುಲವಾಗಿರುತ್ತದೆ. ಕಲಿಯಲು ಸ್ಪೂರ್ತಿ ನೀಡಿದ ಅಪ್ಪ ಅಮ್ಮ ನನ್ನೆರಡು ಕಣ್ಣುಗಳಾಗಿರುತ್ತದೆ. 
      ಮೊದಮೊದಲು ರಜೆ ಸಿಗಲೆಂದು ಕಾಯುತ್ತಿದ್ದೆ. ಆದರೆ ಕಾಲೇಜ್ ದಿನದ ಕೊನೆಗೆ ಇನ್ನೂ ಇನ್ನೆರಡು ದಿನ ತರಗತಿ ಇರಲೆಂದು ಕಾಯುತ್ತಿದ್ದೇನೆ. ಅಂದು ರಜಗಾಗಿ ಕಾತುರ ಇಂದು ಕಾಲೇಜು ಮುಗಿಯುತ್ತದೆಯಲ್ಲವೇ ಎನ್ನುವ ಬೇಸರ ಈ ದಿನದಿಂದಲೇ ಶುರುವಾಗಿದೆ ಹೊಸ ಆತುರ. 
ಕಳೆದ ಮೋಜಿನ ಕ್ಷಣವು ರೈಲಿನಲ್ಲಿ ಓಡಾಡಿದ ಗಳಿಗೆಯೂ ಇನ್ನು ಬರೀ ನೆನಪು ಮಾತ್ರ, ಪರೀಕ್ಷೆ ಚಿಂತೆ ಅಸೈನ್ಮೆಂಟ್ ಕಂತೆ ಈ ರೀತಿಯ ಸಂತೆ ಇನ್ನು ನೆನಪಲ್ಲಿ ಮಾತ್ರ, ಆಗೊಮ್ಮೆ ಈಗೊಮ್ಮೆ ಆಗುತ್ತಿದ್ದ ಕ್ರಶ್ ಕ್ಯಾಂಟೀನ್ ನಲ್ಲಿ ಬೆಳಗ್ಗೆ ಸೇವಿಸುತ್ತಿದ್ದ ಡಿಶ್ ಇನ್ನು ನೆನಪು ಮಾತ್ರ. ಈ ನೆನಪುಗಳ ಜೊತೆಗೆ ಹೆಜ್ಜೆ ಇಡುತ್ತಲೇ ಮುಂದಿನ ಪಯಣ. ನೆನಪುಗಳ ಮೆರವಣಿಗೆ ಮನಕ್ಕೆ ದಿಬ್ಬಣ.

ಗಿರೀಶ್ ಪಿಎಂ 
ದ್ವಿತೀಯ ಎಂ ಎ ಇತಿಹಾಸ ಮತ್ತು ಪುರಾತತ್ವಶಾಸ್ತ್ರ 
ವಿ ವಿ ಕಾಲೇಜು ಮಂಗಳೂರು

Category:Books



ProfileImg

Written by Gireesh Pm

0 Followers

0 Following